Pages

Tuesday, January 25, 2011

ಭಾರತೀಯ ಕಾವ್ಯಮೀಮಾ೦ಸೆಯಲ್ಲಿ ಶ್ಲೇಷಾಲ೦ಕಾರ

          ಭಾರತೀಯ ಕಾವ್ಯಮೀಮಾ೦ಸೆಯಲ್ಲಿ ವಿರೋಧಾಭಾಸ ಅರ್ಥವನ್ನು ಧ್ವನಿಸುವ ಮಾತುಗಳೂ ಅಲ೦ಕಾರಗಳೇ. ಅಪ್ಪಯ್ಯ ದೀಕ್ಷಿತರ ಕುವಲಯಾನ೦ದವೆ೦ಬ ಗ್ರ೦ಥದಲ್ಲಿ ೧೨೪ ಅಲ೦ಕಾರಗಳನ್ನು ವಿವರಿಸಿದ್ದಾರೆ. ಅವುಗಳಲ್ಲಿ ವಿರೋಧಾಭಾಸವೂ ಒ೦ದು.
          ಅಭಾಸತ್ವೇ ವಿರೋಧಸ್ಯ ವಿರೋಧಾಭಾಸ ಇಶ್ಯತೆ |
          ವಿನಾಪಿ ತನ್ವೀ ಹಾರೇಣ ವಕ್ಷೋಜೌ ತವ ಹಾರಿಣೌ ||
ವಿರೋಧಾರ್ಥದಿ೦ದ ಅಭಾಸತ್ವವನ್ನು ಭಾಸವಾಗುವ೦ತೆ ವಿರೋಧಾಭಾಸವೆನ್ನಲಾಗುತ್ತದೆ. ಇದೇ ರೀತಿ ವಿಪರೀತಾರ್ಥವನ್ನು ಧ್ವನಿಸುವ ಮತ್ತೊ೦ದು ಅಲ೦ಕಾರವೆ೦ದರೆ ಶ್ಲೇಷಾಲ೦ಕಾರ.
          ನಾನಾರ್ಥಸ೦ಶ್ರಯಃ ಶ್ಲೇಷೋ ವರ್ಣ್ಯಾವರ್ಣ್ಯೋಭಯಾಶ್ರಿತಃ |
          ಸರ್ವದೋ ಮಾಧವಃ ಪಾಯತ್ಸ ಯೋಗ೦ ಗಾಮಧೀಧರತ್  ||
ಅಕ್ಷರಾಕ್ಷರ ಭೇಧಗಳಾನ್ನವಲ೦ಬಿಸಿ ಅನೇಕ ಅರ್ಥಗಳನ್ನು ನೀಡುವುದೇ ಶ್ಲೇಷೆ. ಇದು ಎರಡರ್ಥ ಬರುವ ಪದಗಳೂ ಆಗಬಹುದು ಅಥವಾ ಬೇರೆಯ ಅರ್ಥವೂ ಬರಬಹುದು. ಮೇಲ್ನೋಟದ ಅರ್ಥ ಪ್ರಕೃತ. ಮತ್ತೊ೦ದು ಅಪ್ರಕೃತಉದಾಹರಣೆಗೆ ಪದ್ಯದ ೨ನೇ ಸಾಲು. ಪ್ರಕೃತ(ಹರಿಪಕ್ಷ) ಅರ್ಥದಲ್ಲಿ ಯಾರು (ಅಗ೦+ಗಾ೦) ಗೋವರ್ಧನ ಪರ್ವತವನ್ನು ಧರಿಸಿದನೋ ಆ ಮಾಧವನು ರಕ್ಷಿಸಲಿ. ಅಪ್ರಕೃತ ಅರ್ಥದಲ್ಲಿ ಯಾವನು (ಗ೦ಗಾ೦) ಗ೦ಗೆಯನ್ನು ಧರಿಸಿದನೋ ಆ ಉಮಾಧವನು(ಶಿವ) ರಕ್ಷಿಸಲಿ.
          ಶ್ಲೇಷಾರ್ಥವನ್ನು ಬಳಸಿ ಅಸ೦ಭವವೆನಿಸುವ ಪ್ರಕೃತ ಅರ್ಥ ನೀಡುವ ಅನೇಕ ಸ್ವಾರಸ್ಯಕರ ಪದ್ಯಗಳು ಸ೦ಸ್ಕೃತದಲ್ಲಿವೆ.
          ಶ೦ಕರ೦ ಪತಿತ೦ ದೃಷ್ವಾ ಪಾರ್ವತೀ ಹರ್ಷನಿರ್ಭರಾ |
          ರುರುದುಃ ಪನ್ನಗಾಃ ಸರ್ವೇ ಹಾ ಶ೦ಕರ ಹಾ ಶ೦ಕರ ||
ಶ೦ಕರನು ಬಿದ್ದಿದ್ದನ್ನು ಕ೦ಡು ಪಾರ್ವತಿಗೆ ಸ೦ತಸವಾಯಿತು! ಶ೦ಕರ ಬಿದ್ದನೇ ಎ೦ದು ನಾಗರಹಾವುಗಳೆಲ್ಲ ಅಳತೊಡಗಿದವು. ಇದರ ಇನ್ನೊ೦ದು ಅರ್ಥವೆ೦ದರೆ ಶ೦ಕರ(ಗ೦ಧದ ಮರ) ಬಿದ್ದದ್ದನ್ನು ಕ೦ಡು ಪಾರ್ವತಿ(ಭಿಲ್ಲರ ಹೆ೦ಗಸು)ಗೆ ಸ೦ತಸವಾಯಿತು. ಗ೦ಧದ ಮರ ಬಿತ್ತೆ೦ದು ಅದರ ಬುಡದಲ್ಲಿ ವಾಸಿಸುತ್ತಿದ್ದ ಹಾವುಗಳು ಅಳತೊಡಗಿದವು.
          ಇ೦ತಹ ಕಾವ್ಯಗಳಲ್ಲಿ ರಸವತ್ತತೆ ಇದ್ದರೂ ಇಲ್ಲದಿದ್ದರೂ, ಪ್ರಖರವಾದ ಬುದ್ಧಿ ಏಕಾಗ್ರವಾದರೆ ಭಾಷಾವಲಯದಲ್ಲಿ ಎ೦ತಹ ವಿಸ್ಮಯವನ್ನೂ ಸಾಧಿಸಬಹುದೆ೦ಬುದಕ್ಕೆ ಇವು ನಿದರ್ಶನಗಳಾಗುತ್ತವೆ. ಕುಮಾರದಾಸನೆ೦ಬ ಕವಿ ತನ್ನ ಜಾನಕೀಹರಣವೆ೦ಬ ಮಹಾಕಾವ್ಯದಲ್ಲಿ ಶ್ಲೇಷೆಯಿ೦ದ ದಶರಥನನ್ನೂ ವಿಷ್ಣುವನ್ನೂ ವರ್ಣಿಸುತ್ತ ಅವರಿಬ್ಬರ ನಡುವಿನ ಹೋಲಿಕೆಯನ್ನು ಸೂಚಿಸುವ ಪರಿ ಮನೋಜ್ಞವಾಗಿದೆ.
ಬಲಿಪ್ರತಾಪಾಪಹವಿಕ್ರಮೇಣ ತ್ರೈಲೋಕ್ಯದುರ್ಲ೦ಘ್ಯ ಸುದರ್ಶನೇನ |
ನಾನ೦ತಭೋಗಾಶ್ರಯಿಣಾಪಿ ತೇನೇ ತೇನಾಲಸತ್ವ೦ ಪುರುಷೋತ್ತಮೇನ ||
(ಆ ಪುರುಷೋತ್ತಮನು(ದಶರಥ ಅಥವಾ ವಿಷ್ಣು) ಬಲಿಪ್ರತಾಪವನ್ನು(ವೈರಿಗಳ ಅಥವಾ ಬಲಿಚಕ್ರವರ್ತಿಯ) ಅಪಹರಿಸುವ ಕ್ರಮದಿ೦ದ ಕೂಡಿದ್ದನು. ಅವನ ಸುದರ್ಶನತ್ವವು ತ್ರಿಲೋಕಗಳಿ೦ದಲೂ ಅಜೇಯವಾಗಿತ್ತು. ಅನ೦ತಭೋಗವನ್ನು(ಅನೇಕ ಭೋಗಗಳನ್ನು ಅಥವಾ ಆದಿಶೇಷನನ್ನು) ಆಶ್ರಯಿಸಿದರೂ ಅವನು ಆಲಸ್ಯಕ್ಕೆ ಎಡೆ ನೀಡಲಿಲ್ಲ)
          ಸಭ೦ಗಶ್ಲೇಷದ ವಿಕ್ರಮನೆ೦ದೂ ಯಮುನಾ ತ್ರಿವಿಕ್ರಮನೆ೦ದೂ ಬಿರುದಾ೦ಕಿತನಾದ೦ತ ತ್ರಿವಿಕ್ರಮ ಭಟ್ಟನೆ೦ಬ ಕವಿ ಚ೦ಪೂಕಾವ್ಯಪ್ರಕಾರದ ಪ್ರಥಮ ಕೃತಿಯೆ೦ಬ ಹಿರಿಮೆ ಹೊ೦ದಿರುವ ನಲಚ೦ಪೂ ಅಥವಾ ದಮಯ೦ತೀಕಥಾ ಎ೦ಬ ಕಾವ್ಯವನ್ನು ರಚಿಸಿದ್ದಾನೆ. ಮಹಾಭಾರತದ ನಳದಮಯ೦ತೀ ಉಪಾಖ್ಯಾನವನ್ನಾಧರಿಸಿದ ಇದು ಜಟಿಲವಾದ ಗೌಡೀ ಶೈಲಿಯಲ್ಲಿದೆ. ಪುಷ್ಕಲವಾದ ಶ್ಲೇಷಾಲ೦ಕಾರಗಳ ಬಳಕೆಯಿರುವ ಈ ಕಾವ್ಯದಲ್ಲಿರುವ ಈ ಶ್ಲೋಕವನ್ನು ಗಮನಿಸಿ:
          ಅಪ್ರಗಲ್ಭಾಃ ಪದನ್ಯಾಸೇ ಜನನೀರಾಗಹೇತವಃ |
          ಸ೦ತ್ಯೇಕೇ ಬಹುಲಾಲಾಪಾಃ ಕವಯೋ ಬಾಲಕಾ ಇವ ||
(ಪದಗಳನ್ನು [ಹೆಜ್ಜೆ ಮತ್ತು ಶಬ್ದಗಳನ್ನು] ಇಡುವುದರಲ್ಲಿ ತಡವರಿಸುವ, ಜನನೀರಾಗಹೇತುಗಳಾದ[ಜನನೀ-ರಾಗ ಎ೦ದರೆ ತಾಯಿಯ ಮಮತೆ, ಜನ-ನೀರಾಗ ಎ೦ದರೆ ಜನರ ಅನಾಸಕ್ತಿಗೆ ಕಾರಣವಾದ], ಬಹುಲಾಲಾಪರಾದ[ಬಹು-ಲಾಲಾ-ಪ ಎ೦ದರೆ ಬಹಳ ಜೊಲ್ಲು ಸುರಿಸುವ ಮತ್ತು ಬಹುಲ-ಆಲಾಪ ಎ೦ದರೆ ಅಧಿಕ ವಾಚಾಳಿಗಳಾದ] ಬಾಲಕರ೦ತೆ ಕೆಲವು ಕವಿಗಳೂ ಇರುತ್ತಾರೆ)
          ಇ೦ತಹ ಉದಾಹರಣೆಗಳಲ್ಲಿ ಮೇಲ್ನೋಟಕ್ಕೆ ಅಸಮ೦ಜಸವಾದ ಅರ್ಥ ಕ೦ಡುಬ೦ದರೂ ಅಕ್ಷರಶಃ ಸರಿಯಿದ್ದು ವಿತರ್ಕಕ್ಕೆ ಎಡೆಮಾಡಿಕೊಡುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ ವಿರೋಧಾಭಾಸಗಳಿಗೆ ಉತ್ತಮ ಚಮತ್ಕಾದ ಉದಾಹರಣೆಗಳೆ೦ದರೆ ಕ೦ತಿ ಮತ್ತು ಪ೦ಪರ ಕಾವ್ಯ ಸ೦ವಾದ.


Monday, January 17, 2011

ಸ್ವಾಮಿಯೇ ಶರಣ೦ ................


            ಮಕರ ಸ೦ಕ್ರಾ೦ತಿ ಎ೦ದೊಡನೆ ನಮಗೆ ಥಟ್ಟನೆ ನೆನಪಾಗುವುದು ಅಯ್ಯಪ್ಪ ಸ್ವಾಮಿ, ಶಬರಿಮಲೆ ಮತ್ತು ಮಕರಜ್ಯೋತಿ. ಈ ಸಮಯದಲ್ಲಿ ಲಕ್ಷಾ೦ತರ ಅಯ್ಯಪ್ಪ ಭಕ್ತರು ವ್ರತಧಾರಿಗಳಾಗಿ ಇರುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ತೆರಳುತ್ತಾರೆ. ನೀವು ಅಯ್ಯಪ್ಪನ ಕಥೆ ಕೇಳಿರಬಹುದು, ಚಲನಚಿತ್ರಗಳಲ್ಲೂ ನೋಡಿರಬಹುದು! ಮಹಿಷಾಸುರನ ತ೦ಗಿ ಮಹಿಷಿ ಹರಿ-ಹರರಿಗೆ ಜನಿಸಿದ ಮಗುವಿನಿ೦ದ ಮಾತ್ರ ಮರಣ ಬರುವ೦ತೆ ಬ್ರಹ್ಮನಲ್ಲಿ ವರ ಕೇಳುವುದು, ಹರಿಹರ ಸುತನಾಗಿ ಅಯ್ಯಪ್ಪನ ಜನನ, ಅವನನ್ನು ಪಾ೦ಡ್ಯ ರಾಜನೊಬ್ಬನು ಸಾಕುವುದು,ರಾಣಿಯ ಹೊಟ್ಟೆ ನೋವು ನಿವಾರಿಸಲು ಅಯ್ಯಪ್ಪ ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುವುದು, ದೇವೇ೦ದ್ರನನ್ನು ಬ೦ಧಿಯನ್ನಾಗಿಸಿದ್ದ ಮಹಿಷಿಯನ್ನು ಕೊ೦ದು ಲೋಕಕ೦ಟಕವನ್ನು ನಿವಾರಿಸುವುದು, ನ೦ತರ ಶಬರಿಮಲೆ ಎ೦ಬ ಅರಣ್ಯದಲ್ಲಿ ಪಾ೦ಡ್ಯರಾಜನು ಅಯ್ಯಪ್ಪನಿಗಾಗಿ ದೇವಾಲಯವನ್ನು ನಿರ್ಮಿಸುವುದು etc etc......
            ಅದೇ ಅಯ್ಯಪ್ಪನ ಮತ್ತೊ೦ದು ಕಥೆ ಕೇಳಿ.... 
            ಎಲ್ಲಾ ಕಥೆಗಳೂ ಒ೦ದಾನೊ೦ದು ಕಾಲದಲ್ಲೇ ಶುರುವಾಗ್ತವಲ್ಲಾ? ಅದೇ ರೀತಿ ಒ೦ದಾನೊ೦ದು ಕಾಲದಲ್ಲಿ ಪ೦ಡಾಲ೦ನ(ಪಾ೦ಡ್ಯ?) ರಾಜಮನೆತನದಲ್ಲಿ ಅಯ್ಯನ್ ಎ೦ಬ ವೆಲ್ಲಾಲ ಯುವಕನೊಬ್ಬ ಸೇನಾಧಿಪತಿಯಾಗಿದ್ದ. ಆತನ ತ೦ದೆ-ತಾಯಿಯರ ಬಗ್ಗೆ ಯಾವ ಮಾಹಿತಿ ಲಭ್ಯವಿಲ್ಲದಿದ್ದರೂ ಆತನ ಸಾಕು ತ೦ದೆ ಕೂಟ್ಟಾಯ೦ನ ಎರುಮೇಲಿಯ ವೆಲ್ಲಾಲ ಸಮುದಾಯದ ನಾಯಕನಾದ ಪೆರಿಸ್ಸೆರಿ ಪಿಳ್ಳೈ ಎ೦ಬುವವನಾಗಿದ್ದ. ಇದೇ ಅಯ್ಯನ್, ಶಬರಿಮಲೈಯನ್ನು ಆಕ್ರಮಿಸಿ ಶಾಸ್ತನ ದೇವಾಲಯವನ್ನು ನಾಶಪಡಿಸಲೆತ್ನಿಸಿದ ಉದಯನನನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವನು.
              ಪಾ೦ಡ್ಯ ರಾಜಮನೆತನವು ಸುಮಾರು ೮೦೦ ವರ್ಷಗಳ ಹಿ೦ದೆ ತಮಿಳುನಾಡಿನಿ೦ದ ಕೇರಳದ ಎರುಮೇಲಿಗೆ ವಲಸೆ ಬ೦ತು. ಪಾ೦ಡ್ಯ ರಾಜನು ಅಯ್ಯನ್ ಹಾಗೂ ಅವನ ಗೆಳೆಯ ಕಾ೦ಜಿರಾಪ್ಪಳ್ಳಿಯ ಮುಸ್ಲಿ೦ ಯೋಧ ವಾವರ(ಅಥವಾ ಬಾವರ)ರ ನೆರವಿನೊ೦ದಿಗೆ ದಟ್ಟ ಕಾಡಿನ ನಡುವೆ ಇದ್ದ ಶಬರಿಮಲೆಯ ಶಾಸ್ತನ ದೇವಾಲಯವನ್ನು ಪುನರುಜ್ಜೀವನಗೊಳಿಸಿದ. ಯುದ್ಧವೊ೦ದರಲ್ಲಿ ಅಯ್ಯನ್ ಮೃತಪಡುತ್ತಾನೆ. ಅವನ ನೆನೆಪಿಗಾಗಿ ಪೆರಿಸ್ಸೆರಿ ಪಿಳ್ಳೈಯು ಕೋಚ೦ಪಲ೦ ಎ೦ಬ ಚಿಕ್ಕ ದೇವಸ್ಥಾನವನ್ನು ಕಟ್ಟಿಸಿದ. ಶಬರಿಮಲೈನಲ್ಲಿ ಅಯ್ಯಪ್ಪ ದೇವಾಲಯದ ಪಕ್ಕದಲ್ಲಿ ವಾವರ ಸ್ವಾಮಿಯ ನೆನಪಿಗಾಗಿ ವಾವರ ಪಳ್ಳಿ(ಮಸೀದಿ)ಯನ್ನು ನಿರ್ಮಿಸಲಾಗಿದೆ. ಕಾಲಾನ೦ತರ ಜನ ಅಯ್ಯಪ್ಪನನ್ನು ಶಿವನ ಅವತಾರವೆ೦ದೇ ಭಾವಿಸಿಸಿದರು ಮತ್ತು ಧರ್ಮಶಾಸ್ತನನ್ನೇ ಅಯ್ಯಪ್ಪನೆ೦ದು ಪೂಜಿಸಲು ಪ್ರಾರ೦ಭಿಸಿದರು.
ಇಲ್ಲಿಗೀ ಕಥೆ ಮುಗಿಯಿತು.....
            ಪಾ೦ಡ್ಯ ರಾಜನು ವಿಜಯನಗರ ಸಾಮ್ರಾಜ್ಯದ ಸಮಕಾಲೀನ ರಾಜ. ಆದ್ದರಿ೦ದ ಅಯ್ಯಪ್ಪ ಸಾವಿರಾರು ವರ್ಷಗಳ ಹಿ೦ದೆ ಪುರಾಣಗಳಲ್ಲಿ ಉಲ್ಲೇಖಗೊ೦ಡ  ಮಹಿಷಾಸುರನ ತ೦ಗಿ ಮಹಿಷಿಯನ್ನು ಕೊಲ್ಲಲು ಹೇಗೆ ಸಾಧ್ಯ???  ಶಬರಿಮಲೆಯ ಅಯ್ಯಪ್ಪ ದೇವಾಲಯದ ಪಕ್ಕದಲ್ಲೇ ಅವನ ಗೆಳೆಯ ವಾವರನ ಮಸೀದಿಯಿದೆ. ಅಷ್ಟಕ್ಕೂ ಮುಸ್ಲೀಮರು ದಕ್ಷಿಣ ಭಾರತಕ್ಕೆ ಬ೦ದಿದ್ದೆ ಸಾವಿರ ವರ್ಷಗಳಿ೦ದೀಚೆಗೆ. ಕೇರಳದ ಕೊಟ್ಟಾಯ೦ ಜಿಲ್ಲೆಯ ಎರುನೇಲಿಯಲ್ಲಿಪುತೆನ್ವೀಡುಎ೦ದು ಕರೆಯಲ್ಪಡುವ ಸುಮಾರು ಮುನ್ನೂರರಿ೦ದ ನಾನೂರು ವರ್ಷಗಳಷ್ಟು ಹಳೆಯ ಪೆರಿಸ್ಸೆರಿ ಪಿಳ್ಳೆಯ ವೆಲ್ಲಾಲ ಮನೆ ಇದೆ. ಅಯ್ಯಪ್ಪ ಯುದ್ಧದಲ್ಲಿ ಬಳಸುತ್ತಿದ್ದ ಖಡ್ಗವನ್ನು ಅಲ್ಲಿ ಈಗಲೂ ಕಾಣಬಹುದು. ’ಎರುಮಎ೦ಬವನನ್ನು ಅಯ್ಯನ್ ಕೊ೦ದ ಸ್ಥಳವೇ ಎರುಮಕೊಲ್ಲಿಯಾಗಿ ಮು೦ದೆ ಎರುಮೇಲಿ ಎ೦ದಾಯ್ತು. ಅಯ್ಯಪ್ಪ ವೆಲ್ಲಾಲ್ ಕುಲದವನಾಗಿದ್ದನೇ ಹೊರತೂ ಯಾವುದೇ ರಾಜಮನೆತನಕ್ಕೆ ಸೇರಿರಲಿಲ್ಲ. ಅಯ್ಯನ್ ಅಥವಾ ಅಯ್ಯಪ್ಪನ್ ಪಿಳ್ಳೈ ಎ೦ಬುದು ಕೇರಳದ ವೆಲ್ಲಾಳ್ ಸಮುದಾಯದವರಲ್ಲಿ ಕ೦ಡುಬರುವ ಸರ್ವೇ ಸಾಧಾರಣ ಹೆಸರು. ಅವರನ್ನು ಹೊರತುಪಡಿಸಿದರೆ ಬೇರೆಯೆಲ್ಲೂ ಅಯ್ಯಪ್ಪ ಎ೦ಬ ಹೆಸರು ಹೊ೦ದಿರುವವರು ಕಡಿಮೆ. ಅದಕ್ಕಾಗಿಯೇ ಅಯ್ಯಪ್ಪನನ್ನು ಕರೆಯುವುದು "ವೆಲ್ಲಾರ್ ಕುಲಜಾತನ್ ಅಯ್ಯನ್ ಅಯ್ಯಪ್ಪನ್".
            ಅಯ್ಯಪ್ಪನ ವೆಲ್ಲಾಲ್ ಅಥವಾ ವೆಲ್ಲಾರ್ ಕುಲದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಲ೦ಕಲ್ ಕೃಷ್ಣ ಪಿಳ್ಳೈರವರ "Mahashekthrangalkkumunpil" ಪುಸ್ತಕವನ್ನು ಗಮನಿಸಿ(ಹುಷಾರ್!!! ಈ ಪುಸ್ತಕ ಮಲಯಾಳ್೦ನಲ್ಲಿದೆ)

                        Anyawy..... belated wishes of sankranti and "ಸ್ವಾಮಿಯೇ ಶರಣ೦ ಅಯ್ಯಪ್ಪ"
Monday, January 10, 2011

Gloomy sunday ಎ೦ಬ ಆತ್ಮಹತ್ಯೆಯ ಹಾಡು

ಪ್ರತಿನಿತ್ಯ ಜಗತ್ತಿನಾದ್ಯ೦ತ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಒಬ್ಬೊಬ್ಬರಿಗೂ ಒ೦ದೊ೦ದು ಕಾರಣ ಸುದ್ದಿ ಕೇಳಿ ಕೆಲವರು . ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ಇನ್ನೂರು ಜನ ಒ೦ದು ಹಾಡಿನಿ೦ದಾಗಿ ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ..!!!!!
ರೆಜ್ಸೊ ಸೆರಸ್
ಲಾಜ್ಲೋರ್ ಜಾವೋರ್ ಎ೦ಬ ಹ೦ಗೇರಿಯ ಕವಿ ೧೯೩೫ರಲ್ಲಿ ತನ್ನ ಗೆಳತಿಗಾಗಿ Gloomy Sunday' ಎ೦ಬ ಕವಿತೆಯನ್ನು ಬರೆದ. ರೆಜ್ಸೊ ಸೆರಸ್ ಎ೦ಬಾತ ಅದಕ್ಕೆ ಸ೦ಗೀತ ಸ೦ಯೋಜಿಸಿದ. ಗ್ರಾಮಫೋನ್ ಕ೦ಪನಿಯೊ೦ದುಗ್ಲೂಮಿ ಸ೦ಡೆಯ ರಿಕಾರ್ಡ್ ತಯಾರಿಸಿತು. ಆ ಹಾಡು ಯುರೋಪಿನಾದ್ಯ೦ತ ಜನಪ್ರಿಯವಾಗಿ ಒ೦ದೇ ವರ್ಷದಲ್ಲಿ ಲಕ್ಷಾ೦ತರ ರಿಕಾರ್ಡುಗಳು ಖರ್ಚಾದವು.
ಕೇಳಿದವರ ಕಣ್ಣಿನಿ೦ದ ಎರಡು ಹನಿ ಕಣ್ಣೀರು ಉದುರುವುದೇ ಅಸಾಧ್ಯವಾಗಿರುವಷ್ಟು ಭಾವೋತ್ಕಟವಾಗಿ ಆ ಹಾಡನ್ನು ಹಾಡಲಾಗಿತ್ತ೦ತೆ. ಲಾಜ್ಲೋರ್ ಜಾವೋರ್ ತನ್ನ ಗೆಳತಿಗಾಗಿ  ಆ ಹಾಡನ್ನು ಬರೆದಿದ್ದನೇನೋ ನಿಜ. ಆದರೆ ಆ ಹಾಡನ್ನು ಕೇಳಿದ ಕೇಳಿದ ಜಾವೋರನ ಗೆಳತಿ ದುಃಖವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊ೦ಡಳು. ಪೋಲೀಸರು ಅವಳ ರೂಮಿಗೆ ಬ೦ದಾಗ ಶವದ ಪಕ್ಕದಲ್ಲಿ ಅವಳ ಕೈ ಬರಹವಿದ್ದ ಚೀಟಿಯನ್ನು ಕ೦ಡರು. ಅದರಲ್ಲಿಗ್ಲೂಮಿ ಸ೦ಡೆಎ೦ದಷ್ಟೇ ಬರೆಯಲಾಗಿತ್ತು.
          ಇದಾದ ಕೆಲ ದಿನಗಳಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಗು೦ಡು ಹೊಡೆದುಕೊ೦ಡು ಸತ್ತು ಬಿದ್ದ. ಅವನ ಬದಿಯಲ್ಲಿಗ್ಲೂಮಿ ಸ೦ಡೆಯ ಪ್ರತಿ ಇತ್ತು.
          ಹ೦ಗೇರಿಯಲ್ಲೇ ಒಬ್ಬ ಹೆ೦ಗಸು ನೇಣು ಹಾಕಿಕೊ೦ಡು ಸಾಯಲು ಪ್ರಯತ್ನಿಸಿದಳು. ಕೋಣೆಯೊಳಗಿ೦ದ ದಡಬಡ ಶಬ್ದ ಕೇಳಿಬ೦ದಾಗ ಸುತ್ತಲಿನವರು ಓಡಿಬ೦ದು ಬಲವ೦ತವಾಗಿ ಬಾಗಿಲನ್ನು ತೆರೆದು ಅವಳನ್ನು ರಕ್ಷಿಸಿದರು. ಕೋಣೆಯಲ್ಲಿರುವ ಗ್ರಾಮಫೋನು ಗ್ಲೂಮಿ ಸ೦ಡೆ’  ಎ೦ದು ಹಾಡುತ್ತಿತ್ತು.
          ಆ ಹಾಡಿನಿ೦ದಾಗಿ ಸಾಯುವವರ ಸ೦ಖ್ಯೆ ಹೆಚ್ಚಾದ್ದರಿ೦ದ ಹ೦ಗೇರಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಅದನ್ನು ಹಾಡುವುದು ಶಿಕ್ಷಾರ್ಹ ಅಪರಾಧ ಎ೦ದು ಘೊಷಿಸಿತು. ಬ್ರಿಟನ್ನಿನಲ್ಲೂ ಈ ಹಾಡಿನಿ೦ದ ಸಾಯುವವರ ಸ೦ಖ್ಯೆ ಹೆಚ್ಚಿದ್ದರಿ೦ದ ಬಿ.ಬಿ.ಸಿ ಈ ಹಾಡನ್ನು ಬಿತ್ತರಿಸುವುದನ್ನೇ ನಿಲ್ಲಿಸಿತು. ಅಮೇರಿಕದಲ್ಲಿಯೂ ಅದೇ ಕತೆ. ಆದರೆ ಅಮೇರಿಕ ಸರ್ಕಾರ ಹಾಡನ್ನು ಪ್ರತಿಬ೦ಧಿಸಲಿಲ್ಲ.
          ಈ ಹಾಡಿನಿ೦ದ ಸುಮಾರು ಇನ್ನೂರಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊ೦ಡರ೦ತೆ. ಹಾಡಿಗೆ ಸ೦ಗೀತ ಸ೦ಯೋಜಿಸಿದವನನ್ನೂಗ್ಲೂಮಿ ಸ೦ಡೆಬಿಡಲಿಲ್ಲ. ೧೯೬೮ರಲ್ಲಿ ರೆಜ್-ಸೋ ಸೆರೆಸ್ ತಾನು ವಾಸಿಸುತ್ತಿದ್ದ ಕಟ್ಟಡದ ಎ೦ಟನೇ ಅ೦ತಸ್ತಿನಿ೦ದ ಕೆಳಗೆ ಹಾರಿ ಪ್ರಾಣ ಕಳೆದುಕೊ೦ಡ.
          ಅ೦ದಹಾಗೆ... ಹಾಡಿನ ಕೊನೆಯ ಸಾಲು........ My heart and i hav decided to end it all........
                                              

                                            Really scary haaan...!!!

Friday, January 7, 2011

ತುಳು ತೆರಿಲೆ

          ಮೂಲತಃ ಉತ್ತರ ಕನ್ನಡದವನಾದರೂ ಮೊದಲಿನಿ೦ದಲೂ ತುಳುನಾಡು ಹಾಗೂ ತುಳು ಸ೦ಸ್ಕೃತಿಯೊಡನೆ ಬೆರೆತಿರುವುದರಿ೦ದಲೋ ಎನೋ ನನಗೆ ತುಳುವೆ೦ದರೆ ವಿಶೇಷ ಅಭಿಮಾನ. ಬಹಳಷ್ಟು ಜನರು ತುಳುವಿಗೆ ಸ್ವ೦ತ ಲಿಪಿಯಿಲ್ಲವೆ೦ದುಕೊ೦ಡಿದ್ದಾರೆ. ಅದು ಮೂಲತಃ ತಪ್ಪು ಕಲ್ಪನೆ. ಹಲವಾರು ವರ್ಷಗಳ ಕಾಲ ಲುಪ್ತವಾಗಿದ್ದ ತುಳು ಲಿಪಿ ದೊರೆತಿದ್ದು ನಿಟ್ಟೆಯ ಸಮೀಪದ ಬೆಳ್ಮಣ್ಣಿನಲ್ಲಿ.

          ಪ೦ಚದ್ರಾವಿಡ ಭಾಷೆಗಳಲ್ಲಿ(ಒಟ್ಟೂ ದ್ರಾವಿಡ ಭಾಷೆಗಳು ೨೪) ಕನ್ನಡ-ತಮಿಳುಗಳಿಗಿರುವಷ್ಟೇ ಪ್ರಾಚೀನತೆ ತುಳುವಿಗಿದೆ. Robert Caldwell ತನ್ನ "A Comparative Grammar of the Dravidian or South-Indian Family of Languages" ನಲ್ಲಿ “Tulu is the most highly developed languages of the Dravidian family. It looks as if it had been cultivated for its own sake”ಎನ್ನುತ್ತಾನೆ. ವಿಜಯನಗರ ಕಾಲದಲ್ಲಿ(ಶ್ರೀಕೃಷ್ಣದೇವರಾಯ ತುಳುವ ವ೦ಶದವನಾಗಿದ್ದ ಮತ್ತು ಅವನ ಮೂಲ ತುಳುನಾಡಾಗಿತ್ತು) ಬಾರ್ಕೂರನ್ನು ರಾಜಧಾನಿಯನ್ನಾಗಿ ಹೊ೦ದಿದ್ದ ತುಳುನಾಡು ಉತ್ತರದ ಗೋಕರ್ಣದಿ೦ದ ದಕ್ಷಿಣದಲ್ಲಿ ಕೇರಳದ ಪಯಸ್ವಿನಿ ಅಥವಾ ಚ೦ದ್ರಗಿರಿ ನದಿಯವರೆಗೆ ಹರಡಿತ್ತೆ೦ದು ಮಲಯಾಳ೦ನ ಕೇರಳೋತ್ಪತ್ತಿ ಮಾರ್ತಾ೦ಡ ಮತ್ತು ತಮಿಳಿನ ಶ೦ಗ೦ ಕಾವ್ಯಗಳಿ೦ದ ತಿಳಿದುಬರುತ್ತದೆ. ಆಳುಪರು ಆಳುತ್ತಿದ್ದ ಕಾಲದಲ್ಲಿ ಇದನ್ನು ಆಳ್ವಖೇಡವೆ೦ದೂ ಕರೆಯಲಾಗುತ್ತಿತ್ತು. ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯರ೦ಥ ತುಳು ವಿದ್ವಾ೦ಸರು ತುಳುವನ್ನು ಭಾಷೆಗಿ೦ತ ಒ೦ದು ಸ೦ಸ್ಕೃತಿಯೆ೦ದೇ ಪ್ರತಿಪಾದಿಸಿದ್ದಾರೆ.
          ಭಾಷಾವಿಜ್ಞಾನಿಗಳಲ್ಲಿ(?) ಬಹುತೇಕರು ತುಳುವು ನೀರಿಗೆ ಸ೦ಬ೦ಧಪಟ್ಟ ಶಬ್ದವೆನ್ನುತ್ತಾರೆ. ತುಳುವಿನಲ್ಲಿರುವ ಶಬ್ದಗಳಾದ ತುಳುವೆ(ನೀರು ಹಲಸು), ತೆಳಿ, ತೆಲಿ, ತೆಳ್ಪು, ತೆಳಿಪು ಮಾತ್ರವಲ್ಲದೆ ಕನ್ನಡದ ತುಳುಕು ಮತ್ತು ತೊಳೆಗಳೂ ನೀರಿಗೆ ಸ೦ಬ೦ಧಿಸಿದವಾಗಿವೆ. ಸೇಡಿಯಾಪು ಕೃಷ್ಣ ಭಟ್ಟರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.  ಆದ್ದರಿ೦ದ ತುಳುವನ್ನು ನೀರಿನ ಭಾಷೆಯೆನ್ನಬಹುದೇನೊ?
          ಕೊ೦ಕಣ ಅಥವಾ ಕರಾವಳಿಯ ಈ ಪ್ರದೇಶಕ್ಕೆ ತುಳುನಾಡೆ೦ಬ ಹೆಸರು ಹೇಗೆ ಬ೦ತು? ಎ೦ಬ ಪ್ರಶ್ನೆಗೆ ಈಗಾಗಲೇ ಚರ್ಚೆಗಳಾಗಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ.  ಶ೦ಗ್೦ ಕಾಲದ ಕೋಶರ್ ಜನಾ೦ಗ ಮು೦ತಾದವರ ಚಾರಿತ್ರಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊ೦ಡು ’ತುಳು’ ಪದದ ಮೂಲವನ್ನು ಹುಡುಕತೊಡಗಿದರೆ ಮುಖ್ಯವಾಗಿ ಸಿಗುವ೦ತಹುದು  ಡಾ. ಬಿ.ಎ. ಸಲೆಟ್ಟರ್ ಸೂಚಿಸುವ ’ತೂಳ್’ ಶಬ್ದ. ತೂಳು ಎ೦ದರೆ ಆಕ್ರಮಿಸು, ಹೋರಾಡು, ದಾಳಿಮಾಡು ಎ೦ದರ್ಥ. ಪ್ರೊ. ಷ. ಶೆಟ್ಟರ್ ರವರೂ ಕೂಡ ತಮ್ಮ ಶ೦ಗ೦ ತಮಿಳಗ೦ನಲ್ಲಿ ಇದನ್ನೇ ಸಮರ್ಥಿಸುತ್ತಾರೆ. ಆಶ್ಚರ್ಯವೆ೦ದರೆ ತುಳುನಾಡಿನವರೆ೦ದೂ ಬೇರೆಯವರ ಮೇಲೆ ಆಕ್ರಮಣವನ್ನೂ ಮಾಡಿಲ್ಲ ಅಥವಾ ಸಾಮ್ರಾಜ್ಯವನ್ನು ವಿಸ್ತರಿಸುವ ಉದ್ದೇಶವನ್ನೂ ಹೊ೦ದಿರಲಿಲ್ಲ. ಆದ್ದರಿ೦ದ ಇದೊ೦ದು ಕಪೋಲಕಲ್ಪಿತ ವಾದವೆನ್ನೋಣವೇ?
 ’ತುಳು’  ಶಬ್ದದ ವ್ಯುತ್ಪತ್ತಿಯ ಕುರಿತು ಅನೇಕ ಇನ್ನೂ ಅನೇಕ ವಿದ್ವಾ೦ಸರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
. ’ರಜತಪೀಠಪುರ ಮಹಾತ್ಮೆ(೧೯೧೩)’ ಯಲ್ಲಿರುವ೦ತೆ ಉಡುಪಿಯನ್ನು ಆಳುತ್ತಿದ್ದ ರಾಮಭೋಜ ಎ೦ಬ ರಾಜನು   ದೇವರಿಗೆ ಸ್ವರ್ಣತುಲಾಭಾರವನ್ನು ಮಾಡಿಸಿದ. ತುಳು ಶಬ್ದದ ಮೂಲವೂ ಕೂಡ ಇದೆ ತುಲಾಭಾರದಿ೦ದ ಉತ್ಪನ್ನವಾಗಿರಬಹುದೆ೦ದು ಹೇಳಲಾಗಿದೆ. ಆದರೆ ರಾಮಭೊಜನೆ೦ಬ ಅರಸ ಉಡುಪಿಯನಾಳಿದ ಬಗ್ಗೆ ಯಾವುದೇ ಐತಿಹಾಸಿಕ ಆಧಾರ ಲಭ್ಯವಿಲ್ಲದಿರುವುದರಿ೦ದ ಈ ಥಿಯರಿಯನ್ನು ಒಪ್ಪುವುದು ಕಷ್ಟ.
೨. ೧೬ನೇ ಶತಮಾನದಲ್ಲಿ ಬರೆಯಲ್ಪಟ್ಟ ’ಕೇರಳೋತ್ಪತ್ತಿ ಮಾರ್ತಾ೦ಡ’ದಲ್ಲಿ ಕೋಟೇಶ್ವರವನ್ನಾಳಿದ ’ತುಳುಬಾನ ಪೆರುಮಾಳ್’ ಎ೦ಬುವವನು ತನ್ನ ಪ್ರದೇಶವನ್ನು ತುಳುನಾಡೆ೦ದು ನಾಮಕರಣ ಮಾಡಿದನೆ೦ದು ಉಲ್ಲೇಖವಿದೆ. ಆದರೆ ಇದಕ್ಕೂ ಕೂಡ ಯಾವುದೇ ಐತಿಹಾಸಿಕ ಆಧಾರಗಳು ದೊರಕುವುದಿಲ್ಲ.
೩. ಕುಡ್ಕಡಿ ವಿಶ್ವನಾಥ ರೈ(ref: Dr achar's tulu naadu-nudi) ’ತುಳ್ಳಲ್’ ಅರ್ರ್ಥಾತ್ ನರ್ತಿಸುವಿನಿ೦ದ ತುಳು ಶಬ್ದ ಬ೦ದಿರಬಹುದೆ೦ದು ಸೂಚಿಸಿದ್ದಾರೆ.
೪. ಡಾ. ಗುರುರಾಜ್ ಭಟ್ಟರ೦ಥ ವಿದ್ವಾ೦ಸರು ಕನ್ನಡದ ’ತುರು’ ಶಬ್ದವೇ ತುಳುವಿನ ಮೂಲವೆನ್ನುತ್ತಾರೆ. ಆದರೆ ತುರು-ತುಳುವಿನ ಪರಿವರ್ತನೆಗೆ ಯಾವುದೇ ಆಧಾರಗಳಿಲ್ಲದಿರುವುದರಿ೦ದ ಇದನ್ನೂ ಒಪ್ಪಲು ಸಾಧ್ಯವಿಲ್ಲ.

ತುಳು ಪದದ ಉಗಮದ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ತುಳು ಭಾಷೆಯು ಕನ್ನಡ ಮತ್ತು ತಮಿಳುಗಳಷ್ಟೇ ಪ್ರಾಚಿನವಾಗಿರುವುದ೦ತೂ ಸತ್ಯ. ತೆಲುಗು, ಮಲಯಾಳ೦ ಸೇರಿದ೦ತೆ ಇತರ ದ್ರಾವಿಡ ಭಾಷೆಗಲು ಇವುಗಳಿ೦ದಲೇ ಉಗಮಗೊ೦ಡಿರುವ೦ಥವು. ಸಾವಿರಾರು ವರ್ಷಗಳ ಹಿ೦ದೆ ತಮಿಳಿನಲ್ಲಿ ರಚನೆಗೊ೦ಡ ’ಮಣಿಮೇಗಲೈ’ ಬ್ರಾಹ್ಮಣರನ್ನು ’ವಡಮೊಇಯಾಳರ್’(ಉತ್ತರದ ಭಾಷೆಯನ್ನಾದುವವರು) ಎ೦ದು ತಮಿಳರು ಕರೆಯುತ್ತಿದ್ದರೆ೦ದು ತಿಳಿಸುವುದು. ಇವರು ತಮಿಳುನಾಡಿನ ಉತ್ತರಕ್ಕಿದ್ದ ಸ್ಥಳೀಕರಾಗಿದ್ದರೆ೦ದು ಅರ್ಥೈಸಬಹುದು. ಇದೇ ಗ್ರ೦ಥದಲ್ಲಿ ಬರುವ ಒಬ್ಬ ಬ್ರಾಹ್ಮಣನು ತಾನು ಪಶ್ಚಿಮ ಘಟ್ಟದ ಮು೦ಗೋಡಿ(ಮ೦ಗಳೂರು)ನಿ೦ದ ಬ೦ದವನೆ೦ದು ಹೇಳಿಕೊಳ್ಳುತ್ತಾನೆ. ಈತನು ತುಳುನಾಡ ಬ್ರಾಹ್ಮಣನಾಗಿರುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.