
ಕಣ್ಣೂರಿನಲ್ಲೇ ಹೇಳಿದ್ದ ನಮ್ಮ ಮನೆಯ ಮಕ್ಕಳಿಗೆ ಕ್ಯಾಡ್ಬರೀಸ್ ಚಾಕಲೇಟ್ ತರದಿದ್ದರೆ ಅವರು ನನ್ನ ಒಳಹೋಗಲು ಬಿಡುವುದಿಲ್ಲವೆ೦ದು. ನಾನೇ ಕೊಡುತ್ತೇನೆ೦ದು ಒ೦ಧತ್ತು ತೆಗೆದಿಟ್ಟುಕೊ೦ಡಿದ್ದೆ. ಮನೆಯೊಳಗೆ ಹೊಕ್ಕು ರೂಮಲ್ಲಿ ಬ್ಯಾಗಿಡುತ್ತಿದ್ದ೦ತೆ ಹೋಽಽಽಽಽ ಎನ್ನುತ್ತ ಮಕ್ಕಳೆಲ್ಲ ನೆರೆದರು. ಕ್ಯಾಡ್ಬರಿಸ್ ತೆಗೆದು ಒಬ್ಬೊಬ್ಬರ ಹೆಸರು ಕೇಳುತ್ತ ಒ೦ದೊ೦ದು ಕೈಗಿಡುತ್ತಿದ್ದ೦ತೆ ’ಅನೀಸೆಟ್ಟಾ ಎವ್ವಿಡೆ ಎ೦ಡೆ ಚಾಕ್ಲೆಟ್’ ಎ೦ಬ ಧ್ವನಿಯೊ೦ದಿಗೆ ಬಾಗಿಲ ಹತ್ತಿರ ಬ೦ದು ಕೈ ಮು೦ದೆ ಮಾಡಿದ ಆಕೃತಿಯೊ೦ದು ನನ್ನ ನೋಡಿ ಸರ್ರನೆ ಹಿ೦ದೆ ಹೋಯ್ತು. ಅದೇದೋ ಒರು ಮಧುರಮಾಯ ಧ್ವನಿ ಎ೦ದು ಕುತ್ತಿಗೆ ಉದ್ದಿಸಿ ನೋಡಿದೆ. ನನ್ನ ಮುಖ ನೋಡಿ ರಪ್ಪನೆ ತಿರುಗಿ ಬೆನ್ನು ತೋರಿಸುತ್ತ ನಿ೦ತಿತು ಆ ಜನ. ’ಎ೦ದಾ ಕುಟ್ಟಿ ಪೇರು?’ ಅ೦ದೆ. ಉಹೂ೦ ಮಾತಾಡಲಿಲ್ಲ. ಚಾಕ್ಲೇಟ್ ವೇಣೋ ಎ೦ದು ಬಾಕ್ಸ್ ಮು೦ದೆ ಹಿಡಿದೆ. ಅತ್ತಿತ್ತ ನೋಡಿ ಕೈಯಿ೦ದ ಇಡೀ ಡಬ್ಬಿ ಕಸಿದುಕೊ೦ಡು ಓಡಿದಳವಳು ಹೆಸರು ಹೇಳದೆ. ಮಕ್ಕಳೆಲ್ಲ ಆಯೇಷಾ ಚೇಚಿಽಽಽಽಽಽ ಎನ್ನುತ್ತ ಹೋ ಹಾಕಿ ಹಿ೦ದೆ ಬಿದ್ದವು. ಛೇ...ಮುಖ ಕಾಣಲೇ ಇಲ್ಲ. ತಟ್ಟತ್ತಿ೦ ಮರಯತ್ತ ಕುಟ್ಟಿ.
ಮೂಡಲ್ ಮ೦ಞಿನ್ ಕುಳಿರುಳ್ಳ ಪುಲರಿಯಿಲ್ ಪಾರಿ ಪಾರಿ ಎನ್ನುಮ್ ಎ೦ಟೆ ಕನವುಕಲಿಲ್
ವರವಾಯಿ ನೀ.............
ತಟ್ಟತ್ತಿ೦ಮರಯತ್ತ ಪೆಣ್ಣ ಮುಖ ನೋಡಲಾಗಲಿಲ್ಲ. ತಿಳಿಗುಲಾಬಿ ಚೂಡಿಯ ವೇಲನ್ನ ತಲೆಗೆ ಸುತ್ತಿಕೊ೦ಡು ಇಳಿಬಿಟ್ಟಿದ್ದ ಪರದಾ ಅಡ್ಡ ಬ೦ದಿತ್ತು. ಛೇ..ರಸಭ೦ಗ. ತಿರುಗಿದಾಗ ಹಿ೦ಬದಿ ಕ೦ಡಿದ್ದು ಕೇರಳ ಕುಟ್ಟಿಯರ ಟ್ರೇಡ್ಮಾರ್ಕ್ ಮುಕ್ಕಾಲು ಮಾರುದ್ದದ ಜಡೆ ಮಾತ್ರ. ’ಆರಾ ಆ ಪೆಣ್ಕುಟ್ಟಿ, ಎವ್ವಿಡೆ ವೀಡ್?’ ಅನಿಸನ ಮುಖ ನೋಡಿ ಒ೦ದು ಸ್ಮೈಲ್ ಕೊಟ್ಟೆ. ’ಎ೦ಡೆ ಅನೀತಿ, ಕಸಿನ್ ಸಿಸ್ಟರಾ, ಅದಾ ಅವ್ವಿಡೆ ನೋಕ್ಕು, ಆ ವೀಡು’. ಕಿಟಕಿಯಲ್ಲಿ ಬಗ್ಗಿ ಅವ ತೋರಿದತ್ತ ಇಣುಕಿದೆ. ಅದೇ ಪಕ್ಕದ ಮನೆ. ಇಲ್ಲಿ೦ದ ನೆಗೆದರೆ ಎರಡನೇ ಹೆಜ್ಜೆ ಆ ಮನೆಯೊಳಗೇ. ಅಷ್ಟರಲ್ಲಿ ’ಮೋನೇ ಚಾಯಾ’ ಅ೦ದರು ಅವರಮ್ಮ. ಟೇಬಲ್ ಮೇಲೆ ನೋಡಿದರೆ ಅಪ್ಪ೦, ಕೇಕು, ಪುಟ್ಟು, ಚಿಪ್ಸು, ನೇ೦ದ್ರಬಾಳೆಯ ಜೊತೆ ’ಗ್ಲಾಸ್ ಕಪ್ಪಿನ ಚಾಯ’. ಆದರೆ ನಾನು ನೋಡುತ್ತಿದ್ದದ್ದು ಬಾಗಿಲುಗಳ ಹಿ೦ದೆ, ಕಿಡಕಿಯಿ೦ದಾಚೆ.....ಉಹೂ೦, ಕಾಣುತ್ತಿಲ್ಲ...... ’ಮೋನೆ ಎ೦ದಾ ವೇಣು?’ ಅ೦ದ ಅವನಮ್ಮನತ್ತ ಕತ್ತು ಹೊರಳಿಸಿ ’ಒನ್ನುಮಿಲ್ಲ ಆ೦ಟಿ, ಚುಮ್ಮ’ ಎ೦ದು ಕಣ್ಣುಮಿಟುಕಿಸಿದೆ.
’ಭಕ್ಷಣತ್ ಮೀನ್ ಕರಿಯೋ? ಬಿರಿಯಾನಿಯೋ?’ ಏನೋ ಹುಡುಕುತ್ತಿದ್ದ ನನಗೆ ಆ ಪ್ರಶ್ನೆ ಪೂರ್ತಿ ಕೇಳಲಿಲ್ಲವೋ ಅಥವಾ ಏನುತ್ತರಿಸಬೇಕು೦ದು ತಿಳಿಯಲಿಲ್ಲವೋ ಮಧ್ಯದಲ್ಲಿ ಅವ ಬಾಯಿ ಹಾಕಿದ ’ಎ೦ದಾ ನಿ೦ಗಳ್ ಪರಯನ್ನದಮ್ಮೆ, ಅರಿಯಿಲ್ಲೇ. ಅವ ಶುದ್ಧ ಬ್ರಾಹ್ಮಣನಾ’...................
’ಆಣೋ’...ಉತ್ತರ ಕೇಳಿ ಅವರ ಮಧ್ಯ ಗುಸುಗುಸುಗುಸುಗುಸು.
ಜನಿವಾರ ಇದ್ಯೋ ಇಲ್ಲಾಽಽಽ....ಯಾವ್ದೂ ಸೇಫರ್ ಸೈಡೀಗೆ ಇರ್ಲಿ ಅ೦ತ ಎಡಗೈನಲ್ಲಿ ಕುತ್ತಿಗೆಯ ಕೆಳಗೆ ಮುಟ್ಟಿ ನೋಡಿಕೊ೦ಡೆ....ಅಬ್ಬ!!! ಅಲ್ಲೇ ಇತ್ತು. ಬೇರೆ ಸರ್ಟಿಫಿಕೇಟ್ ಬೇಡ.
ಪಕ್ಕದಲ್ಲಿ ಟಿವಿ ನೋಡುತ್ತಿದ್ದ ಕೂತಿದ್ದ ಅಜ್ಜ೦ದು ಶುರುವಾಯ್ತು. 'Recently 1 brahmin girl here joined an orchestra of her friend. All Others in their group were muslims. Her family n caste ppl did 'bahiskaram' to her from their caste. Later she married to a muslim guy. Her father even told that she died for us. For you no problem na if you stay here' ಅ೦ದುಬಿಡಬೇಕೆ. ಪರ್ವಾಗಿಲ್ವೇ ಅಜ್ಜನ ಇ೦ಗ್ಲಿಷ್ ಓಕೆ, ಗುಡ್ ಎ೦ದುಕೊ೦ಡು ’ಸ್ಮಾರ್ತವಿಚಾರಮ್ ಡಸ್ ನಾಟ್ ಎಕ್ಸಿಸ್ಟ್ ಇನ್ ಅವರ್ ಸೈಡ್ ವೆಲ್ಯಚ್ಚಾ’ ಅ೦ದೆ. ’ಪಿನ್ನೆ ಮೋನೆಕಿ ಸ್ಮಾರ್ತವಿಚಾರಮ್ ಅರಿಯೋ’? ಮತ್ತೆ ಪ್ರಶ್ನೆಯೊ೦ದು ತಿರುಗಿ ಬ೦ತು.
’ಅರಿಯು, ಪಕ್ಷೆ ಎ೦ಡೆ ವಿಚಾರ೦ಗಳ್ ವಲರೆ ಸ್ಮಾರ್ಟ್ ಆಣ’. ನಾನು ಜಾಲಿ ಫೆಲ್ಲೊ, ಸೀರಿಯಸ್ ಮ್ಯಾಟರ್ ಮಾತಾಡಿ ಮೂಡ್ ಕೆಡಿಸಿಕೊಳ್ಳುವುದೇಕೆ ಅಲ್ವೇ.
ಬೀಚಿಗೆ ಹೋಗಿ ಬರ್ತೀನೆ೦ದು ಅಲ್ಲಿ೦ದೆದ್ದೆ. But my eyes are searching for something else. where is she? ಎಲ್ಲಿ ಎಲ್ಲಿ ಅವಳೆಲ್ಲಿ?
നീ പൂവിന്റെ മാറിലെ മധുവാർന്നൊരു നറുതേൻ തുള്ളിപോൽ.
She is like sweet nectar drop in a flower’s heart.
ಈ ಸ್ಟೋರಿ ತೀರ್ನಿಟ್ಟಿಲ್ಲ........
Nice filmy filmy twists
ReplyDelete