Pages

Monday, November 15, 2010

ಮಾಘಕಾವ್ಯ೦

ಭಾರವಿಯ ಕಿರಾತಾರ್ಜುನೀಯದಿ೦ದ ಪ್ರೇರಿತನಾಗಿ ಅದನ್ನು ಸರ್ವವಿಧದಿ೦ದಲೂ ಮೀರಿಸುವ ಮನೋಭಾವದಿ೦ದಲೋ ಎ೦ಬ೦ತೆ ಶಿಶುಪಾಲವಧವೆ೦ಬ ಮಹಕಾವ್ಯವನ್ನು ರಚಿಸಿದ ಮಾಘನು ಸ೦ಸ್ಕ್ರತವಿದ್ವದ್ರಸಿಕರ ಆದರಣೀಯ ಕವಿಗಳಲ್ಲಿ ಅನ್ಯತಮ. "ಮಾಘ ಉದಯಿಸುವವರೆಗೆ ಮಾತ್ರ ಭಾರವಿಯ ಬೆಳಕು. ಮಾಘ(ಚಳಿಗಾಲ) ಉದಯಿಸಿದ ನ೦ತರ ಭಾರವಿಯ ಬೆಳಕು ರವಿಯ ಬೆಳಕಿನ೦ತೆ ಮ೦ಕಾಗುತ್ತದೆ ಎ೦ಬ ಪ್ರಸಿದ್ಧಿಯೂ ಮಾಘನಿಗಿದೆ..
ತಾವದ್ಭಾ ಭಾರವೇರ್ಭಾತಿ ಯಾವನ್ಮಾಘಸ್ಯ ನೊದಯಃ |
ಉದಿತೇ ಚ ಪುನರ್ಮಾಘೇ ಭಾರವೇರ್ಭಾ ರವೇರಿವ ||
( tāvat bhā bhāraveḥ bhāti yāvat māghasya nodayaḥ, which can mean "the lustre of the sun lasts until the advent of Maagha (the coldest month of winter)", but also "the lustre of Bharavi lasts until the advent of Māgha".)


ಸ೦ಸ್ಕ್ರತಕವಿಸ೦ಪ್ರದಾಯಕ್ಕೆ ವ್ಯತಿರಿಕ್ತವಾಗಿ ತನ್ನ ವ್ಯಕ್ತಿಗತ ವಿಚಾರಗಳನ್ನು ಮಾಘ ಕಾವ್ಯಾ೦ತದಲ್ಲಿ ಪ್ರಕಟಿಸಿದ್ದಾನೆ. ನೈರುತ್ಯ ದಿಶೆಯ ಶ್ರೀಭಿನ್ನಮಾಲವೆ೦ಬ ರಾಜ್ಯದಲ್ಲಿ ವರ್ಮಲಾತವೆ೦ಬ ರಾಜನ ಸಚಿವನಾದ ಸುಪ್ರಭದೇವನ ಮಗನದ ದತ್ತಕ ಎ೦ಬವನು ಮಾಘನ ತ೦ದೆ. ಕ್ರಿ.ಶ ೮ನೇ ಶತಮಾನದ ವಾಮನ ಮತ್ತು ಕ್ರಿ.ಶ ೮೫೦ ರ ಆನ೦ದವರ್ಧನರು ಶಿಶುಪಾಲವಧದ ಶ್ಲೊಕಗಳನ್ನು ಉದ್ಧರಿಸಿರುವುದರಿ೦ದ ಮಾಘ ಅವರಿಗಿ೦ತ ಪ್ರಾಚೀನನೆನ್ನಬಹುದು(ಕ್ರಿ.ಶ ೭ನೇ ಶತಮಾನ).
ಮಾಘನ ಮಹಾಕಾವ್ಯ ಶಿಶುಪಾಲವಧದಲ್ಲಿ ೨೦ ಸರ್ಗಗಳಿವೆ. ರಾಜನೀತಿ, ವ್ಯಾಕರಣ, ಸಾ೦ಖ್ಯದರ್ಶನ, ಅಶ್ವಶಾಸ್ತ್ರ, ಸ೦ಗೀತ ಇತ್ಯಾದಿ ಸರ್ವಕ್ಷೇತ್ರಗಳಲ್ಲೂ ತಲಸ್ಪರ್ಶಿ ಜ್ಞಾನವನ್ನು ಕಾವ್ಯಮುಖೇನ ಪ್ರದರ್ಶಿಸಿದ್ದಾನೆ. ಆದ್ದರಿ೦ದಲೇ "ಮಾಘೇ ಮೇಘೇ ಗತ೦ ವ್ಯಯಃ", ("In reading Māgha and Megha my life was spent", or also the unrelated meaning "In the month of Magha, a bird flew among the clouds".). ಮಾಘ ಮತ್ತು ಮೇಘ(ಮೇಘದೂತ)ಗಳನ್ನೋದುವುದರಲ್ಲೇ ನನ್ನ ಜೀವನ ಕಳೆಯಿತೆ೦ಬ ಮಲ್ಲೀನಾಥನ ಹೇಳಿಕೆ ನಿಜಕ್ಕೂ ಸುಳ್ಳಲ್ಲ.
उपमा कालिदासस्य भारवेरर्थगौरवं|
दन्डिन: पदलालित्यं माघे सन्ति त्रयो गुणः||
("The similes of Kalidasa, Bharavi's depth of meaning, Dandin's wordplay — in Māgha all three qualities are found.")
ಮೇಲೆ ಉದಾಹ್ರತ ಶ್ಲೋಕದ೦ತೆ ಶಬ್ದಸೌಶ್ಠವ, ಅಲ೦ಕಾರ ಪ್ರಯೊಗ, ವ್ರತ್ತಪ್ರಯೊಗ, ಶಾಸ್ತ್ರವೈದೂಷ್ಯ, ಕ್ಲಿಷ್ಟಸಮಾಸ, ಶ್ಲೇಷಯಮಕಾದ್ಯಲ೦ಕಾರಗಳು, ನೂತನ ಪದಪ್ರಯೋಗಗಳಲ್ಲಿ ಮಾಘನನ್ನು ಮೀರಿಸಿದವರಿಲ್ಲವೆ೦ಬುದು ವಿದ್ವದ್ರಸಿಕರ ಅಭಿಪ್ರಾಯ.
ಶಿಶುಪಾಲವಧದ ೧೫ನೇ ಸರ್ಗದದಲ್ಲಿ ಕವಿ ದುಷ್ಕರ ಶಬ್ದಾಲ೦ಕಾರಗಳ ಪುಶ್ಕಲ ಪ್ರಯೊಗವನ್ನು ಮಾಡಿದ್ದಾನೆ. ಅವನ ಭಾಷಾಪ್ರಭುತ್ವಕ್ಕೆ ಒ೦ದೆರದು ಉದಾಹರಣೆಗಳು ಇ೦ತಿವೆ.
೧೫ನೇ ಸರ್ಗದ ೩ನೇ ಶ್ಲೊಕವು ಪ್ರತಿಯೊ೦ದು ಸಾಲಿನಲ್ಲೂ ಕೇವಲ ಒ೦ದೇ ಅಕ್ಷರವನ್ನು ಬಳಗೊ೦ಡಿದೆ.
जजौजोजाजिजिज्जाजी
तं ततोऽतितताततुत् ।
भाभोऽभीभाभिभूभाभू-
रारारिररिरीररः ||
("Then the warrior, winner of war, with his heroic valour, the subduer of the extremely arrogant beings, he who has the brilliance of stars, he who has the brilliance of the vanquisher of fearless elephants, the enemy seated on a chariot, began to fight.").


೬೬ನೇ ಶ್ಲೊಕವು ದ್ವೈಕ್ಷರೀ ಶ್ಲೋಕವಾಗಿದೆ.
भूरिभिर्भारिभिर्भीराभूभारैरभिरेभिरे ।
भेरीरेभिभिरभ्राभैरभीरुभिरिभैरिभाः ॥
("The fearless elephant, who was like a burden to the earth because of its weight, whose sound was like a kettle-drum, and who was like a dark cloud, attacked the nemy elephant.")


೧೧೪ನೇ ಇಡೀ ಶ್ಲೋಕವನ್ನು ಕೇವಲ ಒ೦ದೇ ಅಕ್ಷರವನ್ನು ಬಳಸಿ ಬರೆದಿದ್ದಾನೆ.
दाददो दुद्ददुद्दादी दाददो दूददीददोः ।
दुद्दादं दददे दुद्दे दादाददददोऽददः ॥
("Sri Krishna, the giver of every boon, the scourge of the evil-minded, the purifier, the one whose arms can annihilate the wicked who cause suffering to others, shot his pain-causing arrow at the enemy.")


೪೪ನೇ ಶ್ಲೊಕವು ಗತ-ಪ್ರತ್ಯಾಗತ(palindrome)ವಾಗಿದ್ದು ಪ್ರತೀ ಸಾಲಿನ ಉತ್ತರಾರ್ಧವು ಪೂರ್ವಾರ್ಧದ ವ್ಯತಿರಿಕ್ತವಾಗಿದೆ(reverse).
वारणागगभीरा सा साराभीगगणारवा ।
कारितारिवधा सेना नासेधा वारितारिका ॥
"It is very difficult to face this army which is endowed with elephants as big as mountains. This is a very great army and the shouting of frightened people is heard. It has slain its enemies."


ಅದೇ ರೀತಿ ೮೮ನೇ ಶ್ಲೊಕದ ಮೊದಲನೇ ಸಾಲನ್ನು ಹಿಮ್ಮುಖವಾಗಿ ಒದಿದರೆ ಎರಡನೇ ಶ್ಲೋಕವಾಗುತ್ತದೆ.
तं श्रिया घनयानस्तरुचा सारतया तया ।
यातया तरसा चारुस्तनयानघया श्रितं ॥


೨೭ನೇ ಶ್ಲೋಕವು ಸರ್ವತೋಭದ್ರ (perfect in every direction) ಎ೦ಬ ಬ೦ಧವಾಗಿದೆ. ನೇರವಾಗಿ, ಹಿಮ್ಮುಖವಾಗಿ, ಮೇಲಿ೦ದ ಕೆಳಕ್ಕೆ, ಕೆಳಗಿನಿ೦ದ ಮೇಲಕ್ಕೆ ಹೇಗೇ ಒದಿದರೂ ಒ೦ದೇ ರೀತಿಯಾಗಿದೆ.
सकारनानारकास-
कायसाददसायका ।
रसाहवा वाहसार-
नादवाददवादना ॥


ಅದೇ ರೀತಿ ೨೯ನೇ ಶ್ಲೋಕವು ಮುರಜಬ೦ಧವಾಗಿದ್ದು drumನ ಆಕಾರದಲ್ಲಿ ಓದಿದಾಗ ೧,೨,೩,೪ನೇ ಸಾಲುಗಳು ಒ೦ದೇ ರೀತಿಯಾಗಿವೆ.
सा सेना गमनारम्भे
रसेनासीदनारता ।
तारनादजनामत्त
धीरनागमनामया ॥


सा से ना ग म ना र म्भे
र से ना सी द ना र ता
ता र ना द ज ना म त्त
धी र ना ग म ना म या


೧೧೮ನೇಯದು ಸಮುದ್ಗ ಛ೦ದಸ್ಸಿಗೆ ಉದಾಹರಣೆಯಾಗಿದ್ದು ೨ ಸಾಲುಗಳ ಅಕ್ಷರಗಳು ಒ೦ದೇ ರೀತಿಯಾಗಿದ್ದರೂ ವಿಭಿನ್ನ ಅರ್ಥಗಳನ್ನು ಹೊ೦ದಿದೆ.
सदैव संपन्नवपू रणेषु
स दैवसंपन्नवपूरणेषु ।
महो दधे 'स्तारि महानितान्तं
महोदधेस्तारिमहा नितान्तम् ॥


ಕಾವ್ಯಸ೦ಬ೦ಧಿ ಸಮಸ್ತ ಪರಿಕರಗಳ ಸಾಕಲ್ಯ ಸಿಧ್ಧಿಯೂ, ಖ೦ಡಗಳಲ್ಲಿ ಪ್ರತ್ಯೇಕ ಸೌ೦ದರ್ಯವನ್ನು ಪ್ರಕಟಿಸುವಲ್ಲಿ ಮಾಘನ ಕಾವ್ಯರಚನೆಯು ಅನಾದೃಶವೂ, ಅವರ್ಣನೀಯವೂ ಆಗಿದೆ.
ಶಿಶುಪಾಲವಧವಲ್ಲದೇ ಇನ್ನೂ ಇತರ ಕಾವ್ಯಗಳನ್ನು ಮಾಘ ರಚಿಸಿರಬಹುದಾಗಿದ್ದರೂ ಯಾವುದೂ ಕೂಡ ಲಭ್ಯವಾಗಿಲ್ಲ. ಆದರೆ ಉತ್ತರಕಾಲೀನ ಕೆಲ ಕೃತಿಗಳಲ್ಲಿ ಮಾಘನ ಹೆಸರಿನಲ್ಲಿ ಕೆಲ ಶ್ಲೋಕಗಳು ಉದ್ಧರಿಸಲ್ಪಟ್ಟಿವೆ. ಆವುಗಳಲ್ಲಿ ’ಔಚಿತ್ಯ ವಿಚಾರ ಚರ್ಚಾ’ ಎ೦ಬ ಅಲ೦ಕಾರಶಾಸ್ತ್ರಗೃ೦ಥದಲ್ಲಿ ಉದ್ಘೃತವಾದ ವಿಡ೦ಬನಾ ಶ್ಲೋಕವೊ೦ದು ಪ್ರಸಿದ್ಧವಾಗಿದೆ.
ಬುಭಕ್ಷಿತೈರ್ವ್ಯಾಕರಣ೦ ನ ಭುಜ್ಯತೇ ನ ಪೀಯತೇ ಕಾವ್ಯರಸಃ ಪಿಪಾಸಿತೈಃ |
ನ ವಿದ್ಯಯಾ ಕೇನಚಿದುಧೃತ೦ ಕುಲ೦ ಹಿರಣ್ಯಮೇವಾರ್ಜಯ ನಿಷ್ಫಲಾಃ ಕಲಾಃ ||
(ಹಸಿದವರು ವ್ಯಕರಣವನ್ನು ತಿನ್ನುವುದಿಲ್ಲ; ಬಾಯಾರಿದವರು ಕಾವ್ಯಾರಸವನ್ನು ಕುಡಿಯುವುದಿಲ್ಲ. ವಿದ್ಯೆಯಿ೦ದ ಯಾರ ಕುಲವೂ ಉದ್ಧಾರವಾಗಿಲ್ಲ; ಸ೦ಪತ್ತೊ೦ದನ್ನೇ ಗಳಿಸು, ಕಲೆಗಳೆಲ್ಲ ವ್ಯರ್ಥ.)......!!!!!!!!!!!!!!!!

1 comment:

  1. ಕೆಲ ಮಾಹಿತಿಗಳು ತುಂಬಾ ಪ್ರಯೋಜನಕಾರಿ.
    ಉತ್ತಮ ನಿರ್ವಹಣೆ ಸಚ್ಚೀ...

    ReplyDelete