ನಡುಹಗಲಿನಲ್ಲಿಯೇ ಉ೦ಟಾಯ್ತು ಕತ್ತಲು
ಸೂರ್ಯನಿಗೆ ಕತ್ತಲೆಯಿ೦ದಾಯ್ತು ಸೋಲು
ಮೌನದಿ೦ದ ಮಾತುಗಳ ಮೇಲೆತ್ತಿ
ಕಳೆದು ಹೋದ ದಾರಿಗಳ ಹುಡುಕಿ
ಬನ್ನಿ ಮತ್ತೊಮ್ಮೆ ದೀಪ ಹಚ್ಚೋಣ
ಹೊಸ ಸ್ವಾತ೦ತ್ರ್ಯದ ಬೆಳಕು ಬೀರೋಣ
ಮೆಟ್ಟಿಲುಗಳೇ ನಮ್ಮ ಗುರಿಯಾಗಿವೆ
ಲಕ್ಷ್ಯವಿನ್ನೂ ಬಹಳ ದೂರವಿದೆ
ವರ್ತಮಾನದ ಮೋಹಜಾಲದಿ
ಬರುವ ನಾಳೆಗಳ ಮರೆಯದಿರೋಣ
ಬನ್ನಿ ಮತ್ತೊಮ್ಮೆ ದೀಪ ಹಚ್ಚೋಣ
ಹೊಸ ಸ್ವಾತ೦ತ್ರ್ಯದ ಬೆಳಕು ಬೀರೋಣ
ಆಹುತಿ ಬಾಕಿ ಯಜ್ಞ ಅಪೂರ್ಣ
ನಮ್ಮವರದೇ ಇಲ್ಲಿ ನೂರೆ೦ಟು ವಿಘ್ನ
ಅ೦ತಿಮ ಜಯದ ವಜ್ರಾಯುಧಕೆ
ನವ ಧಧೀಚಿಯ ಮೂಳೆಗಳೇ ಬೇಕೇ?
ಬನ್ನಿ ಮತ್ತೊಮ್ಮೆ ದೀಪ ಹಚ್ಚೋಣ
ಹೊಸ ಸ್ವಾತ೦ತ್ರ್ಯದ ಬೆಳಕು ಬೀರೋಣ........
No comments:
Post a Comment