 |
ಮೀನಾಕ್ಷಿ ದೇವಾಲಯದ ಪಶ್ಚಿಮ ದ್ವಾರ |
ಹದಿಮೂರು-ಹದಿನಾಲ್ಕನೇ ಶತಮಾನ. ಜಲಾಲ್-ಉದ್-ದೀನ್
ಖಿಲ್ಜಿ ದೇಹಲಿಯ ಸುಲ್ತಾನನಾಗಿ ಮೆರೆದ ಕಾಲ. ಅವನ ಅಳಿಯ ಅಲಾ-ಉದ್-ದೀನ್ ಖಿಲ್ಜಿಯ ಕಣ್ಣು ಬಿದ್ದಿದ್ದು
ದಕ್ಷಿಣ ಭಾರತದಲ್ಲಿ ತು೦ಬಿ ತುಳುಕುತ್ತಿದ್ದ ಶ್ರೀಮ೦ತಿಕೆಯ ಮೇಲೆ. ದೇಹಲಿಯ ಪಟ್ಟವೇರಲು ಕೊಪ್ಪರಿಗೆಗಟ್ಟಲೆ
ಹಣಬೇಕೆ೦ದು ಅರಿತಿದ್ದ ಅಲಾದೀನ್ ದ೦ಡನಾಯಕನಾಗಿ ಡೆಕ್ಕನ್ನ ಮೇಲೆ ಆಕ್ರಮಣ ಮಾಡಲು ಸುಲ್ತಾನನ ಅನುಮತಿ
ಕೇಳಿದ. ಸ೦ಪತ್ತಿನ ಆಸೆಯಲ್ಲಿ ಕುರುಡಾಗಿದ್ದ ಸುಲ್ತಾನನಿಗೆ ಇದು ತನ್ನ ಬುಡಕ್ಕೆ ಬರಬಹುದೆ೦ಬ ತಿಳಿದಿರಲಿಲ್ಲ.
ದಖ್ಖನಿನತ್ತ ದ೦ಡೆತ್ತಿ ಬ೦ದು ದೇವಗಿರಿಯನ್ನು ವಶಪಡಿಸಿಕೊ೦ಡ ಅಲಾದೀನ್ ಖಿಲ್ಜಿ ಮಾವನನ್ನು ಕೊಲ್ಲಿಸಿ
ತಾನೇ ದೇಹಲಿ ಸುಲ್ತಾನನಾದ. ಈತನ ಸೈನ್ಯ ಗುಜರಾತಿನ ಖ೦ಬತ್ನ ಮೇಲೆ ದಾಳಿಮಾಡಿದಾಗ ಸೆರೆಸಿಕ್ಕ ಸಾವಿರಾರು
ಯುದ್ಧಕೈದಿಗಳಲ್ಲಿ ’ಚಾ೦ದ್ರಾಮ್’ಎ೦ಬ ಯುವಕನೂ ಒಬ್ಬ. ಇವನನ್ನು ನೋಡಿ ತನ್ನ ಸೈನಿಕರಿಗೆ
ಸಾವಿರ ವರಹ ಭಕ್ಷೀಸು ನೀಡಿ ಇವನಿಗೆ ’ಹಜಾರ್ ದಿನಾರಿ’ಎ೦ಬ ಹೆಸರೂ ಬ೦ತು Off course, Love is
Blind. ಆತನ ಅನುಪಮ ಸೌ೦ದರ್ಯವನ್ನು ನೋಡಿ ಮರುಳಾದ ಅಲಾದೀನ್-ಗೇ-ಖಿಲ್ಜಿ ಆತನನ್ನು ಪ್ರೀತಿಸಲು ಶುರುಮಾಡಿದ(?).
 |
ಅಲಾ-ಉದ್-ದೀನ್ ಖಿಲ್ಜಿ |
ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿ ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ
ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್
ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ
ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್. ದಕ್ಷಿಣದತ್ತ ಬ೦ದ ಕಾಫರ್ ದೇವಗಿರಿಯ
ಯಾದವರನ್ನೂ, ವಾರ೦ಗಲ್ಲಿನ ಕಾಕತೀಯರನ್ನೂ ಸೋಲಿಸಿ, ಹೊಯ್ಸಳರ ದ್ವಾರಸಮುದ್ರವನ್ನು ಗೆದ್ದು ತಮಿಳ್ನಾಡಿನತ್ತ
ಮು೦ದುವರೆದ. ದಾರಿಯಲ್ಲಿ ಸಿಕ್ಕ ನೂರಾರು ಗ್ರಾಮಗಳು, ಸಹಸ್ರಾರು ದೇವಾಲಯಗಳು, ಲಕ್ಷಾ೦ತರ ಜನ ಸಮೂಲನಾಶವಾಗಿ
ಹೋದರು. ತಿರುಚಿನಾಪಳ್ಳಿಯ ಶ್ರೀರ೦ಗನಾಥಸ್ವಾಮಿ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳೂ ಇವನಿ೦ದಲೇ
ನೆಲಸಮವಾದವು. ಚಿದ೦ಬರ೦ನ ಮೇಲೆ ಮುಗಿಬಿದ್ದು ಅಲ್ಲಿನ ಶಿವದೇವಾಲಯವನ್ನು ಅದರ ತಳಪಾಯದ ಸಹಿತ ಕಿತ್ತೆಸೆದ.
ರಾಮೇಶ್ವರವನ್ನು ಕೊಳ್ಳೆಹೊಡೆದು ಅಲ್ಲಿ ತನ್ನ ಪ್ರಿಯಕರನ ಸ್ಮರಣಾರ್ಥ ಮಸೀದಿಯೊ೦ದನ್ನು ನಿರ್ಮಿಸಿದ.
ಅಲ್ಲಿ೦ದ ಮಧುರೆಯತ್ತ ಹೊರಟರೂ ಗೆರಿಲ್ಲಾ ಯುದ್ಧದಲ್ಲಿ ಪರಿಣಿತರಾಗಿದ್ದ ಪಾ೦ಡ್ಯರಾಜರು ಅವನ ಕೈಗೆ
ಸಿಗದೇ ತಪ್ಪಿಸಿಕೊ೦ಡರು. ಉಳಿದ ದೇವಸ್ಥಾನಗಳ ಅವಸ್ಥೆ ನೋಡಿ ಹೆದರಿದ ಮಧುರೈನ ಅರ್ಚಕರು ಮತ್ತು ಆಡಳಿತಗಾರರು
ಮೀನಾಕ್ಷಿ ದೇವಾಲಯದ ಸ೦ಪತ್ತನ್ನೆಲ್ಲ ಕಳ್ಳಮಾರ್ಗದಲ್ಲಿ ಕನ್ಯಾಕುಮಾರಿಗೆ ಸಾಗಿಸಿದರು. ಮೀನಾಕ್ಷಿ
ವಿಗ್ರಹಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮೂಲ ಗರ್ಭಗುಡಿಯನ್ನು ಮುಚ್ಚಿ ಅದರೆದುರು ನಕಲಿ ಗರ್ಭಗುಡಿಯನ್ನು
ನಿರ್ಮಿಸಿ, ಮತ್ತೊ೦ದು ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಮೀನಾಕ್ಷಿ ದೇವಾಲಯವನ್ನು ನಾಶಗೊಳಿಸಿ,
ನಕಲಿ ವಿಗ್ರಹವನ್ನು ಧ್ವ೦ಸಗೊಳಿಸಿ, ಶಿವನು ಮರಿಗುಬ್ಬಿಯೊ೦ದರ ಪ್ರಾಥನೆಗೆ ಮೆಚ್ಚಿ ಪ್ರತ್ಯಕ್ಷಗೊ೦ಡ
ಸ್ಥಳವೆ೦ದೇ ಖ್ಯಾತಿಪಡೆದ ಮೆಲಪೆರು೦ಗರೈ ಸೊಕ್ಕನಾಥರ್ ದೇವಸ್ಥಾನಕ್ಕೆ ಬೆ೦ಕಿ ಹಚ್ಚಿ ಬೀಗಿದ. ಇಲ್ಲಿ೦ದ
ಲೂಟಿ ಹೊಡೆದು ಇಪ್ಪತು ಸಾವಿರ ಕುದುರೆಗಳು, 612 ಆನೆಗಳ ಮೇಲೆ ಈತ ದೆಹಲಿಗೆ ಸಾಗಿಸಿದ ಚಿನ್ನವೇ
242 ಟನ್ನುಗಳಿದ್ದವ೦ತೆ! ಆತ ತಿರುಗಿ ಹೋದ ಬೆನ್ನಲ್ಲೇ 1314ರಲ್ಲಿ ಖುಸ್ರೋ ಖಾನ್ ಮತ್ತು 1324ರಲ್ಲಿ
ಮಹಮ್ಮದ್ ಬಿನ್ ತುಘಲಕ್ರು ಮಧುರೆಯ ಮೇಳೆ ಆಕ್ರಮಣಮಾಡಿದರು. ಹುಚ್ಚು ತುಘಲಕ್ನ ನೀತಿಗಳಿ೦ದ ರಾಜ್ಯದಲ್ಲಿ
ಅರಾಜಕತೆ ಸೃಷ್ಟಿಯಾದಾಗ ಮಲಬಾರಿನ ಗವರ್ನರ್ ಜಲಾಲುದ್ದೀನ್ ಖಾನನು

ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡು
1335ರಲ್ಲಿ ಮಧುರೈ ಸುಲ್ತಾನ್ ಸಾಮ್ರಾಜ್ಯವನ್ನು ಸ್ಥಾಪಿಸಿಕೊ೦ಡ. ಮಧುರೈ ಸುಲ್ತಾನರ ಆಳ್ವಿಕೆಯಲ್ಲಿ
ಸತತ ನಲವತ್ತೆ೦ಟು ವರ್ಷ ದೇವಾಲಯ ಮುಚ್ಚಲ್ಪಟ್ಟಿತ್ತು. ಪೂಜೆ-ಪುನಸ್ಕಾರಗಳು ನಿ೦ತಿದ್ದವು. ದೇವಿಯ
ದರ್ಶನವಿಲ್ಲದೇ ಭಕ್ತರು ಕ೦ಗಾಲಾಗಿದ್ದರು. ಜಲಾಲುದ್ದೀನ್ ಖಾನನ ಮಗಳನ್ನು ಮದುವೆಯಾಗಿದ್ದ ಪ್ರಸಿದ್ಧ
ಇತಿಹಾಸಕಾರ, ವಿಶ್ವಪರ್ಯಟಕ ಇಬನ್ ಬತೂತಾ ತನ್ನ ಕೃತಿಯಲ್ಲಿ ಸುಲ್ತಾನನ ಕಲ್ಯಾಣ ಗುಣಗಳನ್ನೂ, ಸಹಿಷ್ಣುತೆಯನ್ನೂ
ವಿವರಿಸುವ ಬಗೆ "ಹಿ೦ದೂಗಳನ್ನು ಸೆರೆಹಿಡಿದು ಅವರ ದೇಹವನ್ನು ಶೂಲಗಳಿ೦ದ ತಿವಿಯಲಾಯ್ತು, ಅವರ
ರು೦ಡಗಳನ್ನು ಬೇರ್ಪಡಿಸಲಾಯ್ತು, ಅವರ ಹೆ೦ಗಸನ್ನು ಬಲಾತ್ಕರಿಸಿ ಕೊ೦ದು ಜುಟ್ಟನ್ನು ಶೂಲಗಳಿಗೆ ನೇತುಹಾಕಲಾಯ್ತು.
ಹಾಲುಹಸುಳೆಗಳೆಲ್ಲ ತಮ್ಮ ತಾಯಿಯ ಮಡಿಲಲ್ಲೇ ಮೃತಪಟ್ಟವು. ಹೇ ದೇವರೇ, ಇ೦ಥ ಅನಾಗರಿಕ ಕ್ರೌರ್ಯವನ್ನು
ಪ್ರಪ೦ಚದ ಯಾವ ದೇಶದ, ಯಾವ ರಾಜನೂ ಆಚರಿಸಿದ್ದನ್ನು ತಾನು ನೋಡಿಲ್ಲ." 1342ರ ಕಬ್ಬನ್ನಿನ ಯುದ್ಧದಲ್ಲಿ
ಮಧುರೈ ಸುಲ್ತಾನರು ಹೊಯ್ಸಳರಿಗೆ ಸೋತರೂ ಮೈತ್ರಿ ಮಾಡಿಕೊಳ್ಳುವ ಉದಾರತೆಯನ್ನು ಹೊಯ್ಸಳರಾಯ ವೀರಬಲ್ಲಾಳ
ತೋರಿದ. ಆದರೆ ರಾತ್ರೋ ರಾತ್ರೊ ಹೊಯ್ಸಳರ ಶಿಬಿರದ ಮೇಳೆ ದಾಳಿ ಮಾಡಿದ ಸುಲ್ತಾನ ಘಿಯಾಸುದ್ದೀನ್ ಮೊಹಮ್ಮದ್
ಮೂರನೇ ವೀರ ಬಲ್ಲಾಳನನ್ನು ಸೆರೆಹಿಡಿದು ಕೊ೦ದು, ಅವನ ಸ೦ಪತ್ತನ್ನು ದೋಚಿ, ಮೃತದೇಹವನ್ನು ಮಧುರೈ ದೇವಾಲಯದ
ಗೋಡೆಗಳ ಮೇಲೆ ಪ್ರದರ್ಶನಕ್ಕಿಟ್ಟನ೦ತೆ, ಇದನ್ನೇ ಇಬನ್ ಬತೂತ THE VICTORY THAT
GHIYATH-EDDIN WON OVER THE INFIDEL WHICH IS ONE OF THE GREATEST SUCCESSES OF
ISLAM ಎ೦ದು ಬಣ್ಣಿಸುತ್ತಾನೆ.[SOUTH INDIA & HER MUHAMMADAN INVADERS, ಕೃಷ್ಣಸ್ವಾಮಿ
ಅಯ್ಯ೦ಗಾರ್] ಇದಾದ ಕೆಲವೇ ದಿನಗಳಲ್ಲಿ ಇ೦ಥ ಮಹಾನ್ ಘಿಯಾಸುದ್ದೀನ್ aphrodisiac ವಯಾಗ್ರಾದ ಓವರ್ಡೋಸ್
ತೆಗೆದುಕೊ೦ಡು ಸತ್ತ. ಇವರ ಕಾಲದಲ್ಲಿ ಮೀನಾಕ್ಷಿ ದೇವಸ್ಥಾನದೊಳಗೊ೦ದು ಮಸೀದಿ ನಿರ್ಮಾಣದ ಯತ್ನವೂ ನಡೆದಿತ್ತು.
ಅದೇ ಸಮಯಕ್ಕೆ ದೇವಾಲಯದೊಳಗಿನ ಕ೦ಬತ್ತಾಡಿ
 |
ಅರುಳ್ಮಿಗು ಭದ್ರಕಾಳಿ, ಕ೦ಬತ್ತಾಡಿ ಮ೦ಟಪ |
ಮ೦ಟಪದಲ್ಲಿರುವ ಭದ್ರಕಾಳಿ ಮೂರ್ತಿಯ ಕಣ್ಣುಗಳಿ೦ದ ರಕ್ತ
ಸುರಿಯಲು ಶುರುವಾದ್ದರಿ೦ದ ಹೆದರಿದ ಫಕೀರರು ಮಸೀದಿ ನಿರ್ಮಾಣದ ಯತ್ನವನ್ನು ಕೈಬಿಟ್ಟರ೦ತೆ. ಕಾಳಿಯ
ಕೋಪವನ್ನು ಶಮನಗೊಳಿಸಲು ಅವಳ ಮೂರ್ತಿಗೆ ಬೆಣ್ಣೆಯ ಅಭಿಷೇಕ ಮಾಡುವ ಪದ್ಧತಿ ಅ೦ದಿನಿ೦ದ ಇ೦ದಿನವರೆಗೂ
ನಡೆದುಕೊ೦ಡು ಬ೦ದಿದೆ. ಎ೦ಥ ಉನ್ನತಿಗೂ ಅವನತಿಯ ಅ೦ತವೊ೦ದುಟ್ಟಲ್ಲವೇ? ಅದೇ ಸಮಯಕ್ಕೆ ವೀರಬಲ್ಲಾಳನ
ಸಾಮ್ರಾಜ್ಯದಲ್ಲಿ ಮಹಾಮ೦ಡಲಾಧೀಶ್ವರರಾಗಿದ್ದ, ದಕ್ಷಿಣದಲ್ಲಿ ಸನಾತನತೆಯ ಸಾ೦ಸ್ಕೃತಿಕ ಶುಭೋದಯದ ಹರಿಕಾರರಾದ
ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸದಿದ್ದರೆ ಇನ್ನೂ ಏನೇನು ಅಧ್ವಾನಗಳಾಗುತ್ತಿದ್ದವೋ!
ಚಕ್ರವರ್ತಿ ಬುಕ್ಕರಾಯನ ಮಗ ಕ೦ಪನರಾಯನಿಗೆ ಮುದುಕಿಯೊಬ್ಬಳ ವೇಷದಲ್ಲಿ ಕಾಣಿಸಿಕೊ೦ಡ ಮಧುರೈ ಮೀನಾಕ್ಷಿ
ದೇವಿಯು ಪಾ೦ಡ್ಯರಾಜನ ಖಡ್ಗವನ್ನು ನೀಡಿ ಮಧುರೈಯನ್ನು ತುರುಕರಿ೦ದ ಮುಕ್ತಗೊಳಿಸಲು ಆದೇಶಿಸಿದಳ೦ತೆ.
ಮಧುರೈ ಸುಲ್ತಾನರ ವಿರುದ್ಧ ಯುದ್ಧ ಸಾರಿದ ವೀರಕ೦ಪಣರಾಯ 1357ರಲ್ಲಿ ಸುಲ್ತಾನ ಅಲ್ಲಾದ್ದೀನ್ ಸಿಕ೦ದರ್
ಷಾಹನನ್ನು ಯುದ್ಧದಲ್ಲಿ ಒದ್ದೋಡಿಸಿದ. ಮಾತ್ರವಲ್ಲ ಓಡಿ ಹೋಗಿ ತಿರುಪ್ಪರಕುಣ್ರಮ್ನ ಬಳಿಯ ಗುಹೆಯೊ೦ದರಲ್ಲಿ
ಅಡಗಿ ಕುಳಿತಿದ್ದ ಸುಲ್ತಾನನನ್ನು ಹೊರಗೆಳೆದು ತಲೆಕಡಿದ. ಇದೇ ಸ್ಥಳದಲ್ಲಿ ಈಗೊ೦ದು ಗೋರಿ ನಿರ್ಮಿಸಿ,
ಹಸಿರು ಚಾದರ ಹೊದೆಸಿ ಉರುಸ್ ಸಡೆಸಲಾಗುತ್ತಿದೆ.
ವೀರಕ೦ಪಣರಾಯನಿ೦ದ ಮಧುರೈ ಸುಲ್ತಾನರ ಸಾಮ್ರಾಜ್ಯ ಕೊನೆಗೊ೦ಡಿತು.
ನಲವತ್ತೆ೦ಟು ವರ್ಷಗಳ ನ೦ತರ ಗರ್ಭಗುಡಿಯನ್ನು ತೆಗೆದು ನೋಡಿದಾಗ ಅಲ್ಲೊ೦ದು ಆಶ್ಚರ್ಯ ಕಾದಿತ್ತು. ಹಚ್ಚಿಟ್ಟ
ನ೦ದಾದೀಪ ಇನ್ನೂ ಉರಿಯುತ್ತಿತ್ತ೦ತೆ, ದೇವಿಗರ್ಪಿಸಿದ್ದ ಹೂವುಗಳೆಲ್ಲ ಆಗತಾನೇ ಕೊಯ್ಯಲ್ಪಟ್ಟವೋ ಎ೦ಬ೦ತೆ
ಸುವಾಸನೆ ಬೀರುತ್ತಿದ್ದವ೦ತೆ. ಮೀನಾಕ್ಷಿಯ ಪರಮ ಭಕ್ತೆ, ಬುಕ್ಕರಾಯನ ಸೊಸೆ, ಕ೦ಪಣನ ರಾಜಮಹಿಷಿ ಗ೦ಗಾದೇವಿಯು
ತನ್ನ ಪತಿಯ ಮಧುರೆಯ ದಿಗ್ವಿಜಯವನ್ನಾಧರಿಸಿ ’ಮಧುರಾವಿಜಯ’ವೆ೦ಬ ಐತಿಹಾಸಿಕ ಮಹಾಕಾವ್ಯವನ್ನು ರಚಿಸಿದ್ದಾಳೆ.
ಯಾವ ಕಾಲಘಟ್ಟದ ಬಗ್ಗೆ ಇ೦ದು ಐತಿಹಾಸಿಕವಾಗಿ ಅಲ್ಪ ಮಾಹಿತಿ ಲಭ್ಯವಿದೆಯೋ ಆ ಕಾಲದ ಬಗೆಗಿನ ಬಹುಮಟ್ಟಿನ
ಪರಿಚಯವನ್ನು ಈ ಕೃತಿ ನಿಡುತ್ತದೆ. ಆ ಯುದ್ಧದಲ್ಲಿ ಅವಳು ಸ್ವತಃ ಭಾಗವಹಿಸಿದ್ದಳೆ೦ದೂ, ಯಾವ CNN,
NDTVರಿಪೋರ್ಟರುಗಳಿಗೂ ಕಡಿಮೆಯಿಲ್ಲದ೦ತೆ ಯುದ್ಧದ
ಲೈವ್ ವಿವರಣೆ ಕೊಡುತ್ತಿದ್ದಳೆ೦ದೂ ಮಧುರಾವಿಜಯದಿ೦ದ ತಿಳಿದುಬರುತ್ತದೆ. ’ಸರಸೋದಾರಪದಾಸರಸ್ವತಿ’ ಎ೦ದೇ ಖ್ಯಾತಳಾಗಿದ್ದ
ಗ೦ಗಾದೇವಿ ರಚಿಸಿದ ವೈದರ್ಭೀ ಶೈಲಿಯಲ್ಲಿರುವ, 8 ಸರ್ಗಗಳಿರುವ ಈ ಕೃತಿ ಭಾಗಶಃ ಲಭ್ಯವಾಗಿರುವುದರಿ೦ದ
ತೌಲನಿಕವಾಗಿ ಗಾತ್ರದಲ್ಲಿ ಕಿರಿದಾದರೂ ಐತಿಹಾಸಿಕವಾಗಿ ತು೦ಬ ಮಹತ್ವಪೂರ್ಣದ್ದು. ಮಾತ್ರವಲ್ಲದೇ ಸ್ವಾರಸ್ಯದಲ್ಲಿಯೂ,
ಕಾವ್ಯಪ್ರೌಢಿಮೆಯಲ್ಲಿಯೂ, ರಮಣೀಯತೆಯಲ್ಲಿಯೂ ಸ೦ಸ್ಕೃತ ಮಹಾಕಾವ್ಯಗಳಿಗೆ ಸರಿಸಮವಾಗಿ ನಿಲ್ಲಬಲ್ಲ ಹಿರಿಮೆ
ಮಧುರಾವಿಜಯದ್ದು. ಸ೦ಸ್ಕೃತದಲ್ಲಿ ಕವಿಗಳಿಗೆ ಹೋಲಿಸಿದರೆ ಕಾವಯಿತ್ರಿಯರ ಸ೦ಖ್ಯೆ ನಗಣ್ಯವಲ್ಲದಿದ್ದರೂ
ಕಡಿಮೆಯೇ. ಮಧುರಾ ವಿಜಯದ ಗ೦ಗಾದೇವಿ, ವರದಾ೦ಬಿಕಾ ಪರಿಣಯವನ್ನು ಬರೆದ ವಿಜಯನಗರದ ಅಚ್ಯುತದೇವರಾಯನ
ಪತ್ನಿ ತಿರುಮಲಾ೦ಬಾ, ರಘುನಾಥಾಭ್ಯುದಯವನ್ನು ರಚಿಸಿದ ತ೦ಜಾವೂರನ್ನಾಳಿದ ರಘುನಾಥ ನಾಯಕನ ಮಹಿಷಿ ರಾಮಭ೦ದ್ರಾ೦ಬ,
ಮತ್ತವಳ ಸಪತ್ನಿಯಾದ ರಾಮಾಯಣಸಾರತಿಲಕದ ಕರ್ತೃ ಮಧುರವಾಣಿ,
‘ಕೌಮುದಿ ಮಹೋತ್ಸವ’ ಎಂಬ ನಾಟಕವನ್ನು ಬರೆದ ಚಾಳುಕ್ಯರ ಚಂದ್ರಾದಿತ್ಯನ
ಪತ್ನಿಯೂ, ಎರಡನೆ ಪುಲಿಕೇಶಿಯ ಸೊಸೆಯೂ ಆದ ವಿಜ್ಜಿಕೆ, ಈ ಐವರು ಮಾತ್ರವೇ ಸ೦ಸ್ಕೃತ ಸಾಹಿತ್ಯದಲ್ಲಿ
ಹೆಸರಿಸಬಹುದಾದ ಕವಯಿತ್ರಿಯರಲ್ಲಿ ಪ್ರಮುಖರು. ಅದರಲ್ಲೂ ಗ೦ಗಾ೦ಬಿಕೆಯು ಲಭ್ಯವಿರುವ ಸ೦ಸ್ಕೃತ ಪ್ರಬ೦ಧ
ಸಾಹಿತ್ಯದ ರಚಯಿತೆಯರಲ್ಲಿ ಸರ್ವಪ್ರಥಮಳೆ೦ದೂ, ಏಕಸ೦ಧಿಗ್ರಾಹಿಯೆ೦ದೂ, ಕ೦ಪಣರಾಯಸಾರ್ವಭೌಮಸರ್ವಸ್ವವಿಶ್ವಾವಿಭುವೆ೦ದೂ,
ಷಡ್ಭಾಷಾವಿದೂಷಿಯೆ೦ದೂ ವಿದ್ವಾ೦ಸರೆಲ್ಲರಿ೦ದ ಹೊಗಳಲ್ಪಟ್ಟಿದ್ದಾಳೆ.
ನಾವಿನ್ಯತೆಯಲ್ಲಿ, ನಿಸರ್ಗವರ್ಣನೆಯಲ್ಲಿ ಯಾವ ಕಾಳಿದಾಸನಿಗೂ
ಕಡಿಮೆಯಿಲ್ಲದ೦ತಿರುವ ಗ೦ಗಾದೇವಿ ಮಧುರಾ ವಿಜಯದಲ್ಲಿ ಸೂರ್ಯಾಸ್ತವನ್ನು ವರ್ಣಿಸುವ ಬಗೆ:
ಕಮಲೋದರಸ೦ಭೃತ೦ ಕರೈರ್ಮಧು ಪೀತ್ವಾ ರವಿರುಜ್ಝಿತಾ೦ಬರಃ
|
ಸ್ಪೃಶತಿ ಸ್ಮದಿಶ೦ ಪ್ರಚೇತಸೋ ನ ಮದಃ ಕಸ್ಯ ವಿಕಾರಕಾರಣಮ್
||
ಕಮಲಗಳಲ್ಲಿರುವ ಮಧು[ಮದ್ಯ]ವನ್ನು ಕಿರಣಗಳೆ೦ಬ ಕರಗಳೆ೦ಬ
ಕುಡಿದ ರವಿಯು ಅ೦ಬರ[ಅ೦ಬರ=ಬಟ್ಟೆ, ಆಕಾಶ]ವನ್ನು ತೊರೆದು ಪಶ್ಚಿಮ ದಿಗ೦ಗನೆಯನ್ನು ತಡವಲಾರ೦ಭಿಸಿದ.
ಮದವು ಯಾರಿಗೆ ತಾನೇ ವಿಕಾರವನ್ನು೦ಟುಮಾಡುವುದಿಲ್ಲ?
ಜೊರಾಷ್ಟ್ರಿಯನ್
ದೇಶವಾಗಿದ್ದ ಇರಾನಿಗೆ ಮುಸ್ಲೀಮರು ಕಾಲಿಟ್ಟ ಹದಿನೈದು ವರ್ಷಗಳಲ್ಲಿ ಅದು ಪೂರ್ಣ ಇಸ್ಲಾಮಿಕ್ ದೇಶವಾಯ್ತು.
ಪಕ್ಕದ ಬ್ಯಾಬಿಲೋನ್, ಮೆಸಪೋಟಮಿಯಾ ಹದಿನೇಳು ವರ್ಷಗಳಲ್ಲಿ ಇಸ್ಲಾಮಿಕ್ ಇರಾಕ್ ಆಗಿ ಬದಲಾಯ್ತು. ಭವ್ಯ
ಪರ೦ಪರೆಯ ಇಜಿಪ್ಟ್ ಇಸ್ಲಾಮ್ನ ಆಳ್ವಿಕೆಯ ಇಪ್ಪತ್ತೈದೇ ವರ್ಷಗಳಲ್ಲಿ ಪೂರ್ತಿ ಮುಸ್ಲೀಮ್ಮಯವಾಯ್ತು.
ಆದರೆ ಭಾರತ ಎ೦ಟುನೂರು ವರ್ಷಗಳ ಕಾಲ ಸತತವಾಗಿ ಮುಸ್ಲೀಮರಿ೦ದ, ಇನ್ನೂರು ವರ್ಷ ಬ್ರಿಟಿಷರಿ೦ದ ಆಳಲ್ಪಟ್ಟರೂ
ಇ೦ದಿಗೂ ನಮ್ಮಲ್ಲಿ 83% ಹಿ೦ದೂಗಳಿದ್ದಾರೆ. ಭಾರತದ ಅ೦ತಃಸತ್ತ್ವವನ್ನು ಸ್ವಲ್ಪವೂ ನಾಶಪಡಿಸಲು ಅವರಾರಿ೦ದಲೂ
ಆಗಲಿಲ್ಲ. ಸನಾತನ ಸ೦ಸ್ಕೃತಿಯ ಮೇಲಿನ ದಾಳಿ ಚರಮಸೀಮೆಯನ್ನು ಮುಟ್ಟಿದಾಗಲೆಲ್ಲ, ನಮ್ಮ ದೇಗುಲಗಳನ್ನು
ಒಡೆದಾಗಲೆಲ್ಲ, ನಮ್ಮ ನ೦ಬಿಕೆಗಳಿಗೆ ಘಾಸಿಯಾದಾಗಲೆಲ್ಲ ಒಬ್ಬ ಕ೦ಪಣರಾಯ, ಒಬ್ಬ ಕೃಷ್ಣದೇವರಾಯ, ಒಬ್ಬ
ಶಿವಾಜಿ, ರಾಣಾಪ್ರತಾಪ, ಗುರುಗೋವಿ೦ದಸಿ೦ಗರು ಗೋವರ್ಧನವನ್ನೆತ್ತಿ ಉದ್ಧರಿಸಿದ ಕೃಷ್ಣನ೦ತೆ ಹುಟ್ಟಿಬ೦ದಿದ್ದಾರೆ.
ನಾಮಾವಶೇಷವಾಗಿ ಹೋದರೂ ಥೇಟ್ ಮಧುರೈನ೦ತೆ ಭಾರತದ ಮೂಲೆಮೂಲೆಯ ಸಹಸ್ರ ಸಹಸ್ರ ಊರುಗಳು ಮತ್ತೆ ಪುಟಿದೆದ್ದು
ನಿ೦ತಿವೆ. ಹಿ೦ದೆ೦ದಿಗಿ೦ತಲೂ ಭವ್ಯವಾಗಿ...ದಿವ್ಯವಾಗಿ.... ಬಿರುಬೇಸಿಗೆಯಲ್ಲಿ ಒಣಗಿ ಕಾಣದಾಗುವ ಗರಿಕೆ
ಮೊದಲ ಮಳೆಗೆ ಮೊಳೆತು ಮೇಲೇಳುವ೦ತೆ, ತನ್ನ ಬೂದಿಯ ನಡುವಿ೦ದೆದ್ದು ಮತ್ತೆ ಆಕಾಶದತ್ತ ರೆಕ್ಕೆ ಚಾಚುವ
ಫಿನಿಕ್ಸಿನ೦ತೆ.
 |
ಕ೦ಬತ್ತಾಡಿ ಮ೦ಟಪ |
|