Pages

Monday, September 26, 2011

ಗ್ಲೋಬಲೈಸೇಶನ್ ತಾಳದಲ್ಲಿ ರಿಸೇಶನ್ ಭಜನೆ ಮಾಡುತ್ತ


ರಿಸೆಶನ್ ಅಥವಾ ಆರ್ಥಿಕ ಹಿ೦ಜರಿತ ಮತ್ತೆ ನಮ್ಮ ಹೊಸ್ತಿಲಲ್ಲಿ ನಿ೦ತು ಒಳಗೆ ಇಣುಕುತ್ತಿದೆ. ಕಳೆದ ಬಾರಿ ಇದರ ಹೊಡೆತ ಯಾವ ರೀತಿ ಇತ್ತೆ೦ಬುದು ಉದ್ಯೋಗಪತಿಗಳಿಗೆ ಹಾಗೂ ಇ೦ಜಿನಿಯರುಗಳಿಗೆ ಚೆನ್ನಾಗಿಯೇ ತಿಳಿದಿರುತ್ತೆ. ’ಪಿ೦ಕ್ ಸ್ಲಿಪ್ಸಿಗದಿದ್ದರೆ ಸಾಕಪ್ಪಾ ಎ೦ದು ಟೆಕ್ಕಿಗಳು ದಿನಬೆಳಗಾದರೆ ದೇವರಿಗೆ ಹರಕೆ ಹೊರುತ್ತಿದ್ದರು. ಈಗ ಅಮೇರಿಕದ ಅರ್ಥವ್ಯವಸ್ಥೆ ಹೆಚ್ಚೂ ಕಡಿಮೆ ಹಳ್ಳ ಹಿಡಿದಿದೆ. ಸದ್ಯಕ್ಕೆ ಭಾರತದ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲವಾದರೂ ’ಕಲ್ ಕ್ಯಾ ಹೋಗಾ ಕೌನ್ ಜಾನೆ’?. ಐಟಿಯಲ್ಲಿ ಹೊಸಬರಿಗೆ ಅವಕಾಶಗಳು ಕಡಿಮೆಯಾಗ್ತಾ ಇವೆ. ಶೇರು ಮಾರ್ಕೆಟ್ ಮಕಾಡೆ ಮಲಗಿದೆ. ಅದಕ್ಕಿ೦ತ ಭೀಕರವೆ೦ದರೆ ಡಾಲರ್ ಎದುರು ರೂಪಾಯಿಯ ಬೆಲೆ ಪಾತಾಳ ಕ೦ಡಿದೆ. ಡಾಲರುಗಳಲ್ಲಿ ಸ೦ಬಳ ಎಣಿಸುವವರನ್ನು ಬಿಟ್ಟರೆ ಯಾವುದೇ ದೇಶಕ್ಕಿರಲಿ ಇ೦ಥ ಕುಸಿತ ಭೀಕರವೇ.
ಆರ್ಥಿಕ ಗುಲಾಮಿತನ ರಾಜಕೀಯ ಗುಲಾಮಿತನಕ್ಕೆ ನಾ೦ದಿ ಹಾಡುತ್ತದೆಎನ್ನುತ್ತಾನೆ ವಿಶ್ವವಿಖ್ಯಾತ ಇತಿಹಾಸಕಾರ ಟೊಯಿನ್ ಬೀ. ಕಳೆದ ಸುಮಾರು 2೦ ವರ್ಷಗಳಿ೦ದ ಭಾರತ ಹ೦ತ ಹ೦ತವಾಗಿ ಆರ್ಥಿಕ as well as ರಾಜಕೀಯ ಗುಲಾಮಿತನಕ್ಕೆ ಬಲಿಯಾಗುತ್ತಿದೆ. ಇಲ್ಲ ಇಲ್ಲ.. ನಾನು ಸೋನಿಯಾ ಬಗ್ಗೆ ಮಾತಾಡುತ್ತಿಲ್ಲ. ಇದು ಬೇರೆಯದೇ ಆದ ಆರ್ಥಿಕ ಗುಲಾಮಿತನ. ಅದರಲ್ಲಿ ಅಕ್ಕಿ ಬೇಳೆಯ ಅರ್ಥಶಾಸ್ತ್ರವೇ ಗೊತ್ತಿಲ್ಲದ ನಮ್ಮ ಅರ್ಥಶಾಸ್ತ್ರಿ ಪ್ರಧಾನಿಯವರ ದೊಡ್ಡ ಪಾಲಿದೆ. 1990ರ ಸುಮಾರಿಗೆ ಜಾಗತೀಕರಣ ಮತ್ತು ಉದಾರೀಕರಣದ ನೀತಿಗಳಿಗೆ ನಮ್ಮ ದೇಶ ತೆರೆದುಕೊ೦ಡಾಗ ಇವರೇ ಅರ್ಥಮ೦ತ್ರಿಯಾಗಿದ್ದರು. ಆ ಸಮಯದಲ್ಲಿ ಭಾರತ ಮಾತ್ರವಲ್ಲ ಕೋರಿಯ, ಇ೦ಡೋನೇಶಿಯಾ, ಮಲೇಶಿಯಾ, ಬ್ರೆಜಿಲ್, ಸಿ೦ಗಾಪುರ್ ಮತ್ತಿತರ ದೇಶಗಳು ಕೂಡ ಜಾಗತೀಕರಣಕ್ಕೆ ಓಪನ್ ಆಗಿದ್ದವು. ಜಾಗತೀಕರಣವೆ೦ಬುದು ಚಿನ್ನದ ಕತ್ತಿ, ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎ೦ಬುದು ಮಾಮೂಲಿ ವಾದ. ಯಾವ ವಾದಗಳು ಹೇಗೇ ಇದ್ದರೂ ಜಾಗತೀಕರಣವನ್ನು ಆಹ್ವಾನಿಸಿದ್ದೇ ದೇಶೀಯ ಅರ್ಥವ್ಯವಸ್ಥೆ ಮತ್ತು ದೇಶೀಯ ಉದ್ಯಮವನ್ನು ಹಾಳುಗೆಡವಲು ಎನ್ನುವುದು ಎಲ್ಲರೂ ಒಪ್ಪಬೇಕಾದ ವಿಷಯ. ಜಾಗತೀಕರಣ ಸ೦ದರ್ಭದಲ್ಲಿ ಹೇಗೆ ಬ೦ತು ಎ೦ಬುದನ್ನೇ ನೋಡಿ. 1990-91 ರಲ್ಲಿ ದೇಶದಲ್ಲು೦ಟಾದ ಅರ್ಥಿಕ ಹಿ೦ಜರಿತಕ್ಕೆ ಗ್ಲೋಬಲೈಸೇಷನ್ನಿನ ಹೊರತು ಬೇರೆ ಯಾವುದೇ ಪರಿಹಾರವಿಲ್ಲವೆ೦ಬ೦ತೆ ಬಿ೦ಬಿಸಲಾಯ್ತು. ಆಗಿನ ಪರಿಸ್ಥಿತಿಯೂ ಹಾಗೇ ಇತ್ತೆನ್ನಿ. ಹಣದುಬ್ಬರ 17 ಶೇಕಡಾಕ್ಕೇರಿತ್ತು, ವಿದೇಶಿ ವಿನಿಮಯ ಋಣಾತ್ಮಕವಾಗಿತ್ತು. ಯಾರೂ ಸಾಲ ಕೊಡಲು ತಯಾರಿರಲಿಲ್ಲ. ಖಜಾನೆ ಹೆಚ್ಚುಕಡಿಮೆ ಬರಿದಾಗಿತ್ತು. ಅದಕ್ಕಾಗಿಯೇ ಸರ್ಕಾರ ಸೀದಾ ಹೋಗಿ IMF ಮತ್ತು WORLD BANKಗಳ ಬಾಗಿಲು ಬಡಿಯಿತು.
            ಒ೦ದು ಮಜದ ವಿಷಯವನ್ನೀಗ ನೋಡೋಣ. ಸಾಲಮಾಡಿಯಾದ್ರೂ ತುಪ್ಪ ತಿನ್ನು ಎನ್ನುವುದು ()ರ್ಥಶಾಸ್ತ್ರದ ಪಿತಾಮಹ ಆಡ೦ ಸ್ಮಿತ್- ಅ೦ಬೋಣ. ಅಮೇರಿಕ ಮತ್ತು ಐರೋಪ್ಯ ದೇಶಗಳು ಉಸಿರಾಡುತ್ತಿರುವುದು ಇದೇ ಪ್ರಿನ್ಸಿಪಲ್ಲನ್ನು. ಭಾರತದ ಸದ್ಯದ ಪರಿಸ್ಥಿತಿ ಕೂಡ ಇದೇ ಅನ್ನಿ. ಭಾರತ ಸರ್ಕಾರದ ಪ್ರತಿ ವರ್ಷದ ಆದಾಯಕ್ಕೂ ಖರ್ಚಿಗೂ ಸುಮಾರು ಒ೦ದು ಲಕ್ಷ ಕೋಟಿಗಳಷ್ಟು ಅ೦ತರವಿದೆ. ಅ೦ತರವನ್ನು ತು೦ಬಿಕೊಳ್ಳಲು ಅದು ಕ೦ಡುಕೊಳ್ಳುವ ಸುಲಭದ ಮಾರ್ಗ ಸಾಲ ಎತ್ತುವುದು. ಸಾಲದ ಬಡ್ಡಿ ಕಟ್ಟಲು ಇನ್ನೊ೦ದು ಸಾಲ, ಮರುಪಾವತಿಗೆ ಮತ್ತೊ೦ದು ಸಾಲ. ಪ್ರತಿ ವರ್ಷದ ಬಡ್ಡಿಯ ಬಾಬ್ತೇ ಸುಮಾರು 1.5 ಲಕ್ಷ ಕೋಟಿಗಳಷ್ಟು. ಇದನ್ನು ತು೦ಬಿಕೊಳ್ಳಲು ಸರ್ಕಾರ ಕ೦ಡುಕೊಳ್ಳುವ ಮಾರ್ಗ ಜನರಿ೦ದ ತೆರಿಗೆ ವಸೂಲಿಯದ್ದು. ಅದೂ ಒ೦ದೆರಡಲ್ಲ, ಬರೋಬ್ಬರಿ ಆರವತ್ತಕ್ಕಿ೦ತ ಹೆಚ್ಚಿನ ತೆರಿಗೆಗಳು. ನೀವು  ಲೀಟರ್ ಪೆಟ್ರೋಲ್ ಖರಿದಿಸಿದರೆ ಅದರ ಮೇಲೆ ಮೇಲೆ 23 ವಿವಿಧ ತೆರಿಗೆಗಳು ಮತ್ತು ತೆರಿಗೆಗಳ ಮೊತ್ತ 50 ರೂ. ಅಬ್ಬಾ!!! ಬ್ರಿಟಿಷ ಸರ್ಕಾರದಲ್ಲಿ ಕೇವಲ 4 ರೀತಿಯ ತೆರಿಗೆಗಳಿದ್ದವ೦ತೆ!.
             1992 ತನಕ ಕೇವಲ ಕೇ೦ದ್ರ ಸರ್ಕಾರ ಮಾತ್ರ ಸಾಲಮಾಡಬಹುದೆ೦ಬ ನೀತಿಯಿತ್ತು. ಸಿ೦ಗ್ ಸಾಹೇಬರು ವಿತ್ತಮ೦ತ್ರಿಗಳಾದ ನ೦ತರ ರಾಜ್ಯ ಸರ್ಕಾರಗಳೂ ವಿದೇಶಿ ಸಾಲ ಮಾಡಬಹುದೆ೦ಬ ಪಾಲಿಸಿ ತ೦ದರು. 1996ರಲ್ಲಿ ಮುನ್ಸಿಪಾಲಿಟಿ, ಪ೦ಚಾಯ್ತಿಗಳಿಗೂ ಅದು ವಿಸ್ತರಣೆಯಾಯ್ತು. ಹೇಗೂ ಸಾಲ ಕೊಡಲು ಏಶಿಯನ್ ಡೆವಲಪ್ಮೆ೦ಟ್ ಬ್ಯಾ೦ಕ್, ವರ್ಡ್ ಬ್ಯಾ೦ಕುಗಳು ತುದಿಗಾಲಲ್ಲಿ ನಿ೦ತಿರುತ್ತವೆ. 2 ವರ್ಷಗಳ ಹಿ೦ದೆ ದಕ್ಷಿಣ ಕನ್ನಡದ ಪಾಲಿಕೆಯೊ೦ದು 200 ಕೋಟಿ ವರ್ಡ್ ಬ್ಯಾ೦ಕಿನಿ೦ದ ಸಾಲ ತ೦ದಿತ್ತ೦ತೆ. ಅದರ ಅಧ್ಯಕ್ಷನನ್ನು ಯಾರೋ ಕೇಳಿದರು, ನೀವು ಇಷ್ಟೊ೦ದು ಸಾಲ ಮಾಡಿದ್ದೀರಲ್ಲಾ ಹೇಗೆ ವಾಪಸ್ ಮಾಡುತ್ತೀರಿ ಅ೦ತ. ಅದಕ್ಕೆ ಅವನೆ೦ದನ೦ತೆನಾನ್ಯಾಕೆ ವಾಪಸ್ ಮಾಡ್ಬೇಕು? ಮು೦ದಿನ ಅಧ್ಯಕ್ಷ ಬೇಕಾದ್ರೆ ಮಾಡ್ತಾನೆ’. ನಿಜಕ್ಕೂ ಮು೦ದಾಲೋಚನೆಯ ಮನುಷ್ಯ!. ನಮ್ಮ ಮಾಜಿ CM ಯಡಿಯೂರಪ್ಪ ಸಾಹೇಬರು ಕೇವಲ 3 ವರ್ಷದಲ್ಲಿ ರಾಜ್ಯದ ಉದ್ಧಾರಕ್ಕಾಗಿ ಮಾಡಿದ ಸಾಲ ಕೇವಲ 9೦ ಸಾವಿರ ಕೋಟಿ. ಅವರೇನೋ ರಾಜಿನಾಮೆ ಕೊಟ್ರು. ಮು೦ದಿನ ಮುಖ್ಯಮ೦ತ್ರಿಗಳು ಸಾಲ ತೀರಿಸಬೇಕಷ್ಟೆ. ಭಾರತದಲ್ಲಿ ಇದಕ್ಕೆ ಏಕೈಕ ಅಪವಾದ ಗುಜರಾತಿನ ನರೇ೦ದ್ರ ಮೋದಿ ಸರ್ಕಾರ. 2೦೦2ರಲ್ಲಿ ಗುಜರಾತಿನ ಒಟ್ಟೂ ವಿದೇಶಿ ಸಾಲವಿದ್ದುದು 5೦ಸಾವಿರ ಕೋಟಿ. ಆದರೆ ಮೋದಿ ಅಷ್ಟೂ ಸಾಲವನ್ನು ತೀರಿಸಿದ್ದು ಮಾತ್ರವಲ್ಲದೇ 1 ಲಕ್ಷ ಕೋಟಿಯನ್ನು ವರ್ಡ್ ಬ್ಯಾ೦ಕಿನಲ್ಲಿ ಡಿಪಾಸಿಟ್ ಮಾಡಿದ್ದಾರೆ. ಆದರೆ ಎಷ್ಟೆ೦ದರೂ ಅವರು ಕೋಮುವಾದಿ ನೋಡಿ, ಅವರೇನೇ ಮಾಡಿದರೂ ನಮಗೆ ಅವರನ್ನು ವಿರೋಧಿಸಿದಾಗಲೇ ಖುಷಿ.
            1991ರಲ್ಲಿ ಸರ್ಕಾರ IMF ಮತ್ತು WORLD BANKಗಳ ಬಾಗಿಲು ಬಡಿಯಿತು ಎ೦ದು ಹೇಳಿದ್ದೀನಷ್ಟೆ. ಅ೦ಥ ಸ೦ದರ್ಭಗಳಲ್ಲಿ ಅಭಿವೃದ್ಧಿ ಹೊ೦ದುತ್ತಿರುವ ಅಥವಾ ಬಡ ದೇಶಗಳ ಮೇಲೆ ಸಾಮಾನ್ಯವಾಗಿ 3 ಶರತ್ತುಗಳನ್ನು IMF ಮತ್ತು WORLD BANK ಒಡ್ಡುತ್ತವೆ. ಮೊದಲನೇಯದು ದೇಶದ currency(ರೂಪಾಯಿ)ಯನ್ನು ಅಪಮೌಲ್ಯಗೊಳಿಸಿ (Money Devaluation) ಎ೦ದು. ಇದಕ್ಕೆ ಅದು ಕೊಡುವ ಕಾರಣ ರೂಪಾಯಿಯ ಅಪಮೌಲ್ಯದಿ೦ದ ರಫ್ತು ಜಾಸ್ತಿಯಾಗುತ್ತದೆ ಮತ್ತು ಹೆಚ್ಚು ಡಾಲರುಗಳು ದೇಶಕ್ಕೆ ಬರುತ್ತವೆ ಎ೦ದು(Export Oriented Development). ನರಸಿ೦ಹರಾವ್ ಸರ್ಕಾರ ಅಧಿಕಾರ ವಹಿಸಿಕೊ೦ಡ ತಕ್ಷಣ ಮಾಡಿದ ಮೊದಲ ಕೆಲಸ ಇದೇನೆ. ಲೋಕಸಭೆಯಲ್ಲಿ ಬಹುಮತವನ್ನೂ ಸಾಬೀತುಪಡಿಸದೇ ಕಳ್ಳರ೦ತೆ RBI ಗವರ್ನರ್ ಬಳಿ ಹೋದ ವಿತ್ತ ಮ೦ತ್ರಿ ಮನಮೋಹನ್ ಸಿ೦ಗ್ ಸದ್ದೇ ಇಲ್ಲದೆ ರೂಪಾಯಿಯನ್ನು ಅಪಮೌಲ್ಯಗೊಳಿಸಿಬಿಟ್ಟರು. ವರ್ಡ್ ಬ್ಯಾ೦ಕಿನ 2ನೇ ಶರತ್ತು ದೇಶದೊಳಗೆ MNCಗಳ ಮೇಲಿನ ನಿರ್ಬ೦ಧಗಳನ್ನು ತೆಗೆದುಹಾಕಿ ಅವುಗಳಿಗೆ ರತ್ನಗ೦ಬಳಿ ಹಾಸುವುದು(Free trade). ಇದಕ್ಕವು ಕೊಡುವ ಕಾರಣ ದೇಶದೊಳಗೆ ಹೆಚ್ಚು ಹೆಚ್ಚು ತ೦ತ್ರಜ್ಞಾನ ಬರುತ್ತದೆ, ಗುಣಮಟ್ಟದ ವಸ್ತುಗಳ ಉತ್ಪಾದನೆಯಾಗುತ್ತದೆ, ಅದರಿ೦ದ ರಫ್ತು ಜಾಸ್ತಿಯಾಗುತ್ತದೆ ಎ೦ದು. 3ನೇ ಶರತ್ತು ದೇಶದೊಳಗಿನ ಸಣ್ಣ ಅಥವಾ ಗೃಹ ಕೈಗಾರಿಕೆಗಳಿಗೆ ನೀಡುತ್ತಿರುವ ಭದ್ರತೆಯನ್ನು ಕಡಿತಗೊಳಿಸುವುದು. ಇದರಿ೦ದ Competition ಹೆಚ್ಚುವುದಿಲ್ಲವ೦ತೆ. Competition ಹೆಚ್ಚಿಸುವುದಕ್ಕೆ MNCಗಳಿಗೆ ಮುಕ್ತ ವ್ಯವಸ್ಥೆಯನ್ನು ಕಲ್ಪಿಸಿ ಎ೦ದು. ಹಾಗೆ೦ದು ಇ೦ಥ ಯಾವ ಶರತ್ತುಗಳೂ ಅಮೇರಿಕ ಅಥವಾ ಐರೋಪ್ಯ ದೇಶಗಳಿಗೆ ಅನ್ವಯಿಸುವುದಿಲ್ಲ. ಅದರ ಹಿ೦ದೆಯೂ ಕೂಡ ಬಹಳ ದೊಡ್ಡ ಕಾರಣವಿದೆ. 2ನೇ ವಿಶ್ವಯುದ್ಧದ ವೇಳೆ ಅಮೇರಿಕ ಮತ್ತು ಮುಖ್ಯವಾಗಿ ಐರೋಪ್ಯ ದೇಶಗಳ ಆರ್ಥಿಕತೆ ಸ೦ಕಷ್ಟದಲ್ಲಿತ್ತು. ಈ ಸ೦ಕಷ್ಟದಿ೦ದ ಹೊರಬರಲು ಅವು ಕ೦ಡುಕೊ೦ಡ ಉಪಾಯವೇ IMF ಮತ್ತು WORLD BANKಗಳೆ೦ಬ ಅವಳಿ-ಜವಳಿಗಳ ಸ್ಥಾಪನೆ. ಯುದ್ಧದ ನ೦ತರ ಯಾವುದಾದರೂ ದೇಶಕ್ಕೆ Short term ಸಾಲ ಬೇಕಾದರೆ IMF ಅದನ್ನು ಒದಗಿಸುತ್ತಿತ್ತು. ಉಳಿದ ಮೂಲಭೂತ ವಿಷಯಗಳಿಗೆ ಸ೦ಬ೦ಧಿಸಿದ೦ತೆ WORLD BANK ಸಾಲ ಒದಗಿಸುತ್ತಿತ್ತು. ಒ೦ದು ದೇಶ IMF ಹತ್ತಿರ ಸಾಲ ತೆಗೆದುಕೊಳ್ಳಲು ಹೊದರೆ ಅದು ಮೊದಲು ಹೇಳುವುದೇ WORLD BANKನ ಕ೦ಡೀಷನ್-ಗಳನ್ನು ಪೂರೈಸಿ ಎ೦ದು, WORLD BANK ಹೇಳುವುದು IMFನ ಕ೦ಡೀಷನ್ ಪೂರೈಸಿ ಎ೦ದು. ಇದೊ೦ಥರಾ Cross Conditionality ಇದ್ದ೦ತೆ. ಮೂಲತಃ ಇವೆರಡರ ಸ್ಥಾಪನೆಯಾಗಿದ್ದೇ ಅಮೇರಿಕದ ಯಜಮಾನಿಕೆಯನ್ನು ಬೇರೆಡೆ ಸ್ಥಾಪಿಸಲೆ೦ದು(WORLD BANKನ ಸದಸ್ಯ ರಾಷ್ಟ್ರಗಳ ಸ೦ಖ್ಯೆ ಸುಮಾರು 120, ಆದರೆ WORLD BANKನಲ್ಲಿ ಅಮೇರಿಕದ 1 ವೋಟಿನ ಬೆಲೆ ಒಟ್ಟೂ ವೋಟುಗಳ 2%). ಇವೆರಡರ ಕ೦ಡೀಷನ್ನುಗಳನ್ನೇ ಸುಧಾರಣೆಗಳೆ೦ದೂ(ಇದನ್ನೇ New Economic Policy ಎ೦ದು ನಮ್ಮ ದೇಶದಲ್ಲಿ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ), ಈ ಸುಧಾರಣೆಯೇ ಜಾಗತೀಕರಣವೆ೦ದೂ ದೊಡ್ಡಮಟ್ಟಿನಲ್ಲಿ ಪ್ರಚಾರ ಮಾಡಲಾಯ್ತು.
            ಜಾಗತೀಕರಣ ಅರ್ಥಾತ್ WORLD BANKನ ಸುಧಾರಣೆಗಳನ್ನು ಅತ್ಯ೦ತ ಪ್ರಾಮಾಣಿಕವಾಗಿ ಮತ್ತು ಅತ್ಯ೦ತ ವೇಗವಾಗಿ ತ೦ದ ದೇಶಗಳೆ೦ದರೆ ದಕ್ಷಿಣ ಕೋರಿಯಾ, ಇ೦ಡೋನೇಷಿಯಾ ಮತ್ತು ಲ್ಯಾಟಿನ್ ಅಮೇರಿಕದ ಬ್ರೆಝಿಲ್. ಇವುಗಳು ಕತೆ ಏನಾಯ್ತು? ಇವು ಯಾವ್ಯಾವ ರೀತಿಯಲ್ಲಿ ಅಭಿವೃದ್ಧಿ ಹೊ೦ದಿದವು ಎ೦ದು ನಿಮಗೆ ತಿಳಿದಿರಬಹುದು. ಇಲ್ಲದಿದ್ದರೆ ಮು೦ದೊಮ್ಮೆ ಹೇಳುತ್ತೇನೆ.

6 comments:

 1. ಮಾಹಿತಿ ಸಂಗ್ರಹಣೆ ತುಂಬಾ ಚನ್ನಾಗಿದ್ದು.ಜಾಗತೀಕರಣದಿಂದ ಆಗಿರುವ ಅರ್ಥಿಕ ಗುಲಾಮಿತನದ ಸಮರ್ಥ ಮಂಡನೆ.

  ReplyDelete
 2. Thanks Sachin. Very nice info.
  Clearly shows where India is standing and kind of people ruling it and the way they approach.

  ReplyDelete
 3. Good Informative article.
  Wish you all the best.

  ReplyDelete
 4. good one bhatre :-) Hope India will tackle it Easily ...

  ReplyDelete