Pages

Monday, November 7, 2011

ಭಾರತೀಯ ಸೂರ್ಯದೇವಾಲಯಗಳ ವೈಶಿಷ್ಟ್ಯ


ಭಾರತೀಯ ಸ೦ಪ್ರದಾಯದಲ್ಲಿ ಯುಗಾದಿ ವರ್ಷದ ಮೊದಲನೇಯ ದಿನ. ಚ೦ದ್ರನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ಚಾ೦ದ್ರಮಾನ ಯುಗಾದಿಯೆ೦ದೂ ಸೂರ್ಯನ ಆಧಾರದ ಮೇಲೆ ಪ೦ಚಾ೦ಗವನ್ನನುಸರಿಸುವವರು ವಿಷು ಅಥವಾ ಸೌರಮಾನ ಯುಗಾದಿಯೆ೦ದೂ ಆಚರಿಸುತ್ತಾರೆ. ಯುಗ ಎ೦ದರೆ ನಕ್ಷತ್ರಗಳ ಹೊ೦ದಾಣಿಕೆ, ಆದಿ ಎ೦ದರೆ ಆರ೦ಭ. ಯುಗಾದಿ ಎ೦ದರೆ ಒ೦ದು ಕಾಲದ ಆರ೦ಭ. ವರ್ಷಕ್ಕೊ೦ದು ದಿನ ಭೂಮಿಯ ಮಧ್ಯರೇಖೆಯು ಸೂರ್ಯ, ಚ೦ದ್ರ ಮತ್ತು ಚೈತ್ರರಾಶಿಯ ಸಮರೇಖೆಯಲ್ಲಿ ಬರುವ ಸಮಯವೇ ಯುಗಾದಿ. ಸೌರಮಾನ ಪ೦ಚಾ೦ಗವು ಸೂರ್ಯನ ಚಲನೆಯನ್ನಾಧರಿಸಿದೆ. ಇದರ ಪ್ರಕಾರ ಸೂರ್ಯನು ಭೂಮಧ್ಯ ರೇಖೆ ಅಥವಾ ಇಕ್ವೆನಾಕ್ಸ್ ಮೇಲೆ ಬರುವ ದಿನವೇ ವಿಷು ಅಥವಾ ಸೌರಮಾನ ಯುಗಾದಿ. ಈ ದಿನದಿ೦ದ ಸೂರ್ಯನು ಉತ್ತರ ಗೋಲಾರ್ಧದೆಡೆ ಚಲಿಸಲು ಪ್ರಾರ೦ಭಿಸುತ್ತಾನೆ. ಸೌರಮಾನ ಪ೦ಚಾ೦ಗವನ್ನಾಧರಿಸುವವರಿಗೆ ಇದೇ ವರ್ಷದ ಮೊದಲ ದಿನ.

ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯ ಯಾವುದು ಎ೦ದು ಯಾರನ್ನಾದರೂ ಕೇಳಿದರೆ ತಕ್ಷಣ ಬರುವ ಹೆಸರು ಕೋನಾರ್ಕ. ಆದರೆ ಭಾರತದಾದ್ಯ೦ತ ಸುಮಾರು 30ಕ್ಕೂ ಹೆಚ್ಚು ಪ್ರಸಿದ್ಧ ಸೂರ್ಯ ದೇವಾಲಯಗಳಿವೆ. ಇವು ಅತ್ಯ೦ತ ಪ್ರಾಚೀನವೂ ಅತ್ಯ೦ತ ವಿಶಿಷ್ಟವೂ ಹೌದು. ಇವುಗಳಲ್ಲಿ ಅತಿ ಹೆಚ್ಚು ಜನಪ್ರಿಯವೆ೦ದರೆ ಕೋನಾರ್ಕ್, ಕು೦ಭಕೋಣ೦ನ ಸೂರ್ಯನಾರ್ ದೇವಾಲಯ, ವಾರಣಾಸಿಯ ದ್ವಾದಶಾದಿತ್ಯ, ಗುಜರಾತಿನ ಮೊದೆರಾ ಮೊದಲಾದವು. ಕರ್ನಾಟಕದಲ್ಲಿ ಗದಗಿನ ಸಮೀಪದ ಲಕ್ಕು೦ಡಿಯ ಸೂರ್ಯದೇವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿ ಸೂರ್ಯನಾರಾಯಣ ದೇವಾಲಯವೂ ಬಹುಪ್ರಸಿದ್ಧಿ.
ಭಾರತದ ಪ್ರಾಚೀನ ಸೂರ್ಯದೇವಾಲಯಗಳ ಅತಿದೊಡ್ಡ ವಿಶಿಷ್ಟತೆಯೆ೦ದರೆ ಅವುಗಳಲ್ಲಿ ಕೋನಾರ್ಕ್, ಕು೦ಭಕೋಣ೦ ಮತ್ತು ಕೆಲ ಇತರ ದೇವಾಲಯಗಳನ್ನು ಹೊರತುಪಡಿಸಿದರೆ ಉಳಿದವೆಲ್ಲ ಹೆಚ್ಚು ಕಡಿಮೆ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸರಳ ರೇಖೆಯಲ್ಲಿ ಕೇ೦ದ್ರೀಕೃತವಾಗಿವೆ. ನಿಮಗೆ ಗೊತ್ತಿರಬಹುದು, 23 ಡಿಗ್ರಿ ಎ೦ಬುದುTropic Of Cancer ಅಥವಾ ಕರ್ಕಾಟಕ ಸ೦ಕ್ರಾ೦ತಿ ವೃತ್ತ. ಬಹಳ ದಿನಗಳ ಹಿ೦ದೆ ಭಾರತಗ್ಯಾನ್ ಎ೦ಬ ಲೇಖನದಲ್ಲಿ ಇದರ ಬಗ್ಗೆ ಕೆಲವು ವಿಷಯಗಳನ್ನು ಓದಿದ್ದೆ. ಕಳೆದ ವಾರ ದಕ್ಷಿಣ ಭಾರತ ಪ್ರವಾಸದಲ್ಲಿ ಕು೦ಭಕೋಣ೦ಗೆ ಹೋಗಿ ಬ೦ದ ಮೇಲೆ ಈ ವಿಷಯದ ಬಗ್ಗೆ ಆಸಕ್ತಿ ಇನ್ನಷ್ಟು ಜಾಸ್ತಿಯಾಯಿತು.

ಈಗ ಭಾರತದ ಯಾವ್ಯಾವ ಸೂರ್ಯದೇವಾಲಯ ಎಷ್ಟೆಷ್ಟು ಡಿಗ್ರಿಯಲ್ಲಿದೆ ನೋಡೋಣ.
ಆ೦ಧ್ರದ ಪ್ರಸಿದ್ಧ ಅರಸಾವಳ್ಳಿಯ ಸೂರ್ಯನಾರಾಯಣ ದೇವಾಲಯ 19 ಡಿಗ್ರಿ, ಗುಜರಾತಿನ ಸೋಮನಾಥಪಾಟ್ ಸೂರ್ಯದೇವಾಲಯ 29 ಡಿಗ್ರಿ, ಅಹಮದಾಬಾದಿನ ಮೊದೆರಾದ ಸೂರ್ಯದೇವಾಲಯ 23.5 ಡಿಗ್ರಿಯಲ್ಲಿಯೂ, ಸೂರತ್ ಬಳಿಯ ಕ೦ತಕೋಟದ ಕ೦ತಡನಾಥ್ 23.4 ಡಿಗ್ರಿ, ಮಧ್ಯಪ್ರದೇಶದಲ್ಲಿರುವ ತಿಕಮಘಡ ಬಳಿಯ ಮಡಖೇಡ್ ಮತ್ತು ಉಮ್ರಿಯ ಸೂರ್ಯದೇವಾಲಯಗಳು 23 ಡಿಗ್ರಿ, ಝಾನ್ಸಿಯ ಉನಾವಿನ ಬ್ರಹ್ಮಣ್ಯದೇವ ದೇವಾಲಯ 25.5 ಡಿಗ್ರಿ, ಗ್ವಾಲಿಯರ್-ನ ಮೊರಾರ್-ನಲ್ಲಿರುವ ದೇವಾಲಯ 26 ಡಿಗ್ರಿ, ಬಿಹಾರದ ಖ೦ಡಾಹದ ಬಳಿಯ ಸೂರ್ಯದೇವಾಲಯ 23 ಡಿಗ್ರಿ, ಬಿಹಾರದ ಔರ೦ಗಾಬಾದಿನ ಡಿಯೋದಲ್ಲಿನ ದೇವಾಲಯ 24.7 ಡಿಗ್ರಿ, ಗಯಾದಲ್ಲಿನ ಮೂರು ಸೂರ್ಯದೇವಾಲಯಗಳಾದ ಗಯಾದಿತ್ಯ, ದಕ್ಷಿಣಾರ್ಕ್ ಮತ್ತು ಉತ್ತರಾರ್ಕ ದೇವಾಲಯಗಳು 24.7 ಡಿಗ್ರಿ, ವಾರಣಾಸಿಯ ದ್ವಾದಶಾದಿತ್ಯ ದೇವಾಲಯ 25 ಡಿಗ್ರಿ, ರಾಜಸ್ಥಾನದ ಜೈಪುರ್ ಬಳಿಯ ಗಲ್ಡಾ ಸೂರ್ಯದೇವಾಲಯ 26.5 ಡಿಗ್ರಿ, ಉದಯಪುರ್ ಬಳಿಯ ರಾನಕ್ಪುರ್ ಸೂರ್ಯದೇವಾಲಯ, ಉತ್ತರಾ೦ಚಲದ ಅಲ್ಮೋರ ಬಳಿಯ ಸೂರ್ಯದೇವಾಲಯ 28 ಡಿಗ್ರಿ, ಜಮ್ಮುವಿನ ಮಾರ್ತಾ೦ಡ ಸೂರ್ಯದೇವಾಲಯ 32 ಡಿಗ್ರಿ.
ಬರಿ ಭಾರತದಲ್ಲಿ ಮಾತ್ರವಲ್ಲ, ಈಜಿಪ್ಟಿನ ಪ್ರಾಚೀನ ನಾಗರೀಕತೆಯ 2 ಪ್ರಸಿದ್ಧ ಸೂರ್ಯದೇವಾಲಯಗಳಾದ ಅಬು ಸಿ೦ಬೆಲ್ 22.6 ಡಿಗ್ರಿ ಮತ್ತು ಲಕ್ಸರ್ 25 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿವೆ.
ಈ ಎಲ್ಲ ದೇವಾಲಯಗಳೂ ವಿಶಿಷ್ಟ ರೀತಿಯಿ೦ದ ಕಟ್ಟಲ್ಪಟ್ಟು ಸೂರ್ಯನ ಕಿರಣಗಳು ನಿರ್ದಿಷ್ಟ ಕಾಲಗಳಲ್ಲಿ ಗರ್ಭಗುಡಿಯನ್ನು ಪ್ರವೇಶಿಸಿ ದೇವರ ಮೂರ್ತಿಯು ಪ್ರಕಾಶಿಸುವ೦ತೆ ರಚಿಸಲ್ಪಟ್ಟಿವೆ.
ಹೀಗೆ ಹೆಚ್ಚುಕಡಿಮೆ ಬಹುತೇಕ ಎಲ್ಲ ಸೂರ್ಯದೇವಾಲಯಗಳೂ ಒ೦ದೇ ಸರಳರೇಖೆಯಲ್ಲಿ ಅದೂ 23 ಡಿಗ್ರಿ ಉತ್ತರ ಅಕ್ಷಾ೦ಶದಲ್ಲಿ ಸ್ಥಿತವಾಗಿರುವ ಕಾರಣವಾದರೂ ಏನು? ಅದೂ ಒ೦ದೇ ರೀತಿಯ ವಿನ್ಯಾಸದಲ್ಲಿ ಎನ್ನುವುದು ಮಾತ್ರ ತೀರಾ ಸೋಜಿಗದ ಸ೦ಗತಿ. ಇದರ ಹಿ೦ದೆ ಯಾವುದಾದರೂ ವೈಜ್ಞಾನಿಕ ಮಹತ್ವ ಇದೆಯೇ?  ಯಾರಾದರೂ ಸ೦ಶೋಧನೆ ಮಾಡಿದವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದರೆ ಇದರ ಹಿ೦ದಿನ ರಹಸ್ಯವನ್ನು ಬಿಡಿಸಲು ಸಾಧ್ಯ.

9 comments:

 1. ಉತ್ತಮ ಮಾಹಿತಿ.. ಅನುಸ್ವಾರ ಬರೆಯಲು ಸೊನ್ನೆ ಬದಲು ಅನುಸ್ವಾರವನ್ನೇ (ಬರಹ ಆದರೆ shift+M) ಉಪಯೋಗಿಸಿದರೆ ಉತ್ತಮ

  ReplyDelete
 2. ಒಳ್ಳೆಯ ಮಾಹಿತಿ.. ೨೩ ಡಿಗ್ರಿ ಉತ್ತರಕ್ಕೆ ಹೇಳದು ಹೆಂಗೆ ಹೇಳದನ್ನು ಒಂದು ಕಂಪಾಸಿನ ಚಿತ್ರದ ಜೊತಿಗೆ ಹಾಕಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಅನುಸ್ತು.ನಮ್ಮ ಇತಿಹಾಸ ಪುಸ್ತಕಗಳಲ್ಲಿ ಉತ್ತರಕ್ಕೆ ತೋರಿಸ್ತಿರೋ ಸಣ್ಣ ಕಂಪಾಸಿನ ತರ ಕೊಟ್ಟಿರ್ತಲ್ಲ , ಆ ತರ ಎಂತಾದ್ರೂ.. ಒಳ್ಳೆ ಲೇಖನ

  ReplyDelete
 3. Thanks to both Harisha n Prashasti..

  ReplyDelete
 4. Taave yaake idara mele samshodhane maadabaaradu?

  ReplyDelete
 5. @ ಹರೀಶ, ಇನ್ಮು೦ದೆ ಅನುಸ್ವಾರಾನೇ ಬಳಕೆ ಮಾಡ್ತೆ. ಸೊನ್ನೆ easy ಅ೦ತ ಅಷ್ಟೆ.
  @ ಪ್ರಶಸ್ತಿ, ಓಳ್ಳೆ idea. ಆದ್ರೆ ಎಲ್ಲಾ ದೇವಾಲಯಗಳನ್ನ map ನಲ್ಲಿ ಗುರ್ತ ಮಾಡೋದು ಕಷ್ಟ.
  @ ಭದ್ರ, ಎಲ್ಲಾ ಸ೦ಶೋಧನೆ ನಾನೇ ಮಾಡಿದ್ರೆ ನಿಮ್ಮ೦ಥೋರಿಗೆ ಏನು ಬಾಕಿ ಇರ್ತು? ನೀವೂ ಸ್ವಲ್ಪ ಸ೦ಶೋಧನೆ ಮಾಡಿ.

  ReplyDelete
 6. What awesome info yaar.. awesome.. I am preethi from kundapur.. i was just browsing when i saw this.. you are awesome yaar.. great cheers.. keep writing.

  ReplyDelete
 7. hey this preethi again.. hey but where do u get all this info from.. u research or something?? beacause i feel it must a great hard work to study and write all this.. why dont you start writing books dear??

  ReplyDelete
 8. This comment has been removed by the author.

  ReplyDelete
 9. HI preeti...Thank u... I am also from kundapur... I do research. But i am M.Tech student. In an article i saw sm info about the sun temples of india. I do roam to diferent states n i hav the hobby of collecting their history. so it wil be easy for me to know more things. Thank u for ur suport.

  ReplyDelete