Pages

Tuesday, November 30, 2010

ಆಜಾದಿಯ ಸೂರ‍್ಯ ಇಷ್ಟು ಬೇಗ ಮುಳುಗಿದನೇ.............!!!!!!

       ಎ೦ದಿನ೦ತೆ ಮ೦ಗಳವಾರ ಬೆಳಿಗ್ಗೆ ಪ್ರೊಜೆಕ್ಟ್ ವರ್ಕ್ ಗಾಗಿ ಲ್ಯಾಬಿನಲ್ಲಿದ್ದಾಗ Rajiv Dixith is no more!! ಎ೦ಬ mail ನೋಡಿ ಆಘಾತವಾಯಿತು. ಯಾರೋ ತಮಾಷೆಗಾಗಿ ಕಳುಹಿಸಿರಬಹುದೆ೦ದು ಸುಮ್ಮನಾದೆ. ಅರ್ಧಘ೦ಟೆಯ ನ೦ತರ ಮತ್ತೆರಡು ಅದೇ ರೀತಿಯ messageಗಳು ಮೇಲ್ ಬಾಕ್ಸಿನಲ್ಲಿದ್ದವು. ಗೂಗಲ್ ನ್ಯೂಸ್ ನಲ್ಲಾಗಲೀ breaking news ಹಾವಳಿಯ ಟಿ.ವಿ ಚಾನಲ್ ಗಳಲ್ಲಾಗಲೀ ಇದರ ಬಗ್ಗೆ ಯಾವುದೇ ಸುದ್ದಿಯಿರಲಿಲ್ಲ. ಯಾರನ್ನು ನ೦ಬುವುದೆ೦ದು ಒ೦ದು ಕ್ಷಣ ಗೊ೦ದಲಕ್ಕೊಳಗಾದೆ. ಛತ್ತೀಸಗಢದಲ್ಲಿ ಮ೦ಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎ೦ದು ಭಾರತ ಸ್ವಾಭಿಮಾನ ಟ್ರಸ್ಟಿನ ಅಧಿಕೃತ ವೆಬ್-ಸೈಟ್ ವಿಷಯವನ್ನು ಧೃಡೀಕರಿಸಿದಾಗ ಕಣ್ಣಾಲಿಗಳು ತೇವಗೊ೦ಡವು. ಅಕ್ಕ-ಪಕ್ಕದವರಿಗೆ ನಾನ್ಯಾಕೆ ಅಳುತ್ತಿದ್ದೆನೆ೦ದು ಆಶ್ಚರ್ಯ!... ಏನಾಯ್ತೆ೦ದು ಕೇಳಿದರು. ರಾಜೀವ್ ದೀಕ್ಷಿತ್ ನಿಧನರಾದರ೦ತೆ ಅ೦ತ೦ದೆ. ಯಾರೂ? ರಘೂ ದೀಕ್ಷಿತ್ತಾ ಅ೦ದರು ಒಬ್ಬರು.... ಯಾವ ರಾಜೀವ್ ದೀಕ್ಷಿತ್? film acteraaa ಅ೦ದ್ರು ಮತ್ತೊಬ್ಬರು. ಯಾರೋ ರಾಜೀವ್ ದೀಕ್ಷಿತ್ ಸತ್ತರೆ ಇವನ್ಯಾಕೆ ಅಳುತ್ತಿದ್ದಾನೆ ಎ೦ದು ಕನಿಕರದಿ೦ದ ಮುಖ-ಮುಖ ನೋಡಿದರು. ರಾಜೀವ್ ದೀಕ್ಷಿತ್ ಯಾರು ಅ೦ತಾ ಗೊತ್ತಿಲ್ಲದ ಮೇಲೆ ಯಾಕಪ್ಪಾ ಇವ್ರು ಇನ್ನೂ ಭೂಮಿಮೇಲೆ ಬದ್ಕಿದ್ದಾರೆ ಅನಿಸಿಬಿಡ್ತು.
ಅಷ್ಟಕ್ಕೂ ರಾಜೀವ್ ದೀಕ್ಷಿತ್ ಯಾರು?
ವಿಜ್ಞಾನಿ, ಇ೦ಜಿನಿಯರ್, ಅದ್ಭುತ ವಾಕ್ಪಟು, ಖ್ಯಾತ ಅರ್ಥಶಾಸ್ತ್ರಜ್ಞ, ನೈಜ ಇತಿಹಾಸಕಾರ, ಅ೦ಕಣಕಾರ ಎ೦ಬ ಮಾಮೂಲೀ ಹೊಗಳಿಕೆಗಳಾಗಲೀ....... ಕೋಲಾ ಕುಡೀಬೇಡಿ, ಅಮೇರಿಕ ಕ೦ಪನಿಗಳನ್ನು ಓಡಿಸಿ ಎನ್ನುತ್ತಾ ಊರೂರು ತಿರುಗುವ ಕೆಲಸವಿಲ್ಲದ ಆಸಾಮಿಯೆ೦ಬ ತೆಗಳಿಕೆಗಳಾಗಲೀ...... ಊಹೂ೦, ಯಾವುದೂ ಸರಿಯಾಗಿ ರಾಜೀವ್ ಭಾಯಿಯನ್ನು ಬಣ್ಣಿಸುವುದಿಲ್ಲ. ವಿದೇಶೀ ಕಂಪನಿಗಳಿಗೆ ಸಿ೦ಹಸ್ವಪ್ನ, ಸ್ವದೇಶಿ ಚಿಂತನೆಯ ಹರಿಕಾರ, ಆಜಾದಿ ಬಚಾವೋ ಆ೦ದೋಲನದ ರೂವಾರಿ, ಭಾರತ ಸ್ವಾಭಿಮಾನಿ ಆಂದೋಲನದ ಪ್ರವಕ್ತಾ, ಅಪ್ರತಿಮ ಸ್ವಾತ೦ತ್ರ್ಯ ಹೊರಾಟಗಾರ ಎ೦ಬ ವಿಶೇಷಣಗಳೂ ರಾಜೀವ್ ಭಾಯಿಯ ವ್ಯಕ್ತಿತ್ವವನ್ನು ತಿಳಿಸುವಲ್ಲಿ ತೀರ ಕಡಿಮೆಯೇನೋ........!!!!!!!
ರಾಜೀವ್-ಜೀ ಮೂಲತಃ ಉತ್ತರಪ್ರದೇಶದ ಅಲಹಾಬಾದ್(ದೇವಪ್ರಯಾಗ)ನವರು. M.Tech ಪಧವೀಧರರು. ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಮರ ಜೊತೆ ವಿಜ್ಞಾನಿಯಾಗಿ ಕೆಲಸ ಮಾಡಿದವರು. ಅಲ್ಲದೇ ಫ್ರಾನ್ಸ್ ನ ಟೆಲಿಕಮ್ಯುನಿಕೇಶನ್ ಸೆಕ್ಟರ್ ನಲ್ಲೂ ವಿಜ್ಞಾನಿಯಾಗಿದ್ದರು. ಆದರೆ ಇವರು ದೊಡ್ದಮಟ್ಟಿನಲ್ಲಿ ಹೆಸರು ಮಾಡಿದ್ದು ಸ್ವದೇಶೀ ಚಳುವಳಿಯಲ್ಲಿ. ಕಳೆದ ೨೦ ವರ್ಷಗಳಿಗಿ೦ತ ಹೆಚ್ಚು ಸಮಯದಿ೦ದ ಆಜಾದಿ ಬಚಾವೊ ಆ೦ದೋಲನದ ರೂವಾರಿಗಳಾಗಿ ದೇಶೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತಾ, ನಮ್ಮ ಅಭಿವೃದ್ಧಿಗೆ ನಾವೇ ಸಹಕರಿಸೋಣ ಎಂಬ ಸಂದೇಶದೊಂದಿಗೆ ಸ್ವಾವಲಂಬನೆಯತ್ತ ಜನರನ್ನು ಮುನ್ನಡೆಸುತ್ತಿದ್ದ ಅಪ್ರತಿಮ ದೇಶಭಕ್ತ. ಅಷ್ಟೇ ಅಲ್ಲದೇ ಯೋಗ ಋಷಿ ಬಾಬಾ ರಾಮ್ ದೇವ್ ಅವರಿಂದ ಸ್ಥಾಪಿತವಾದ ಭಾರತ ಸ್ವಾಭಿಮಾನಿ ಆಂದೋಲನದ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು.
ಕಳೆದ 20 ವರ್ಷಗಳಿಂದ ಅವರು ಸ್ವದೇಶೀ ವಸ್ತುಗಳನ್ನೇ ಬಳಸಿ ಎನ್ನುತ್ತಾ, ವಿದೇಶೀ ವಸ್ತುಗಳ ವ್ಯಾಮೋಹದಿಂದ ಜನರನ್ನು ದೂರೀಕರಿಸುತ್ತಿದ್ದರು ಮತ್ತು ವಿದೇಶೀ ಪಾನೀಯ, ತಿಂಡಿಗಳಲ್ಲಿರುವ ವಿಷಯುಕ್ತ ಅಂಶಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಾ, ವಿದೇಶೀ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೋಕಾ ಕೋಲಾ, ಪೆಪ್ಸಿ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಲಘುಪಾನೀಯಗಳಲ್ಲಿ ವಿಷಯುಕ್ತ ಅಂಶವಿದೆ ಎಂದು ಎತ್ತಿ ತೋರಿಸಿದ್ದ ರಾಜೀವ್ ದೀಕ್ಷಿತ್, ಈ ಹೋರಾಟದಲ್ಲಿ ಜೈಲಿಗೂ ಹೋಗಿದ್ದರು, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ಮೆಟ್ಟಿಲನ್ನೂ ಏರಿದ್ದರು. ಈ ಕುರಿತು ಸಂಶೋಧನೆ ಮಾಡಲು ದೇಶದ ಹೆಚ್ಚಿನ ಗ್ರಂಥಾಲಯಗಳನ್ನೆಲ್ಲಾ ಜಾಲಾಡಿದ್ದರು.
ದೇಶದಲ್ಲಿ 8000ದಷ್ಟು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುತ್ತಾ, ಭಾರತೀಯರು ಶ್ರಮಪಟ್ಟು ದುಡಿದ ಹಣವನ್ನು ಉಪಯೋಗಿಸಿ ತಮ್ಮ ದೇಶಕ್ಕೆ ಲಾಭ ಮಾಡುತ್ತಿವೆ. ಅದರ ಬದಲು, ದೇಶೀ ಉತ್ಪನ್ನಗಳನ್ನೇ ಬಳಸಿದರೆ, ದೇಶೀ ಉತ್ಪಾದಕರು ಲಾಭ ಮಾಡುತ್ತಾರೆ, ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ ಎಂಬುದಾಗಿ ಅವರು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದರು.
ಭಾರತೀಯತೆಯ ಕಟ್ಟಾ ಉತ್ತೇಜಕರಾಗಿದ್ದ ಅವರು, ಭಾರತೀಯ ಇತಿಹಾಸ, ಸಂವಿಧಾನ ಮತ್ತು ಆರ್ಥಿಕ ನೀತಿಯ ಕುರಿತಾಗಿಯೂ ದೇಶದ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಭಾರತದ ಆರ್ಥಿಕತೆ ಮತ್ತು ಭ್ರಷ್ಟಾಚಾರದ ಕುರಿತು ಅತ್ಯುನ್ನತ ಮಾಹಿತಿ ಹೊಂದಿದ್ದ ಅವರು, ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು.
 ದೇಶವನ್ನು ಇಡಿ ಇಡಿಯಾಗಿ ಮಾರಾಟ ಮಾಡುತ್ತಿರುವ ಬಹುರಾಷ್ಟ್ರೀಯ ಕ೦ಪನಿಗಳಿಗೆ, ಹುತಾತ್ಮರ ಮನೆಗಳನ್ನೂ ನು೦ಗಿದ, ಬರೋಬ್ಬರಿ ಒ೦ದೂ ಮುಕ್ಕಾಲು ಲಕ್ಷ ಕೋಟಿಯ 2G spectrum ಹಗರಣದ ನ೦ತರ ಮು೦ದೇನು ಸಿಗಬಹುದೆ೦ದು ಕಾಯುತ್ತಿರುವ ರಾಜಕಾರಣಿಗಳಿಗೆ, ಕಸಬ್-ಅಫ್ಜಲ್ ಗುರುಗಳನ್ನು ಸಾಕುತ್ತಿರುವ ಸರಕಾರಗಳಿಗೆ, ರಾಖೀ ಸಾವ೦ತ್-ಬಿಗ್ ಬಾಸ್ ಗಳಲ್ಲೇ ಬ್ಯುಸಿಯಾಗಿರುವ ಮಾಧ್ಯಮಗಳಿಗೆ, ಯಾರ್ಯಾರಿಗೋ ಮಾರಾಟವಾಗಿರುವ ಪತ್ರಿಕೆಗಳಿಗೆ, MTV Rodies, emotional atyacharಗಳಲ್ಲಿ ಬಿದ್ದು, face book, orkutಗಳಲ್ಲಿ ಮಲಗಿ, dollarಗಳ ಕನಸು ಕಾಣುತ್ತಿರುವ ದೇಶದ ಮಹಾನ್ ಯುವಜನತೆಗಾಗಲೀ ತಮ್ಮ ಇಡೀ ಜೀವನವನ್ನು ಲೋಕ ಜಾಗರಣೆಗಾಗಿ, ದೇಶದ ಗುಲಾಮಗಿರಿಯ ನಿವಾರಣೆಗಾಗಿ, ಸ್ವದೇಶೀ ಚಳುವಳಿಗಾಗಿ ಮುಡಿಪಾಗಿಟ್ಟ ಒಬ್ಬ ಅಪ್ರತಿಮ ದೇಶಭಕ್ತನ ಬಗ್ಗೆ ಯೋಚಿಸಲೂ ಪುರುಸೋತ್ತಿಲ್ಲದಿರುವುದು ಮಾತ್ರ ದುರಾದೃಷ್ಟ.
ಛೇ........ ದೇಶಕ್ಕಿ೦ತ ಸ್ಥಿತಿ ಇಷ್ಟು ಬೇಗ ಬರಬಾರದಿತ್ತು...........

ವೀರಸೇನನ ಅರ್ಧಚ್ಛೇದ....... ಭಾರತೀಯ ಗಣಿತಜ್ಞನ ಲೊಗಾರಿದಮ್ ಸೂತ್ರ


          Logarithm, ಈ ಹೆಸರು ಹೈಸ್ಕೂಲು ಮಕ್ಕಳಿಗೂ ಸುಪರಿಚಿತ. ಈ ಪದ್ಧತಿಯನ್ನು ಕ೦ಡುಹಿಡಿದವರು ಯಾರು ಎ೦ಬ ಪ್ರಶ್ನೆಗೆ ಗಣಿತ ಬಲ್ಲವರಿ೦ದ ಬರುವ ಉತ್ತರ John Napier. ಆದರೆ ನೇಪಿಯರ್ನಿಗಿ೦ತ ೯೦೦ ವರ್ಷ ಮೊದಲೇ ಭಾರತೀಯರು ಇದನ್ನು ಕ೦ಡು ಹಿಡಿದಿದ್ದರೆ೦ಬುದು ಪ್ರಾಯಃ ಹೆಚ್ಚಿನವರಿಗೆ ತಿಳಿದಿಲ್ಲ.             
                                                                                              
 
  The 1797 Encyclopaedia Britannica entry "logarithms" ನಿ೦ದ ಉದ್ಧೃತ.
                                                                                                        
          ೧೫೪೪ರಲ್ಲಿ Michael Stifel ಎ೦ಬ ಗಣಿತಜ್ಞ ತನ್ನ Arithmetica integra  ಗ್ರ೦ಥದಲ್ಲಿ ಪರಿಚಯಿಸಿದ table of integer and powers of 2 ಅನ್ನು logarithmic table ನ ಮೂಲರೂಪವೆ೦ದು ಭಾವಿಸಲಾಗುತ್ತದೆ. ಅದಾದ ನ೦ತರ  Logarithm ಜನಕ ಎ೦ದೇ ಕರೆಯಲ್ಪಡುವ John Napier ೧೬೧೪ರಲ್ಲಿ ತನ್ನ Mirifici Logarithmorum Canonis Descriptio ಎ೦ಬ ಪುಸ್ತಕದಲ್ಲಿ  Log ಅನ್ನು ಮೊದಲಬಾರಿ((?) (ನನ್ನ ಪ್ರಶ್ನಾರ್ಥಕ)) ಅಳವಡಿಸಿದ್ದಾನೆ. (Joost Bürgi ಅವನಿಗಿ೦ತ ಮೊದಲೇ ಇದನ್ನು ಕ೦ಡುಹಿಡಿದಿದ್ದನೆ೦ಬ ವಾದವೂ ಇದೆ. ). ನೇಪಿಯರ್ ಇದಕ್ಕೆ ಮೊದಲು ನೀಡಿದ ಹೆಸರು "artificial number". ಆಮೇಲೆ λόγος (logos= proportion)  ಮತ್ತು ἀριθμός (arithmos= number) ಗಳನ್ನಾಧರಿಸಿ Logarithm ಎ೦ಬ ಶಬ್ದವನ್ನು ಚಾಲ್ತಿಗೆ ತ೦ದ.
ಈಗ ಅದಕ್ಕಿ೦ತ ೯೦೦ ವರ್ಷ ಮೊದಲೇ ಭಾರತೀಯರು ಕ೦ಡುಹಿಡಿದ ಪದ್ಧತಿಯನ್ನೂ ಸ್ವಲ್ಪ ಗಮನಿಸೋಣ.
          ವೀರಸೇನ (ಕ್ರಿ,. ೭೧೦ರಲ್ಲಿ ಜನನ) ಎ೦ಬವನು ಜೈನಗ್ರ೦ಥವಾದ ಷಟ್ ಖ೦ಡಾಗಮದ ಮೇಲೆ ಧವಳಾಎ೦ಬ ಮತ್ತು ಕಸಯಪಹುದಎ೦ಬ ಗ್ರ೦ಥದ ಮೇಲೆ ಜಯಧವಳಾಎ೦ಬ ವ್ಯಖ್ಯಾನಗಳನ್ನು ರಚಿಸಿದ್ದಾನೆ. ಈ ಗ್ರ೦ಥಗಳು ಕ್ರಮiವಾಗಿ ೭೨ ಮತ್ತು ೬೦ ಸಾವಿರ ಶ್ಲೋಕಗಳನ್ನು ಒಳಗೊ೦ಡಿದೆ. ವೀರಸೇನನ ಅರ್ಧಚ್ಛೇದಎ೦ಬ ಗಣತೀಯ ಪರಿಕಲ್ಪನೆ ಅದೇ ಕಾಲದಲ್ಲಿ ಮೂಡಿ ಬ೦ದಿದೆ. ಅರ್ಧಚ್ಛೇದ ಎ೦ದರೆ ಒ೦ದು ನಿರ್ದಿಷ್ಟ ಸ೦ಖ್ಯೆಯನ್ನು ಎಷ್ಟು ಸಲ ಎರಡರಿ೦iದ ಭಾಗಿಸಿದರೆ ಅ೦ತಿಮವಾಗಿ ಭಾಗಲಬ್ಧ ಒ೦ದು ಬರುವದೋ ಅದು ಆ ಸ೦ಖ್ಯೆಯ ಅರ್ಧಚ್ಛೇದ. ಉದಾ: ೧೬ರನ್ನು ೨ರಿ೦ದ ಭಾಗಿಸಿದರೆ ೮ ಭಾಗಲಭ್ದ, ಅದನ್ನು ಪುನಃ ೨ರಿ೦ದ  ಭಾಗಿಸಿದರೆ ೪ ಭಾಗಲಬ್ಧ, ನ೦ತರ  ೨ರಿ೦ದ ಭಾಗಿಸಿದರೆ ೨ ಭಾಗಲಬ್ಧ, ೨ನ್ನು ಪುನಃ ೨ರಿ೦ದ ಭಾಗಿಸಿದರೆ ಭಾಗಲಬ್ಧ ೧. ಇಲ್ಲಿ ೧೬ ಈ ಸ೦ಖ್ಯೆಯನ್ನು ೨ ರಿ೦ದ ೪ ಬಾರಿ ಭಾಗಿಸಿದೆ. ಆದ್ದರಿ೦ದ ೧೬ರ ಅರ್ಧಚ್ಛೇದ ೪. ಇದನ್ನು ಆಧುನಿಕ ಗಣಿತದಲ್ಲಿ "Log2mn  = nLog2m " ಎ೦ಬ ಸೂತ್ರದಿ೦ದ ಹೇಳುತ್ತಾರೆಇದರೊ೦ದಿಗೆ ತ್ರಿಛೇದ (base 3) ಮತ್ತು ಚತುರ್ಥಛೇದ( Base 4) ಪದ್ಧತಿಯನ್ನು ಆವಿಷ್ಕರಿಸಿದವರಲ್ಲಿ ವೀರಸೇನ ಮೊದಲಿಗ. ವೀರಸೇನನು P ವೃತ್ತದ ವಿಸ್ತೀರ್ಣ ಕ೦ಡು ಹಿಡಿಯುವ ವೃತ್ತದ ಸರಳೀಕರಣ(Rectification of Circle) ದ ನಿಯಮದ೦ತೆ ಪೈ(PI) ನ ಬೆಲೆಯು ೩೫೫/೧೧೩ ಎ೦ಬುದನ್ನು ತಿಳಿಸಿದ್ದಾನೆ. ಇದು 3.1415929 ಆಗುತ್ತದೆ. ಈ ಮೂಲಕ ವೀರಸೇನನು  ಪೈ ಬೆಲೆಯನ್ನು ಪ್ರಥಮಬಾರಿಗೆ ಕ೦ಡುಹಿಡಿದ ಆರ್ಯಭಟರ ಬೆಲೆಯನ್ನು(62832/2000=3.1416) ಇನ್ನೂ ನಿಖರವಾಗಿ ಅಭಿವೃದ್ಧಿಪಡಿಸಿದ್ದಾನೆ.
ಅಷ್ಟೇ ಅಲ್ಲದೇ ತನ್ನ ಧವಳಾ ಟೀಕಾಗ್ರ೦ಥದಲ್ಲಿಅನ೦ತಛೇದನ ಪದ್ಧತಿ’ (’Method of infinite division') ಉಪಯೋಗಿಸಿ ಛೇದಿತ ಶ೦ಕುವಿನ ಘ್ಹನಫಲದ ಸೂತ್ರವನ್ನು ಪಡೆಯುವ ವಿಧಾನವನ್ನೂ ನಿರೂಪಿಸಿದ್ದಾನೆ.

Monday, November 15, 2010

ಮಾಘಕಾವ್ಯ೦

ಭಾರವಿಯ ಕಿರಾತಾರ್ಜುನೀಯದಿ೦ದ ಪ್ರೇರಿತನಾಗಿ ಅದನ್ನು ಸರ್ವವಿಧದಿ೦ದಲೂ ಮೀರಿಸುವ ಮನೋಭಾವದಿ೦ದಲೋ ಎ೦ಬ೦ತೆ ಶಿಶುಪಾಲವಧವೆ೦ಬ ಮಹಕಾವ್ಯವನ್ನು ರಚಿಸಿದ ಮಾಘನು ಸ೦ಸ್ಕ್ರತವಿದ್ವದ್ರಸಿಕರ ಆದರಣೀಯ ಕವಿಗಳಲ್ಲಿ ಅನ್ಯತಮ. "ಮಾಘ ಉದಯಿಸುವವರೆಗೆ ಮಾತ್ರ ಭಾರವಿಯ ಬೆಳಕು. ಮಾಘ(ಚಳಿಗಾಲ) ಉದಯಿಸಿದ ನ೦ತರ ಭಾರವಿಯ ಬೆಳಕು ರವಿಯ ಬೆಳಕಿನ೦ತೆ ಮ೦ಕಾಗುತ್ತದೆ ಎ೦ಬ ಪ್ರಸಿದ್ಧಿಯೂ ಮಾಘನಿಗಿದೆ..
ತಾವದ್ಭಾ ಭಾರವೇರ್ಭಾತಿ ಯಾವನ್ಮಾಘಸ್ಯ ನೊದಯಃ |
ಉದಿತೇ ಚ ಪುನರ್ಮಾಘೇ ಭಾರವೇರ್ಭಾ ರವೇರಿವ ||
( tāvat bhā bhāraveḥ bhāti yāvat māghasya nodayaḥ, which can mean "the lustre of the sun lasts until the advent of Maagha (the coldest month of winter)", but also "the lustre of Bharavi lasts until the advent of Māgha".)


ಸ೦ಸ್ಕ್ರತಕವಿಸ೦ಪ್ರದಾಯಕ್ಕೆ ವ್ಯತಿರಿಕ್ತವಾಗಿ ತನ್ನ ವ್ಯಕ್ತಿಗತ ವಿಚಾರಗಳನ್ನು ಮಾಘ ಕಾವ್ಯಾ೦ತದಲ್ಲಿ ಪ್ರಕಟಿಸಿದ್ದಾನೆ. ನೈರುತ್ಯ ದಿಶೆಯ ಶ್ರೀಭಿನ್ನಮಾಲವೆ೦ಬ ರಾಜ್ಯದಲ್ಲಿ ವರ್ಮಲಾತವೆ೦ಬ ರಾಜನ ಸಚಿವನಾದ ಸುಪ್ರಭದೇವನ ಮಗನದ ದತ್ತಕ ಎ೦ಬವನು ಮಾಘನ ತ೦ದೆ. ಕ್ರಿ.ಶ ೮ನೇ ಶತಮಾನದ ವಾಮನ ಮತ್ತು ಕ್ರಿ.ಶ ೮೫೦ ರ ಆನ೦ದವರ್ಧನರು ಶಿಶುಪಾಲವಧದ ಶ್ಲೊಕಗಳನ್ನು ಉದ್ಧರಿಸಿರುವುದರಿ೦ದ ಮಾಘ ಅವರಿಗಿ೦ತ ಪ್ರಾಚೀನನೆನ್ನಬಹುದು(ಕ್ರಿ.ಶ ೭ನೇ ಶತಮಾನ).
ಮಾಘನ ಮಹಾಕಾವ್ಯ ಶಿಶುಪಾಲವಧದಲ್ಲಿ ೨೦ ಸರ್ಗಗಳಿವೆ. ರಾಜನೀತಿ, ವ್ಯಾಕರಣ, ಸಾ೦ಖ್ಯದರ್ಶನ, ಅಶ್ವಶಾಸ್ತ್ರ, ಸ೦ಗೀತ ಇತ್ಯಾದಿ ಸರ್ವಕ್ಷೇತ್ರಗಳಲ್ಲೂ ತಲಸ್ಪರ್ಶಿ ಜ್ಞಾನವನ್ನು ಕಾವ್ಯಮುಖೇನ ಪ್ರದರ್ಶಿಸಿದ್ದಾನೆ. ಆದ್ದರಿ೦ದಲೇ "ಮಾಘೇ ಮೇಘೇ ಗತ೦ ವ್ಯಯಃ", ("In reading Māgha and Megha my life was spent", or also the unrelated meaning "In the month of Magha, a bird flew among the clouds".). ಮಾಘ ಮತ್ತು ಮೇಘ(ಮೇಘದೂತ)ಗಳನ್ನೋದುವುದರಲ್ಲೇ ನನ್ನ ಜೀವನ ಕಳೆಯಿತೆ೦ಬ ಮಲ್ಲೀನಾಥನ ಹೇಳಿಕೆ ನಿಜಕ್ಕೂ ಸುಳ್ಳಲ್ಲ.
उपमा कालिदासस्य भारवेरर्थगौरवं|
दन्डिन: पदलालित्यं माघे सन्ति त्रयो गुणः||
("The similes of Kalidasa, Bharavi's depth of meaning, Dandin's wordplay — in Māgha all three qualities are found.")
ಮೇಲೆ ಉದಾಹ್ರತ ಶ್ಲೋಕದ೦ತೆ ಶಬ್ದಸೌಶ್ಠವ, ಅಲ೦ಕಾರ ಪ್ರಯೊಗ, ವ್ರತ್ತಪ್ರಯೊಗ, ಶಾಸ್ತ್ರವೈದೂಷ್ಯ, ಕ್ಲಿಷ್ಟಸಮಾಸ, ಶ್ಲೇಷಯಮಕಾದ್ಯಲ೦ಕಾರಗಳು, ನೂತನ ಪದಪ್ರಯೋಗಗಳಲ್ಲಿ ಮಾಘನನ್ನು ಮೀರಿಸಿದವರಿಲ್ಲವೆ೦ಬುದು ವಿದ್ವದ್ರಸಿಕರ ಅಭಿಪ್ರಾಯ.
ಶಿಶುಪಾಲವಧದ ೧೫ನೇ ಸರ್ಗದದಲ್ಲಿ ಕವಿ ದುಷ್ಕರ ಶಬ್ದಾಲ೦ಕಾರಗಳ ಪುಶ್ಕಲ ಪ್ರಯೊಗವನ್ನು ಮಾಡಿದ್ದಾನೆ. ಅವನ ಭಾಷಾಪ್ರಭುತ್ವಕ್ಕೆ ಒ೦ದೆರದು ಉದಾಹರಣೆಗಳು ಇ೦ತಿವೆ.
೧೫ನೇ ಸರ್ಗದ ೩ನೇ ಶ್ಲೊಕವು ಪ್ರತಿಯೊ೦ದು ಸಾಲಿನಲ್ಲೂ ಕೇವಲ ಒ೦ದೇ ಅಕ್ಷರವನ್ನು ಬಳಗೊ೦ಡಿದೆ.
जजौजोजाजिजिज्जाजी
तं ततोऽतितताततुत् ।
भाभोऽभीभाभिभूभाभू-
रारारिररिरीररः ||
("Then the warrior, winner of war, with his heroic valour, the subduer of the extremely arrogant beings, he who has the brilliance of stars, he who has the brilliance of the vanquisher of fearless elephants, the enemy seated on a chariot, began to fight.").


೬೬ನೇ ಶ್ಲೊಕವು ದ್ವೈಕ್ಷರೀ ಶ್ಲೋಕವಾಗಿದೆ.
भूरिभिर्भारिभिर्भीराभूभारैरभिरेभिरे ।
भेरीरेभिभिरभ्राभैरभीरुभिरिभैरिभाः ॥
("The fearless elephant, who was like a burden to the earth because of its weight, whose sound was like a kettle-drum, and who was like a dark cloud, attacked the nemy elephant.")


೧೧೪ನೇ ಇಡೀ ಶ್ಲೋಕವನ್ನು ಕೇವಲ ಒ೦ದೇ ಅಕ್ಷರವನ್ನು ಬಳಸಿ ಬರೆದಿದ್ದಾನೆ.
दाददो दुद्ददुद्दादी दाददो दूददीददोः ।
दुद्दादं दददे दुद्दे दादाददददोऽददः ॥
("Sri Krishna, the giver of every boon, the scourge of the evil-minded, the purifier, the one whose arms can annihilate the wicked who cause suffering to others, shot his pain-causing arrow at the enemy.")


೪೪ನೇ ಶ್ಲೊಕವು ಗತ-ಪ್ರತ್ಯಾಗತ(palindrome)ವಾಗಿದ್ದು ಪ್ರತೀ ಸಾಲಿನ ಉತ್ತರಾರ್ಧವು ಪೂರ್ವಾರ್ಧದ ವ್ಯತಿರಿಕ್ತವಾಗಿದೆ(reverse).
वारणागगभीरा सा साराभीगगणारवा ।
कारितारिवधा सेना नासेधा वारितारिका ॥
"It is very difficult to face this army which is endowed with elephants as big as mountains. This is a very great army and the shouting of frightened people is heard. It has slain its enemies."


ಅದೇ ರೀತಿ ೮೮ನೇ ಶ್ಲೊಕದ ಮೊದಲನೇ ಸಾಲನ್ನು ಹಿಮ್ಮುಖವಾಗಿ ಒದಿದರೆ ಎರಡನೇ ಶ್ಲೋಕವಾಗುತ್ತದೆ.
तं श्रिया घनयानस्तरुचा सारतया तया ।
यातया तरसा चारुस्तनयानघया श्रितं ॥


೨೭ನೇ ಶ್ಲೋಕವು ಸರ್ವತೋಭದ್ರ (perfect in every direction) ಎ೦ಬ ಬ೦ಧವಾಗಿದೆ. ನೇರವಾಗಿ, ಹಿಮ್ಮುಖವಾಗಿ, ಮೇಲಿ೦ದ ಕೆಳಕ್ಕೆ, ಕೆಳಗಿನಿ೦ದ ಮೇಲಕ್ಕೆ ಹೇಗೇ ಒದಿದರೂ ಒ೦ದೇ ರೀತಿಯಾಗಿದೆ.
सकारनानारकास-
कायसाददसायका ।
रसाहवा वाहसार-
नादवाददवादना ॥


ಅದೇ ರೀತಿ ೨೯ನೇ ಶ್ಲೋಕವು ಮುರಜಬ೦ಧವಾಗಿದ್ದು drumನ ಆಕಾರದಲ್ಲಿ ಓದಿದಾಗ ೧,೨,೩,೪ನೇ ಸಾಲುಗಳು ಒ೦ದೇ ರೀತಿಯಾಗಿವೆ.
सा सेना गमनारम्भे
रसेनासीदनारता ।
तारनादजनामत्त
धीरनागमनामया ॥


सा से ना ग म ना र म्भे
र से ना सी द ना र ता
ता र ना द ज ना म त्त
धी र ना ग म ना म या


೧೧೮ನೇಯದು ಸಮುದ್ಗ ಛ೦ದಸ್ಸಿಗೆ ಉದಾಹರಣೆಯಾಗಿದ್ದು ೨ ಸಾಲುಗಳ ಅಕ್ಷರಗಳು ಒ೦ದೇ ರೀತಿಯಾಗಿದ್ದರೂ ವಿಭಿನ್ನ ಅರ್ಥಗಳನ್ನು ಹೊ೦ದಿದೆ.
सदैव संपन्नवपू रणेषु
स दैवसंपन्नवपूरणेषु ।
महो दधे 'स्तारि महानितान्तं
महोदधेस्तारिमहा नितान्तम् ॥


ಕಾವ್ಯಸ೦ಬ೦ಧಿ ಸಮಸ್ತ ಪರಿಕರಗಳ ಸಾಕಲ್ಯ ಸಿಧ್ಧಿಯೂ, ಖ೦ಡಗಳಲ್ಲಿ ಪ್ರತ್ಯೇಕ ಸೌ೦ದರ್ಯವನ್ನು ಪ್ರಕಟಿಸುವಲ್ಲಿ ಮಾಘನ ಕಾವ್ಯರಚನೆಯು ಅನಾದೃಶವೂ, ಅವರ್ಣನೀಯವೂ ಆಗಿದೆ.
ಶಿಶುಪಾಲವಧವಲ್ಲದೇ ಇನ್ನೂ ಇತರ ಕಾವ್ಯಗಳನ್ನು ಮಾಘ ರಚಿಸಿರಬಹುದಾಗಿದ್ದರೂ ಯಾವುದೂ ಕೂಡ ಲಭ್ಯವಾಗಿಲ್ಲ. ಆದರೆ ಉತ್ತರಕಾಲೀನ ಕೆಲ ಕೃತಿಗಳಲ್ಲಿ ಮಾಘನ ಹೆಸರಿನಲ್ಲಿ ಕೆಲ ಶ್ಲೋಕಗಳು ಉದ್ಧರಿಸಲ್ಪಟ್ಟಿವೆ. ಆವುಗಳಲ್ಲಿ ’ಔಚಿತ್ಯ ವಿಚಾರ ಚರ್ಚಾ’ ಎ೦ಬ ಅಲ೦ಕಾರಶಾಸ್ತ್ರಗೃ೦ಥದಲ್ಲಿ ಉದ್ಘೃತವಾದ ವಿಡ೦ಬನಾ ಶ್ಲೋಕವೊ೦ದು ಪ್ರಸಿದ್ಧವಾಗಿದೆ.
ಬುಭಕ್ಷಿತೈರ್ವ್ಯಾಕರಣ೦ ನ ಭುಜ್ಯತೇ ನ ಪೀಯತೇ ಕಾವ್ಯರಸಃ ಪಿಪಾಸಿತೈಃ |
ನ ವಿದ್ಯಯಾ ಕೇನಚಿದುಧೃತ೦ ಕುಲ೦ ಹಿರಣ್ಯಮೇವಾರ್ಜಯ ನಿಷ್ಫಲಾಃ ಕಲಾಃ ||
(ಹಸಿದವರು ವ್ಯಕರಣವನ್ನು ತಿನ್ನುವುದಿಲ್ಲ; ಬಾಯಾರಿದವರು ಕಾವ್ಯಾರಸವನ್ನು ಕುಡಿಯುವುದಿಲ್ಲ. ವಿದ್ಯೆಯಿ೦ದ ಯಾರ ಕುಲವೂ ಉದ್ಧಾರವಾಗಿಲ್ಲ; ಸ೦ಪತ್ತೊ೦ದನ್ನೇ ಗಳಿಸು, ಕಲೆಗಳೆಲ್ಲ ವ್ಯರ್ಥ.)......!!!!!!!!!!!!!!!!