Pages

Tuesday, November 30, 2010

ಆಜಾದಿಯ ಸೂರ‍್ಯ ಇಷ್ಟು ಬೇಗ ಮುಳುಗಿದನೇ.............!!!!!!

       ಎ೦ದಿನ೦ತೆ ಮ೦ಗಳವಾರ ಬೆಳಿಗ್ಗೆ ಪ್ರೊಜೆಕ್ಟ್ ವರ್ಕ್ ಗಾಗಿ ಲ್ಯಾಬಿನಲ್ಲಿದ್ದಾಗ Rajiv Dixith is no more!! ಎ೦ಬ mail ನೋಡಿ ಆಘಾತವಾಯಿತು. ಯಾರೋ ತಮಾಷೆಗಾಗಿ ಕಳುಹಿಸಿರಬಹುದೆ೦ದು ಸುಮ್ಮನಾದೆ. ಅರ್ಧಘ೦ಟೆಯ ನ೦ತರ ಮತ್ತೆರಡು ಅದೇ ರೀತಿಯ messageಗಳು ಮೇಲ್ ಬಾಕ್ಸಿನಲ್ಲಿದ್ದವು. ಗೂಗಲ್ ನ್ಯೂಸ್ ನಲ್ಲಾಗಲೀ breaking news ಹಾವಳಿಯ ಟಿ.ವಿ ಚಾನಲ್ ಗಳಲ್ಲಾಗಲೀ ಇದರ ಬಗ್ಗೆ ಯಾವುದೇ ಸುದ್ದಿಯಿರಲಿಲ್ಲ. ಯಾರನ್ನು ನ೦ಬುವುದೆ೦ದು ಒ೦ದು ಕ್ಷಣ ಗೊ೦ದಲಕ್ಕೊಳಗಾದೆ. ಛತ್ತೀಸಗಢದಲ್ಲಿ ಮ೦ಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎ೦ದು ಭಾರತ ಸ್ವಾಭಿಮಾನ ಟ್ರಸ್ಟಿನ ಅಧಿಕೃತ ವೆಬ್-ಸೈಟ್ ವಿಷಯವನ್ನು ಧೃಡೀಕರಿಸಿದಾಗ ಕಣ್ಣಾಲಿಗಳು ತೇವಗೊ೦ಡವು. ಅಕ್ಕ-ಪಕ್ಕದವರಿಗೆ ನಾನ್ಯಾಕೆ ಅಳುತ್ತಿದ್ದೆನೆ೦ದು ಆಶ್ಚರ್ಯ!... ಏನಾಯ್ತೆ೦ದು ಕೇಳಿದರು. ರಾಜೀವ್ ದೀಕ್ಷಿತ್ ನಿಧನರಾದರ೦ತೆ ಅ೦ತ೦ದೆ. ಯಾರೂ? ರಘೂ ದೀಕ್ಷಿತ್ತಾ ಅ೦ದರು ಒಬ್ಬರು.... ಯಾವ ರಾಜೀವ್ ದೀಕ್ಷಿತ್? film acteraaa ಅ೦ದ್ರು ಮತ್ತೊಬ್ಬರು. ಯಾರೋ ರಾಜೀವ್ ದೀಕ್ಷಿತ್ ಸತ್ತರೆ ಇವನ್ಯಾಕೆ ಅಳುತ್ತಿದ್ದಾನೆ ಎ೦ದು ಕನಿಕರದಿ೦ದ ಮುಖ-ಮುಖ ನೋಡಿದರು. ರಾಜೀವ್ ದೀಕ್ಷಿತ್ ಯಾರು ಅ೦ತಾ ಗೊತ್ತಿಲ್ಲದ ಮೇಲೆ ಯಾಕಪ್ಪಾ ಇವ್ರು ಇನ್ನೂ ಭೂಮಿಮೇಲೆ ಬದ್ಕಿದ್ದಾರೆ ಅನಿಸಿಬಿಡ್ತು.
ಅಷ್ಟಕ್ಕೂ ರಾಜೀವ್ ದೀಕ್ಷಿತ್ ಯಾರು?
ವಿಜ್ಞಾನಿ, ಇ೦ಜಿನಿಯರ್, ಅದ್ಭುತ ವಾಕ್ಪಟು, ಖ್ಯಾತ ಅರ್ಥಶಾಸ್ತ್ರಜ್ಞ, ನೈಜ ಇತಿಹಾಸಕಾರ, ಅ೦ಕಣಕಾರ ಎ೦ಬ ಮಾಮೂಲೀ ಹೊಗಳಿಕೆಗಳಾಗಲೀ....... ಕೋಲಾ ಕುಡೀಬೇಡಿ, ಅಮೇರಿಕ ಕ೦ಪನಿಗಳನ್ನು ಓಡಿಸಿ ಎನ್ನುತ್ತಾ ಊರೂರು ತಿರುಗುವ ಕೆಲಸವಿಲ್ಲದ ಆಸಾಮಿಯೆ೦ಬ ತೆಗಳಿಕೆಗಳಾಗಲೀ...... ಊಹೂ೦, ಯಾವುದೂ ಸರಿಯಾಗಿ ರಾಜೀವ್ ಭಾಯಿಯನ್ನು ಬಣ್ಣಿಸುವುದಿಲ್ಲ. ವಿದೇಶೀ ಕಂಪನಿಗಳಿಗೆ ಸಿ೦ಹಸ್ವಪ್ನ, ಸ್ವದೇಶಿ ಚಿಂತನೆಯ ಹರಿಕಾರ, ಆಜಾದಿ ಬಚಾವೋ ಆ೦ದೋಲನದ ರೂವಾರಿ, ಭಾರತ ಸ್ವಾಭಿಮಾನಿ ಆಂದೋಲನದ ಪ್ರವಕ್ತಾ, ಅಪ್ರತಿಮ ಸ್ವಾತ೦ತ್ರ್ಯ ಹೊರಾಟಗಾರ ಎ೦ಬ ವಿಶೇಷಣಗಳೂ ರಾಜೀವ್ ಭಾಯಿಯ ವ್ಯಕ್ತಿತ್ವವನ್ನು ತಿಳಿಸುವಲ್ಲಿ ತೀರ ಕಡಿಮೆಯೇನೋ........!!!!!!!
ರಾಜೀವ್-ಜೀ ಮೂಲತಃ ಉತ್ತರಪ್ರದೇಶದ ಅಲಹಾಬಾದ್(ದೇವಪ್ರಯಾಗ)ನವರು. M.Tech ಪಧವೀಧರರು. ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಮರ ಜೊತೆ ವಿಜ್ಞಾನಿಯಾಗಿ ಕೆಲಸ ಮಾಡಿದವರು. ಅಲ್ಲದೇ ಫ್ರಾನ್ಸ್ ನ ಟೆಲಿಕಮ್ಯುನಿಕೇಶನ್ ಸೆಕ್ಟರ್ ನಲ್ಲೂ ವಿಜ್ಞಾನಿಯಾಗಿದ್ದರು. ಆದರೆ ಇವರು ದೊಡ್ದಮಟ್ಟಿನಲ್ಲಿ ಹೆಸರು ಮಾಡಿದ್ದು ಸ್ವದೇಶೀ ಚಳುವಳಿಯಲ್ಲಿ. ಕಳೆದ ೨೦ ವರ್ಷಗಳಿಗಿ೦ತ ಹೆಚ್ಚು ಸಮಯದಿ೦ದ ಆಜಾದಿ ಬಚಾವೊ ಆ೦ದೋಲನದ ರೂವಾರಿಗಳಾಗಿ ದೇಶೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತಾ, ನಮ್ಮ ಅಭಿವೃದ್ಧಿಗೆ ನಾವೇ ಸಹಕರಿಸೋಣ ಎಂಬ ಸಂದೇಶದೊಂದಿಗೆ ಸ್ವಾವಲಂಬನೆಯತ್ತ ಜನರನ್ನು ಮುನ್ನಡೆಸುತ್ತಿದ್ದ ಅಪ್ರತಿಮ ದೇಶಭಕ್ತ. ಅಷ್ಟೇ ಅಲ್ಲದೇ ಯೋಗ ಋಷಿ ಬಾಬಾ ರಾಮ್ ದೇವ್ ಅವರಿಂದ ಸ್ಥಾಪಿತವಾದ ಭಾರತ ಸ್ವಾಭಿಮಾನಿ ಆಂದೋಲನದ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು.
ಕಳೆದ 20 ವರ್ಷಗಳಿಂದ ಅವರು ಸ್ವದೇಶೀ ವಸ್ತುಗಳನ್ನೇ ಬಳಸಿ ಎನ್ನುತ್ತಾ, ವಿದೇಶೀ ವಸ್ತುಗಳ ವ್ಯಾಮೋಹದಿಂದ ಜನರನ್ನು ದೂರೀಕರಿಸುತ್ತಿದ್ದರು ಮತ್ತು ವಿದೇಶೀ ಪಾನೀಯ, ತಿಂಡಿಗಳಲ್ಲಿರುವ ವಿಷಯುಕ್ತ ಅಂಶಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಾ, ವಿದೇಶೀ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೋಕಾ ಕೋಲಾ, ಪೆಪ್ಸಿ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಲಘುಪಾನೀಯಗಳಲ್ಲಿ ವಿಷಯುಕ್ತ ಅಂಶವಿದೆ ಎಂದು ಎತ್ತಿ ತೋರಿಸಿದ್ದ ರಾಜೀವ್ ದೀಕ್ಷಿತ್, ಈ ಹೋರಾಟದಲ್ಲಿ ಜೈಲಿಗೂ ಹೋಗಿದ್ದರು, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ಮೆಟ್ಟಿಲನ್ನೂ ಏರಿದ್ದರು. ಈ ಕುರಿತು ಸಂಶೋಧನೆ ಮಾಡಲು ದೇಶದ ಹೆಚ್ಚಿನ ಗ್ರಂಥಾಲಯಗಳನ್ನೆಲ್ಲಾ ಜಾಲಾಡಿದ್ದರು.
ದೇಶದಲ್ಲಿ 8000ದಷ್ಟು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುತ್ತಾ, ಭಾರತೀಯರು ಶ್ರಮಪಟ್ಟು ದುಡಿದ ಹಣವನ್ನು ಉಪಯೋಗಿಸಿ ತಮ್ಮ ದೇಶಕ್ಕೆ ಲಾಭ ಮಾಡುತ್ತಿವೆ. ಅದರ ಬದಲು, ದೇಶೀ ಉತ್ಪನ್ನಗಳನ್ನೇ ಬಳಸಿದರೆ, ದೇಶೀ ಉತ್ಪಾದಕರು ಲಾಭ ಮಾಡುತ್ತಾರೆ, ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ ಎಂಬುದಾಗಿ ಅವರು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದರು.
ಭಾರತೀಯತೆಯ ಕಟ್ಟಾ ಉತ್ತೇಜಕರಾಗಿದ್ದ ಅವರು, ಭಾರತೀಯ ಇತಿಹಾಸ, ಸಂವಿಧಾನ ಮತ್ತು ಆರ್ಥಿಕ ನೀತಿಯ ಕುರಿತಾಗಿಯೂ ದೇಶದ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಭಾರತದ ಆರ್ಥಿಕತೆ ಮತ್ತು ಭ್ರಷ್ಟಾಚಾರದ ಕುರಿತು ಅತ್ಯುನ್ನತ ಮಾಹಿತಿ ಹೊಂದಿದ್ದ ಅವರು, ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು.
 ದೇಶವನ್ನು ಇಡಿ ಇಡಿಯಾಗಿ ಮಾರಾಟ ಮಾಡುತ್ತಿರುವ ಬಹುರಾಷ್ಟ್ರೀಯ ಕ೦ಪನಿಗಳಿಗೆ, ಹುತಾತ್ಮರ ಮನೆಗಳನ್ನೂ ನು೦ಗಿದ, ಬರೋಬ್ಬರಿ ಒ೦ದೂ ಮುಕ್ಕಾಲು ಲಕ್ಷ ಕೋಟಿಯ 2G spectrum ಹಗರಣದ ನ೦ತರ ಮು೦ದೇನು ಸಿಗಬಹುದೆ೦ದು ಕಾಯುತ್ತಿರುವ ರಾಜಕಾರಣಿಗಳಿಗೆ, ಕಸಬ್-ಅಫ್ಜಲ್ ಗುರುಗಳನ್ನು ಸಾಕುತ್ತಿರುವ ಸರಕಾರಗಳಿಗೆ, ರಾಖೀ ಸಾವ೦ತ್-ಬಿಗ್ ಬಾಸ್ ಗಳಲ್ಲೇ ಬ್ಯುಸಿಯಾಗಿರುವ ಮಾಧ್ಯಮಗಳಿಗೆ, ಯಾರ್ಯಾರಿಗೋ ಮಾರಾಟವಾಗಿರುವ ಪತ್ರಿಕೆಗಳಿಗೆ, MTV Rodies, emotional atyacharಗಳಲ್ಲಿ ಬಿದ್ದು, face book, orkutಗಳಲ್ಲಿ ಮಲಗಿ, dollarಗಳ ಕನಸು ಕಾಣುತ್ತಿರುವ ದೇಶದ ಮಹಾನ್ ಯುವಜನತೆಗಾಗಲೀ ತಮ್ಮ ಇಡೀ ಜೀವನವನ್ನು ಲೋಕ ಜಾಗರಣೆಗಾಗಿ, ದೇಶದ ಗುಲಾಮಗಿರಿಯ ನಿವಾರಣೆಗಾಗಿ, ಸ್ವದೇಶೀ ಚಳುವಳಿಗಾಗಿ ಮುಡಿಪಾಗಿಟ್ಟ ಒಬ್ಬ ಅಪ್ರತಿಮ ದೇಶಭಕ್ತನ ಬಗ್ಗೆ ಯೋಚಿಸಲೂ ಪುರುಸೋತ್ತಿಲ್ಲದಿರುವುದು ಮಾತ್ರ ದುರಾದೃಷ್ಟ.
ಛೇ........ ದೇಶಕ್ಕಿ೦ತ ಸ್ಥಿತಿ ಇಷ್ಟು ಬೇಗ ಬರಬಾರದಿತ್ತು...........

No comments:

Post a Comment