Pages

Tuesday, March 18, 2014

ಲಂಕೆ ಇದ್ದುದೆಲ್ಲಿ? ಒಂದು ವೈಚಾರಿಕ ವಿಶ್ಲೇಷಣೆ...!

     ಇದುವರೆಗೆ ಸಿಕ್ಕಿದ ರಾಮಾಯಣದ ಹಸ್ತಪ್ರತಿಗಳು ಮೂರು ಪಾಠಕ್ರಮಗಳನ್ನು ನಿರ್ದೇಶಿಸಿವೆ. ಮೊದಲನೇಯದು ದಾಕ್ಷಿಣಾತ್ಯ, ಎರಡನೇಯದು ಗೌಡೀಯ ಮತ್ತು ಮೂರನೇಯದು ಪಶ್ಚಿಮೋತ್ತರೀಯ. ಉದೀಚ್ಯಪಾಠವೇ ಕೊನೆಯ ಎರಡು ಭೇದದ್ವಯಗಳಾದವೆಂಬ ಭಾವನೆಯಿದೆ. ದಾಕ್ಷಿಣಾತ್ಯವು ದಕ್ಷಿಣ ಭಾರತದವರಿಗೆ ಹೆಚ್ಚು ಪರಿಚಿತ. ಈ ಮೂರೂ ಕ್ರಮಗಳಲ್ಲಿ ಯಾವ ಶ್ಲೋಕಗಳು ಸಾಮಾನ್ಯವಾಗಿವೆಯೋ ಅದೇ ರಾಮಾಯಣದ ಪ್ರಾಚೀನ ಶ್ಲೋಕಗಳೆಂದು ವಿದ್ವಾಂಸರು ಪರಿಗಣಿಸುತ್ತಾರೆ. ದಾಕ್ಷಿಣಾತ್ಯದಲ್ಲಿ ಇಲ್ಲದ ಕೇವಲ ಉದೀಚ್ಯದಲ್ಲಿ ಮಾತ್ರ ಕಂಡುಬರುವ ಅಂಶಗಳಲ್ಲಿ ಪ್ರಮುಖವಾದವು ಭರತ ಶತ್ರುಘ್ನರ ಯಾತ್ರೆ ಮತ್ತು ರಾಜಗೃಹವಾಸ, ಸೀತೆಯು ಜನಕನ ಮಾನಸಪುತ್ರಿಯೆಂಬ ಕಥೆ, ಕೇಸರಿಯ ಮಗನಾಗಿ ಹನುಮಂತನ ಜನ್ಮ, ನಿಕಷೆಯ ವೃತ್ತಾಂತ, ಕಾಲನೇಮಿಯ ಕಥೆ ಇತ್ಯಾದಿ. ಇಂಥ ಕಥೆಗಳೆಲ್ಲ ಸುಮಾರು ಕ್ರಿ,ಶ ೧ನೇ ಶತಮಾನದೀಚೆ ಸೇರಿಸಲ್ಪಟ್ಟವು. ೫ನೇ ಶತಮಾನದೀಚೆ ಉದೀಚ್ಯವು ಮತ್ತೆರಡು ಕವಲಾಯಿತು. ಅದೇ ರೀತಿ ರಾಮಾದಿಗಳ ಜನ್ಮತಿಥಿ, ನಕ್ಷತ್ರಗಳ ವರ್ಣನೆ, ಬಾಲಕಾಂಡದ ಪೌರಾಣಿಕ ಕಥೆಗಳು, ಅಕಂಪನ, ಅಯೋಮುಖಿಯರ ವೃತ್ತಾಂತ, ಹನುಮಂತನಿಗೂ ಲಂಕೆಯ ಅಭಿಮಾನಿ ದೇವತೆಗಳಿಗೂ ಯುದ್ಧ, ಅಗಸ್ತ್ಯನು ಆದಿತ್ಯ ಹೃದಯವನ್ನು ಉಪದೇಶಿಸುವುದು ಇತ್ಯಾದಿಗಳು ಕೇವಲ ದಾಕ್ಷಿಣಾತ್ಯದಲ್ಲಿ ಮಾತ್ರ ಕಂಡುಬರುವಂಥವು.
     ಉತ್ತರಕಾಂಡವು ರಾಮಾಯಣದಲ್ಲಿ ನಿಸ್ಸಂಶಯವಾಗಿ ಬಹಳ ಕಾಲದ ನಂತರ ಸೇರಿದ್ದು. ಇದು ವಾಲ್ಮೀಕಿರಚಿತವಲ್ಲದ್ದೆಂದು ಭವಭೂತಿಯೇ ಮೊದಲಾದವರು ಸಂದೇಹ ವ್ಯಕ್ತಪಡಿಸಿದ್ದಾರೆ. ರಾಮನು ಅವತಾರಪುರುಷನೆಂಬ ವರ್ಣನೆ, ಸೀತೆಯು ವೇದವತಿಯ ಅಂಶವೆಂಬ ಕಲ್ಪನೆಗಳು ಇಲ್ಲಿಯೇ ಮೂಡಿದ್ದು. ಮಹಾಭಾರತದ ರಾಮೋಪಾಖ್ಯಾನದಿಂದ ಹಿಡಿದು ಜಾನಕೀಹರಣ, ರಾಮಚರಿತ, ಭಟ್ಟಿಕಾವ್ಯ, ಅನರ್ಘರಾಘವ ಸೇರಿ ರಾಮಾಯಣದ ಗ್ರಂಥಗಳಲ್ಲೆಲ್ಲ ಕಥೆಯು ಮುಕ್ತಾಯವಾಗುವುದು ರಾಮಪಟ್ಟಾಭಿಷೇಕದಲ್ಲೇ. ಇದೇ ರೀತಿ ಪ್ರಕ್ಷೇಪಗೊಂಡ ಇನ್ನೊಂದು ಭಾಗವು ಬಾಲಕಾಂಡ. ಇದೂ ಕೂಡ ರಾಮಾಯಣ ರಚಿತಗೊಂಡು ಎಷ್ಟೋ ಕಾಲದ ನಂತರ ಒಂದಕ್ಕಿಂತ ಹೆಚ್ಚು ಸಮಯಗಳಲ್ಲಿ ಸೇರಲ್ಪಟ್ಟಿದ್ದು. ಇಲ್ಲಿ ಹೇಳಿದ ಕೆಲ ವಿಷಯಗಳು ಮುಂದಿನ ಭಾಗಗಳಲ್ಲಿ ತದ್ವಿರುದ್ಧವಾಗಿವೆ. ಉದಾಹರಣೆಗೆ ಬಾಲಕಾಂಡದಲ್ಲಿ ಲಕ್ಷ್ಮಣನಿಗೂ ಊರ್ಮಿಳೆಗೂ ಮದುವೆಯಾಯಿತೆಂದಿದ್ದರೆ ಅರಣ್ಯಕಾಂಡದಲ್ಲಿ ಶೂರ್ಪನಖಿಯೊಡನೆ ರಾಮನು ಲಕ್ಷ್ಮಣನಿಗಿನ್ನೂ ಮದುವೆಯಾಗಿಲ್ಲವೆನ್ನುತ್ತಾನೆ. ಇಂಥ ಕಾರಣಗಳಿಂದ ಬಾಲಕಾಂಡವೂ ಉತ್ತರಕಾಂಡದಂತೆ ಪ್ರಕ್ಷೇಪಭೂಯಿಷ್ಟವೆಂದು ವಿದ್ವಾಂಸರು ಭಾವಿಸುತ್ತಾರೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬರುವುದು ಪ್ರಕ್ಷೇಪಗೊಂಡ ಬಾಲಕಾಂಡದಲ್ಲಿಯೇ. ಉಳಿದೆಡೆ ’ವಿಷ್ಣುನಾಸದೃಶೋ ವೀರ್ಯೇ’ ಎಂದಿದೆಯೇ ಹೊರತೂ ವಿಷ್ಣುವಿನ ಅವತಾರವೆಂದಲ್ಲ. ದಾಕ್ಷಿಣಾತ್ಯಪಾಠದ ಸುಂದರಕಾಂಡದಲ್ಲೂ ಒಂದೇ ಒಂದು ಕಡೆ ಹನುಮಂತನು ರಾಮನನ್ನು ’ವಿಷ್ಣುತುಲ್ಯ ಪರಾಕ್ರಮಃ’ ಎಂದು ಸ೦ಬೋಧಿಸುತ್ತಾನೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬೆಳೆದದ್ದು ಪ್ರಾಯಶಃ ಗುಪ್ತರ ಕಾಲದಲ್ಲಾದ ವೈಷ್ಣವ ಮತದ ಬೆಳವಣಿಗೆಯಲ್ಲಿರಬಹುದು. ಮೂಲರಾಮಾಯಣದಲ್ಲಿ ಅತಿಮಾನುಷ ಘಟನೆಗಳು ಅತ್ಯಲ್ಪವಾದ ಕಾರಣ ಪುಷ್ಪಕ ವಿಮಾನ, ಲಂಕಾದಹನ, ಸಂಜೀವಿನಿ ಪರ್ವತವನ್ನು ತರುವುದು, ಅಗ್ನಿಪರೀಕ್ಷೆಗಳೆಲ್ಲ ಮತ್ತೆ ಪ್ರಕ್ಷೇಪಿತ ಭಾಗಗಳೇ. ರಾಮನನ್ನು ಆದರ್ಶಪುರುಷನೆಂದು ತೋರಿಸುವುದಕ್ಕೆ ವಾಲಿವಧೆಯನ್ನು ನ್ಯಾಯಸಂಗತಗೊಳಿಸುವ ಪ್ರಯತ್ನವೂ ಹೊಸದೇ.
     ಲೆಟ್ ಮಿ ಕಮ್ ಟು ದ ಪಾಯಿಂಟ್. ಕಿಷ್ಕಿಂಧೆ ಎಲ್ಲಿದೆ ಎಂಬುದು ದೊಡ್ಡ ಪ್ರಶ್ನೆ. ಲಂಕೆ ಎಲ್ಲಿದೆ ಎಂಬುದು ಅದಕ್ಕಿಂತ ದೊಡ್ಡ ಪ್ರಶ್ನೆ. ಇದೇನು ಹುಚ್ಚಾಟ ಎನ್ನಬೇಡಿ. ನಮ್ಮಲ್ಲಿ ಪ್ರತಿ ಊರಿನಲ್ಲೊಂದು ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವಿದೆ, ಪ್ರತಿ ಹಳ್ಳಿಯಲ್ಲೂ ಪಾಂಡವರು ಬಂದು ಕಟ್ಟಿದ ದೇವಸ್ಥಾನವಿದೆ, ಪ್ರತಿ ಗುಡ್ಡದ ಮೇಲಿನ ಕಲ್ಲಿನಲ್ಲಿ ಹನುಮಂತನ ಹೆಜ್ಜೆಯೋ, ಭೀಮನ ಪಾದವೋ ಇದೆ. ಹನುಮಂತ ಹುಟ್ಟಿದ್ದು ಗೋಕರ್ಣದಲ್ಲೆಂದು ಅಷ್ಟಮಂಗಲದಲ್ಲಿ ಕಂಡುಬಂದಿದೆ, ಕಿಷ್ಕಿಂಧೆಯಿರುವುದು ಇಲ್ಲೇ, ಕಿಷ್ಕಿಂಧೆಯಿರುವುದು ಹಂಪೆಯಲ್ಲಿ, ಕಿಷ್ಕಿಂಧೆಯಿರುವುದು ಮಹಾರಾಷ್ಟ್ರದ ಅಂಜನಾದ್ರಿಯಲ್ಲಿ ಎಂಬಂಥ ಹತ್ತಾರು ನಂಬಿಕೆಗಳಿರಲಿ ಬಿಡಿ. ಕಿಷ್ಕಿಂಧಾ, ಋಷ್ಯಮೂಕ, ಪಂಪಾಸರೋವರ, ಪ್ರಸ್ರವಣ ಮುಂತಾದವು ದಂಡಕಾರಣ್ಯದಲ್ಲಿವೆ ಎಂದು ರಾಮಾಯಣದಲ್ಲೇ ಎನ್ನಲಾಗಿದೆ. ಚಿತ್ರಕೂಟ, ಪಂಪಾ, ಕಿಷ್ಕಿಂಧೆ, ಪಂಚವಟಿ, ದಂಡಕಾರಣ್ಯಗಳು ಮಧ್ಯಭಾರತ ಮತ್ತು ಅದಕ್ಕಿಂತ ತುಸು ಕೆಳಗಿರುವ ಪರಸ್ಪರ ಸಂಬಂಧಿತ ಸ್ಥಳಗಳೆಂದು ವಿವಾದಾತೀತ ಆಧಾರಗಳು ಕ್ರಿ.ಶ ೬ನೇ ಶತಮಾನದವರೆಗೂ ದೊರಕುತ್ತವೆ. ವಾಯು, ಬ್ರಹ್ಮಾಂಡ, ಮಾರ್ಕಂಡೇಯ, ಮತ್ಸ್ಯ ಪುರಾಣಗಳೂ ಕಿಷ್ಕಿಂಧೆಯ ಜನಪದವನ್ನು ಮಲದ, ಕುರೂಷ, ಮೇಖಲ, ಕೋಸಲ, ವಿದಿಷ, ಅನುಪಗಳೊಡನೆ ಕೂಡಿಸಿ ಇವೆಲ್ಲ ವಿಂಧ್ಯದಲ್ಲಿವೆ ಎಂದು ಬಣ್ಣಿಸುತ್ತವೆ. ಈ ಪರಿಸರದಲ್ಲೇ ಲಂಕೆಯೂ ಇದ್ದಿರಬೇಕು. ಅದು ಸರೋವರ ಅಥವಾ ನದಿಮಧ್ಯದ ದ್ವೀಪವಾಗಿರಬೇಕು. ಮೂಲಕಥೆಯಲ್ಲಿ ಕೈಯಾಡಿಸಿ ಮಹಾಕಾವ್ಯವನ್ನು ಪುನರ್ರಚಿಸುವಾಗ ಪವಾಡಸದೃಶ ಅದ್ಭುತ ಅಂಶಗಳನ್ನು ಸೇರಿಸಲಾಯ್ತು. ಕಿಷ್ಕಿಂಧಾನಗರಿಯು ಎಲ್ಲ ಸೌಲಭ್ಯಗಳನ್ನು ಹೊಂದಿದ ದೊಡ್ಡ ಗುಹೆ ಮಾತ್ರ ಎಂದು ಕವಿ ಪದೇ ಪದೇ ಹೇಳಿದ್ದಾನೆ. ರಾಮ ಲಕ್ಷ್ಮಣರು ಭೇಟಿಕೊಟ್ಟಾಗ ಅಲ್ಲಿನ ಹೊರಬಾಗಿಲುಗಳಲ್ಲಿ ಭಟರುಗಳಿದ್ದರು, ಗುಹೆಯೊಳಗೆ ಅರಮನೆಗಳು, ಹಲವಾರು ಮನೆಗಳೂ ಇದ್ದವು. ಕಿಷ್ಕಿಂಧೆಯಲ್ಲಿಯೇ ವಾಲಿಯು ರಾಮನ ಬಾಣಕ್ಕೆ ತುತ್ತಾಗಿ ಕೊನೆಯುಸಿರೆಳೆಯುವಾಗ ’ನಿನ್ನೊಡನೆ ಯುದ್ಧಮಾಡದಿರುವ, ಕಾಡಿನಲ್ಲಿ ಹಣ್ಣುಹಂಪಲು ತಿಂದು ಬದುಕುವ ನನ್ನನ್ನೇಕೆ ಕೊಂದೆ’ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ರಾಮ ಕೊಡುವ ಉತ್ತರ ಗಮನಾರ್ಹ.
ಇಕ್ಷ್ವಾಕುಕೂಣಾಮಿಯಂ ಭೂಮಿಃ ಸ ಶೈಲವನ ಕಾನನಾ
ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ ||

ಅದರರ್ಥ ಕಿಷ್ಕಿಂಧೆಯು ಕೌಸಲದ ದಕ್ಷಿಣದಲ್ಲಿರುವ ಒಂದು ಭಾಗವಾಗಿತ್ತು. ಹೀಗಾಗಿ ಕಿಷ್ಕಿಂಧೆಯನ್ನು ಕರ್ನಾಟಕದಲ್ಲಿ ಗುರುತಿಸುವುದು ಶುದ್ಧಾಂಗ ತಪ್ಪು.
     ಕಿಷ್ಕಿಂಧಾಕಾಂಡದಲ್ಲಿ ಸುಗ್ರೀವನು ಪೂರ್ವದಿಕ್ಕಿನತ್ತ ತೆರಳಿದ ವಿನುತನಿಗೆ ಸೀತೆಯನ್ನು ಹುಡುಕೆಂದು ಹೇಳುವ ಸ್ಥಳಗಳಲ್ಲಿ ಲೋಹಿತ ಸಾಗರವೂ ಒಂದು. ಇದು ಬ್ರಹ್ಮಪುತ್ರಾ ನದಿಯೆಂದು ಗುರ್ತಿಸಲಾಗಿದೆ. ಸಾಗರ ಎಂಬ ಪ್ರತ್ಯಯದ ಬಳಕೆಯನ್ನು ನೋಡಿದರೆ ಇದು ಯಾವಗಲೂ ಸಮುದ್ರವನ್ನೇ ಬಿಂಬಿಸುತ್ತಿರಲಿಲ್ಲವೆನ್ನುವುದು ಸತ್ಯ. ನದಿ ಅಥವಾ ಭಾರೀ ಪ್ರಮಾಣದ ಸರೋವರಗಳೂ ಸಾಗರಗಳೆಂದೇ ಕರೆಯಲ್ಪಟ್ಟಿವೆ. ಶತಬಲಿಯ ನೇತೃತ್ವದಲ್ಲಿ ವಾನರರ ತಂಡ ಶೋಧನೆ ನಡೆಸಿದ ಸ್ಥಳಗಳಲ್ಲಿ ಮ್ಲೇಚ್ಛ, ಪುಳಿಂದ,  ಬಾಹ್ಲೀಕ, ಪೌರವ, ನೀಹಾರ, ಶಕ, ಯವನ, ಚೀನಾ, ಕ್ರೌಂಚ ದೇಶಗಳೂ ಸೇರಿವೆ. ಈ ಪಟ್ಟಿಯಲ್ಲಿ ಶಕ, ಯವನರಂಥ ಹೊಸ ಜನಾಂಗಗಳನ್ನೂ ಎಳೆದು ತರಲಾಗಿದೆ. ಹೂಣರು ಈ ಪಟ್ಟಿಯಲ್ಲಿಲ್ಲದ ಕಾರಣ ಅವರು ಪ್ರಬಲರಾಗಿದ್ದು ಐದನೇ ಶತಮಾನದ ಹೊತ್ತಿಗೆ. ಆದ್ದರಿಂದ ಈ ಸರ್ಗಗಳ ರಚನೆಯಾಗಿದ್ದು ಕ್ರಿ.ಶ ಎರಡರಿಂದ ನಾಲ್ಕನೇ ಶತಮಾನದೊಳಗಿರಬಹುದು. ಪಶ್ಚಿಮದತ್ತ ಹೊರಟ ಸುಷೇಣ ಶೋಧ ನಡೆಸಿದ ಸ್ಥಳಗಳು ಅಭೀರ, ಮರೀಚಪಟ್ಟಣ ಇತ್ಯಾದಿ. ಅಭೀರರು ಕ್ಷತ್ರಪರ ನಂತರ ಕ್ರಿ.ಶ ಮೂರನೇ ಶತಮಾನದಲ್ಲಿ ಪಶ್ಚಿಮ ಭಾರತದಲ್ಲಿ ರಾಜಕೀಯ ವ್ಯವಸ್ಥೆಯಾಗಿ ರೂಪಗೊಂಡರು. ಅದಕ್ಕೂ ಮೊದಲು ಕ್ರಿ.ಪೂ ಒಂದನೇ ಶತಮಾನದಲ್ಲಿ ಕೇರಳದಿಂದ ಕಾಳುಮೆಣಸು(ಮರೀಚ) ಮತ್ತು ಸಾಂಬಾರ ಪದಾರ್ಥಗಳಿ ಪರದೇಶಗಳಿಗೆ ರಫ್ತಾಗುತ್ತಿದ್ದವು. ರೋಮನ್ನರು ಕೇರಳ ಕರಾವಳಿಯ ಮುಜರಿಸ್ ಬಂದರುಗಳಿಂದ ಕಾಳುಮೆಣಸನ್ನು ಕೊಂಡೊಯ್ಯುತ್ತಿದ್ದರೆಂದು ಪಾಶ್ಚಾತ್ಯ ಭೂಗೋಳಶಾಸ್ತ್ರಜ್ಞರಾದ ಸ್ಟ್ರಾಬೋ ಮತ್ತು ಪ್ಲೈನಿ ತಿಳಿಸಿದ್ದಾರೆ. ಮರೀಚ ಪಟ್ಟಣವು ಈ ಪಟ್ಟಿಯಲ್ಲಿ ಸೇರಿದ್ದು ಕಿಷ್ಕಿಂಧಾ ಕಾಂಡದ ಪಕ್ಷಿಪ್ತ ಭಾಗಗಳ ಕಾಲಮಿತಿಯನ್ನು ನಿರ್ಣಯಿಸಲು ಸಹಕಾರಿಯಾಗಿದೆ. ಅರಣ್ಯ ಕಾಂಡದಲ್ಲೂ ಮರೀಚಪಟ್ಟಣದ ಉಲ್ಲೇಖವಿದೆ. ಖರದೂಷಣರನ್ನು ಕೊಂದ ವಿಷಯವನ್ನು ರಾವಣನಿಗೆ ತಿಳಿಸಲು ಶೂರ್ಪಣಖಿ ಲಂಕೆಗೆ ಓಡುವ ಪ್ರಕರಣ. ಬಳಿಕ ರಾವಣ ಕತ್ತೆಗಳಿಂದ ಎಳೆಯಲ್ಪಟ್ಟ ರಥವನ್ನೇರಿ ಮಾರೀಚನ ಆಶ್ರಮವನ್ನು ತಲಪುತ್ತಾನೆ. ದಾರಿ ಮಧ್ಯದ ವರ್ಣನೆಗಳಲ್ಲಿ ಸಮುದ್ರತೀರದ ಸೂರ್ಯಾಸ್ತ, ಮರೀಚ(ಕಾಳುಮೆಣಸಿನ) ತೋಟಗಳು, ಶಂಖ ಮತ್ತು ಮುತ್ತಿನ ರಾಶಿಗಳಿವೆ. ಇದು ಪಕ್ಕಾ ಪಶ್ಚಿಮ ಸಮುದ್ರ ತೀರದ ವರ್ಣನೆ. ವಾಸ್ತವವಾಗಿ ಕೇರಳದ ಕ್ರಾಂಗಾನೂರ್ ಮೊದಲು ಮರೀಚಪಟ್ಟಣವಾಗಿ ಪ್ರಸಿದ್ಧವಾಗಿತ್ತು. ಅರಣ್ಯ ಕಾಂಡವನ್ನು ಪುನರೂಪಿಸಿದ ಕವಿಗೆ ಲಂಕೆಯು ದಕ್ಷಿಣದ ಹಿಂದೂಮಹಾಸಾಗರದಲ್ಲೆಲ್ಲೋ ಇದ್ದೀತೆಂಬ ಅಸ್ಪಷ್ಟ ಕಲ್ಪನೆಯಿರಬಹುದು. ಅದಕ್ಕಾಗಿಯೇ ದಕ್ಷಿಣ ಭಾರತದ ಹೆಚ್ಚಿನ ಯಾವ ಪ್ರದೇಶಗಳ ಉಲ್ಲೇಖವಿಲ್ಲದಿದ್ದರೂ ಮೊದಲಿನಿಂದಲೂ ಹೆಸರಾಗಿದ್ದ ಮರೀಚಪಟ್ಟಣದ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಬಂದಿದೆ. ರಾಮನ ಬಾಣದಿಂದ ದೂರ ಎಸೆಯಲ್ಪಟ್ಟ ಮಾರೀಚನು ಲಂಕೆಗೆ ಓಡಿದ. ಖರನನ್ನು ರಾಮ ಕೊಂದಾಗ ಲಂಕೆಗೆ ಅವಸರವಾಗಿ ಧಾವಿಸಿದ ಶೂರ್ಪನಖಿ ಈ ಕಥೆಯನ್ನು ರಾವಣನಿಗೆ ತಿಳಿಸಿದಳು. ಹೀಗೆ ಇಬ್ಬರೂ ಅವಸರವಸರವಾಗಿ ಮಧ್ಯಭಾರತದಿಂದ ಶ್ರೀಲಂಕಾಕ್ಕಂತೂ ಓಡಲು ಸಾದ್ಯವಿರಲಿಲ್ಲ. ಇಲ್ಲಿ ಮತ್ತೂ ಒಂದು ವಿಷಯವಿದೆ. ರಾಮ ಸೀತೆಯರು ಹತ್ತು ವರ್ಷಗಳ ಕಾಲ ಚಿತ್ರಕೂಟದಲ್ಲಿದ್ದಾಗ(ಇದು ಉತ್ತರ ಪ್ರದೇಶದ ಮಿರ್ಜಾಪುರ, ಭಾಂಡಾಗಳ ಆಸುಪಾಸಿನ ಜಾಗ) ರಾಕ್ಷಸ, ಅಸುರರೊಡನೆ ಒಂದೇ ಒಂದು ಯುದ್ಧವೂ ನಡೆದಿಲ್ಲ. ಯಾಕೆಂದರೆ ಈ ಪ್ರದೇಶ ಕೋಸಲದ ಒಂದು ಭಾಗವಾಗಿತ್ತು. ಅದರ ನಂತರ ರಾಮ ಬಂದಿದ್ದು ದಂಡಕಾರಣ್ಯಕ್ಕೆ. ವಿಚಿತ್ರವೆಂದರೆ ಚಿತ್ರಕೂಟದಿಂದ ಇಲ್ಲಿನವರೆಗಿನ ಪಯಣದಲ್ಲಿ ಎಲ್ಲೂ ವಿಂಧ್ಯ ಮತ್ತು ನರ್ಮದೆಯ ಪ್ರಸ್ತಾವನೆಯಿಲ್ಲ. ನರ್ಮದೆಯನ್ನು ದಾಟದೇ ನಾಸಿಕಕ್ಕಾಗಲೀ, ಪೂರ್ವ ಮಧ್ಯಭಾರತಕ್ಕಾಗಲೀ ತೆರಳಲು ಅಸಾಧ್ಯ. ಕಾಳಿದಾಸನ    ರಘುವಂಶದ ೧೩ನೇ ಸರ್ಗದಲ್ಲೂ ನರ್ಮದೆಯ ಮಾತಿಲ್ಲ. ಸಹ್ಯ, ಮಲಯ ಪರ್ವತಗಳ ಸುಳಿವಿಲ್ಲ. ಗೋದಾವರಿಯನ್ನುಲ್ಲೇಖಿಸಿದರೂ ರಾಮಾಯಣವಾಗಲೀ ಕಾಳಿದಾಸನಾಗಲೀ ನಾಸಿಕದ ಹೆಸರೆತ್ತುವುದಿಲ್ಲ. ಹಾಗೆ ನೋಡಿದರೆ ನಾಸಿಕದಲ್ಲಿ ನಾಲ್ಕು ಸಾವಿರ ವರ್ಷಗಳಿಂದಲೂ ಜನವಸತಿಯ ಕುರುಹು ಇತ್ತೆಂದು ಉತ್ಖನಗಳಿಂದ ಸಾಬೀತಾಗಿದೆ. ದಂಡಕದ ಒಂದು ಭಾಗವಾದ ಪಂಚವಟಿಯ ಪ್ರಾಂತ್ಯದಲ್ಲೇ ರಾಕ್ಷಸರೊದನೆ ಮೊದಲ ಯುದ್ಧ ನಡೆದಿದ್ದು. ಈ ಪಂಚವಟಿ ಮತ್ತು ಪರ್ಣಶಾಲೆಯಿರುವುದು ನಾಸಿಕದಲ್ಲಲ್ಲ, ಬದಲಾಗಿ ಆಂಧ್ರದ ಉತ್ತರ ತುದಿಯ ಗೋದಾವರೀ ತೀರದಲ್ಲಿ. ರಾಮ ಲಕ್ಷ್ಮಣರು ಇಲ್ಲಿದ್ದಾಗಲೇ ಜನಸ್ಥಾನದ ರಕ್ಷಣೆಗೆ ಮತ್ತು ರಾಮನ ಸಂಹಾರಕ್ಕಾಗಿ ಎಂಟು ಜನ ರಾಕ್ಷಸರು ಕಳುಹಿಸಲ್ಪಡುತ್ತಾರೆ. ಯಾವುದೇ ಪ್ರದೇಶಕ್ಕೆ ಶಸ್ತ್ರಧಾರಿಗಳಾದ ಅಪರಿಚಿತರು ಬಂದಾಗ ಅಲ್ಲಿನ ಮೂಲನಿವಾಸಿಗಳೊಡನೆ ತಿಕ್ಕಾಟವಾಗುವುದು ಸಹಜ. ಅದೂ ಅಲ್ಲದೇ ಭಾರತದ ದಕ್ಷಿಣ ತುದಿಯಿಂದಲೂ ದೂರವಿದ್ದ ಪ್ರದೇಶವೊಂದರಲ್ಲಿ ಕುಳಿತು ಮಧ್ಯಭಾರತದ ದಂಡಕಾರಣ್ಯವನ್ನು ನಿಯಂತ್ರಿಸಲು ಖರ,ದೂಷಣರಿಗಾಗಲೀ ಅಥವಾ ಅವರ ಒಡೆಯ ರಾವಣನಿಗಾಗಲೀ ಆಗದ ಮಾತು.  ಆದ್ದರಿಂದ ತಾರ್ಕಿಕವಾಗಿ ಲಂಕೆಯು ಚಿತ್ರಕೂಟ ಮತ್ತು ದಂಡಕಾರಣ್ಯದಿಂದ ನೂರಾರು ಕಿ.ಮಿ ದೂರದಲ್ಲಿರಲು ಸಾಧ್ಯವಿಲ್ಲ. ಪಂಚವಟಿಯ ಪ್ರಾಂತ್ಯದ ಸಾಲವೃಕ್ಷಗಳ ವರ್ಣನೆಯನ್ನೇ ನೋಡಿ. ಶೋರಿಯಾ ರೋಬಸ್ಟಾ ಜಾತಿಗೆ ಸೇರಿದ ಸಾಲ ವೃಕ್ಷಗಳು ಎಲ್ಲಿಬೇಕಾದರೂ ಬೆಳೆಯಬಹುದೆಂದು ವಾದಮಾಡಬಹುದಾದರೂ ಕಾಶ್ಮೀರ ಮತ್ತು ಆಸ್ಸಾಂನ್ನು ಹೊರತುಪಡಿಸಿ ಇದು ವಿಶೇಷವಾಗಿ ಕಾಣಬರುವುದು ದಕ್ಷಿಣ ಬಿಹಾರ, ಮಧ್ಯಪ್ರದೇಶದ ಪೂರ್ವಭಾಗ, ಛತ್ತೀಸಘಢ, ಪಶ್ಚಿಮ ಓರಿಸ್ಸಾ ಮತ್ತು ಗೋದಾವರಿಯ ಮುಖಜಭೂಮಿಯಲ್ಲಿ ಮಾತ್ರ.
     ಲಂಕೆ ಎಲ್ಲಿದೆ ಎಂಬ ವಿಷಯಕ್ಕೆ ಪುನಃ ಬರೋಣ. ಪುರಾಣಗಳು, ಮಹಾಭಾರತದಿಂದ ಮೊದಲಾಗಿ ವರಾಹಮಿಹಿರನ ಬೃಹಜ್ಜಾತಕಗಳು ಸಿಂಹಳ ಮತ್ತು ಲಂಕೆ ಬೇರೆಬೇರೆಯೆಂದರೆ, ರಾಮಾಯಣದಲ್ಲೆಲ್ಲೂ ಸಿಂಹಳದ ಪ್ರಸ್ತಾಪವೇ ಇಲ್ಲ. ಅಶೋಕನ ಕಾಲದಿಂದ ತೊಡಗಿ ೧೨ನೇ ಶತಮಾನಗಳವರೆಗೂ ಶ್ರೀಲಂಕಾವನ್ನು ಸಿಂಹಳವೆನ್ನಲಾಗಿದೆಯೇ ಹೊರತೂ ಲಂಕೆಯೆಂದಲ್ಲ. ಮರೀಚಪಟ್ಟಣವೊಂದನ್ನು ಹೊರತುಪಡಿಸಿ ಇಡೀ ರಾಮಾಯಣದಲ್ಲಾಗಲೀ, ಕಾಳಿದಾಸನ ರಘುವಂಶವಾಗಲೀ, ಉತ್ತರ ರಾಮಚರಿತವಾಗಲೀ ಗೋದಾವರಿಯ ದಕ್ಷಿಣ ಭಾಗದಲ್ಲಿರುವ ಸ್ಥಳಗಳ ಸರಿಯಾದ ವರ್ಣನೆ ಎಲ್ಲೂ ಇಲ್ಲ. ಹಾಗಾದರೆ ಅಸಲು ಲಂಕೆ ಇರುವುದೆಲ್ಲಿ?
ಮೂಲಲಂಕೆಯ ನೆಲೆಯ ಬಗ್ಗೆ ಬೆಳಕು ಚೆಲ್ಲುವ ರಾಮಾಯಣದ ಒಂದು ಘಟನೆ ಸಂಪಾತಿಗೆ ಸಂಬಂಧಿಸಿದ್ದು. ಸಂಪಾತಿ ವಾನರರಿಗೆ ಹೇಳುತ್ತಾನೆ
ಮಹೇಂದ್ರಸ್ಯ ಗಿರಿದ್ವಾರ ಮಾವೃತ್ಯ ಚ ಸಮಾಸ್ಥಿತಿಃ
ತತ್ರ ಕಶ್ಚಿನ್ಮಯಾ ದೃಷ್ಟಃ ಸೂರ್ಯೋದಯ ಸಮಪ್ರಭಾಮ್ ||
ಸ್ತ್ರೀಯಮಾದಾಯ ಗಚ್ಛನ್ವೈ  ಭಿನ್ನಾಜನಯೋಪಮಃ ||
ಹರಾನ್ದಾ ಶರಥೇರ್ಭಾರ್ಯಾಂ ರಾಮಸ್ಯ ಜನಕಾತ್ಮಜಮ್
ಭ್ರಷ್ಟಾಭರಣಕೌಶೇಯಂ ಶೋಕವೇಗ ಪರಾಜಿತಾಮ್ ||

ಮಹೇಂದ್ರದ ಗಿರಿಯ ಬುಡದಲ್ಲಿ ನನ್ನ ಮಗ ಸುಪಾರ್ಶ್ವನು ಹಾದಿಗಡ್ಡ ಕುಳಿತಿರುವಾಗ ಸೂರ್ಯೋದಯದ ಕಾಂತಿಗೆ ಸಮಾನವಾದ ಸ್ತ್ರೀಯೊಬ್ಬಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಹೋಗುತ್ತಿದ್ದ ಪುರುಷನೊಬ್ಬನನ್ನು ಕಂಡ. ಅವನು ಕಾಡಿಗೆಯಂತೆ ಕಪ್ಪಗಿದ್ದನು. ಆದರೂ ಆತ ವಿನೀತ ಭಾವದಿಂದ ದಾರಿಬಿಟ್ಟುಕೊಡೆಂದು ಯಾಚಿಸಿದ. ಹೀಗೆ ಕೇಳಿಕೊಂಡಾಗ ಸುಪಾರ್ಶ್ವನು ಸಹಜವಾಗಿಯೇ ದಾರಿಬಿಟ್ಟುಕೊಟ್ಟ. ಆದರೆ ಆಮೇಲೆ ಆ ಪುರುಷನು ರಾವಣನೆಂದೂ, ಅವಳು ಸೀತೆಯೆಂದೂ ತಿಳಿಯಿತು.
 ಇದು ಸೀತಾಪಹರಣದ ಬಗೆಗಿನ ರಾಮಾಯಣದಲ್ಲಿ ಕಂಡುಬರುವ ಪ್ರಥಮಾನುಭವದ ಅತ್ಯಂತ ಸಹಜವಾಗಿ ಒಪ್ಪಿಕೊಳ್ಳಬಹುದಾದ ವರದಿ. ನಾನಾಗಲೇ ಹೇಳಿದಂತೆ ಪುಷ್ಪಕ ವಿಮಾನ ಪ್ರಕರಣ ಪ್ರಕ್ಷೇಪಭೂಯಿಷ್ಟವಾಗಿದ್ದು ಎಷ್ಟೋ ಕಾಲದ ನಂತರ ಸೇರಿಸಲ್ಪಟ್ಟಿದ್ದು.  ಮೇಲಿನ ಶ್ಲೋಕದಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ರಾವಣ ಸೀತೆಯನ್ನೆಳೆದುಕೊಂಡು ದಟ್ಟಕಾಡುಗಳಿಂದಾವೃತವಾದ ಪರ್ವತಗಳ ಕಣಿವೆಯಲ್ಲಿ ಸಾಗುತ್ತಿದ್ದಾನೆ. ಕುದುರೆಗಾಡಿ, ರಥಗಳು ಸಾಗಲು ಸಾಧ್ಯವಿಲ್ಲದ ಇಂಥ ಕಣಿವೆ, ಅರಣ್ಯಗಳನ್ನು ದಂಡಕ, ಸಾಲಾವೃಕ್ಷಾರಣ್ಯಗಳ ಕಡೆ ಇಂದಿಗೂ ಕಾಣಬಹುದು. ರಾವಣನು ಆಕಾಶಮಾರ್ಗವಾಗಿ ಸೀತೆಯೊಡನೆ ಪಯಣಿಸಿದನೆಂಬುದು ನಂತರ ಸೇರಿಕೊಂಡ ಶುದ್ಧ ಕಾವ್ಯಮಯ ಕಲ್ಪನೆ. ಮೇಲಿನ ಘಟನೆಯಿಂದ ರಾವಣನ ಆವಾಸಸ್ಥಾನ ಹೆಚ್ಚೇನೂ ದೂರವಿರಲಾರದು ಅಂದುಕೊಳ್ಳಬಹುದು. ಸಾಗರವೆಂದರೆ ದೊಡ್ಡ ಸರೋವರ ಅಥವಾ ಅಗಲ ಹರಿವಿನ ನದಿಯ ಆಚೆಯ ದಡದಲ್ಲಿ ಅವನ ವಸತಿಯಿರಬೇಕು. ಮುಂದೆ ಸಂಪಾತಿಯ ಸೂಚನೆಯಂತೆ ದಕ್ಷಿಣಾಭಿಮುಖವಾಗಿ ತೆರಳಿದ ವಾನನರು ಮಹೇಂದ್ರಗಿರಿಗೆ ಬಂದರು. ಗಿರಿಯನ್ನೇರಿದ ಬಳಿಕ ಸಾಗರದ ದಡವನ್ನು ಕಂಡರು. ಈ ಕಾಂಡವನ್ನು ಪುನರ್ರಚಿಸಿದ ಕವಿಗೆ ದಕ್ಷಿಣ ಭಾರತದ ಅಸ್ಪಷ್ಟ ಚಿತ್ರಣವಷ್ಟೇ ಇತ್ತು. ಹೀಗಾಗಿ ಈ ಸಾಗರವನ್ನೇ ಹಿಂದೂ ಸಾಗರದ ಉತ್ತರ ತುದಿಯೆಂದು ಭಾವಿಸಲಾಯ್ತು. ಹನುಮಂತನು ಸಾಗರೋಲ್ಲಂಘನ ಮಾಡುವಂತೆ ಮಾಡಲಾಯ್ತಲ್ಲದೇ ಇಡೀ ಕಪಿಸೈನ್ಯವನ್ನು ಮಧ್ಯಭಾರತದಿಂದ ಸಾವಿರಾರು ಕಿ.ಮಿ ದೂರದ ದಕ್ಷಿಣಕ್ಕೆ ಕರೆತರಲಾಯ್ತು. ಅದೇ ಮಹಾಭಾರತದಲ್ಲಿ ಬಲರಾಮನ ತೀರ್ಥಯಾತ್ರೆಯ ವಿವರಣೆಯಲ್ಲಿ ’ಗಂಗಾಸಾಗರದಲ್ಲಿ ತೀರ್ಥಸ್ನಾನ ಮಾಡಿ, ಮಹೇಂದ್ರಪರ್ವತದತ್ತ ತೆರಳಿದನು. ಅದನ್ನು ದರ್ಶಿಸಿ ದಕ್ಷಿಣಾಭಿಮುಖವಾಗಿ ತೆರಳಿ ಗೋದಾವರಿ ನದಿಯನ್ನು ಕಂಡನು’ ಎಂದಿದೆ. ಮಹೇಂದ್ರ ಪರ್ವತವು ಗೋದಾವರಿಯ ಉತ್ತರಕ್ಕಿತ್ತೆಂಬುದು ಇದರಿಂದ ಸ್ಪಷ್ಟ. ಮಹೇಂದ್ರ ಪರ್ವತದ ಪ್ರಸ್ತಾಪ ಗಂಗ ಇಂದ್ರವರ್ಮನ ಗೌತಮಿ ತಾಮ್ರ ಶಾಸನದಲ್ಲಿಯೂ ಇದೆ. ಉತ್ತರಕಾಂಡದ ವಿಮರ್ಶಾತ್ಮಕ ಆವೃತ್ತಿಯನ್ನು ಪ್ರಕಟಿಸಿದ ಯು.ಪಿ. ಷಾ ಇದನ್ನು ಆಂಧ್ರದ ಗಡಿಭಾಗದಲ್ಲಿರುವ ಓರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಗುರುತಿಸುತ್ತಾರೆ.
     ರಾಮಾಯಣದ ಯುದ್ಧಕಾಂಡದಲ್ಲಿ ರಾವಣನನ್ನು ದೇವಕಂಟಕನೆಂದೂ, ರಾಕ್ಷಸರನ್ನು ದೈವಕಂಟಕರೆಂದೂ, ವಿಶ್ವಕರ್ಮನ ಲಂಕೆಯು ನಂತರ ಸಾಲಕಂಟಕ ಸಂತತಿಯ ಆವಾಸಸ್ಥಾನವಾಯಿತೆಂದೂ ಹೇಳಲಾಗಿದೆ. ಅಬುಲ್ ಫಜಲ್ ತನ್ನ ಐನೇ ಅಕ್ಬರಿಯಲ್ಲಿ ಗಡಕಟಂಗ ಎಂಬ ಸ್ಥಳವನ್ನುಲ್ಲೇಖಿಸುತ್ತಾನೆ. ಈ ಸಾಲಕಂಟಕ, ಗಡಕಟಂಗ ಮತ್ತು ಗೊಂಡವನಗಳು ಒಂದೇ ಎಂದು ಸಂಕಾಲಿಯಾರಂಥ ಖ್ಯಾತ ಇತಿಹಾಸಕಾರರು ಸಿದ್ಧಪಡಿಸಿದ್ದಾರೆ. ಗೊಂಡವನದಲ್ಲಿ ಇಂದಿಗೂ ರಾವಣನನ್ನು ತಮ್ಮ ಮೂಲಪುರುಷನೆಂದು ಹೇಳಿಕೊಳ್ಳುವ ಗೊಂಡ ಸಮುದಾಯದವರಿದ್ದಾರೆ. ಛತ್ತೀಸಗಢ, ಉತ್ತರ ಆಂಧ್ರಪ್ರದೇಶ, ಒರಿಸ್ಸಾದ ಪೂರ್ವಭಾಗ, ದಕ್ಷಿಣ ಮಧ್ಯಪ್ರದೇಶ, ಮಹಾರಾಷ್ಟ್ರದ ಪಶ್ಚಿಮ ಭಾಗ ಸೇರಿದ ಮಧ್ಯಭಾರತದಲ್ಲಿ ಇವರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ.
     ಈಗ ರಾಮೇಶ್ವರಂ ಮತ್ತು ಶ್ರೀಲಂಕಾದ ಮಧ್ಯವಿರುವ ರಾಮಸೇತು ಮಾನವನಿರ್ಮಿತವೆಂಬ ಕಲ್ಪನೆಯನ್ನು ನಂಬಿಕೆಯ ವಿಚಾರವಾದರೂ ಸ್ವಲ್ಪ ಹೊತ್ತು ಪಕ್ಕಕ್ಕಿಡಿ.  "As per the geological, geographical and remote sensing investigations carried out so far, the Adam's Bridge area is of natural origin with a particular stratigraphic sequence, formed due to marine geomorphological and coastal shoreline processes. Studies by Geological Survey of India also confirm this." ಎಂದು ನಾಸಾ ಮತ್ತು ಭಾರತ ಸರ್ಕಾರದ ವಿಜ್ಞಾನಿಗಳ ತಂಡ ತನ್ನ ಅಧಿಕೃತ ದಾಖಲೆಯಲ್ಲೇ ಹೇಳಿವೆ.
     ’ಉತ್ತರ ಫಾಲ್ಗುಣಿಯು ಹಸ್ತಾ ನಕ್ಷತ್ರದೊಡನೆ ಸೇರಿದ ಶುಭ ಮುಹೂರ್ತದಲ್ಲಿ ವಾನರ ಸೇನೆ ರಾಮನ ನೇತೃತ್ವದಲ್ಲಿ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿತು. ಅವರು ಹಸಿರಿನಿಂದ ಆವೃತವಾದ ಸಹ್ಯ ಪರ್ವತವನ್ನು, ನದಿ ಝರಿ ಕಾಡುಗಳಿಂದ ಕೂಡಿದ ಮಲಯ ಪರ್ವತವನ್ನು ಕಂಡರು. ಬಳಿಕ ಅವರು ಮಹೇಂದ್ರ ಪರ್ವತವನ್ನು ತಲುಪಿದರು. ರಾಮನು ಈ ಪರ್ವತವನ್ನೇರಿ ಆಮೆ, ಮೀನುಗಳಿಂದ ತುಂದಿದ ಸಾಗರವನ್ನು ಕಂಡನು.’ ಇದು ರಾಮಾಯಣದಲ್ಲಿ ಕಂಡುಬರುವ ವರ್ಣನೆ. ಕಿಷ್ಕಿಂಧೆ ಕರ್ನಾಟಕದಲ್ಲಿತ್ತು ಎಂದುಕೊಂಡರೂ ದಕ್ಷಿಣ ತುದಿಗೆ ಸಾಕಷ್ಟು ದೂರವಿದೆ. ರಾಮನ ಸೇನೆ ದಕ್ಷಿಣಾಭಿಮುಖವಾಗಿ ಸಾವಿರಾರು ಮೈಲುಗಳಷ್ಟು ಬಂದರೂ ಸಹ್ಯ, ಮಲಯ, ಮಹೇಂದ್ರ ಪರ್ವತಗಳನ್ನು ಬಿಟ್ಟರೆ ಮತ್ಯಾವ ಗುರುತಿನ ನೆಲಗಳನ್ನೂ ಹೆಸರಿಸದಿದ್ದುದು ನೋಡಿದರೆ(ಮಾನವನ ಅಸ್ತಿತ್ವದ ಆರಂಭಕಾಲದಿಂದಲೂ ಜನವಸತಿಯನ್ನು ಹೊಂದಿದ ಕಾವೇರಿ ಕಾಣದಿದ್ದುದು ಆಶ್ಚರ್ಯ) ಕವಿಗೆ ದಕ್ಷಿಣ ಭಾರತದ ಪರಿಚಯ ಸರಿಯಾಗಿಲ್ಲವೆನ್ನುವುದು ಸ್ಪಷ್ಟ. ಇನ್ನು ರಾಮೇಶ್ವರದ ಬಗ್ಗೆಯಂತೂ ಕವಿಗೆ ಏನೂ ಗೊತ್ತಿಲ್ಲ. ಹನುಮಂತ ಇಲ್ಲಿಂದಲೇ ೧೦೦ ಯೋಜನಗಳ ಸಮುದ್ರವನ್ನು ದಾಟಿದನೆಂದಿದೆ. ವಾನರರು ಕಟ್ಟಿದ ರಾಮಸೇತುವೂ ೧೦೦ ಉದ್ದ, ೧೦ ಯೋಜನ ಅಗಲವಿತ್ತಂತೆ. ಒಂದು ಯೋಜನವೆಂದರೆ ಆರ್ಯಭಟೀಯಂ, ಸೂರ್ಯಸಿದ್ಧಾಂತವೇ ಇತ್ಯಾದಿ ಗ್ರಂಥಗಳ ಪ್ರಕಾರ ೮ ಕಿ.ಮಿ. ಮತ್ತು ಭಾಗವತ ಪುರಾಣದ ಪ್ರಕಾರ ೧೩ ಕಿ.ಮೀ. ಇರಲಿ..... ೮ ಕಿ.ಮೀ ಎಂದೇ ಇಟ್ಟುಕೊಳ್ಳೋಣ. ಅಲ್ಲಿಗೆ ರಾಮೇಶ್ವರಂ ಮತ್ತು ಶ್ರೀಲಂಕಾದ ನಡುವಿನ ಉದ್ದ ೮೦೦ ಕಿ.ಮೀಗಳಾಗಬೇಕಾಯ್ತಲ್ಲ? ಆದರೆ ಈಗ ಇರುವುದು ಅಬ್ಬಬ್ಬಾ ಎಂದರೆ ೨೪ ಕಿ.ಮೀಗಳಷ್ಟೇ. ಭಾರತ ಮತ್ತು ಶ್ರೀಲಂಕಾದ ಮಧ್ಯ ಮೈಲಿಗಟ್ಟಲೆ ವಿಸ್ತಾರವಾದ ಸಾಗರವಿರುವುದಾದರೆ ರಾಕ್ಷಸರು ಲಂಕೆಯಿಂದ ಹೊರಗೆ ಪದೇ ಪದೇ ಹೋಗಿಬರುತ್ತಿದ್ದುದು ಹೇಗೆ? ವಾಸ್ತವವಾಗಿ ಸೇತುವೆ ಕಟ್ಟಲ್ಪಟ್ಟ ರಾಮೇಶ್ವರ ಎಂಥಹ ಸ್ಥಳ? ಮಹೇಂದ್ರ ಪರ್ವತವಿರುವುದಾಗಿಯೂ, ಅದರ ಮೇಲಿಂದ ಹನುಮಂತ ಲಂಕೆಗೆ ಜಿಗಿದನೆಂದೂ, ಅಕ್ಕಪಕ್ಕದ ಬೆಟ್ಟಗಳನ್ನು, ಮರಗಳನ್ನು, ಕಲ್ಲುಬಂಡೆಗಳನ್ನು ಎತ್ತಿಹಾಕಿ ನಳನೂ ವಾನರರೂ ಸೇತುವಿನ ನಿರ್ಮಾಣಮಾಡಿದರೆಂದು ಹೇಳುವುದಾದರೆ ರಾಮೇಶ್ವರದಲ್ಲಿ ದೂರದೂರಕ್ಕೂ ಕಾಣಸಿಗುವುದು ಬರಿಯ ಮರಳ ದಿಣ್ಣೆಗಳಷ್ಟೆ. ಇಲ್ಲಿನ ಮರಳ ಬಿಸಿಲಲ್ಲಿ ಕಾದು ಕೆಂಪಾಗಿ ತಾಮ್ರದ ಬಣ್ಣದಲ್ಲಿರುವುದರಿಂದ ಈ ಪ್ರಾಂತ್ಯ ಪ್ರಾಚೀನ ಕಾಲದಿಂದಲೂ ತಾಮ್ರಪರ್ಣಿ ಎಂದೇ ಹೆಸರಾಗಿತ್ತು. ಇಲ್ಲೆಲ್ಲೂ ಕುರುಚಲು ಗಿಡಗಳನ್ನು ಬಿಟ್ಟರೆ ಸಸ್ಯಸಂಪತ್ತಿಲ್ಲ, ಬೆಟ್ಟಗುಡ್ಡಗಳಿಲ್ಲ. ಕಲ್ಲುಬಂಡೆಗಳು ಬೇಕೆಂದರೂ ಒಳನಾಡಿನಲ್ಲಿ ಕೆಲವು ಮೈಲಿ ದೂರದಿಂದ ಹೊತ್ತು ತರಬೇಕು. ಈ ಪ್ರಕರಣವೊಂದು ಸುಂದರ ಕಲ್ಪನಾ ಸಾಮ್ರಾಜ್ಯ.
     ಇನ್ನು ರಾಮ-ರಾವಣರ ಸೈನ್ಯ ವ್ಯೂಹಗಳ ರಚನೆಯನ್ನು ಗಮನಿಸಿ. ರಾವಣನು ಲಂಕೆಯ ಉಳಿದ ದಿಕ್ಕುಗಳಂತೆ ದಕ್ಷಿಣ ದಿಕ್ಕಿನಲ್ಲೂ ಸಾವಿರಾರು ಭಟರೊಡನೆ ತನ್ನ ಸೇನಾಪತಿಯನ್ನು ನಿಯುಕ್ತಿಗೊಳಿಸಿದನು. ಆದರೆ ಲಂಕೆಯು ಗಿರಿಶಿಖರದ ಮೇಲಿದ್ದು, ಹಿಂಭಾಗದಲ್ಲಿ ಉದ್ದಕ್ಕೂ ಬರೀ ಸಾಗರವಿರುವುದರಿಂದ, ರಾವಣ ಹಿಂಭಾಗದಿಂದಲೂ ದಾಳಿಯನ್ನು ನಿರೀಕ್ಷಿಸಿದ್ದನೆಂದರೆ ಆಶ್ಚರ್ಯವೇ. ಇದೆಲ್ಲ ಕವಿಗಳ ಕಾವ್ಯದಲ್ಲಿ ಕಂಡುಬರುವ ಸಾಂಪ್ರದಾಯಿಕ ವರ್ಣನೆ. ನಮ್ಮ ಕವಿಯಂತೂ ಅದು ಸಂದರ್ಭಕ್ಕೆ ಹೊಂದುತ್ತದೋ ಇಲ್ಲವೋ ಎಂದು ಪರಿಗಣಿಸಲು ಹೋಗದೇ ಕಥೆಯನ್ನು ಇನ್ನಷ್ಟು ರಮ್ಯವಾಗಿಸಲು ಅಲ್ಲಲ್ಲಿ ತಿರುಕಿದ್ದಾನೆ. ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ರಾಮ ವಿಜಯದಶಮಿಯ ದಿನ ಲಂಕೆಗೆ ಮುತ್ತಿಗೆ ಹಾಕಿ ರಾವಣನನ್ನು ಕೊಂದನೆಂಬುದೂ ಸತ್ಯವಲ್ಲ. ಕಿಷ್ಕಿಂಧಾಕಾಂಡದಲ್ಲಿ ರಾಮ-ಲಕ್ಷ್ಮಣರು ವಸಂತಕಾಲಕ್ಕೆ ಪಂಪಾಪ್ರಾಂತ್ಯಕ್ಕೆ ಬಂದರು ಎಂದಿದೆ.  ಸುಗ್ರೀವ ಪಟ್ಟಾಭಿಷೇಕ ನಡೆದಿದ್ದು ಶ್ರಾವಣ ಮಾಸದಲ್ಲಿ. ಮಳೆಗಾಲದ ನಾಲ್ಕು ತಿಂಗಳು ಕಳೆದ ನಂತರ ಸೀತೆಯನ್ನು ಹುಡುಕಬೇಕೆಂದು ರಾಮ, ಸುಗ್ರೀವರ ಒಪ್ಪಂದವಾಯ್ತು. ಮಧ್ಯದಲ್ಲಿ ಉದ್ಯೋಗದ ಮಾಸವಾದ ಕಾರ್ತೀಕ ಬಂತೆಂದು ಸುಗ್ರೀವನಿಗೆ ನೆನಪಿಸುತ್ತಾನೆ. ಅಷ್ಟರಲ್ಲಾಗಲೇ ಆಶ್ವೀಜದ ವಿಜಯದಶಮಿ ಕಳೆದುಹೋಗಿತ್ತು. ಕಾಲದ ಕುರಿತಾದ ವರ್ಣನೆಯೇ ಸ್ಪಷ್ಟಪಡಿಸುತ್ತದೆ ರಾಮನು ವಿಜಯದಶಮಿಯಂದು ಯಾತ್ರೆಯನ್ನು ಆರಂಭಿಸಲಾಗಲೀ, ರಾವಣನನ್ನು ಕೊಂದದ್ದಾಗಲೀ ಅಲ್ಲವೆಂದು.
     ಪುನಃ ಲಂಕೆಯೆಡೆ ಬರೋಣ. ಸಂಸ್ಕೃತ ಸಾಹಿತ್ಯದಲ್ಲಿ ಸಿಲೋನ್ ಅಥವಾ ಶ್ರೀಲಂಕಾವನ್ನು ಸಿಂಹಳ ಎಂದು ಗುರುತಿಸಲಾಗಿತ್ತೇ ಹೊರತೂ ಲಂಕೆಯೆಂದಲ್ಲ. ಮಹಾಭಾರತದ ವನಪರ್ವದಿಂದ ಹಿಡಿದು ಸಮುದ್ರಗುಪ್ತನ ಅಲಹಾಬಾದ್ ಸ್ಥಂಭ ಶಾಸನ, ವರಾಹಮಿಹಿರನ ಬೃಹತ್ ಸಂಹಿತೆಯವರೆಗೂ ಲಂಕೆ ಮತ್ತು ಸಿಂಹಳವನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಫಾಹಿಯಾನ, ಹ್ಯೂಯಾನ್ಸಾಂಗ್, ಇಟ್ಸಿಂಗ್ ಈ ಮೂರೂ ಪ್ರಸಿದ್ಧ ಚೀನಿ ಯಾತ್ರಿಕರಿಗೂ ಈ ದ್ವೀಪ ಸಿಂಹಳವೆಂಬ ಹೆಸರಿನಿಂದ ಗೊತ್ತಿತ್ತೇ ಹೊರತೂ ಲಂಕೆಯೆಂದಲ್ಲ. ಮಾವಿನ ಹಣ್ಣಿನ ಆಕಾರದಲ್ಲಿರುವುದರಿಂದ ಇದಕ್ಕೆ ಆಮ್ರದ್ವೀಪವೆಂಬ ಹೆಸರೂ ಇತ್ತು. ಸಿಲೋನಿನ ಪ್ರಾಚೀನ ಪಾಲಿ ಸಾಹಿತ್ಯದಲ್ಲಿ ರಾಮಾಯಣದ ಉಲ್ಲೇಖವಿಲ್ಲ. ದೀಪವಂಶ ಮತ್ತು ಮಹಾವಂಶಗಳು ಟ್ರಂಕಾಮಲಿಗೆಯ ಆಗ್ನೇಯದಲ್ಲಿರುವ ಇಲಂಕೈ ಎಂಬ ಪ್ರದೇಶವನ್ನು ಗುರುತಿಸಿವೆ. ಯಕ್ಷರು ಈ ನಗರವನ್ನು ವ್ಯವಸ್ಥಿತವಾಗಿ ಆಳುತ್ತಿದ್ದರಂತೆ. ವಿಜಯನೆಂಬುವವನು ಕುವಣ್ಣನ ಸಹಾಯದಿಂದ ಅವರ ರಾಜನನ್ನು ಕೊಂದನಂತೆ. ಸಿಂಹಳದ ’ಮಹಾಮಯೂರಿ’ಯಲ್ಲಿ ವಿಭೀಷಣನನ್ನು ಇಲ್ಲಿ ಪೂಜಿಸಲ್ಪಡುವ ಯಕ್ಷನೆನ್ನಲಾಗಿದೆ. ರಾವಣನೊಂದಿಗೆ ಸೇರಿಕೊಂಡ ವಿಭೀಷಣ ಇವನೇ ಇರಬೇಕು.
      ಇನ್ನೊಂದು ಮಜಾ ವಿಷಯ ನೋಡಿ. ಹತ್ತನೇ ಶತಮಾನದ ಹೊತ್ತಿಗೆ ದಕ್ಷಿಣ ಕೊಂಕಣದ ಶಿಲಾಹಾರರು ಗೋವೆಯನ್ನು ಗೆದ್ದರು. ಇದನ್ನು ಬಹಳ ಹೆಮ್ಮೆಯಿಂದ ತಮ್ಮ ತಾಮ್ರಶಾಸನದಲ್ಲಿ ’ನಿಶ್ಶಂಕ ಲಂಕೇಶ್ವರ’ನೆಂದು ಹೇಳಿಕೊಂಡಿದ್ದಾರೆ. ಇನ್ನೊಂದು ದಾಖಲೆಯಲ್ಲೂ ಶಿಲಾಹಾರರನ್ನು ಲಂಕೆಯ ಒಡೆಯರೆನ್ನಲಾಗಿದೆ.  ಭೌಗೋಳಿಕ ದೃಷ್ಟಿಯಿಂದ ಗೋವೆ ಅಥವಾ ಮತ್ತಿತರ ದ್ವೀಪದಂಥ ಪ್ರದೇಶಗಳಿಗೆ ಲಂಕೆ ಎಂಬ ಹೆಸರಿನಿಂದ ಕರೆಯುವ ವಾಡಿಕೆಯಿದ್ದಿತ್ತೇನೋ. ಇದು ದಕ್ಷಿಣ-ಮಧ್ಯಭಾರತದಿಂದ ಬೆಳೆದುಬಂದ ಪರಂಪರೆ. ಲಂಕಾ ಎಂಬುದು ಭಾಷಾ ವಿಜ್ಞಾನಿಗಳ ಪ್ರಕಾರ ಮುಂಡಾರಿ ಭಾಷೆಯ ಶಬ್ದವೇ ಹೊರತೂ ಸಂಸ್ಕೃತ ಜನ್ಯವಲ್ಲ. ಇದು ಇಂಡೋ ಆರ್ಯನ್ ಅಥವಾ ದ್ರಾವಿಡ ಭಾಷವರ್ಗಕ್ಕೆ ಸೇರದೇ ಆದಿವಾಸಿಗಳ ಆಸ್ಟ್ರೋ ನೇಸಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು. ರಾವಣನನ್ನು ತಮ್ಮ ಮೂಲಪುರುಷನೆಂದುಕೊಳ್ಳುವ ಗೊಂಡ ಸಮುದಾಯವೇ ಸೇರಿದಂತೆ ಇಂದಿಗೂ ಈ ಭಾಷೆಯನ್ನು ಮಾತಾಡುವ ಬುಡಕಟ್ಟುಗಳು ಮಧ್ಯಭಾರತದಲ್ಲಿವೆ. ಆಂಧ್ರ ಒರಿಸ್ಸಾ ಗಡಿಯ ತೆಲ್ ಮತ್ತು ಮಹಾನದಿಯ ಸಂಗಮಸ್ಥಾನದಲ್ಲಿರುವ ಸೋನ್‌ಪುರವನ್ನು ಪಶ್ಚಿಮ ಲಂಕಾ ಎನ್ನಲಾಗಿದೆ. ಆಂಧ್ರದ ಗೋದಾವರಿಯ ನಡುವಿನ ಅಸಂಖ್ಯ ನಡುಗಡ್ಡೆಗಳಿಗೆ, ಅಳಿವೆ ಪ್ರದೇಶದ ಸಣ್ಣಪುಟ್ಟ ದ್ವೀಪಗಳಿಗೆ ಲಂಕಾ ಎಂಬ ಹೆಸರಿದೆ. ಕೋತಲಂಕಾ, ಅಪ್ಪಲರಮುನಿ ಲಂಕಾ, ಐನಾವಿಲಿ ಲಂಕಾ, ಕೃಷ್ಣಲಂಕಾ ಮಾತ್ರವಲ್ಲ ಬಾಪಟ್ಲದ ಸೂರ್ಯಲಂಕಾ, ಕೃಷ್ಣಾ ತೀರದ ನಾಗಯಲಂಕಾ ಎಂಬ ಹೆಸರುಗಳು ಆಂಧ್ರದೇಶದಲ್ಲಿ ದ್ವೀಪಗಳಿಗಿರುವ ಸಾಮಾನ್ಯ ಹೆಸರುಗಳು.  ಗೋದಾವರೀ ನದಿ ಮುಖಜ ಭೂಮಿಯ ಸಮೀಪ ಸ್ಥಳವನ್ನೂ ಪ್ರಾಕ್ಕಿಲ್ಲಂಕಾ ಅಥವಾ ಹಳೆಯ ಲಂಕೆ ಎಂದು ಕರೆಯುತ್ತಾರೆ. ಗೋದಾವರಿಯ ಉತ್ತರಕ್ಕಿರುವ ಬಸ್ತರ್‌ನಲ್ಲಿ ಲಂಕಾ ಮತ್ತು ಲಕ್ಕೈ ಎಂಬ ಹೆಸರಿನ ಎರಡು ಹಳ್ಳಿಗಳನ್ನು ಕಾಣಬಹುದು. ಇದೇ ಪ್ರದೇಶದಲ್ಲಿ ೯ನೇ ಶತಮಾನದ ಕುಮಾರ ಸೋಮೇಶ್ವರ ದೇವನ ಶಾಸನವೊಂದು ದೊರೆತಿದೆ. ಆರಂಭಿಕ ಸಂಶೋಧನೆಗಳಿಂದ ಈ ಸ್ಥಳ ಬಹಳ ಪುರಾತನವೆಂದು ತಿಳಿದುಬಂದಿದೆ. ವಿವಿಧ ಐತಿಹಾಸಿಕ ಅವಧಿಗಳಿಗೆ ಸಂಬಂಧಿಸಿದ ಕಬ್ಬಿಣದ ಸಾಧನಗಳು, ಮಡಿಕೆ ಚೂರುಗಳೂ, ಮುದ್ರೆಯುಳ್ಳ ಬೆಳ್ಳೀನಾಣ್ಯಗಳು, ಆಯುಧಗಳು ಕಂಡುಬಂದಿವೆ. ಗೋದಾವರೀ ಮುಖಜ ಭೂಮಿಯಲ್ಲಿಯೂ ಇಂಥದೇ ಉತ್ಖನನಗಳಾದರೆ ಲಂಕೆಯ ಇತಿಹಾಸದ ಮೇಲೆ ಹೆಚ್ಚು ಬೆಳಕು ಬೀರಬಹುದು.

21 comments:

 1. ಸಾಕಷ್ಟು ವಿವಾದಗಳಿಗೆಡೆಮಾಡಿಕೊಡಬಹುದಾದ ಆದರೆ ಅಚ್ಚುಕಟ್ಟಾದ, ತರ್ಕಬದ್ಧವಾದ ಬರಹ. ಓದಿ ಖುಶಿಯಾಯಿತು.

  ReplyDelete
  Replies
  1. ಧನ್ಯವಾದಗಳು ಮಂಜುನಾಥ್ ಸರ್

   Delete
 2. ನೀವು ಕೊಟ್ಟಿರುವ ವಿವರಗಳ ಬಗ್ಗೆ ನನಗೇನೂ ಗೊತ್ತಿಲ್ಲ.
  ಆದರೆ ಆಧ್ಯಯನದ ಹರವು ಕಂಡು ಆಶ್ಚರ್ಯವಾಯಿತು.
  ಬರೆಯುತ್ತಿರಿ

  ReplyDelete
 3. ® ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete
  Replies
  1. ಖಂಡಿತ ಭೇಟಿ ಕೊಡುತ್ತೇನೆ. ಧನ್ಯವಾದ

   Delete
 4. ಸ್ವರ್ಣಾ ಅವರು ಕೊಟ್ಟ ಮಾಹಿತಿ ಮೇರೆಗೆ ನಿಮ್ಮ ಬ್ಲಾ*ಗಿಗೆ ಬಂದೆ. ವೈಚಾರಿಕ, ಅನ್ವೇಷಕ ಲೇಖನವನ್ನು ಓದಿ ತುಂಬ ಖುಶಿಯಾಯಿತು. ರಾವಣನ ಲಂಕೆಯು ಗೋದಾವರಿ ನದಿಯಲ್ಲಿರುವ ಒಂದು ನಡುಗಡ್ಡೆ ಎನ್ನುವ ಮಾತಿದೆ. ಲಕ್ ಎಂದರೆ ನಡುಗಡ್ಡೆ. ಆದುದರಿಂದ ರಾವಣನ ಲಂಕೆಯು ಇಂತಹದೇ ಒಂದು ನಡುಗಡ್ಡೆಯಾಗಿರಲಿಕ್ಕೆ ಸಾಕು.

  ReplyDelete
 5. Sachin ravare...odi tumba santoshavaytu. nanagu ade samshaya. yakendare gokarna.... dalli Ravana atmalinga itta emba kathe barutte . shivalingavannu hididu.. paschima karavaliyalinda prayanisuva agatya venittu?? hindomme jijnaseyinda inthahude aneka lekhanagalannu odide.

  nimma lekhana dalli adhyayanada haravu tumba vishalavadudu. innu ee vishayda bagge belaku beelali endu ashishuttene.

  ReplyDelete
  Replies
  1. ಧನ್ಯವಾದಗಳು. ಗೋಕರ್ಣದ ಬಗ್ಗೆ ರಾಮಾಯಣದ ಪ್ರಕ್ಷೇಪಗಳು ಲೇಖ್ಹನದಲ್ಲಿ ಉಲ್ಲೇಖಿಸಿದ್ದೇನೆ. ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ

   Delete
 6. aatmeeyare, facebook post ondaralli kaNDa nimma blog post na title noDiyE illige bande. interesting post..
  aadare i am sorry to say research on the topic doesn't seem to be sufficient.
  nimma prayatnakke nanna namaskaragaLu. aadare viShayavanna confuse maaDtiddira anstu. aaddarinda 'let me come to the point' anta neevu hELO varegu nanage kanDa abhiprAyabhEdagaLanna ashTE illi bareetiddini (i mean, innu points ide, but aa point varegu irOdakkaShTE ee pratikriye).. idara mEle neevu swalpa beLaku chellidre ondu aarogyapUrNavaada charche naDeebodu anno aase... bhinnAbhiprAyakke kShame irali... (kannaDavanna english alli bareetirOdakkU kShame irali, nanage bEre vidhi sigtilla illi)

  1) modalige, rAmanu avatAra puruSha embudu 'kalpane' alla. adu 'satya'. there's a difference between 'myth' and 'truth'.

  2) ee 'satya'da arike namage baalakaanDadalle sigutte. uttarakANDakke hOgabEkilla.

  3) uttarakANDa bahaLa kAlada nantara sErpaDe aagiddakke saakShigaLilla. adu vaalmeekiyE rachisiddu annOdakke bEkiddare 'itihAsa' anno padavE saakShi aagutte.

  (...)

  ReplyDelete
 7. (...contd)

  4) seete vEdavatiya aMsha ennuva 'kalpane' iRuvudu paadmaadi purANagaLalli. rAmAyaNadallilla (naanu vidvAMsarinda kELiruva maTTige).

  5) anEkavAgi hindella (ashTe yaake, indigU prakaaNDa panDitaru) tiLidavaru katheyanna muktAyagoLisuvudu 'rAma paTTAbhiShEka'dallE. adakke iro ondE kAraNa - yavude ondu vRuttAntavanna shubhadondige muktAyagoLisabEku annodu. uttarakANDadalli rAma seeteyara viraha, ellara vaikunTHa nirgamana ityaadigaLirOdrinda adanna OdOdu rUDhisikonDillavE horatu adu prakShipta annO kAraNakkalla.
  aShTakkU adu prakShipta antle siddhavAgiddu adu ellarigU tiLididre (nimma blog prakAra), adanna mudriso gOjigE yArU hOgtirilveno, alva?

  6) bAlakANDa prakShipta alla. anEkaru ee tappu tiLuvaLikeyallirtAre. vaalmeeki taane tanna hesaranna sErisikonDu 'naanu heege maaDide' annO badalige 'vaalmeeki heege maaDida' anta heLo prasanga irtirlilla. intha prayOgagaLna nODidrE tiLiyutte, adu prakShipta anta annOdu kelavara vaada. aa 'kelavaru' annodralli naanu mEdhAvilAsakkAgiyE vaiyaktikavAgi mecchuva DVG avrU obru. aadru tappu antini.
  bAlakAnDadalli hELiruva ondE ondu maatu 'lakShmaNanige maduve aagittu' annodu aamele rAma 'maduve aagilla' anta hELida mAtrakke suLLAgalla. innU neevu rAmAyaNakke irO vyAkhyAnagaLanna (especially gOvindarAjeeya) Odidare avanu aa sandarbhadalli haage hELOkke irO kAraNagaLnU hELtaare. aaddarinda maduve aagidrU aagilla anta hELOkke kaaraNa ide anbOdu. adu biTTare there seem to be no other contradictions whatsoever. ashTakkU adu prakShiptavAgE iddalli ayOdhyA kANDavE modalu annO pakShadalli ondu gamanisabEkAgutte. kaviyAdavanu ondu mahAkAvyavanna rachisuvAga ondu peeThike illade khanDita 'out of the blue' rachane shuru mADOdilla. aadare ayOdhyA kANDadalli modalaneya sargadindalE rAmana kalyANaguNagaLa varNane, avanu naagareekara jothe beretu tanna sausheelyAdi
  guNagaLanna tOrsiddu, dasharatha avana paTTAbhishEkavanna eNisiddu ityAdigaLu barutte. that would certainly not be the place a 'mahAkAvya' like rAmAyaNa would begin. would it? haagiddare adakke peeThike koTTirlEbEku. aa peeThikaa bhaaga poorti baalakaaNDadallide.

  7) bAlakANDadalli, uttarakANDadalli maatra rAmana avataara prastApa irOdu antlU, yuddhakANDavanna yathAvattAgi neevu oppikoLLOdAgiyU hELidre ondu maatu... yuddha kANDadalli yuddhavella mugidamEle dEvategaLella bandu rAmanige 'ninna avatArada uddESha eeDeritu, neenu innu ninna lOkakke hindirugu' anta hELodanna neevu gamanisabEku. 'viShNunA sadRuSO veeryE' annOdaShTE alla.. 'bhavAn nArAyaNO dEvaH' antlu maatide... nimma adE 'moola rAmAyaNa'dallE.. adu satya annOdAdre adakke peeThikeyalli hELirOdU satyavE aagirbEku. so bAlakANDa prakShipta alla annOdu tiLiyutte. ee 'bhavAn nArAyaNO dEvaH' ityAdi vaakyagaLannu saha neevu prakShipta annOdAdre nimma prakAra 'moola rAmAyaNa'da haravu tiLibeku naanu. any publication?

  again, bhinnAbhiprAyagaLige kShame irali.. barediro dhATiyallEnAdaru tappidre kShame irali... ondu ArOgyapUrNavAda arthapUrNavAda charche bEku annodaShTE nanna aashaya.

  --Srinivasa

  ReplyDelete
 8. kShamisi, innU eraDu points biTTU hOgiddvu:

  8) mUla rAmAyaNadalli atimAnuSha ghaTanegaLu atyalpa anta hELtira. avu yAva yAvuvu annOdanna swalpa vivarstira? avu nijavE aagiddare puShpaka vimAnAdi neevu ullEkhisirO ellavU yAke nijavAgirbArdu? nimma prakAravE mUla rAmAyaNadallE ullEkhavAgirO atimAnuSha ghaTanegaLU saha nijavalla annOdaadre aa ghaTanegaLu mooladalli hEge sErpaTTavu?
  ashTakkU 'atimAnuSha' anta neevu vivarisO ghaTanegaLa paTTi enu?

  9) vAlivadheya prasangavanna nyAyasangatagoLisuva prayatna hosadu anta hEge hELtira? ashTakkU aa prasangadalli barO prashnOttaragaLu irlilla andre rAma aadarShapuruShanAgtirlilve? haagidre aa prashnOttaragaLna yAru yAvaga sErsidru anta purAveya sahitavAgi hELOkke sAdhyavA? ashTe allade, vaalivadheyalli vaaliyE rAma mADiddu sari anta kaDege oppikoLLuvAga idara vichAra hosadAgi saMshOdhane mADi idu prakShipta idu moola anta nirNaya maaDabEke? athava nimma 'mUla rAmAyaNa'dalli vAli tanna vadheyanna 'anyAya' antle nirNaya mADtAna?
  well, naanu hELokke bandiddu iShTE: vaalivadheyanna yArU deliberate aagi nyAyasangatagoLisuva 'prayatna' mADilla. aa 'prayatna've nija anta neevu nambOdidre : behold : i repeat, aa 'prayatna'vE nija (moolataH aa bhAgavU prakShipta) annodu nimma vAdavAdare munde nimma vAdakke neevu baLasuva 'ikShvAkUNAm iyaM bhUmiH' shlOkavU nimma prakAra 'prakShipta'. haagiddare 'prakShipta' slOkavanniTTukoNDu kiShkindhe ellittu anta vaada manDistiddira? :-)

  --Srinivasa

  ReplyDelete
 9. ಒಳ್ಳೆಯ ಲೇಖನ. ಆದರೂ ಕೆಲವೆಡೆಗಳಲ್ಲಿ ಯೋಚನಾಲಹರಿ ಅರ್ಧಕ್ಕೆ ನಿಲ್ಲಿಸಿ ಅನುಕೂಲದ ವಾದ ಮಂಡಿತವಾಗಿದೆ ಎನಿಸುತ್ತದೆ.
  ಉದಾ: ಲಂಕೆಯ ಸೇತುವಿನ ಪ್ರಸ್ಥಾಪ ಬಂದಾಗ ಯೋಜನದ ಅಳತೆ ಪ್ರಸ್ಥಾಪಿಸಿ ಸಿಂಹಳ ಲಂಕೆ ಎಂಬುದನ್ನು ಅಲ್ಲಗೆಳೆಯುವುದಕ್ಕೆ ಆಧಾರ ಮಾಡಿ, ಗೋದಾವರಿಯಲ್ಲಿನ ಲಂಕೆಯ ಸಾಧ್ಯತೆಯನ್ನು ನುಡಿವಲ್ಲಿ ಅದೇ ಅಳತೆ ಗೋಲನ್ನು ಹಿಡಿಯದಿರುವುದು.
  ಗೋದಾವರಿಯ ಯಾವ ನಡುಗುಡ್ಡೆ/ದ್ವೀಪವು ತೀರದಿಂದ ನಿಮ್ಮಳತೆಯ ನೂರು ಯೋಜನ ದೂರದಲ್ಲಿದೆ ?
  ಇದು ಒಂದು ಉದಾಹರಣೆಯಷ್ಟೇ.
  ಇನ್ನೂ ಹೆಚ್ಚಿನ ಅಧ್ಯಯನ, ತರ್ಕ, ಆಧಾರಗಳು ಬೇಕೆನಿಸುತ್ತದೆ.
  ಪ್ರೊ. ಪದ್ಮಾಕರ ವಿಷ್ಣು ವರ್ತಕ ರ 'ವಾಸ್ತವ ರಾಮಾಯಣ' ( ಮರಾಠೀ, ಅನುವಾದ:ಶ್ರೀ ಹೇಮಂತರಾಜ ಕುಲಕರ್ಣೀ) ವನ್ನು ಒಮ್ಮೆ ಓದಿದಲ್ಲಿ ಅಧ್ಯಯನಕ್ಕೆ ಸಹಾಯಕವಾಗಬಹುದು.
  > ಜಿ.ಎಸ್.ಮಂಜುನಾಥ.

  ReplyDelete
 10. nanna dvAdasha-dUShaNI :D sorry...

  1) 'ikShvAkUNAm iyaM bhUmiH' slokada artha... well, ikShvAku doregaLu iDee bhUmanDalavanna aaLuvavaru anta hesaru paDedavaru. avarige ee bhaaratada ondu bhAgada bhUmiyanna 'avaraddu' anta heLkoLLOdu saadhyavillave?
  prati ondu prAntyakkU obba arasana hesaru ullEkhavAgide anta vAdisOdAdre: nija, pratyEka pradEshagaLige pratyEka arasaru niyamisalpaTTirtAre. aadare avarellarigU arasu ikShvAku arasu. 'rAjAdhirAjaH sarvEShAM' ennuva reetiyalli.. arasarigU arasaru..
  ashTillade bere yAvudO pradEshakke bere yAraddO rAjyakke paTTa kaTTuva adhikAra rAmanige yAru koTTidru? avanaddE rAjyadalli ondu prAntyakke arasAgi sugreevananna, mattondu prAntyakke arasaagi vibheeShaNananna koorstaane raama. adrallE tiLiyutte adella avanaddE rAjya anta. hAgiruvAga hampiyE yAke kiShkindhe AgirbArdu?

  2) lanke samudrada madhyadallE iddirbEku. adu eegina sri lankeyE aagirbEku. kaaraNagaLu heege:
  -> ondu vELe lanke 'sarOvara athava nadi madhyada dveepa' antle iTkoLLONa.. saagara annOdu 'ati doDDa neerina sele'ge iTTa hesaru antle bhAvisONa. aadare aa neerina seleya vistAra eShTiddirabahudu? eevattella 'sAgara' anta karskoLLO anthA nadi athava sarOvarada vistAra eShTu? halavaaru kilometer gaLe? haagU ittu antle iTkoLLONa (for example rivers like brahmaputra...). aadrU adu 'nUru yOjana'kkintlU vistAravE? sAdhyavE illa alva? nimma lekkada prakAravE 800 km ginta agalavAda nadi/sarOvara irOdu saadhyave? haagidre vAnararella sEri ellige sEtuve kaTTidru?

  hAgU ondu vELe 'sAgara' anno pada 'ati doDDa nadi/sarOvara'vannE pratinidhisutte annONa. hAgidre sEtuve kaTTuvAglAdru adara hesaru hELbEkittu alve? aadre sEtubandhana prakaraNadalli bari 'sAgara' andilla... 'samudra' antlu ondu pada upyOgstaare. ondu bAri alla, nUrAru bAri..aa padavanna neevu kaibiTTiruvudu Ascharya!

  nimma prakAra 'samudra' annOdE bEre.. so samudra antle avru heLuvaaga nadi/sarOvara anta naavu
  hEge assume mADkoLLOdu?

  3) avasaravAgi ODuvavaru dUra ODabAradu annOdu yAva rule-u? lanke ge avaru ODirabahudu. ashTakkU neevu hesarisidavarellarU rAkShasaru.. avarige 'khEchara'ru annO anvartha nAma ide. andre avarellarigU 'AkAsha mAragadalli sancharisuva shakti' ittu. sAdhAraNa manushyarige prANigaLige irlilla. hAgAgiyE avaru leelAjAlavAgi ODADtidda lanke ge vAnararu hOguvAga yAru samudra hArO sAmarthya irOru anta chintane naDesOdu.

  ashTakkU ondu nadi madhyada dveepavE lanke aagiddu allige ellarU sarAgavAgi hOgi barO sAmarthya ellarigU iddare modalige angada, jaambavAn, hanUmAn, ityAdi pramukharella seetyanna anvEShaNe mADuvAga aa samudravanna dATO shakti yArigide anta tale keDisikoLLOdE bEkirlilla alve? ellarU oTTAgiyE hOgi lanke nODi barbOdittu. prAyashaH hanumantanigU sahAya aagirtittEno, ellarU oTTigE hOgiddare? :-)

  4) gOdAvariyannullEkhisidarU 'nAsika'da hesarettuvudilla ambOdu nimma vAdavAdare: nAsika anta aa prAntyakke hesaru bandiddE 'shurpanakheya mUgu kattarisalpaTTaddarinda. avaLa 'naasika' (moogu) alli biddiddarinda aa pradEshakke aa hesaru anta prateeti. haagiruvAga aa prasangakkU munnavE allige 'nAsika' anta hEge kareyOdu?

  5) narmadeya viShaya: obba kaviyAdavanu pratiyondu nadiya athavA prAntyada hesarannU dAkhalu mADalE bEku anno yAva nirbandhavU illa, alve? aa nadi athava aa praantya mukhyavAgi kanDare aaga adanna ullEkhistAneyE horatu kEvala rAma alli naDeda mAtrakke adara ullEkha irbEku anta enu ilvalla! narmadeya mArgavAgiyE avaru bandirabahudu. ashTakkU avaru ganDaki nadiyannU dATiralE bEku (patna hatra gange-ganDaki sangama aagodrinda). aadre ramayaNadalli ellU 'ganDaki' anta ondu hesarU kANalvalla.. anda mAtrakke avaru aa prAntyakke baralE ilve? moolataH vaalmeekigaLa aashrama iddiddE aa praantyadalli antaare...

  (...)

  ReplyDelete
 11. (...)

  6) dakShiNa bhAratada yAva jAgada prastApavU illa anta heLOdakke sAdhyavE illa. mahEndragiri anta neeve ullEkha mADteeri. adanna neevu satya anta bhAvistIri annONa. haagiddare aa mahEndra giri ellide? ondu amSha gamanisabEku. rAmAyaNadalli namage eevattu tiLidirO hesarugaLallE pradEshagaLanna ullEkhisirabEku annOdu sarvathA salladu. Enu beDa, saavira varShagaLa hinde idda hesarE eega maarpATAgiro ee jagattalli eraDu yugagaLa hinde idda pradEshagaLa hesarugaLu eevattigU nintiralEbEku annodu sAdhyavilla. nintidre santOSha. aadare ella kaDeyU adu anvayisalla. so ee mahEndragiri annOdu dakShiNa bhAratada tudiyalli (almost) iro beTTada saalige iro hesaru. tamiLalli idakke 'tirukkurunguDi' antAre ee kaaladalli. aa parvatagaLa mElindlE hanumanta munde lankege hAriddu antlU hELtaare.

  innu idE mahEndragiri annOdakke purAve: dakShiNa dikkige horaTa vaanararu vindhyadinda mahendragirige bandru annutte rAmAyaNa. ondu mahEndragiri (ellarU prasiddhavAgi nambiro hanumantana launchpad) orissa samudrada hattira ide anta heLtaare. ondu kShaNa ide nija anta nambidru idu vindhya maleya poorvakkirOdu. dakShiNakkalla.. vindhyada dakShiNakke iro mahEndra giri tirunelveli jille hatra ide.

  eega ondE hesaru eraDu parvatagaLna hEge heLutte anta keLbeDi.. ondE hesaru bere bere jaagagaLigiDodu khanDita saadhya.. udAharaNege 'shEshAdri' anta prasiddhi paDedirOdu tirumala beTTa. aadrU dakShiNadallU 'shEshAdri' unTu. purANagaLallE unTu.. anEkarige adu gottilla ashTe. adE reeti...

  aaddarinda vaanararu dakShiNada mahEndraparvatakkE bandidrU balarAma mahEndragiriyinda dakShiNakke gOdaavarige bandirOdu khanDita sAdhya.. without contradictions...


  7) rAmAyaNadalli rAvaNanannu dEvakaNTaka anta karedirOdara uddEsha bEre. dEvategaLige kaNTakaprAyanAddarinda aa hesaru. aadare rAmAyaNada yuddha kANDadallE sAlakanTaka santatiya nele lanke anta Odida nenapantu illa. dayaviTTu slOkagaLanna udAharisi.. avanna omme nODuve...

  8) ashTe alla, rAma kiShkindheyinda horaDuvaaga sugreevanige koDO aadEshagaLanna gamanisabEku. vAnarara sankhye atyadhikavAddarinda yAva oorinallU pravEshisade kEvala kaaDu guDDagaLallE sancharisi samudra sErabEku anta nuDeetaane. haagiruvAga kishkindheyinda horaTa mEle ellu dakShiNabhAratada oorugaLa hesaru barokke saadhyavE ilvalla! so dakShiNada oorugaLa hesaru illa anda mAtrakke alli avaru bandE illa anta illa. avaru yAva oorannU pravEshisada kAraNa ashTondu vaanararu bandubiTre oorinavarige tondare aadeetu anta..
  api cha avaru hiDida daari sampUrNa sahyaadriya patha.. poorNa dakShiNada tudi varegu bandu alli mahEndragiriya prAntyadalli avaru pashchimadinda pUrvakke cross maaDtaare (kAraNa: pashchimadinda pUrvakke avaru cross mADOkke sAdhyavidda ati chikka kADU adonde). allinda eegina 'tiruppullani' pradEshavanna daaTi (mahendragiri inda swalpa eeshanyakke) allinda mundakke samudradalli sEtuve bandhisirbEku anta tiLidavara abhiprAya.

  9) sEtuve kaTTirOdu rAmEshvaradinda anta ellu ullEkha illa. moolataH rAmEshvarakke rAma bandidda antle ullEkha illa. prAyashaH adu sEtuveya dAriyalli bandiddirabahudu. aadare sEtuveya kaTTuvike aarambhavAgiddu mahEndragiriyinda iLidare sigo samudradalli annOdu rAmAyaNa. that is clearly 'tiruppullani'. eeglu aa oorige hOdare nimage 'sEtukkarai' anta ondu jaaga tOristAre. samudrada teera. allindle sEtubandhana aarambha anta saavirAru varshagaLinda paramparAnugatavAgi tiLidavaru hELuva satya...

  10) tAmraparNee annOdu ondu nadiya paatra.. river basin.. tamraparni antle ondu nadi ide tirunelveli hatra. aa nadiya prAntyakke aa hesaru nadiyindaagi..innu alli beTTagaLE illa, bari bayalu pradEsha anta heLOdu sarvathA saadhyavilla. yAkandre adE tirunelveli tAmraparNi pAtradallE naavu mAtADtiro mahEndragiri (alias tirukkurungudi) irOdu.

  (...)

  ReplyDelete
 12. (...)

  11) rAvaNa dakShiNadallU sEneyanna niyOjisuvudara kuritu: swami, modalige nimma mUla rAmAyaNada prakAravE hELOdAdre lanke annOdu ondu durgama pradEshavAgi rAvaNa paalisikonDu bandidda. allige yaHkashchit ondu kapi leelaajaalavAgi pravEshisitu annOdannE jeerNa maaDkOLakke avanige saadhyavAglilla. anthadralli avanu 'apara sAgara' antle karesikonDa vAnarasamUhavanna tanna oora baagilalli kanDu yaava manassthitiyallirabahudO, neeve yochane maaDi... aaddarinda ella dikkindalU kapi sEneya daaLiyanna prateekShisida rAvaNa dakShiNadallu (eShTu dUrakkU samudravE kanDarU) sEneyanna niyOjisiddaralli aascharyavEnU illa. ashTakkU avanu kAmuka annOdu biTTare mahA mEdhAvi.. prakANDa panDita.. mahA parAkrami.. hanumantanE modala sala avananna nODuvAga beragAgtAne... hAgiddAga ashTu doDDa samUhavanna edurisuvAga bEkirO chANAkShate avanallirOdu sahajavE taane..
  kiM cha avana lekka tappAglilla. rAma sugreevana hattira vAnarasEne niyOjisuvAga lankeya naalkU dvAragaLige muttige hAkOdakke aadesha koDtaane. adaralli paschima dvAradalli hanumantana jothe taanE nillOdAgi rAma hELtaane.. illi gamanisabEkAda amsha: lankeya paschima dvAra namma bhAratakke pUrvadikkinallide. andre rAma lankApravEsha mADida adE dikkinallE (rAjamArgadallE) munduvareetaane. uLida veeraranna uLida muuru dvAragaLalli lagge hAkOkke niyOjistaane. haagiruvAga rAvaNa dakShiNadallU sEne niyOjisOdu vishEsha alla, alva?

  12) lanke mattu simhalavanna bErebErayAgiyE ullEkhisiddarU eraDu vastutaH bEre anta oTTige heLiddara? frankly, idara bagge nanage idea illa. aadare tArkikavAgi uttarisabEkandre: eraDu oTTigE prastApavAgiddare eraDU bEre bEre pradEshagaLAgiddu ondE dveepadalliddirabahudu.. athava oTTige prastApisilla antAdre onde pradEshakke eraDu hesaru iddirabahudu antAgutte. udAharaNege 'pAnDyadEsha' antlu 'drAviDa' antlu oTTige ullEkha maaDOdu nODiddini. moolataH eraDU eegina 'tamilnadu' pradEshave.. aagina kAlakke adrallE upavibhAgagaLiddirabahudu... hAgeyE illU Agirabahude?

  --Srinivasa

  ReplyDelete
  Replies
  1. ಶ್ರೀನಿವಾಸರೇ, ನಿಮ್ಮ ಅಭಿಪ್ರಾಯಗಳು ಸ್ವಾರಸ್ಯಕರವಾಗಿವೆ, ಆದರೆ ಇಷ್ಟು ದೊಡ್ಡ ಬರಹವನ್ನು ಇಂಗ್ಲಿಷ್ ಲಿಪಿಯಲ್ಲಿ ಓದಿ ಅರಗಿಸಿಕೊಳ್ಳುವುದು ತುಂಬ ಕಷ್ಟವಾಗುತ್ತಿದೆ. ದಯವಿಟ್ಟು ಇದನ್ನು ಕನ್ನಡ ಲಿಪಿಯಲ್ಲಿ ಹಾಕಲು ಸಾಧ್ಯವೇ? ಅಥವ ಇಂಗ್ಲಿಷ್ ಅನುವಾದವಾದರೂ ಆದೀತು.

   Delete
 13. http://www.youtube.com/watch?v=rMeAw-gZ1PQ

  ReplyDelete
 14. ಇಕ್ಷ್ವಾಕೂಣಾಮಿಯಂ ಭೂಮಿಃ ಸ ಶೈಲವನ ಕಾನನಃ
  ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ ||

  ಈ ಶ್ಲೋಕದಲ್ಲಿನ "ಇಯಂ ಭೂಮಿಃ" ಎಂಬುದಕ್ಕೆ "ಈ (ನಿರ್ದಿಷ್ಟ) ಭೂಪ್ರದೇಶ" ಎಂಬ ಸಂಕುಚಿತಾರ್ಥ ನೀಡುವ ಅಗತ್ಯ ಕಾಣದು. ಬದಲಿಗೆ ಕೇವಲ "ರಾಜ್ಯ"ವಷ್ಟೇ ಅಲ್ಲ, ಈ ಬೆಟ್ಟ-ಗುಡ್ಡ ಕಾಡುಗಳಿಂದ ಕೂಡಿದ ಭೂಮಿಯೆಲ್ಲವೂ ಇಕ್ಷ್ವಾಕುಗಳಿಗೆ ಸೇರಿದ್ದು, ಹಾಗೆಯೇ ಅಲ್ಲಿ ವಾಸಿಸುವ ಮೃಗ, ಪಕ್ಷಿ ಮನುಷ್ಯರೆಲ್ಲರ ನಿಗ್ರಹಾನುಗ್ರಹಗಳ ಅಧಿಕಾರ ಕೂಡ - ಎಂಬ ಧೋರಣೆಯನ್ನು ಆ ಶ್ಲೋಕ ಸೂಚಿಸುತ್ತದೆ. ಅಂದರೆ ಕಿಷ್ಕಿಂದೆಯು ಇಕ್ಷ್ವಾಕುಗಳ ಅಧಿಕಾರವ್ಯಾಪ್ತಿಗೊಳಪಟ್ಟಿತ್ತು ಎಂದಷ್ಟೇ ಆ ಶ್ಲೋಕ ಸೂಚಿಸುತ್ತದೆಯೇ ಹೊರತು, ಅವರ ಅಧಿಕಾರವ್ಯಾಪ್ತಿಯ ವಿಸ್ತಾರವನ್ನಾಗಲೀ, ಅಯೋಧ್ಯೆಗೆ ಕಿಷ್ಕಿಂದೆಯ ಸಾಮೀಪ್ಯವನ್ನಾಗಲೀ ಸೂಚಿಸುವುದಿಲ್ಲ.

  ಮತ್ತೆ ಮಾರೀಚನಾಗಲೀ ಶೂರ್ಪನಖಿಯಾಗಲೀ ಅವಸರವಸರವಾಗಿ ಅಷ್ಟು ದೂರದಲ್ಲಿರುವ ಲಂಕೆಗೆ ಧಾವಿಸುವುದು ಸಾಧ್ಯವಿಲ್ಲ ಎಂಬುದಕ್ಕೆ. ಹೌದು, ಮಾನುಷ ಸಂಭಾವ್ಯತೆಯ ದೃಷ್ಟಿಯಿಂದ ಈ ಮಾತು ಸರಿ. ಆದರೆ ರಾಮಾಯಣದಲ್ಲಿ ಮಾನುಷ, ಅಮಾನುಷ, ಅತಿ ಮಾನುಷ ಘಟನೆಗಳು ಸಾಧ್ಯತೆಗಳು ಹಾಸುಹೊಕ್ಕಾಗಿವೆ. ಅವುಗಳಲ್ಲಿ ಬಹುಪಾಲು ಪ್ರಕ್ಷಿಪ್ತವೆಂದೇ ಇಟ್ಟುಕೊಂಡರೂ, ಮೂಲರಾಮಾಯಣದಲ್ಲೂ ಇಲ್ಲವೇ ಇಲ್ಲವೆಂದಿಲ್ಲ. ಹೀಗೆ ಅತಿಮಾನುಷತೆಯನ್ನು ನಾವು ಸಂಪೂರ್ಣ ಇಲ್ಲಗಳೆಯಲು ಆಗದ್ದರಿಂದ, ಮಾರೀಚನಾಗಲೀ ಶೂರ್ಪನಖಿಯಾಗಲೀ "ದೂರದ" ಲಂಕೆಗೆ ಧಾವಿಸುವುದು ಅಸಂಭಾವ್ಯವೆಂದು ಸಂಪೂರ್ಣ ಅಲ್ಲಗಳೆಯಲು ಸಾಧ್ಯವಿಲ್ಲ.

  ಮತ್ತೆ, ಸಾಲವೃಕ್ಷಗಳು ವಿಶೇಷವಾಗಿ ಕಾಣಬರುವುದು ದಕ್ಷಿಣ ಬಿಹಾರ, ಮಧ್ಯಪ್ರದೇಶದ ಪೂರ್ವಭಾಗ, ಛತ್ತೀಸಘಢ, ಪಶ್ಚಿಮ ಓರಿಸ್ಸಾ ಮತ್ತು ಗೋದಾವರಿಯ ಮುಖಜಭೂಮಿಯಲ್ಲಿ ಮಾತ್ರ - ಇದು ಈಗಿನ ಸ್ಥಿತಿ. ಆದರೆ ನಾವು ಮಾತಾಡುತ್ತಿರುವುದು ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಮಾತು. ಆಗಿನ ಸಸ್ಯವರ್ಗ ಇತ್ಯಾದಿ ಬಾಹ್ಯ ಭೌಗೋಳಿಕ ಲಕ್ಷಣಗಳು ಈಗಿಗಿಂತ ಬೇರೆಯೇ ಇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

  ಇನ್ನು ರಾಮೇಶ್ವರಕ್ಕೂ ಸಿಂಹಳಕ್ಕೂ ಇರುವ ದೂರವು ನೂರು ಯೋಜನವಲ್ಲವೆಂದು ಒಪ್ಪಿದರೂ ಅದೇ ಮಾನದಿಂದ ನೋಡಿದರೆ ಲಂಕೆಯು ಭಾರತದಲ್ಲಿಯೂ ಬೇರೆಲ್ಲಿಯೂ ಇರಲಿಲ್ಲವೆನ್ನಬೇಕಾಗುತ್ತದೆ. ದಡದಿಂದ ನೂರು ಯೋಜನ ದೂರವಿರುವ ದ್ವೀಪವೊಂದು ಸಮುದ್ರವಲ್ಲದೇ ಭಾರತದ ಒಳನಾಡಿನಲ್ಲೆಲ್ಲೂ ಇದ್ದಿರಲು ಸಾಧ್ಯವಿಲ್ಲ. ಅಲ್ಲದೇ ಸಾಗರವೆಂಬ ನಿರ್ದೇಶನ ಕೇವಲ ಸಮುದ್ರವೊಂದಕ್ಕೇ ಅಲ್ಲದೇ ನದಿ, ಸರೋವರ ಮುಂತಾದ ಇತರ ಜಲಾಶಯಗಳಿಗೂ ಅನ್ವಯಿಸುತ್ತದೆಂದೇ ಇಟ್ಟುಕೊಂಡರೂ ಅವು ಔಪಚಾರಿಕವಾಗಿ ಆಗೀಗ ಬರುವ ನಿರ್ದೇಶನಗಳೇ ಹೊರತು ಸಾಗರವೆಂಬ ಹೆಸರಿನ, ಸಮುದ್ರವಲ್ಲದ ಬೇರೊಂದು ಜಲಾಶಯವಿದ್ದಿರುವುದು ಅಸಂಭವನೀಯ. ಹಾಗೊಮ್ಮೆ ಬೇರೊಂದು ನದಿಗೋ ಸರೋವರಕ್ಕೋ ಕವಿ ಸಾಗರವೆಂದು ನಿರ್ದೇಶಿಸಿದನೆಂದೇ ಇಟ್ಟುಕೊಂಡರೂ ಒಮ್ಮೆಯಾದರೂ ಆ "ಸಾಗರ"ದ ಹೆಸರು ಎಲ್ಲಾದರೂ ಬಂದಿರಬೇಕಲ್ಲ! ಆದ್ದರಿಂದ (ಈ ನೂರು ಯೋಜನದ ಲೆಕ್ಕವೇ ಪ್ರಕ್ಷಿಪ್ತವಲ್ಲದಿದ್ದರೆ) ಲಂಕೆಯು ನಿಜಕ್ಕೂ ಸಾಗರ ಮಧ್ಯದ ಒಂದು ದ್ವೀಪವೇ ಆಗಿದ್ದಿರಬೇಕು, ಮತ್ತು ಅದು ನೂರು ಯೋಜನ ದೂರವೇ ಇದ್ದಿರಬೇಕು. ಏಕೆಂದರೆ ನೀವು ಹೇಳುವಂತೆ ನೂರು ಯೋಜನವೆಂಬುದು ಒಂದು ಉತ್ಪ್ರೇಕ್ಷಿತ ಸಂಖ್ಯೆಯೆನ್ನಲು ಸಾಧ್ಯವಿಲ್ಲ, ಏಕೆಂದರೆ ಈ ನೂರರ ನಿರ್ದಿಷ್ಟ ಸಂಖ್ಯೆ, ಅಳತೆಗಳು ಸಾಗರೋಲ್ಲಂಘನದ ಸಂದರ್ಭದಲ್ಲಿ ಪದೇಪದೇ ಬರುತ್ತವೆ. ಹಾಗೊಂದುವೇಳೆ ಈ ಸಾಗರೋಲ್ಲಂಘನ, ಲಂಕೆಯೆನ್ನುವ ಸಾಗರಮಧ್ಯದ ದ್ವೀಪ ಇವೆಲ್ಲವೂ ಪ್ರಕ್ಷಿಪ್ತವೆನ್ನುವುದಾದರೆ, ಮೂಲ ರಾಮಾಯಣದ ಕತೆಯ ಹಂದರವೇ ಬದಲಾಗಿಬಿಡುತ್ತದೆ - ಹಾಗಿದ್ದರೆ ಮೂಲ ಕತೆಯೇನಿರಬೇಕೆಂಬುದನ್ನು ಗೊತ್ತು ಹಚ್ಚುವ ಕೆಲಸ ನಮ್ಮದಾಗುತ್ತದೆ.

  ಒಟ್ಟಾರೆ, ಇವತ್ತಿನ ಸಿಲೋನ್ ದ್ವೀಪವೇ ಆ ದಿನದ ರಾವಣನ ಲಂಕೆಯೆಂಬ ಸ್ಥಾಪಿತ ನಂಬಿಕೆಯನ್ನು ನಾವು ತುಸು ಅಲುಗಾಡಿಸಲು ಸಾಧ್ಯವಾಯಿತೇ ಹೊರತು ಅದಕ್ಕಿಂತ ಸಮಾಧಾನಕರವಾದ ಪರ್ಯಾಯ ಸಾಧ್ಯತೆಯಂತೂ ದೊರೆಯಲಿಲ್ಲ, ಏಕೆಂದರೆ ಆ ಲಂಕೆಯನ್ನು ಅಲ್ಲಗಳೆಯಲು ಇರುವ ಸಾಕ್ಷ್ಯಾಧಾರಗಳೇ ಬೇರಾವ ಪರ್ಯಾಯ ’ಲಂಕೆ’ಯನ್ನೂ ಅಲ್ಲಗಳೆಯಲು ಬಲವಾದ ಸಾಕ್ಷ್ಯಾಧಾರಗಳಾಗುತ್ತವೆ.

  ReplyDelete 15. ಆ ಕಾಲದಲ್ಲಿ ರಾಜ್ಯವೆಂಬ ಕಲ್ಪನೆ ಇತ್ತೇ ಎಂಬುದು ಪ್ರಶ್ನಾರ್ಹ. ಜನಪದ, ಪರಗಣ ಮತ್ತು ಪ್ರಾಂತ್ಯಗಳ ಕಲ್ಪನೆಯಂತೂ ಇತ್ತು. ತನ್ನ ಭೂಮಿಗೆ ಸೇರಿದ ಮೃಗ, ಪಕ್ಷಿ ಮನುಷ್ಯರೆಲ್ಲರ ನಿಗ್ರಹಾನುಗ್ರಹಗಳ ಅಧಿಕಾರ ರಾಜನಿಗಿದೆ ಎಂಬುದು ಶ್ಲೋಕದ ಭಾವಾರ್ಥ.
  ರಾಮಾಯಣದಲ್ಲಿ ಅತಿಮಾನುಷ ಘಟನೆಗಳಿಲ್ಲ ಎಂಬ ಹೆಚ್ಚಿನೆಲ್ಲ ವಿದ್ವಾಂಸರ, ಇತಿಹಾಸಕಾರರ ಅಭಿಪ್ರಾಯವನ್ನು ಗಮನದಲ್ಲಿರಿಸಿಕೊಂಡೇ ಮಾರೀಚನಾಗಲೀ ಶೂರ್ಪನಖಿಯಾಗಲೀ ಅವಸರವಸರವಾಗಿ ಅಷ್ಟು ದೂರದಲ್ಲಿರುವ ಲಂಕೆಗೆ ಧಾವಿಸುವುದು ಸಾಧ್ಯವಿಲ್ಲ ಎಂದಿದ್ದು.
  ಭೌಗೋಳಿಕ ಲಕ್ಷಣಗಳು ಬದಲಾಗಬಹುದು ಎಂಬ ಮಾತನ್ನು ಒಪ್ಪುತ್ತೇನೆ. ಆದರೆ ಆಂಧ್ರದ ಗೋದಾವರೀ ದಡದ ಪಂಚವಟಿಯಲ್ಲಿರುವ ಸಾಲವೃಕ್ಷಗಳ ಉಲ್ಲೇಖವನ್ನು ಅಂದಿನ ಕಾವ್ಯದಲ್ಲಿ ಗಮನಿಸಿದರೆ ಅಂಥ ಸಾಲವೃಕ್ಷಗಳ ಕಾಡನ್ನು ಇಂದಿಗೂ ಆ ಪ್ರದೇಶದಲ್ಲಿ ಕಾಣಬಹುದಾದ್ದರಿಂದ ಪಂಚವಟಿಯ ಸ್ಥಳ ನಿಷ್ಕರ್ಷೆಗೆ ಈ ವಾದ ಸಹಕಾರಿ.
  ಸ್ವತಃ ನಾಸಾ, ಜೊತೆಗೆ ಭಾರತೀಯ ಪುರಾತತ್ವ ಇಲಾಖೆಗಳೂ ಸೇತುವನ್ನು ನೈಸರ್ಗಿಕ ಎಂದಿವೆ. ಅದು ಮಾನವನಿರ್ಮಿತವೆಂಬುದು ಕೇವಲ ನಂಬಿಕೆಯ ಪ್ರಶ್ನೆ. ಯೋಜನದ ಬಳಕೆ ಅನಾದಿ ಕಾಲದಿಂದಲೂ ಇತ್ತು. ಅದೊಂದು ನಿರ್ದಿಷ್ಟ ದೂರವನ್ನು ಹೇಳುವ ಕ್ರಮ. ನೂರು ಯೋಜನಗಳೆಂದರೆ ಉದ್ದ ಎಂಟುನೂರು ಕಿ.ಮೀ ಗಳಿಗಿಂತ ಹೆಚ್ಚು. ಅಗಲದ ಹತ್ತು ಯೋಜನ ಎಂಭತ್ತು ಕಿ.ಮೀ ಆಯಿತು. ಅಷ್ಟು ದೂರವಂತೂ ಭಾರತದ ಮಟ್ಟಿಗೆ ಲಂಕೆಯೂ ಸೇರಿ ಯಾವ ದ್ವೀಪವೂ ಇರಲಿಕ್ಕಿಲ್ಲ. ಆದ್ದರಿಂದ ಯೋಜನವೆಂಬುದು ಕವಿಕಲ್ಪಿತ ಅಥವಾ ಉತ್ಪ್ರೇಕ್ಷಿತವೆಂದಿದ್ದು. ಇನ್ನು ಮೂಲರಾಮಾಯಣದಂತೆ ಅಲ್ಲಿದ್ದವರೆಲ್ಲ ಸಾಧಾರಣ ಮನುಷ್ಯರು ಎಂದುಕೊಂಡರೆ ಸುಗ್ರೀವ ಸೀತಾನ್ವೇಷಣೆ ಶುರುಮಾಡಿದ್ದು ಕಾರ್ತಿಕ ಮಾಸದಲ್ಲಿ, ರಾವಣವಧೆಯಾಗಿದ್ದು ಪುಷ್ಯಮಾಸದಲ್ಲಿ. ಕೇವಲ ಎರಡೇ ತಿಂಗಳುಗಳಿಗಿಂತ ಕಡಿಮೆ ಅವಧಿಯಲ್ಲಿ ಮಧ್ಯಭಾರತದಿಂದ ದಕ್ಷಿಣ ತುದಿಯ ಲಂಕೆಗೆ ಹನುಮಂತ ಬಂದು, ಸಾಗರೋಲ್ಲಂಘನವಾಗಿ, ಪುನಃ ಹಿಂತಿರುಗಿ ವಾನರ ಸಹಿತವಾಗಿ ರಾಮ ಬಂದು ಸೇತುವೆ ಕಟ್ಟಿ, ಲಂಕೆಯ ಮೇಲೆ ಆಕ್ರಮಣ ಮಾಡುವುದು ಅಸಾಧ್ಯದ ಮಾತು. ಲಂಕೆ ಮಧ್ಯಭಾರತದಲ್ಲೇ ಎಲ್ಲೋ ಇತ್ತೆಂದು ಊಹಿಸಲು ಅಷ್ಟು ಆಧಾರ ಸಾಕು.

  ReplyDelete