![]() |
ಅಶೋಕನ ಸಾ೦ದರ್ಭಿಕ ಚಿತ್ರ(ಕೃಪೆ: ಗೂಗಲ್) |
ಈಗಿನ ವಿಷಯವೆ೦ದರೆ, ಅಶೋಕನಿದ್ದುದೇ ಹೌದೆಂದಿಟ್ಟುಕೊಳ್ಳೋಣ. ಹಾಗಾದರೆ ಆತ ಬೌದ್ಧನಾಗಿದ್ದನೇ ಅಥವಾ ಜೈನನಾಗಿದ್ದನೇ ಎಂದು. ಅಶೋಕನು ಜೈನನೇ ಆಗಿರಬಹುದೆಂಬ ಊಹೆಯ ಮೊದಲ ಕಾರಣವೇ ಆತನ ಅಜ್ಜನೂ, ಮೌರ್ಯರ ಮೊದಲ ಅರಸನೂ ಆಗಿದ್ದ ಚಂದ್ರಗುಪ್ತಮೌರ್ಯನು ರಾಜ್ಯವನ್ನು ತೊರೆದು ಜೈನಸನ್ಯಾಸಿಯಾಗಿದ್ದು, ಈತನ ಮಗ ಬಿಂದುಸಾರನೂ ಜೈನಮತವನ್ನು ಸ್ವೀಕರಿಸಿದ್ದ. ಸಹಜವಾಗಿಯೇ ಜೈನಮತದ ನಂಬಿಕೆಗಳಲ್ಲೇ ಅಶೋಕ ಬೆಳೆದ. ಅವನದ್ದೆನ್ನುವ ಶಾಸನಗಳಲ್ಲಿರುವಂತೆ ಅವನಿಗೆ ಸಸ್ಯಾಹಾರದ ಬಗ್ಗೆ ಒಲವಿತ್ತು, ಆತ ಸ್ವತಃ ಸಸ್ಯಾಹಾರಿಯಾಗಿದ್ದ, ತನ್ನ ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಷೇಧಿಸಿದ್ದನಂತೆ. ಇವೆರಡೂ ಅಪ್ಪಟ ಜೈನ ತತ್ತ್ವಗಳೇ. ಜೈನರಷ್ಟು ಪ್ರಾಣಿಪ್ರೀತಿಯನ್ನು ಬೇರಾವ ಮತದಲ್ಲೂ ಕಾಣಲು ಸಾಧ್ಯವಿಲ್ಲ. ಖರೋಷ್ತಿ ಲಿಪಿಯಲ್ಲಿ, ಗ್ರೀಕ್ ಮತ್ತು ಅರಾಮೈಕ್ ಭಾಷೆಯಲ್ಲಿರುವ ಕ೦ದಹಾರ್ ಶಾಸನ ಈತ ಮೀನುಗಾರಿಕೆಯನ್ನೂ, ಬೇಟೆಯನ್ನೂ ನಿಷೇಧಿಸಿದ್ದನೆನ್ನುತ್ತದೆ. ಇನ್ನು ಬೌದ್ಧಮತಕ್ಕೂ ಸಸ್ಯಾಹಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಮಹಾಪರಿನಿಬ್ಬಾಣ ಸುತ್ತ, ಮಜ್ಜಿಮ ನಿಕಾಯಗಳೇ ಇತ್ಯಾದಿಗಳಲ್ಲಿ ಉಲ್ಲೇಖಿಸಿದಂತೆ ಸ್ವತಃ ಬುದ್ಧನ ಮರಣ ಸಂಬಂಧಿಸಿದ್ದೇ ಕೊಳೆತ ಹಂದಿಮಾಂಸವನ್ನು ತಿಂದುಂಟಾದ ಅತಿಸಾರದಿಂದ. ಅಶೋಕನ ಹಿರಿಯ ಪತ್ನಿ ಬೌದ್ಧಮತೀಯಳಾದ ಶಾಕ್ಯಕುಮಾರಿ. ಈಕೆಯ ಜೋಡಿ ಮಕ್ಕಳು ಮಹೇಂದ್ರ ಮತ್ತು ಸಂಘಮಿತ್ರಾ. ಮಾತ್ರವಲ್ಲ ಈಕೆಗಿನ್ನೂ ಅನೇಕ ಮಕ್ಕಳಿದ್ದರು. ಅಶೋಕನ ಕಿರಿಯ
![]() |
ಅವಲೋಕಿತೇಶ್ವರ |
ಅಶೋಕನ ರಾಜ್ಯದಲ್ಲಿ ವೈದಿಕ, ಬೌದ್ಧ, ಜೈನ, ನಾಸ್ತಿಕ ಅಜೀವಿಕ ಮತಗಳು ಸಮಾನ ಪ್ರಾಮುಖ್ಯತೆಯನ್ನು ಪಡೆದಿದ್ದವು. ಎಲ್ಲ ಮತಗಳಿಗೂ, ಅವುಗಳ ಪ್ರಚಾರಕ್ಕೂ ಅಶೋಕ ಮಹತ್ವವನ್ನು ನೀಡಿದ್ದ. ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ಮತಪಂಡಿತರುಗಳನ್ನೂ, ಮಿಶನರಿಗಳನ್ನೂ ಈತ ವಿದೇಶಗಳಿಗೆ ಕಳುಹಿಸಿದ್ದ. ಬೇರೆ ದೇಶಗಳಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಜನಸೇವೆ ಮಾಡಿ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವ ಅಶೋಕನ ನೀತಿಯನ್ನೇ ಈಗಿನ ಕಾಲದ ಹೆಚ್ಚಿನ ಮಿಶನರಿಗಳೆಲ್ಲ ಪಾಲಿಸುತ್ತಿರುವುದು. ಸರಿಸುಮಾರು ಕ್ರಿ.ಪೂ ಮೂರನೇ ಶತಮಾನದ ಕಾಲದಲ್ಲೇ ರೋಮನ್, ಪರ್ಶಿಯನ್ ಸಾಮ್ರಾಜ್ಯಗಳಲ್ಲಿ ಋಗ್ವೇದಕಾಲದ ದೇವತೆಯಾಗಿದ್ದ ಮಿತ್ರನನ್ನು ಪೂಜಿಸುವ ರೋಮನ್ ಮಿತ್ರಾಯಿಸಮ್ ಮತ್ತು ಪರ್ಶಿಯನ್ ಮಿತ್ರಾಯಿಸಮ್ ಎಂಬ ಮತಗಳು ಪ್ರವರ್ಧಮಾನಕ್ಕೆ ಬ೦ದವು. ಭಾರತದಿಂದ ರೋಮ್ ಸಾಮ್ರಾಜ್ಯಕ್ಕೆ ಹಬ್ಬಿದ್ದ ಮಿತ್ರಾಯಿಸಂ ಮುಂದೆ ಕ್ರೈಸ್ತ ಮತದ ಹುಟ್ಟಿಗೆ ಕಾರಣವಾಯ್ತೆಂಬ ವಾದಗಳೂ ಇವೆ. ಅಶೋಕನದ್ದೆನ್ನಲಾಗುವ ಶಾಸನಗಳಲ್ಲಿ ಐದು ಯವನ(ರೋಮನ್) ರಾಜರುಗಳ ಹೆಸರುಗಳಿವೆ. ಹಾಗೆಂದು ಅವನ ಕಾಲದ ಯಾವ ಗ್ರೀಕ್ ದಾಖಲೆಗಳಲ್ಲೂ ಅಶೋಕನ ಹೆಸರೂ ಇಲ್ಲ, ಆತನ ಬೌದ್ಧಮತದ ಬಗ್ಗೆಯೂ ಇಲ್ಲದಿರುವುದೇಕೆ? ಆದರೂ ಅವನ ಕಾಲದಲ್ಲಿ ಬೌದ್ಧಮತವು ಭಾರತದಲ್ಲಿ ವ್ಯಾಪಕವಾಗಿಯೇ ಬೆಳೆಯುತ್ತಿತ್ತೆಂದಿಟ್ಟುಕೊಳ್ಳೋಣ. ಅಶೋಕನೂ ಅದಕ್ಕೆ ಅವಕಾಶವನ್ನೂ ಆದ್ಯತೆಯನ್ನೂ ನೀಡಿದ್ದ.
![]() |
ಬೌದ್ಧಿಸಂನಲ್ಲಿ ಬ್ರಹ್ಮ ಮತ್ತು ಶಿವ |
ಇನ್ನು ಕಳಿ೦ಗ ಯುದ್ಧದ ವಾದವ೦ತೂ ವಿಚಿತ್ರ. ಕಳಿಂಗವು ಮೊದಲು ನಂದರ ವಶದಲ್ಲಿದ್ದು ಚಂದ್ರಗುಪ್ತನ ಕಾಲದಲ್ಲಿ ಸ್ವತಂತ್ರವಾಗಿತ್ತು. ಕಳಿಂಗ, ದಕ್ಷಿಣ ಭಾರತದ ತುದಿಯನ್ನು ಹೊರತುಪಡಿಸಿ ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನಗಳನ್ನೂ ಒಳಗೊಂಡಿದ್ದ ಭಾರತದ ಬಹುಭಾಗ ಮೌರ್ಯಸಾಮ್ರಾಜ್ಯದ ತೆಕ್ಕೆಯಲ್ಲೇ ಇತ್ತೆನ್ನಲಾಗುತ್ತದೆ. ಚಕ್ರವರ್ತಿಯಾದವನೊಬ್ಬನ ಪಾಲಿಗೆ ಯುದ್ಧ, ಸಾವು, ನೋವುಗಳು, ಆಸ್ತಿ-ಪಾಸ್ತಿನಾಶಗಳೆಲ್ಲ ಸಾಮಾನ್ಯ. ಅದು ಯಾವುದೇ ಯುದ್ಧದಲ್ಲಾಗಿರಬಹುದು. ಸ್ವಂತ
![]() |
ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯ |
ಅಶೋಕನ ಜೀವನದ ಬಗ್ಗೆ ಮಾಹಿತಿ ನೀಡುವ ಪ್ರಮುಖ ಗ್ರಂಥಗಳೆಂದರೆ ಮಥುರಾದ ಬೌದ್ಧಸನ್ಯಾಸಿಯೊಬ್ಬ ಕ್ರಿ.ಶ. 1ನೇ ಶತಮಾನದಲ್ಲಿ ಬರೆದಿದ್ದ ಅಶೋಕವದನ ಮತ್ತು ಕ್ರಿ.ಶ 5ನೇ ಶತಮಾನದಲ್ಲಿ ರಚಿತಗೊಂಡ ಪಾಲಿ ಭಾಷೆಯಲ್ಲಿರುವ ಸಿಂಹಳದ ಎರಡು ಕೃತಿಗಳಾದ ದೀಪವಂಶ ಹಾಗೂ ಮಹಾವಂಶಗಳು ಮಾತ್ರ. ಇವೆರಡೂ ಅಶೋಕನಿಗಿಂತ ಎಷ್ಟೋ ಕಾಲದ ನಂತರ ರಚನೆಗೊಂಡವು. ಬಿಟ್ಟರೆ ಅಶೋಕನದೆಂದು ಹೇಳಲಾಗುವ 14 ಮುಖ್ಯ ಶಾಸನಗಳು. ತಮಾಶೆಯೆಂದರೆ ಇವಾವುದರಲ್ಲೂ ಅಶೋಕನ ಕಳಿಂಗ ಯುದ್ಧದ ಬಗ್ಗೆ ಹಾಗೂ ಆತನ ಮಗನಾದ ಮಹೇಂದ್ರನ ಒ೦ದೇ ಒಂದು ಸಾಲು ಕೂಡ ಇಲ್ಲ. ಅದೂ ಅಲ್ಲದೇ ಅಶೋಕವದನದ ಪ್ರಕಾರ ಆತ ಪೌಂಡ್ರದೇಶದ ಹದಿನೆಂಟು ಸಾವಿರ ನಾಸ್ತಿಕವಾದಿ ಅಜೀವಿಕ ಪರಂಪರೆಯವರನ್ನು ಕೊಲ್ಲಿಸಿ, ಇನ್ನುಳಿದವರ ತಲೆಕಡಿದು ತಂದರೆ ತಲೆಗೆ ತಲಾ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಶಾಸನವನ್ನೂ ಹೊರಡಿಸಿದನಂತೆ. ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದ ಇಂಥ ಕ್ರೂರಿಯೊಬ್ಬನಿಗೆ ಪುಟ್ಟ ಕಳಿಂಗ ರಾಜ್ಯದ ವಿರುದ್ಧ ನಡೆದ ಯುದ್ಧದ ಸಾವು-ನೋವು ಏನೇನೂ ಆಗಿರಲಿಲ್ಲ. ಹಾಗೊಂದುವೇಳೆ ಯುದ್ಧದ ನಾಶದಿಂದ ಮನನೊಂದು ಅಹಿಂಸೆಯ ಹಾದಿ ಹಿಡಿಯಬೇಕೆಂದರೆ ಆತನ ಮೊದಲ ಆಯ್ಕೆ ಜೈನ ಮತವಾಗುತ್ತಿತ್ತೇ ಹೊರತೂ ಬೌದ್ಧಮತವಲ್ಲ. ಇನ್ನು ಪ್ರಾಣಿಬಲಿಯನ್ನು ನಿಷೇಧಿಸಿದ್ದನ್ನೇ ಮುಂದಿಟ್ಟುಕೊಂಡು ಆತ ಯಜ್ಞಯಾಗಾದಿಗಳ ವಿರೋಧಿಯಾದ ಬೌದ್ಧಮತಾನುಯಾಯಿಯೆಂದು ಹೇಳಲಾಗದು, ಈತನ 13ನೇ ಶಿಲಾಲೇಖ ನಿಜವಾಗಿಯೂ ಈತನದ್ದೇ? ಈತನದ್ದಾದರೆ ಅದನ್ನು ಕೆತ್ತಿಸಿದ್ದು ಪಟ್ಟಕ್ಕೆ ಬಂದ 14ನೇ ವರ್ಷದಲ್ಲೋ? ಅಥವಾ 28ನೇ ವರ್ಷದಲ್ಲೋ? ಅಥವಾ ಅದಕ್ಕೂ ನಂತರವೇ? ಎಂಬ ಚರ್ಚೆಯೇ ಇನ್ನೂ ನಿಂತಿಲ್ಲ. ಆದರೂ ಇದರಲ್ಲಿ ಕಾಣಬರುವ ’ಧರ್ಮ’ ಮತ್ತು ’ಉಪಾಸಕ’ ಶಬ್ದಗಳನ್ನು ಕೇವಲ ಬೌದ್ಧ ತತ್ತ್ವಶಾಸ್ತ್ರದೊಡನೆ ಸಮೀಕರಿಸುವುದೆಲ್ಲ ’ಎಡ’ದವರಿಗೆ ಮಾತ್ರ ಸಾಧ್ಯವೇನೋ. ಧರ್ಮವೆಂಬ ಶಬ್ದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಬಹಳಷ್ಟು ಬಾರಿ ಬಂದಿದೆ. ಹಾಗೆಂದಮಾತ್ರಕ್ಕೆ ಅವನನ್ನೂ ಬೌದ್ಧನೆನ್ನಲಾದೀತೇ? ಇನ್ನು ’ಧರ್ಮಅಶೋಕ’ ಅಥವಾ ’ಧರ್ಮಅಶೋಕ ಬಿಂದುಸಾರ ಮೌರ್ಯ’ನೆಂದು ಅಶೋಕನು ತನ್ನನ್ನು ಕರೆದುಕೊಂಡಿದ್ದು ತನ್ನ ಹೆಸರನ್ನು ತನ್ನ ತಾಯಿಯಾದ ’ಮಹಾರಾಣಿ ಧರ್ಮಾ’ ಅಥವಾ ’ಶುಭದ್ರಾಂಗಿ’ಯೊಡನೆ ಸಮೀಕರಿಸಿಕೊಂಡಿದ್ದಷ್ಟೆ. ಬಿಂದುಸಾರನಿಗಿದ್ದ ಹಲವಾರು ಪತ್ನಿಯರ ನಡುವೆ ತನ್ನ ಮಾತೃಪರಂಪರೆಯನ್ನು ಗುರುತಿಸಲು ಹೀಗೆ ಮಾಡಿರಬಹುದು. ಆತನ ಹೆಚ್ಚಿನ ಶಾಸನಗಳ ಭಾಷೆ ’ಪ್ರಾಕೃತ’ ಮತ್ತು ಅದರ ಉಪಭಾಷೆಯಾದ ’ಮಾಗಧಿ’ಯೇ ಹೊರತೂ ಬೌದ್ಧರು ಬಳಸುತ್ತಿದ್ದ ’ಪಾಲಿ’ ಅಲ್ಲ. ಹಾಗೆ ನೋಡಿದರೆ ಅಶೋಕನದ್ದೆಂದು ಹೇಳಲಾಗುವ ಯಾವ ಶಾಸನಗಳಲ್ಲೂ ಅವನ ಹೆಸರಿನ ಉಲ್ಲೇಖವಿಲ್ಲ. ಅಲ್ಲಿ ಬಳಕೆಯಲ್ಲಿರುವುದು ’ದೇವಾನಂಪಿಯ’ ಮತ್ತು ’ಪಿಯದಸಿ’ ಎಂಬ ಹೆಸರುಗಳು. ಈ ಪಿಯದಸಿಯೇ ಅಶೋಕನೆನ್ನಲು ಇರುವ ಏಕೈಕ ಆಧಾರ ಸಿಂಹಳದ ದೀಪವಂಶ. ಬಿಟ್ಟರೆ 1915ರಲ್ಲಿ ಸಿಕ್ಕ ರಾಯಚೂರಿನ ಮಸ್ಕಿಯ ಶಿಲಾಲೇಖವೊಂದರಲ್ಲೇ ಅಶೋಕನ ಹೆಸರಿನ ಉಲ್ಲೇಖವಿರುವುದು. ಸಾರಾನಾಥದ ಅಶೋಕ ಸ್ತಂಭದಿಂದ(Lion Capital of Asoka) ನಾಲ್ಕು ಸಿಂಹಗಳ ಚಿಹ್ನೆಯನ್ನು ಭಾರತದ ಅಧಿಕೃತ ರಾಜಮುದ್ರೆಯನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೂಧರ್ಮದಲ್ಲಿ ಸಿಂಹವನ್ನು ರಾಜತ್ವ ಮತ್ತು ಶೌರ್ಯದ ಪ್ರತೀಕವಾಗಿ ಗಣಿಸಲಾಗಿದೆ. ಜೈನ ತತ್ತ್ವಶಾಸ್ತ್ರದಂತೆ ಸಿಂಹವು ಅವರ ೨೪ನೇ
![]() |
ಸಾರಾನಾಥ ಸ್ತೂಪ |
ಅಸಲಿಗೆ ಸಾಮ್ರಾಟ ಅಶೋಕನೆಂಬ ಹೆಸರಿನ ರಾಜನೊಬ್ಬನಿದ್ದನೆಂಬುದರ ಬಗ್ಗೆಯೇ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಆ ಹೆಸರಿನ ಒಬ್ಬನಿದ್ದರೂ ಆತ ಜನಪದದ ಮಾನಸದಿಂದ ಮರೆತು ಹೇಳಹೆಸರಿಲ್ಲದೇ ಮೂಲೆಗುಂಪಾಗಿ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ. 1837ರಲ್ಲಿ ಬ್ರಿಟಿಷ್ ಉತ್ಖನನಶಾಸ್ತ್ರಜ್ಞ ಜೇಮ್ಸ್ ಪ್ರಿನ್ಸೆಪ್ ಶ್ರೀಲಂಕಾದ ಬೌದ್ಧ ಕಾವ್ಯಗಳಾದ ಪಂಚತಂತ್ರದ ಫ್ಯಾಂಟಸಿ ಕಥೆಗಳಂತಿರುವ ದೀಪವಂಶ ಮತ್ತು ಮಹಾವಂಶಗಳಿಂದ ಆ ಹೆಸರನ್ನು ಉದ್ಧರಿಸಿದ್ದನ್ನು ಬಿಟ್ಟರೆ ಅಶೋಕನ ಬಗೆಗಿನ ಯಾವ ಐತಿಹಾಸಿಕ ದಾಖಲೆಗಳೂ ನಮ್ಮಲ್ಲಿ ಲಭ್ಯವಿಲ್ಲ. ಇತ್ತೀಚಿಗಿನ ಸಂಶೋಧನೆಗಳಿಂದ ಬುದ್ಧನ ಜೀವಿತಕಾಲವೇ ಕ್ರಿ.ಪೂ ಒಂದುಸಾವಿರಕ್ಕಿಂತ ಹಿಂದೆ ಹೋಗಿರುವಾಗ ಬುದ್ಧನಿರ್ವಾಣದ 218ನೇ ವರ್ಷದಲ್ಲಿ ಅಶೋಕ ಬುದ್ಧದೀಕ್ಷೆ ಸ್ವೀಕರಿಸಿದನೆಂಬ ಕಥೆಯಿರುವ ದೀಪವಂಶ, ಮಹಾವಂಶಗಳ ಕಥೆ ಎಷ್ಟು ನಂಬಲರ್ಹ?
ಆಶ್ಚರ್ಯವಾಗುತ್ತದೆ, ನಾವು ಶಾಲೆಯಲ್ಲಿ ಬಾಯಿಪಾಠ ಕಲ್ತಿದ್ದು ದಂಡ ಆಯ್ತು..
ReplyDeleteಕಷ್ಟ ಅಂದ್ರೆ, ಶಾಲೆಯಲ್ಲಿ ಬಾಯಿಪಾಠ ಕಲಿತದ್ದನ್ನೇ ಇತಿಹಾಸ ಅಂದುಕೊಂಡಿದ್ದೇವೆ....
Deletei have this book of James Princep... have to dig it out and actually read it....
ReplyDeleteI dont think dat James Princep had written any book on Ashoka. It may be mentioned smwer in his 'essays on indian antiquities, historic, numismatic, and palaeographic'.
DeleteAccording to Sri P N Oak Buddas period was about 700 years before the period(ie 563B.C.) accessed by modern Historians.Likewise time of birth of Shankaracharya also. wheater any carbondating of lumbini monument is done?
ReplyDeleteDear,
ReplyDeleteOur Puranas provide a chronology of Magadha rulers frm d time of Mahabharata war, Somadhi ws d ruler. He started a dynasty dat included 22 kings dat spread over 1006 yrs.Dey wer followed by 5 rulers of d Pradyota dynasty dat lasted over 138 years. Then for next 360years was the 10 rulers of the Shishunaga family. Kshemajit (1892 to 1852 B.C.) was d 4th in Shishunag dynasty, & was a contemporary of Lord Buddha's father, Shuddhodana. It was during dis period in which Buddha was born. It was during d reign of Bimbisara, the fifth Shishunaga ruler (1852-1814 B.C.), when Prince Siddhartha became the enlightened Buddha. Then it was during the reign of King Ajatashatru (1814-1787 B.C.) when Buddha left this world. Thus, he was born in smwer in 1800's B.C.
For further details pls check Professor K. Srinivasaraghavan's 'Chronology of Ancient Bharat'. I hardly hav any idea wheather any carbondating of lumbini monument is done or not.
As far as Shankaracharya is concerned pls check my below article.
http://sachinsbhat.blogspot.in/2011/03/blog-post_7949.html
"ಇತಿಹಾಸ ತಲೆಕೆಳಗಾಗುತ್ತದೆ " ಎಂಬೊಂದು ರೂಢಿ ವಾಕ್ಯವನ್ನು ಬಹಳ ಕಡೆ ಕೇಳಿದ್ದೇನೆ. ಆದರೆ ಇತಿಹಾಸವನ್ನೇ ತಲೆಕೆಳಗು ಮಾಡಿ, ಅದನ್ನೇ ನಂಬುವಂತೆ ಮಾಡಿದ್ದೂ, ಮತ್ತೂ ಇನ್ನು ಅದನ್ನೇ ನಂಬಿಕೊಂಡು ಇತರರನ್ನೂ ನಂಬಿಸುತ್ತಾ ಬರುತ್ತಿರುವುದು ವಿಪರ್ಯಾಸ .. ಇಂಥಹ ಲೇಖನಗಳನ್ನು ನೋಡಿ, ಗಣನೆಗೆ ತೆಗೆದುಕೊಂಡು , ಮತ್ತೊಮ್ಮೆ ಪರಿಶೀಲಿಸಿ ನಿಜ ಇತಿಹಾಸವನ್ನು ಪಾಠಗಳಾಗಿಟ್ಟರೆ ಬಹುಶಃ ನಮ್ಮ ಮುಂದಿನ ಪೀಳಿಗೆಯವರಾದರೂ ಸರಿಯಾಗಿ ಇತಿಹಾಸವನ್ನು ತಿಳಿದುಕೊಳ್ಳು ವಂತಾಗುತ್ತಿತ್ತೇನೋ ..
ReplyDeleteಚಂದದ ವಿಷಯ ವಿವರಣೆ ಸಚಿನ್ ..
ಧನ್ಯವಾದ ಸಂಧ್ಯೆ .
Deleteಇತಿಹಾಸ ಅಂದ್ರೆ ಹಿಂದಿನವರು ಈಗಿನವರ ಕಿವಿಗಿಟ್ಟ ಹೂವನ್ನ ತೆಗೆದು ಮುಂದಿನವರ ಕಿವಿಗಿಡೋದು ಅಂತ
ಇತಿಹಾಸ ಅನ್ನೋದ್ನ ಯಾವ್ಯಾವ ತರ ಎಲ್ಲಾ ತಿರುಚ್ತಾರಪ್ಪ..!!
ReplyDeleteWhat is news? ಅನ್ನೋದಿಕ್ಕೆ Whatever told is news ಅಂತ ಒಂದು ಮಾತಿದೆ. ಅದೇ ರೀತಿ ಯಾರ್ಯಾರೋ ಏನೇನೋ ಹೇಳಿದ್ದೆಲ್ಲ ನಮ್ಮಲ್ಲಿ ಇತಿಹಾಸವಾಗಿಬಿಡತ್ತೆ
Deleteಗೊಂದಲಗೊಂಡಿದೆ ಮೆದುಳು
ReplyDeleteನಿಮ್ಮ ಬರಹ ಕುತೊಹಲಕಾರಿಯಾಗಿದೆ. ಅಶೋಕ ಜೈನ ಮತದವನಾಗಿರಬಹುದೆಂದು
ReplyDeleteಯೋಚಿಸಿರಲಿಲ್ಲ.
ಸಾಂಡ್ರಕೋಟಸ್ = ಚಂದ್ರಗುಪ್ತ
ಜಂಡ್ರಮಸ್ = ಚಂದ್ರಮಸ್ ?
ಗ್ರೀಕರಿಗೆ ತೊದಲು ಅಥವ ಬ್ರಿಟೀಶ್ ಇತಿಹಾಸಕಾರರು ಹುಟ್ಟಿಸಿದ ದಾಖಲೆನಾ ಯಾರಿಗೆ ಗೊತ್ತು?
ಚಂದ್ರಮಸ್ ಎಂಬ ಸ್ತ್ರಿ ಹೆಸರು ಪ್ರಾಕೃತ ಅಥವ ಪಾಳಿ ಭಾಶೆಗಳಲ್ಲಿ ಇದೆಯಾ?
ಇನ್ನೊಂದು : ಯವನ ಅಂದರೆ ಬರಿ ಗ್ರೀಕ್ ಅಲ್ಲ. ದಕ್ಶಿಣ ಗಂಧಾರದ ಗಡಿ ಧಾಟಿದ ಮೇಲೆ
ಇರುವವರೆಲ್ಲ ಯವನರು.
ಸಿಂಹ ಮೇಲುಕೋಟೆ