ಕಲ್ಲಿಕೋಟೆ ಉರುಫ್ ಕ್ಯಾಲಿಕಟ್ ಉರುಫ್ ಕೊಝಿಕೋಡ್ ನನ್ನ ಮೆಚ್ಚಿನ ತಾಣಗಳಲ್ಲೊಂದು. ಕಳೆದ ವಾರ ಗೆಳತಿ ಹಿತಳ ಮದುವೆಗೆ ಕಲ್ಲೀಕೋಟೆಗೆ ಹೋಗಿ ಕೆಲ ದಿನ ಅಲ್ಲೇ ಉಳಿಯುವ ಪ್ರಸಂಗ ಬಂತು. ಪ್ರವಾಸಿ ತಾಣವೆನ್ನುವುದಕ್ಕಿಂತ ಕಲ್ಲೀಕೋಟೆ ಐತಿಹಾಸಿಕವಾಗಿ ನನಗೆ ಅಚ್ಚುಮೆಚ್ಚು. ವಾಸ್ಕೋಡಿಗಾಮನ ಕಥೆಯಂತೂ ಗೊತ್ತೇ ಇದೆ. ಅದಕ್ಕೂ ಮೊದಲು ಸಾವಿರಾರು ವರ್ಷಗಳ ಹಿಂದೆ ಕಲ್ಲಿಕೋಟೆಯ ಕಡಲುಂಡಿಯು ಸಂಗಂ ಸಾಹಿತ್ಯದ ಕಾಲದಲ್ಲಿ ತೊಂಡಿ ಎಂಬ ಚೇರರ ರಾಜಧಾನಿಯಾಗಿತ್ತು. ೧೨ನೇ ಶತಮಾನದಲ್ಲಿ ಚೇರರ ಅವಸಾನದ ನಂತರ ಪ್ರವರ್ಧಮಾನಕ್ಕೆ ಬಂದವರು ಸಾಮೂದಿರಿಗಳು(ಝಾಮೋರಿನ್ಗಳು). ವಾಸ್ಕೋಡಗಾಮ ೧೪೯೮ರಲ್ಲಿ ಕಲ್ಲಿಕೋಟೆಗೆ ಬಂದಾಗ ಅದು ಏಷ್ಯಾದ ಅತಿ ದೊಡ್ಡ ಬಂದರಾಗಿ ಹೆಸರುವಾಸಿಯಾಗಿತ್ತು. ಅಲ್ಲಿಂದ ಮಧ್ಯಏಷ್ಯಾ, ಚೈನಾ, ಟರ್ಕಿ, ಇರಾಕ್, ಪರ್ಷಿಯಾ, ಅರಬ್ ಸೇರಿ ವಿಶ್ವದ ಬಹುಭಾಗಗಳೊಡನೆ ಅವ್ಯಾಹತವಾದ ವ್ಯಾಪಾರ ಸಂಪರ್ಕ ಶತಶತಮಾನಗಳಿಂದ ನಡೆಯುತ್ತಿತ್ತು. ಮಾರ್ಕೊ ಪೊಲೊ, ಇಬ್ನ್ ಬತೂತಾ, ವಾಂಗ್ ತ್ಯುವಾನ್ನಂಥ ಇತಿಹಾಸಕಾರರೆಲ್ಲ ಕಲ್ಲಿಕೋಟೆಗೆ ಭೇಟಿ ಕೊಟ್ಟು ತಮ್ಮ ಅನುಭವಗಳನ್ನು ವಿವರವಾಗಿ ದಾಖಲಿಸಿದ್ದಾರೆ. ಚೈನಾ ತನ್ನ ವಸಾಹತೊಂದನ್ನು ಆ ಕಾಲಕ್ಕೇ ಕಲ್ಲಿಕೋಟೆಯಲ್ಲಿ ಸ್ಥಾಪಿಸಿದ್ದು ವಿಶೇಷವೇ ಸೈ. ೧೪೩೩ರಲ್ಲಿ ಚೀನಾದ ರಾಜಕುಮಾರನೊಬ್ಬ ತನ್ನ ಏಳನೇ ಭೇಟಿಯಲ್ಲಿ ಇಲ್ಲೇ ಮೃತಪಟ್ಟ ದಾಖಲೆಗಳಿವೆ. ಇಂದಿಗೂ ಕಲ್ಲಿಕೋಟೆಯಲ್ಲಿ ಸಿಲ್ಕ್ ಸ್ಟ್ರೀಟ್, ಚೈನಾಕೊಟ್ಟಾ(ಕೋಟೆ), ಚೀನಂಚೇರಿ, ಚೀನಪಲ್ಲಿ(ಚೈನಾ ಮಸೀದಿ)ನಂಥ ಹಲವು ಕುರುಹುಗಳು ಚೈನಾ-ಕೇರಳದ ಮಧ್ಯದ ಸಂಬಂಧದ ಸಾಕ್ಷಿಯಾಗಿ ನಿಂತಿವೆ. ಮುಂದೆ ಗಾಮ ಕೇರಳಕ್ಕೆ ಬಂದಿಳಿಯುವುದರೊಂದಿಗೆ ಅರಬ್ ಹಾಗೂ ಮಧ್ಯಪ್ರಾಚ್ಯದ ವ್ಯಾಪಾರಿಗಳ ಕೈಲಿದ್ದ ಅರಬ್ಬಿ ಸಮುದ್ರದ ವ್ಯಾಪಾರ ಪೂರ್ತಿಯಾಗಿ ಪೋರ್ಚುಗೀಸರ ಕೈಸೇರಿತು. ಪೋರ್ಚುಗೀಸರು ಕಟ್ಟಿಕೊಂಡ ಕಲ್ಲಿನ ಕೋಟೆಯಿಂದಲೇ ಆ ಊರಿಗೆ ಕಲ್ಲಿಕೋಟೆಯೆಂಬ ಹೆಸರು ಬಂತೆಂದೂ, ಅಲ್ಲಿಂದ ಕ್ಯಾಲಿಕೋ ಎಂಬ ಬಟ್ಟೆ ವಿಶ್ವದಾದ್ಯಂತ ರಫ್ತಾಗುತ್ತಿದ್ದುದರಿಂದ ಕ್ಯಾಲಿಕಟ್ ಎಂಬ ಹೆಸರು ಬಂತೆಂದೂ ಪ್ರತೀತಿಯಿದೆ.
ಅದು ಪೋರ್ಚುಗೀಸರು ಝಾಮೋರಿನ್ನನ ಆಳ್ವಿಕೆಯ ಮಲಬಾರಿನಲ್ಲಿ ನೆಲೆಯೂರಲು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಯ. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಮೂರನೇ ಬಾರಿ ಆತ ಬಂದಿಳಿದಾಗ ನಡೆದ ಯುದ್ಧದಲ್ಲಿ ಸ್ಥಳೀಯರೇ ಕೇಳು ನಾಯರ್ ಎಂಬ ಯುವಕನ ನೇತೃತ್ವದಲ್ಲಿ ಆತನನ್ನು ಬಡಿದು ಕೊಂದರೆಂಬುದು ಬೇರೆ ವಿಷಯ. ಇಷ್ಟಾದರೂ ಪೋರ್ಚುಗೀಸರಿಗೆ ಬುದ್ಧಿ ಬರಲಿಲ್ಲ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಝಾಮೋರಿನ್ನನ ಕಲ್ಲಿಕೋಟೆಯೊಳಗೆ ಹೇಗಾದರೂ ಮಾಡಿ ನುಗ್ಗಲು ಶತಪ್ರಯತ್ನ ನಡೆಸುತ್ತಿದ್ದರು. ಅರಬ್ಬಿ ವರ್ತಕರಿಂದ ಎದುರಾಗುತ್ತಿದ್ದ ತೀವ್ರ ಸ್ಪರ್ಧೆ ಬೇರೆ. ಅದಕ್ಕಿಂತ ಹೆಚ್ಚಾಗಿ ಅವರಿಗಿದ್ದ ಭಯ ಮರಕ್ಕರ್ ವ್ಯಾಪಾರಿಗಳು. ಇವರ ಹಿಂದಿನ ತಲೆಮಾರು ಝಾಮೋರಿನ್ನನ ವಿಧೇಯ ಸೇವಕರಾಗಿದ್ದರಿಂದ ಅರಸನಿಗೆ ಇವರನ್ನು ಕಂಡರೆ ಭಾರೀ ಪ್ರೀತಿ. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ನಂಬಿಕೊಂಡಿದ್ದು ಇದೇ ಮರಕ್ಕರ್ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಇದೆರಡೂ ಸೇರಿ ಮರಕ್ಕರ್ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಒಂದೆಡೆ ಪೋರ್ಚುಗೀಸರು, ಇನ್ನೊಂದೆಡೆ ಮರಕರ್ ವ್ಯಾಪಾರಿಗಳು, ಕೇರಳದ ಸಮುದ್ರ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಎರಡು ಗುಂಪುಗಳು ಮುಖಾಮುಖಿಯಾಗುವ ಪರಿಸ್ಥಿತಿ ಸೃಷ್ಟಿಯಾಯಿತು. ಝಾಮೋರಿನ್ನನ ವೈರಿ ಕೊಲತ್ತಿರಿ ಅರಸನ ಜೊತೆ ಪೋರ್ಚುಗೀಸರು ಸಂಧಿ ಮಾಡಿಕೊಂಡು ಕಲ್ಲಿಕೋಟೆಯ ಹತ್ತಿರ ತಮ್ಮ ಕೋಟೆಯೊಂದನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಇದಕ್ಕೆ ಬದಲಾಗಿ ಕೊಲತ್ತಿರಿ ರಾಜ್ಯಕ್ಕೆ ಝಾಮೋರಿನ್ನನ ವಿರುದ್ಧದ ಯುದ್ಧದಲ್ಲಿ ಪೋರ್ಚುಗೀಸರು ಸಹಾಯ ಮಾಡಬೇಕಿತ್ತು. ಈ ಬೆಳವಣಿಗೆಯಿಂದ ಝಾಮೋರಿನ್ ಮತ್ತು ಪೋರ್ಚುಗೀಸರ ಮಧ್ಯೆ ಮೊದಲೇ ಹೊಗೆಯಾಡುತ್ತಿದ್ದ ದ್ವೇಷ ಹೊತ್ತಿ ಉರಿಯಲು ಕಾರಣವಾಯ್ತು. ಮೊದಮೊದಲು ಸಣ್ಣಪುಟ್ಟಗೆ ಗುದ್ದಾಡಿ ಬರುತ್ತಿದ್ದ ಸಾಮೂದಿರಿ ಲಂಕೆಯ ಭುವನೇಕ ವಿಜಯಭಾನುವಿನ ಜೊತೆ ಸೇರಿ ಪೋರ್ಚುಗೀಸರ ವಿರುದ್ಧ ಯುದ್ಧ ಘೋಷಿಸಿದ. ೧೫೩೪ರಲ್ಲಿ ನಾಗಪಟ್ಟಣಂನಲ್ಲಿ ನಡೆದ ಕದನದಲ್ಲಿ ಪೋರ್ಚುಗೀಸರು ಸಾಮೂದಿರಯ ಸೈನ್ಯದೆದುರು ಭಾರೀ ನಷ್ಟವನುಭವಿಸಿದರು. ಈ ಕಾರಣದಿಂದ ಝಾಮೋರಿನ್ನನನ್ನು ಕಂಡರಾಗದ ವೆಟ್ಟದನಾಡಿನ ರಾಜ ಪೋರ್ಚುಗೀಸರನ್ನು ಕರೆದು ಚಲಿಯಾ ನದಿದಡದ ಚಲಿಯಾಂನಲ್ಲಿ ಕೋಟೆ ಕಟ್ಟಿಕೊಳ್ಳಲು ಅನುಮತಿ ನೀಡಿದ. ಪೋರ್ಚುಗೀಸರು ತನೂರಿನ ಅರಸನನ್ನು ಕ್ರೈಸ್ತಮತಕ್ಕೆ ಮತಾಂತರಿಸಿ ಡೋಮ್ ಜಾವೋ ಎಂದು ಹೆಸರಿಟ್ಟರು. ಬೆನ್ನಿಗೇ ವೆಟ್ಟದ ನಾಡಿನವನೂ ಮತಾಂತರಗೊಂಡ. ಮಲಬಾರಿನ ವ್ಯಾಪಾರದ ಮೇಲೆ ಝಾಮೋರಿನ್ನನ ಹಿಡಿತ ಸಡಿಲವಾಗುತ್ತಿತ್ತು. ೧೫೩೭ರಲ್ಲಿ ಪೊನ್ನಾನಿಯಲ್ಲಿ ಪೋರ್ಚುಗೀಸರೊಡನೆ ನಡೆದ ಯುದ್ಧದಲ್ಲಿ ಝಾಮೋರಿನ್ನನ ಸೈನ್ಯ ಸೋತರೂ ಮುಂದೆ ಮೂರನೇ ಕುಂಜಾಳಿ ಮರಕ್ಕರಿನ ಸಹಾಯದಿಂದ ೧೫೭೧ರಲ್ಲಿ ನಡೆದ ಇತಿಹಾಸ ಪ್ರಸಿದ್ಧ ಚಲಿಯಾಂ ಯುದ್ಧದಲ್ಲೂ ಪೋರ್ಚುಗೀಸರನ್ನು ಬಗ್ಗುಬಡಿದ. ಮಲಬಾರಿನಲ್ಲಿ ಅಧಿಪತ್ಯ ಸಾಧಿಸುವ ಪೋರ್ಚುಗೀಸರ ಕನಸು ಮತ್ತೊಮ್ಮೆ ಭಗ್ನವಾಯಿತು. ಕೇರಳದ ಆಸೆ ಬಿಟ್ಟು ಗೋವದತ್ತ ಮುಖಮಾಡಲು ಈ ಯುದ್ಧ ಅವರಿಗೆ ಮುಖ್ಯ ಕಾರಣವಾಯಿತು. ಪೋರ್ಚುಗೀಸರು ಬಿಟ್ಟುಹೋದ ಕಲ್ಲಿಕೋಟೆಯ ಹತ್ತಿರದ ವೆಲಿಯಂಕಲ್ಲಿನಲ್ಲಿ ಝಾಮೋರಿನ್ ಕಟ್ಟಿದ ಕೋಟೆ ಚಲಿಯಾಂ ಯುದ್ಧದಲ್ಲಿ ಅವನಿಗೆ ಸಹಾಯ ಮಾಡಿದ ಕುಂಜಾಳಿಯ ಹೆಸರಿನಿಂದ ಇಂದೂ ಕರೆಯಲ್ಪಡುತ್ತಿದೆ. ಇದೇ ಕೋಟೆಯಿಂದ ಊರಿಗೆ ಕಲ್ಲಿಕೋಟೆಯೆಂದು ಹೆಸರು ಬಂತೆಂಬುದು ಒಂದು ಊಹೆ.
![]() |
ಚಾಲಿಯಾಂ ಸೀವಾಕ್ |
ಪೋರ್ಚುಗೀಸರನ್ನು ಸೋಲಿಸಲು ಸಾಮೂದಿರಿಗೆ ತಾವೇ ಬೇಕು ಎಂಬ ಅಹಂಕಾರ ತಲೆಗೇರಿದ್ದೇ ಸೈ, ಸಾಮೂದಿರಿಯ ರಾಜ್ಯದಲ್ಲಿ ಕುಂಜಾಳಿ ಮರಕ್ಕರನ ನೇತೃತ್ವದಲ್ಲಿ ಮುಸ್ಲಿಮರ ಉಪಟಳ ಮೇರೆ ಮೀರಿತು. ಸಾಮೂದಿರಿ ಸಹಿಸುವಷ್ಟು ಸಹಿಸಿದ. ಸಾಮಾನ್ಯ ವರ್ತಕನಾಗಿ ಬಂದವ ಸ್ಥಳೀಯ ಮಾಪಿಳ್ಳೆಗಳ ಸಹಾಯದಿಂದ ಕೊಳತ್ತಿರಿಗಳನ್ನು ಪದಚ್ಯುತಗೊಳಿಸಿ ಕಣ್ಣೂರಿನಲ್ಲಿ ಸ್ವಂತ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡಿಕೊಂಡ ಅಲಿರಾಜನ ದೃಷ್ಟಾಂತ ಸಾಮೂದಿರಿಯ ಕಣ್ಣೆದುರೇ ಇತ್ತು. ಮೆಲ್ಲನೆ ಗೋವೆಯಲ್ಲಿದ್ದ ಪೋರ್ಚುಗೀಸರಿಗೆ ಒಂದು ಸಂದೇಶ ಕಳಿಸಿದ. ಪೊನ್ನಾನಿಯಲ್ಲಿ ಮಲಬಾರಿನ ಕ್ರಿಶ್ಚಿಯನ್ನರಿಗಾಗಿ ಒಂದು ಚರ್ಚ್ ಕಟ್ಟಿಕೊಡಿ ಎಂದು. ಆದರೆ ಉದ್ದೇಶವಿದ್ದುದು ಇನ್ನೊಂದು. ಇಬ್ಬರೂ ಕೈಜೋಡಿಸಿ ಮಾಪಿಳ್ಳೆಗಳನ್ನು ಕಂಡಕಂಡಲ್ಲಿ ಬಡಿಯತೊಡಗಿದರು. ೪೦೦ ಮಾಪಿಳ್ಳೆಗಳನ್ನು ಸೆರೆಹಿಡಿಯಲಾಯ್ತು. ಅವರ ನೇತೃತ್ವ ವಹಿಸಿದವರನ್ನು ಪೋರ್ಚುಗೀಸರು ಕೈಕಾಲು ಕತ್ತರಿಸಿ ಸಮುದ್ರಕ್ಕೆಸೆದರು. ಮಾಪಿಳ್ಳೆಗಳ ಉಪಟಳ ಒಂದು ಹಂತಕ್ಕೆ ಕಡಿಮೆಯಾಯ್ತು. ಎರಡನೇ ಶತ್ರುವನ್ನು ಮುಗಿಸಿದ ಸಾಮೂದಿರಿ ಮೊದಲನೇಯವರ ವಿರುದ್ಧವೂ ತಿರುಗಿಬಿದ್ದ. ನಿಧಾನವಾಗಿ ಡಚ್ಚರೊಂದಿಗೆ ಕೈಜೋಡಿಸಿ ಅವರನ್ನು ರಾಜ್ಯಕ್ಕೆ ಕರೆದ. ೧೬೦೪ರಲ್ಲಿ ಕಲ್ಲಿಕೋಟೆಯ ಜೊತೆ ಪೋರ್ಚುಗೀಸರನ್ನು ಓಡಿಸುವ ಒಪ್ಪಂದ ಮಾಡಿಕೊಂಡ ಡಚ್ಚರು ಅಲ್ಲೇ ತಮ್ಮ ವ್ಯಾಪಾರ ಪ್ರಾರಂಭಿಸಿದರು. ಪೋರ್ಚುಗೀಸರಿಗೂ ಡಚ್ಚರಿಗೂ ತಂದಿಟ್ಟ ಮೇಲೆ ಸಾಮೂದಿರಿ ಡಚ್ಚರಿಗೂ ಕೈಕೊಟ್ಟ. ೧೬೧೦ರಲ್ಲಿ ಬ್ರಿಟಿಷರತ್ತ ಕೈಚಾಚಿ ಅವರ ಸಹಾಯದಿಂದ ಇಬ್ಬರನ್ನೂ ಮಲಬಾರಿನಿಂದ ಓಡಿಸಿದ. ಆದರೆ ಸಾಮೂದಿರಿಗೆ ಇಂಗ್ಲಿಷರು ಡಚ್ಚರಷ್ಟು ನಂಬಿಕಸ್ಥರಲ್ಲ ಎನಿಸಿತೇನೋ. ಮತ್ತೆ ಡಚ್ಚರೊಡನೆ ಸ್ನೇಹ ಕುದುರಿಸಿಕೊಂಡ. ಆದರೆ ಈ ಆಟ ಹೆಚ್ಚು ಕಾಲ ನಡೆಯಲಿಲ್ಲ. ಮಲಬಾರಿನಲ್ಲಿ ಫ್ರೆಂಚರು ಪೈಪೋಟಿ ನೀಡಲಾರಂಭಿಸಿದಂತೆ ಡಚ್ಚರು ಇಂಗ್ಲೀಷರ ಜೊತೆ ಸೇರಿದರು. ಸಾಮೂದಿರಿ ಏಕಾಂಗಿಯಾದ.
೧೭೩೨ರಲ್ಲಿ ಪಾಲ್ಘಾಟ್ ಅಥವಾ ಪಾಲಕ್ಕಾಡಿನ ಆಳುಗರ ಆಹ್ವಾನದ ಮೇರೆ ಮೈಸೂರು ಪಡೆಗಳು ಮೊದಲ ಬಾರಿ ಕೇರಳದತ್ತ ದಂಡೆತ್ತಿ ಬಂದವು. ೧೭೩೫ ಹಾಗೂ ೧೭೩೭ರಲ್ಲಿ ಮತ್ತೆರಡು ಬಾರಿ ಸಾಮೂದಿರಿಗಳ ಕಲ್ಲಿಕೋಟೆ ಮೈಸೂರಿನ ದಾಳಿಗೊಳಗಾಯ್ತು. ೧೭೪೫ರಲ್ಲೊಮ್ಮೆ, ೧೭೫೬ರಲ್ಲಿ ಇನ್ನೊಮ್ಮೆ ಮೈಸೂರಿಗೂ ಕಲ್ಲಿಕೋಟೆಗೂ ಹೊಯ್ಕೈ ನಡೆಯಿತು. ಪದೇಪದೇ ನಡೆಯುತ್ತಿದ್ದ ದಾಳಿ ಹಾಗೂ ಲೂಟಿಯನ್ನು ತಡೆಯಲು ಸಾಮೂದಿರಿ ಮೈಸೂರಿನೊಂದಿಗೆ ಹನ್ನೆರಡು ಲಕ್ಷ ರೂಪಾಯಿಗಳ ಒಪ್ಪಂದ ಮಾಡಿಕೊಂಡ. ಆದರೆ ಕೊಡಲು ಅವನಲ್ಲಿ ಅಷ್ಟು ಹಣವಿರಬೇಕಿತ್ತಲ್ಲ! ಅದು ದಿಂಡಿಗಲ್ಲಿನ ಫೌಜದಾರ ಹೈದರ್ ಅಲಿ ಮೈಸೂರಿನ ಸಿಂಹಾಸನವನ್ನು ಆಕ್ರಮಿಸಿಕೊಂಡ ಕಾಲ. ಹೇಳಿಕೇಳಿ ಮಲಬಾರೆಂಬುದು ಆ ಕಾಲದ ಅಕ್ಷಯಭಂಡಾರ. ಇಡೀ ಭಾರತದ ಸಮುದ್ರವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ಕೇಂದ್ರ. ರಾಜ್ಯವಿಸ್ತಾರದ ತುರ್ತಿಗೆ ಬಿದ್ದ ಹೈದರಾಲಿ ಬಿಡಲಿಕ್ಕುಂಟೇ? ೧೭೬೬ರಲ್ಲಿ ತನ್ನ ಹನ್ನೆರಡು ಸಾವಿರ ಸೇನಾಬಲದೊಟ್ಟಿಗೆ ಮಂಗಳೂರಿನ ಕಡೆಯಿಂದ ಕಲ್ಲಿಕೋಟೆಯನ್ನು ಮುತ್ತಲು ಹೊರಟೇ ಬಿಟ್ಟ. ಕೇರಳದ ಏಕೈಕ ಮುಸ್ಲಿಂ ಅರಸು ಅರಸು ಕಣ್ಣೂರಿನ ಅಲಿರಾಜ ಹೈದರಾಲಿಯ ಸಹಾಯಕ್ಕೆ ಓಡೋಡಿ ಬಂದ. ಮುಸ್ಲಿಂ ಎಂಬ ಕಾರಣಕ್ಕೆ ಮಲಬಾರಿನ ಸಮಸ್ತ ಮುಸ್ಲಿಮರು ಮೈಸೂರಿನ ಸಹಾಯಕ್ಕೆ ಟೊಂಕಕಟ್ಟಿ ನಿಂತರು. ಹಿಂದೆ ಇವನ ಸ್ನೇಹ ಮಾಡಿ ಕೈಸುಟ್ಟುಕೊಂಡಿದ್ದ ಫ್ರೆಂಚು ಡಚ್ಚರು ಮತ್ತೆ ಕೈಜೋಡಿಸಲು ಹಿಂದೆಮುಂದೆ ನೋಡಿದರು. ಪರಿಣಾಮ ಇಡೀ ಉತ್ತರ ಮಲಬಾರ್ ಹೈದರನ ವಶವಾಗಿ ಮೈಸೂರಿನ ಸೈನ್ಯ ಕಲ್ಲೀಕೋಟೆಯನ್ನು ಪ್ರವೇಶಿಸಿತು. ತುರ್ಕನ ಕೈಲಿ ಸೋತ ಅವಮಾನ ತಾಳಲಾರದೇ ಸಾಮೂದಿರಿ ರಾಜ ತನ್ನ ಪರಿವಾರದವರನ್ನೆಲ್ಲ ಗುಟ್ಟಾಗಿ ತ್ರಾವೆಂಕೋರಿಗೆ ಕಳುಹಿಸಿ ಇತ್ತ ಮನಂಚಿರಾದಲ್ಲಿರುವ ತನ್ನ ಅರಮನೆಗೆ ಬೆಂಕಿಕೊಟ್ಟು ಅದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ. ಕೊಚ್ಚಿಯವರೆಗಿನ ಪೂರ್ತಿ ಮಲಬಾರು ಹೈದರನ ರಾಜ್ಯಕ್ಕೆ ಸೇರಿತು.
ಕ್ಯಾಲಿಕಟ್ನ ರೈಲ್ವೇ ಸ್ಟೇಷನ್ನಿನಲ್ಲಿ ಇಳಿದರೆ ಎಡಕ್ಕೊಂದು ಒಯೊಟ್ಟಿ ರೋಡ್ ಎಂಬ ರಸ್ತೆ ದೊರೆಯುತ್ತದೆ. ಅಲ್ಲೇ ಕಾಲು ಕಿಲೋಮೀಟರ್ ಮುಂದುವರೆದು ಬಲಕ್ಕೆ ತಿರುಗಿದರೆ ಸಿಗುವುದೇ ಕಲ್ಲಿಕೋಟೆಯ ಹೆಸರಾಂತ, ಇತಿಹಾಸ ಪ್ರಸಿದ್ಧ ಎಸ್.ಎಮ್.ಸ್ಟ್ರೀಟ್ ಅಥವಾ ಸ್ವೀಟ್ ಮೇಕರ್ಸ್ ಸ್ಟ್ರೀಟ್(ಮಿಠಾಯಿ ತಿರುವು). ಅದು ಶಾಪಿಂಗ್ ಮಾಡುವವರ ಪಾಲಿಗೆ ಭುವಿಗಿಳಿದು ಬಂದ ಸ್ವರ್ಗ. ಆ ರಸ್ತೆ ಶುರುವಾಗುವಲ್ಲಿ ಎಡಕ್ಕೆ ಕಂಚುಗಲ್ಲಿ. ಒಂದಿಡೀ ರಸ್ತೆಯಲ್ಲಿ ಬರೀ ಕಂಚು, ಹಿತ್ತಾಳೆ ಸಾಮಾನಿನ ಅಂಗಡಿಗಳೇ. ಚೂರು ಮುಂದುವರೆದರೆ ಕೋರ್ಟ್ ರೋಡ್. ಅಲ್ಲಿ ಬರೀ ಚಪ್ಪಲಿ, ಶೂಗಳ ಅಂಗಡಿಯದ್ದೇ ಕಾರುಬಾರು. ಒಂದೆಡೆ ಬಗೆಬಗೆಯ ಕ್ಯಾಲಿಕಟ್ ಹಲ್ವಾ, ಸಿಹಿತಿಂಡಿಗಳ ರಾಶಿರಾಶಿ ಅಂಗಡಿಗಳು. ಕ್ಯಾಲಿಕಟ್ ಇಡೀ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಚರ್ಮದ ವಸ್ತುಗಳು, ಚಪ್ಪಲಿ ಹಾಗೂ ಬಟ್ಟೆಗಳ ತಯಾರಕ. ಎರಡು ಸಾವಿರ ವರ್ಷಗಳ ಹಿಂದೇ ಕೇರಳದಲ್ಲಿ ಬಟ್ಟೆಗಳಿಂದ ಮಾಡಲಾಗುವ ಕಾಗದದ ಬಳಕೆಯಿತ್ತು. ಇದು ಇಲ್ಲಿಂದಲೇ ಹಲವು ದೇಶಗಳಿಗೆ ರಫ್ತಾಗುತ್ತಿತ್ತು. ಕ್ಯಾಲಿಕಟ್ನಲ್ಲಿ ತಯಾರಾಗುವ ಕಾರಣದಿಂದ ಅವುಗಳಿಗೆ ಕ್ಯಾಲಿಕೋ ಎಂಬ ಹೆಸರಾಯ್ತು. ಅಂದಮೇಲೆ ಬಟ್ಟೆಅಂಗಡಿಗಳಿಗೆ ಬರವುಂಟೇ! ಸುತ್ತಮುತ್ತ ಕಣ್ಣುಹಾಯಿಸಿದಷ್ಟು ದೂರಕ್ಕೆ ಕಾಣುವುದು ವಸ್ತ್ರದಂಗಡಿಗಳೇ. ಒಂದು ಕಡೆ ಅಂಜುಮನ್ ಬಾಗ್ ಎಂಬ ಪಾರ್ಸಿ ಸಮುದಾಯದ ಅಗ್ನಿ ದೇಗುಲ(fire temple). ಕೇರಳದಲ್ಲಿರುವ ಪಾರ್ಸಿಗಳ ಪೂಜಾಸ್ಥಳ ಇದೊಂದೇ. ಬೀಚ್ ರೋಡಿನಲ್ಲಿರುವ Auto Motto ಎಂಬ ಆಟೋಮೊಬೈಲ್ ಅಂಗಡಿಯ ಮಾಲೀಕ ದಾರಿಯುಸ್ ಮಾರ್ಶಲ್ ಎಂಬ ಪಾರ್ಸಿ ಈ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಾನೆ. ಸದ್ಯಕ್ಕೆ ಕ್ಯಾಲಿಕಟ್ಟಿನಲ್ಲಿರುವ ಪಾರ್ಸಿ ಕುಟುಂಬ ಇವರದ್ದು ಮಾತ್ರ. ಈ ದೇಗುಲದ ಸ್ವಲ್ಪ ದೂರದಲ್ಲೇ ಪಾರ್ಸಿಗಳ ಕಬ್ರಸ್ಥಾನವೂ ಇದೆ. ಮಂಗಳೂರಿನಿಂದ ತ್ರಿವೇಂದ್ರಮ್ಮಿನ ತನಕ ಯಾವ ಪಾರ್ಸಿ ಸತ್ತರೂ ಆತನನ್ನು ಹೂಳಲು ಎಸ್.ಎಮ್.ಸ್ಟ್ರೀಟಿನ ಈ ಸ್ಥಳಕ್ಕೇ ತರಬೇಕು. ೧೯೩೭ರಲ್ಲಿ ಸ್ಥಾಪನೆಯಾದ ಕೇರಳದ ಅತಿ ಹಳೆಯ ಚಿತ್ರಮಂದಿರ ರಾಧಾ ಥೇಟರ್ ಕೂಡ ಇದೇ ರಸ್ತೆಯಲ್ಲಿದೆ. ಎಸ್.ಎಮ್.ಸ್ಟ್ರೀಟ್ ಕೊನೆಗೊಳ್ಳುವ ಸ್ಥಳ ಮನಂಚಿರಾ ಸ್ಕ್ವೇರ್. ಶಾಪಿಂಗ್ ಮಾಡಲಿ ಬಿಡಲಿ. ಎಸ್.ಎಮ್.ಸ್ಟ್ರೀಟ್ನಲ್ಲಿ ಹಾಗೇ ಒಂದು ವಾಕ್ ಹೋಗುವ ಥ್ರಿಲ್ ಇದೆಯಲ್ಲ, ಅದನ್ನು ಕಟ್ಟಿಕೊಡಲು ಪದಗಳು ಬೇಡ. ಎದುರಿಗೆ ಪ್ರವಾಸಿಗಳು ಭೇಟಿನೀಡಲೇ ಬೇಕಾದ ಮನಂಚಿರಾ ಮೈದಾನ. ಕ್ರೌನ್ ಥಿಯೇಟರ್, ಓಪನ್ ಏರ್ ಥಿಯೇಟರ್, ಸಂಗೀತ ಕಾರಂಜಿ, ಪಾರ್ಕ್, ಲೈಬ್ರರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಅಲ್ಲಿ ಏನುಂಟು ಏನಿಲ್ಲ ಎಂಬ ಪ್ರಶ್ನೆಯೇ ಇಲ್ಲ. ಸಾಮೂದಿರಿ ತನ್ನ ಅರಮನೆಗೆ ಬೆಂಕಿಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದೆನಲ್ಲ. ಆ ಅರಮನೆಯಿದ್ದುದು ಇದೇ ಸ್ಥಳದಲ್ಲಂತೆ. ಆದರೆ ಅದರ ಯಾವ ಕುರುಹೂ ಈಗ ಲಭ್ಯವಿಲ್ಲ. ಮೈದಾನದ ಎಡಕ್ಕೆ ಮನಂಚಿರಾ ಕೆರೆ. ಹದಿನಾಲ್ಕನೇ ಶತಮಾನದಲ್ಲಿ ಮಾನದೇವನ್ ವಿಕ್ರಮ ಸಾಮೂದಿರಿ ಅರಮನೆಯನ್ನು ಕಟ್ಟಿಸುವಾಗ ಪಕ್ಕದಲ್ಲಿ ಸ್ನಾನಕ್ಕಾಗಿ ದೊಡ್ಡ ಕೆರಯೊಂದನ್ನೂ ನಿರ್ಮಿಸಿದ್ದ. ಕೆರೆಯನ್ನು ತೋಡಿದಾಗ ಸಿಕ್ಕ ಮಣ್ಣಿನಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಅರಮನೆಗಳನ್ನು ನಿರ್ಮಿಸಿದ್ದ ಎಂದೂ ಹೇಳುತ್ತಾರೆ. ಅರಮನೆ ನಾಶವಾದರೂ ಆ ಕೆರೆ ಇಂದೂ ಉಳಿದುಕೊಂಡಿದೆ. ಮಾನದೇವನ ಹೆಸರಿನಿಂದ ಈ ಕೆರೆ ಜೊತೆಗೆ ಸುತ್ತಲಿನ ಸ್ಥಳ ಮಾನನ್ ಚಿರ(ಕೆರೆ) ಅಥವಾ ಮನಂಚಿರಾ ಎಂದು ಕರೆಯಲ್ಪಟ್ಟಿತು. ಈಗ ಕ್ಯಾಲಿಕಟ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವುದು ಇದೇ ಕೆರೆಯಿಂದ.
![]() |
ಮಿಠಾಯಿ ತಿರುವು |
![]() |
ಬಗೆಬಗೆಯ ಕ್ಯಾಲಿಕಟ್ ಹಲ್ವಾಗಳು |
![]() |
ಎಸ್ಸೆಮ್ ಸ್ಟ್ರೀಟಿನ ಸಂಜೆ ನೋಟ |
![]() |
ಮನಂಚಿರಾ ಸ್ಕ್ವೇರ್ |
![]() |
ಮನಂಚಿರಾ ಕೆರೆ |
೧೫೦೧ರಲ್ಲಿ ಕಲ್ಲಿಕೋಟೆಗೆ ಭೇಟಿನೀಡಿದ್ದ ಪೋರ್ಚುಗೀಸ್ ಪ್ರವಾಸಿಗನೊಬ್ಬ ಹೇಳುವಂತೆ ಕೋಟೆಗಳಿಲ್ಲದ ಈ ಅರಮನೆಯಲ್ಲಿ ಚಾಕರಿಗಿದ್ದವರು ಬರೋಬ್ಬರಿ ಏಳು ಸಾವಿರ ಜನರಂತೆ. ಅಂದರೆ ಆ ಅರಮನೆ ಅದೆಷ್ಟು ದೊಡ್ಡದಿರಬಹುದು?!?!?! ಹಿಂದೂಗಳು, ಮಹಮ್ಮದೀಯರು, ಕ್ರಿಸ್ತರು, ಯಹೂದಿಗಳು ಹೀಗೆ ನಾಲ್ಕೂ ಸಮುದಾಯದವರಿಗೆ ಪ್ರಾರ್ಥನೆ ನಡೆಸಲು ಅರಮನೆಯೊಳಗೆ ನಾಲ್ಕು ಹಜಾರಗಳನ್ನು ಬಿಟ್ಟುಕೊಡಲಾಗಿತ್ತಂತೆ. ಇನ್ನು ಅರಮನೆಯ ಗೋಡೆಗಳಿಗೆ ಚಿನ್ನದ ತಗಡುಗಳನ್ನು ಹೊಡೆಯಲಾಗಿತ್ತೆಂದು ಇತಿಹಾಸಕಾರರೆಲ್ಲ ಮೂಗಿನ ಮೇಲೆ ಬೆರಳಿಟ್ಟಿದ್ದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಅದು ಚಿನ್ನಕ್ಕಿಂತ ಸಾಂಬಾರಪದಾರ್ಥಗಳೇ ಹೆಚ್ಚು ಬೆಲೆಬಾಳುತ್ತಿದ್ದ ಕಾಲ. ಮುಂದೆ ಬಂದ ರಾಜರ್ಯಾರೂ ವಿಕ್ರಮಪುರಂ ಅರಮನೆಯನ್ನು ಮರುನಿರ್ಮಿಸುವ ಮನಸ್ಸು ಮಾಡಲಿಲ್ಲ. ದುಡ್ಡಿನ ಅಭಾವದಿಂದಲೋ ಅಥವಾ ಅಪಶಕುನವೆಂಬ ಕಾರಣಕ್ಕೋ! ಈ ಅರಮನೆ ನಾಶವಾದಮೇಲೆ ಮೀನ್ಚಂಡದಲ್ಲಿರುವ ತಿರುವಚ್ಚಿರ ಕೋವಿಲಕಂ ಸಾಮೂದಿರಿಗಳ ವಾಸಸ್ಥಳವಾಯ್ತು.
ತಿರುಗಿ ಹೈದರನ ಕಡೆ ಬರೋಣ. ಕಣ್ಣೂರಿನ ಅಲಿರಾಜನ ಜೊತೆ ಸ್ನೇಹ ಸಾಧಿಸಿದ ಹೈದರ್ ಆತನನ್ನು ಸಾಮೂದಿರಿಯ ಬಳಿ ಕಳುಹಿಸಿದ. ಮುಸ್ಲಿಂ ಎಂಬ ಕಾರಣಕ್ಕೆ ಕಲ್ಲೀಕೊಟೆಯ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು, ಮಾಪಿಳ್ಳೆಗಳು ಹೈದರನ ಕಡೆ ವಾಲಿದರು. ಈಬಾರಿ ಹೈದರ್ ಬೇಡಿಕೆಯಿಟ್ಟಿದ್ದು ಒಂದು ಕೋಟಿ ಚಿನ್ನದ ನಾಣ್ಯಗಳಿಗೆ. ಅಷ್ಟು ಸೊತ್ತು ಸಾಮೂದಿರಿಯ ಹತ್ತಿರ ಇರಲೇಬೇಕೆಂದು ಹೈದರನ ನಂಬಿಕೆಯಾಗಿತ್ತು. ಸಾಮೂದಿರಿ ಕವಡೆ ಕಾಸು ಕೊಡಲೂ ನಿರಾಕರಿಸಿದ. ಕೋಟೆಗಳಿಲ್ಲದ ಬಯಲು ಪ್ರದೇಶದ ಅರಮನೆ ಶತ್ರುಗಳಿಗೆ ಸುಲಭದ ತುತ್ತಾಗಿತ್ತು. ಸಾಮೂದಿರಿ ತನ್ನ ಸಂಪತ್ತನ್ನೆಲ್ಲ ಪರಿವಾರದವರ ಜೊತೆ ತ್ರಾವೆಂಕೂರಿಗೆ ರವಾನಿಸಿದ. ಕೆ.ವಿ.ಕೃಷ್ಣ ಅಯ್ಯರ್ ಹೇಳುವಂತೆ ಹೀಗೆ ಕಲ್ಲೀಕೋಟೆಯಿಂದ ತ್ರಾವೆಂಕೂರಿಗೆ ಸಾಗಿಸಲ್ಪಟ್ಟ ಸಂಪತ್ತಿನ ಮೌಲ್ಯ ಹಲವು ಕೋಟಿ ರೂಪಾಯಿಗಳಾಗಿತ್ತು. ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಿಕ್ಕ ನಿಧಿಯಲ್ಲಿ ಕಲ್ಲಿಕೋಟೆಯ ಪಾಲೂ ಇರಬಹುದು. The sword of Tipu Sultan ಪುಸ್ತಕವನ್ನು ಬರೆದ ಗಿಡ್ವಾಣಿ ಇನ್ನೂ ಒಂದು ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಯಾಜ್ ಖಾನ್ ಎಂಬ ಹೈದರನ ಬಂಟನ ಕುರಿತು ಹಿಂದೊಮ್ಮೆ ಲೇಖನದಲ್ಲಿ ಬರೆದಿದ್ದೆ. ಈ ಆಯಾಜ್ ಖಾನ್ ಮೂಲತಃ ಕಲ್ಲಿಕೋಟೆಯವ. ಆಶಿಲಾ ಬಾನು ಎಂಬ ಆಸ್ಥಾನವೇಶ್ಯೆಯ ಮಗ. ಸಾಮೂದಿರಿಯ ಅರಮನೆಯ ರಕ್ಷಣಾದಳದ ಅಧಿಪತಿಯಾಗಿದ್ದವ. ಇವ ಸಾಮೂದಿರಿಯ ಮಗನೇ ಎಂದು ಗಿಡ್ವಾಣಿ ತಲೆಯ ಮೇಲೆ ಹೊಡೆದಂತೆ ಬರೆದಿದ್ದಾರಾದರೂ ಅದಕ್ಕೆ ಸಬೂತು ಒದಗಿಸುವ ಗೋಜಿಗೆ ಹೋಗಲಿಲ್ಲವೆನ್ನುವುದು ಬೇರೆ ಪ್ರಶ್ನೆ. ಈತ ರಾತ್ರೋರಾತ್ರಿ ಹೈದರನ ಪಕ್ಷ ಸೇರಿದ. ಅರಮನೆಯ ರಕ್ಷಣಾ ವ್ಯವಸ್ಥೆ ಕುಸಿದು ಬಿತ್ತು. ಹೈದರನ ಕೈಲಿ ಒತ್ತೆಯಾಳಾಗಿ ಸಿಗುವುದನ್ನು ಬಿಟ್ಟರೆ ಸಾಮೂದಿರಿಗೆ ಬೇರೆ ದಾರಿಯಿದ್ದದ್ದು ಆತ್ಮಹತ್ಯೆಯೊಂದೇ ಆಗಿತ್ತು. ೬೦೦ ವರ್ಷದ ಸಾಮೂದಿರಿಗಳ ಆಳ್ವಿಕೆ ಅಲ್ಲಿಗೆ ಕೊನೆಯಾಯ್ತು. ಹಾಗೆಂದು ಹೈದರನೇನು ಬಹುಕಾಲ ಬಾಳಲಿಲ್ಲ. ೧೭೮೨ರಲ್ಲಿ ಸ್ವಂತದೂರಿಂದ ದೂರದಲ್ಲಿ ಕ್ಯಾನ್ಸರಿನಿಂದ ನರಳಿ ನರಳಿ ಸತ್ತ. ಆರು ಶತಮಾನ ಮಲಬಾರಿನ ಏಕಮೇವಾದ್ವಿತೀಯ ಅಧಿಪತಿಗಳಾಗಿದ್ದ ಸಾಮೂದಿರಿಗಳೆದುರು ಮೈಸೂರಿನ ಆಳ್ವಿಕೆ ಕೇರಳದಲ್ಲಿ ಮೂವತ್ತು ವರ್ಷಗಳನ್ನೂ ಕಾಣಲಿಲ್ಲ. ಆದರೆ ಆ ಮೂವತ್ತು ವರ್ಷಗಳಲ್ಲಿ ಕೇರಳದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಇನ್ನು ರಿಪೇರಿಯಾಗದಷ್ಟು ಹದಗೆಟ್ಟವು ಎಂಬುದಂತೂ ಸತ್ಯ.
ಕೊಟ್ಟಾರತ್ತಿಲ್ ಶುಂಗೂನಿ ಮೆನನ್ ಕೇರಳ ಕಂಡ ಹೆಸರಾಂತ ಕವಿ, ವಿದ್ವಾಂಸ ಹಾಗೂ ಇತಿಹಾಸಕಾರ. ಆತನ ’ಐತಿಹ್ಯಮಾಲಾ’ ಕೇರಳದ ಇತಿಹಾಸದ ಬಗ್ಗೆ ತಿಳಿಸುವ ವಿಶಿಷ್ಟ ಗ್ರಂಥ. ಹೆಸರೇ ಹೇಳುವಂತೆ ಇದೊಂದು ಕೇರಳದ ಬಗೆಗಿನ ಐತಿಹ್ಯಗಳನ್ನು ಕಟ್ಟಿಕೊಡುವ ಪ್ರಯತ್ನ. ಇತಿಹಾಸವೆನ್ನುವುದಕ್ಕಿಂತಲೂ ಇದು ಪುರಾಣಗಳಂತೆ ಐತಿಹಾಸಿಕ ಘಟನೆಗಳನ್ನು ಒಂದಕ್ಕಿಂತ ಒಂದು ರೋಚಕ ಫ್ಯಾಂಟಸಿ ಕಥೆಗಳಡಿಯಲ್ಲಿ ವ್ಯಾಖಾನಿಸುತ್ತ ಸಾಗುತ್ತದೆ. ಎಂಟು ಭಾಗಗಳು ಸುಮಾರು ನೂರಿಪ್ಪತ್ತು ಆಶ್ವಾಸಗಳಿರುವ ಇದು ನಿಜಕ್ಕೂ ಬ್ರಹದ್ಗ್ರಂಥವೇ ಸೈ. ಇದನ್ನು ಬರೆದು ಮುಗಿಸಲು ಶುಂಗುನ್ನಿ ಸುಮಾರು ಇಪ್ಪತ್ತೈದು ವರ್ಷಗಳನ್ನು ತೆಗೆದುಕೊಂಡನಂತೆ. ಮುಂದೆ ’ಭಾಷಾಪೋಷಿಣಿ’ ಎಂಬ ಮಲಯಾಳಂ ಮಾಸಪತ್ರಿಕೆಯೊಂದು ಇದನ್ನು ಧಾರಾವಾಹಿಗಳ ರೂಪದಲ್ಲಿ ಹೊರತಂದಿತು. ಯಾವ ಹ್ಯಾರಿಪಾಟರಿಗೂ ಕಮ್ಮಿಯಿಲ್ಲದಂತೆ ಈ ಸರಣಿ ಕೇರಳದಲ್ಲಿ ಎಷ್ಟು ಪ್ರಸಿದ್ಧಿಗೊಂಡಿತ್ತೆಂದರೆ ೧೯೯೧ರಲ್ಲಿ ಇದು ಮತ್ತೊಮ್ಮೆ ಪುಸ್ತಕರೂಪದಲ್ಲಿ ಬಂದಾಗ ಸುಮಾರು ಒಂದೂವರೆ ಲಕ್ಷ ಪ್ರತಿಗಳು ಬಿಕರಿಗೊಂಡಿದ್ದವು. ಅದಾಗಿ ಇಪ್ಪತ್ತೆರಡು ಬಾರಿ ಮರುಮುದ್ರಣಗೊಂಡರೂ ಇದರ ಜನಪ್ರಿಯತೆ ಕೊಂಚವೂ ಮುಕ್ಕಾಗಿಲ್ಲ. ಈ ಪುಸ್ತಕದಲ್ಲಿ ಬರುವ ಸಾಮೂದಿರಿಯ ಬಗೆಗಿನ ಹಲವು ಆಖ್ಯಾಯಿಕೆಗಳಲ್ಲಿ ಒಂದು ಕಥೆ ಹೀಗಿದೆ.
![]() |
ಶುಂಗುನಿ ಮೆನನ್ |
![]() |
ಐತಿಹ್ಯಮಾಲಾ |
ಸಾಮೂದಿರಿ ರಾಜನಿಗೆ ಪಟ್ಟಕ್ಕೆ ಬಂದಾಗಿನಿಂದ ಬಲಭುಜದಲ್ಲಿ ನೋವು. ಅದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿತೇ ವಿನಃ ಕಡಿಮೆಯಾಗುವ ಲಕ್ಷಣಗಳ್ಯಾವವೂ ಕಾಣಿಸಲಿಲ್ಲ. ಆಸ್ಥಾನ ವೈದ್ಯರಿಂದ ಅಳಲೆಕಾಯಿ ಪಂಡಿತರವರೆಗೆ, ತಾಂತ್ರಿಕರಿಂದ ಮಾಂತ್ರಿಕರವರೆಗೆ ಎಲ್ಲರೂ ತಮ್ಮತಮ್ಮ ವಿದ್ಯೆಯನ್ನು ಪ್ರಯೋಗಿಸಿ ನೋಡಿದರೂ ಯಾವುದೇ ಫಲಿತಾಂಶ ಮಾತ್ರ ಕಾಣಿಸುತ್ತಿರಲಿಲ್ಲ. ಇದೊಂದು ಗುಣಪಡಿಸಲಾಗದ ತೀರವ್ಯಾಧಿ ಎಂದು ಅಲ್ಲಿದ್ದ ವೈದ್ಯರೆಲ್ಲ ಘೋಷಿಸಿ ಕೈತೊಳೆದುಕೊಂಡರು. ಹೀಗಿಪ್ಪಾಗ ಒಂದು ದಿನ ಸಾಮೂದಿರಿಯ ಆಸ್ಥಾನದಲ್ಲಿ ಯುವಕನೊಬ್ಬ ಪ್ರತ್ಯಕ್ಷನಾಗಿ ಅರಸನ ನೋವನ್ನು ತಾನು ಗುಣಪಡಿಸುವುದಾಗಿ ಹೇಳಿಕೊಂಡ. ರಾಜವೈದ್ಯರೇ ಗುಣಪಡಿಸಲಾಗದ ಕಾಯಿಲೆಗೆ ಇವನ್ಯಾವ ಮದ್ದು ಹೇಳುತ್ತಾನೆಂದು ಕೇಳುವ ಕುತೂಹಲ ಆಸ್ಥಾನಿಕರಿಗೆ. ಕಾಯಿಲೆಯ ಪೂರ್ವಾಪರಗಳನ್ನೆಲ್ಲ ತಿಳಿದುಕೊಂಡವ ’ಅಯ್ಯೋ ಇಷ್ಟೇನಾ, ಇದಕ್ಕೊಂದು ತುಂಬಾ ಸರಳ ವಿಧಾನವಿದೆ. ಯಾವಾಗಲೂ ಬಲಭುಜದ ಮೇಲೆ ಒದ್ದೆ ವಸ್ತ್ರ ಹಾಕಿಕೊಂಡರಾಯ್ತು. ಅಷ್ಟೆ. ನೋವು ಗುಣವಾಗದಿದ್ರೆ ಹೇಳಿ!’ ಅಂದನಂತೆ. ಸಾಮೂದಿಗೆ ವಿಚಿತ್ರವೆನಿಸಿತು. ದೊಡ್ಡದೊಡ್ಡ ಚಿಕಿತ್ಸೆಗಳೇ ಪರಿಣಾಮ ಬೀರದಿರುವಾಗ ’ಹೆಗಲ ಮೇಲೆ ಟವಲ್’ ಅದೇನು ಮ್ಯಾಜಿಕ್ ಮಾಡತ್ತಪ್ಪಾ ಅಂತ. ಆದರೆ ಅವನಿಗೂ ಬೇರೆ ದಾರಿ ಇರಲಿಲ್ಲ. ನೋವು ಗುಣವಾಗುವುದಾದರೆ ಇದನ್ನೂ ಒಂದು ಮಾಡಿದರಾಯ್ತು ಎಂದುಕೊಂಡು ಹೆಗಲ ಮೇಲೆ ಒದ್ದೆ ಟವಲ್ ಹಾಕಿಕೊಂಡ್ರೆ ಏನಾಶ್ಚರ್ಯ ಅಂತೀರಿ, ದಿನದಿಂದ ದಿನಕ್ಕೆ ನೋವು ಕಡಿಮೆಯಾಗತೊಡಗಿತು. ಸಾಮೂದಿರಿ ಖುಷಿಯಿಂದ ಕುಣಿದಾಡತೊಡಗಿದ. ಇದಾಗಿ ಒಂದೆರಡು ದಿನಗಳಲ್ಲೇ ದೇಶಾಂತರ ಹೋಗಿದ್ದ ದೀವಾನ ತಿರುಗಿ ಬಂದನಂತೆ. ರಾಜ ದೀವಾನನಿಗೆ ನಡೆದ ಕಥೆಯನ್ನೆಲ್ಲ ಹೇಳಿ ಆ ಯುವಕನಿಗೆ ಸನ್ಮಾನ ಸಮಾರಂಭವನ್ನೇರ್ಪಡಿಸಲು ಸೂಚಿಸಿದ. ಸಾಮೂದಿರಿ ಹೇಳಿದ್ದೆಲ್ಲ ಕೇಳಿದ ದಿವಾನ ತಲೆತಲೆ ಚಚ್ಚಿಕೊಂಡ. ಏನೋ ನೆನಪಾದವನಂತೆ ಅಲ್ಲಿಂದ ಓಡಿದವ ಕಲ್ಲಿಕೋಟೆಯ ಮೂಲೆಮೂಲೆಗಳನ್ನೆಲ್ಲ ಹುಡುಕತೊಡಗಿದನಂತೆ. ಆತ ಏನು ಹುಡುಕುತ್ತಿದ್ದನೆಂದು ಯಾರಿಗೂ ಗೊತ್ತಾಗಲಿಲ್ಲ. ಸಂಜೆ ಕಪ್ಪೇರುತ್ತಿತ್ತು. ನಿರಾಸೆ ಹೊತ್ತ ಮುಖದೊಂದಿಗೆ ದಿವಾನ ಅರಮನೆಯ ದಾರಿ ಹಿಡಿದ. ದಾರಿ ಮಧ್ಯದಲ್ಲಿ ಕಲ್ಲೀಕೋಟೆಯ ಅಂಗಡಿ ಸ್ಥಳ ಅಥವಾ ಮಾರ್ಕೆಟ್ ಏರಿಯಾ. ದಿವಾನ ಎಲ್ಲರನ್ನೂ ಗಮನಿಸುತ್ತ ಸಾಗುತ್ತಿದ್ದ. ಒಂದು ಮೂಲೆಯಲ್ಲಿ ಹೆಂಗಸೊಬ್ಬಳು ಸುಮ್ಮನೇ ನಿಂತಿದ್ದು ಅವನ ಕಣ್ಣಿಗೆ ಬಿತ್ತು. ಅನುಮಾನವೇ ಇಲ್ಲ. ಇದು ಅವಳೇ! ಓಡೋಡಿ ಹೋದವನೇ ಅವಳಿಗೆ ಕೈಮುಗಿದು ’ತಾಯಿ, ನಿಮಗೇನೋ ತುಂಬ ಮುಖ್ಯವಾದ ವಿಷಯ ಹೇಳಲಿಕ್ಕಿದೆ, ಮಾತಾಡಲು ಕೆಲ ಸಮಯ ಮೀಸಲಿಡಬಹುದೇ’ ಎಂದನಂತೆ. ಅರಮನೆಯ ದಿವಾನನ ಜೊತೆ ಮಾತಾಡಲು ಯಾರು ತಾನೇ ನಿರಾಕರಿಸುತ್ತಾರೆ? ಖಂಡಿತ ನಿಸ್ಸಂಕೋಚವಾಗಿ ಮಾತಾಡಿ ಎಂದಳವಳು. ಏನೋ ಹೇಳಲು ಹೊರಟವ ಸ್ವಲ್ಪ ತಡೆದ. ’ಅಯ್ಯೋ ನನ್ನ ರಾಜಮುದ್ರೆಯನ್ನು ಅರಮನೆಯಲ್ಲೇ ಬಿಟ್ಟು ಬಂದೆ. ಅದು ಯಾರ ಕೈಗಾದರೂ ಸಿಕ್ಕಿದರೆ ಗಂಡಾತರವಾಗುತ್ತದೆ. ಅದನ್ನು ಹೀಗೆ ಹೋಗಿ, ಹಾಗೆ ತಂದೆ. ಅಲ್ಲಿಯವರೆಗೂ ಕಾಯಬಹುದೇ. ನಾನು ನಿಮ್ಮೊಂದಿಗೆ ತುಂಬ ತುರ್ತಿನ ವಿಚಾರ ಮಾತಾಡಲಿಕ್ಕಿದೆ. ಇದು ರಾಜ್ಯದ ಅಳಿವು ಉಳಿವಿನ ಪ್ರಶ್ನೆ’ ಎಂದ. ಹೆಂಗಸು ಆಗಬಹುದೆಂದು ತಲೆಯಾಡಿಸಿದಳು. ದಿವಾನನಿಗ್ಯಾಕೋ ಸಮಾಧಾನವಾಗಲಿಲ್ಲ. ನಾನು ರಾಜಮುದ್ರೆಯನ್ನು ತೆಗೆದುಕೊಂಡು ಇಲ್ಲಿ ಬರುವವರೆಗೂ ಕಾಯುತ್ತ ನಿಲ್ಲುವುದಾಗಿ ಆಣೆ ಮಾಡಿ ಎಂದು ಗೋಗರೆದ. ನೀನು ಬರುವವರೆಗೂ ನಾನೆಲ್ಲೂ ಹೋಗದೇ ಇಲ್ಲೇ ಇರುತ್ತೇನೆ ಎಂದು ಹೆಂಗಸು ಭಾಷೆ ಕೊಟ್ಟಳು. ದಿವಾನ ಮತ್ತೆ ಅರಮನೆಯತ್ತ ಓಡಿದ. ದಿವಾನನ ಬರುವಿಕೆಯನ್ನೇ ಎದುರುನೋಡುತ್ತಿದ್ದ ಸಾಮೂದಿರಿಗೆ ವಿಚಿತ್ರವೆನಿಸಿತು. ಓಡಿ ಬಂದವನನ್ನು ತಡೆದು ನಿಲ್ಲಿಸಿ ಏನಾಯ್ತೆಂದು ಕೇಳಿದ. ಅಯ್ಯೋ ನೀವೆಂಥ ದೊಡ್ಡ ತಪ್ಪು ಮಾಡಿಬಿಟ್ಟಿರಿ ಎಂದು ಮಹಾಸ್ವಾಮಿ ಎಂದು ದಿವಾನ ಗೋಳಾಡತೊಡಗಿದ. ಸಾಮೂದಿರಿಗೊಂದೂ ಅರ್ಥವಾಗಲಿಲ್ಲ. ದಿವಾನ ಬಿಡಿಸಿ ಹೇಳತೊಡಗಿದ. ನಿಮ್ಮ ಬಲಭುಜದ ನೋವಿಗೆ ಕಾರಣವಾಗಿದ್ದು ಅಲ್ಲಿ ನೆಲೆನಿಂತ ಸಾಕ್ಷಾತ್ ಮಹಾಲಕ್ಷ್ಮಿಯ ಕಾರಣದಿಂದ. ಐಶ್ವರ್ಯದ ದೇವಿ ನಿಮ್ಮ ಭುಜದ ಮೇಲೆ ತಾಂಡವವಾಡುತ್ತಿರುವುದರಿಂದಲೇ ಈ ರಾಜ್ಯ ಇಷ್ಟೊಂದು ಸಂಪದ್ಭರಿತವೂ ಸುಭಿಕ್ಷವೂ ಆಗಿದೆ. ನಿಮ್ಮ ಸಂಪತ್ತು ಹೆಚ್ಚಿದಂತೆ ನಿಮ್ಮ ಭುಜದ ನೋವೂ ಹೆಚ್ಚಿದೆ. ಈಗ ಒದ್ದೆಬಟ್ಟೆಯನ್ನು ಧರಿಸಿದ್ದರಿಂದ ಅಪಶಕುನವಾಗಿ ಲಕ್ಷ್ಮಿ ಅರಮನೆಯನ್ನು ತೊರೆದು ಹೊರನಡೆದಿದ್ದಾಳೆ. ನಿಮ್ಮ ಕೈಯಾರೆ ದುರದೃಷ್ಟವನ್ನು ಆಹ್ವಾನಿಸಿಕೊಂಡಿದ್ದೀರೀ. ಅವಳನ್ನು ಕಷ್ಟಪಟ್ಟು ತಡೆದು ನಿಲ್ಲಿಸಿದ್ದೇನೆ. ಅವಳು ರಾಜ್ಯ ಬಿಟ್ಟು ಹೋಗದಂತೆ ಮಾಡುವುದಕ್ಕೆ ಇನ್ನು ಇರುವುದು ಒಂದೇ ದಾರಿ ಎಂದವನೇ ಸಾಮೂದಿರಿಯ ಉತ್ತರಕ್ಕೂ ಕಾಯದೆ ತನ್ನ ಮನೆಕಡೆ ತೆರಳಿದ. ಸಾಮೂದಿರಿಗೆ ಅವನ ಮಾತುಗಳಿಂದ ಹೆಚ್ಚಿನದೇನೂ ಹೊಳೆಯದೇ ಹೋದ ದಾರಿಯನ್ನೇ ನೋಡುತ್ತ ನಿಂತ. ಇತ್ತ ದಿವಾನ ಸೀದಾ ತನ್ನ ಮನೆಗೆ ತೆರಳಿದವನೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಅರಮನೆಯ ಪಂಡಿತರಿಗೆ ದಿವಾನನ ಕೃತ್ಯದ ಅರಿವಾಯ್ತು. ಲಕ್ಷ್ಮಿದೇವಿ ಕಲ್ಲೀಕೋಟೆಯನ್ನು ಬಿಟ್ಟು ತೆರಳದಂತೆ ಮಾಡಲು ಉಪಾಯ ಹೂಡಿದ ದಿವಾನ ತಾನು ಬರುವವರೆಗೂ ಸ್ಥಳಬಿಟ್ಟು ಕದಲದಂತೆ ಅವಳಿಂದ ಮಾತು ಪಡೆದಿದ್ದ. ದಿವಾನ ಬರುವುದನ್ನು ಎದುರು ನೋಡಿ ಮಹಾಲಕ್ಷ್ಮೀ ಕಲ್ಲೀಕೋಟೆಯ ಬಜಾರಿನಲ್ಲಿ ಕಾಯುತ್ತ ನಿಂತಳು. ಆ ಸ್ಥಳವೇ ಈಗಿನ ಎಸ್.ಎಮ್.ಸ್ಟ್ರೀಟ್. ಈ ಮಾರ್ಕೇಟಿನ ಮಧ್ಯದಲ್ಲಿ ಲಕ್ಷ್ಮಿ ನೆಲೆನಿಂತ ಸ್ಥಳದಲ್ಲಿ ಚಿಕ್ಕದೊಂದು ಭಗವತಿಯ ಮಂದಿರವಿದೆ. ದೇವಿಯ ಕೃಪೆಯಿರಬೇಕು. ಶತಶತಮಾನಗಳಿಂದ ಎಸ್ಸೆಂ ಗಲ್ಲಿಯ ಬಜಾರಿನ ವೈಭವಕ್ಕೆ ಭಂಗಬಂದಿಲ್ಲ. ಸಂಜೆಯ ಹೊತ್ತು ಆ ಸ್ಥಳದಲ್ಲಿ ಅಡ್ಡಾಡುವುದೇ ಕಣ್ಣಿಗೊಂದು ಹಬ್ಬ. ಅಲ್ಲಿ ಯಾವತ್ತೂ ಸಂಪತ್ತು, ಸಮೃದ್ಧಿ ತುಂಬಿತುಳುಕುತ್ತಿರುತ್ತದೆ. ಹೆಗಲ ಮೇಲೆ ಒದ್ದೆ ವಸ್ತ್ರ ಅಶುಭವೆಂದು ನಮ್ಮಲ್ಲಿನ ನಂಬಿಕೆ. ಅದೂ ಬಲಭುಜದ ಮೇಲೆ ಒದ್ದೆವಸ್ತ್ರ ಹೊದೆಯುವುದು, ಉಪವೀತವನ್ನು ಬಲಭಾಗದಲ್ಲಿ ಧರಿಸುವುದು ಅಪರಕರ್ಮಗಳಲ್ಲಿ ಮಾತ್ರ. ಇದಾಗಿ ಕೆಲ ತಿಂಗಳುಗಳು ಕಳೆಯುವುದರಲ್ಲಿ ಹೈದರನ ದಾಳಿಯಾಗಿತ್ತು. ಕಲ್ಲಿಕೋಟೆ ಸರ್ವನಾಶವಾಯಿತು. ವಿಜಯನಗರದ ಸಂಪತ್ತನ್ನು ಬಹಮನಿಯವರು ಲೂಟಿ ಹೊಡೆದಂತೆ ಕಲ್ಲಿಕೋಟೆಯನ್ನು ಮೈಸೂರಿನವರು ಸೂರೆಹೊಡೆದು ಸಂಪತ್ತನ್ನೆಲ್ಲ ಆನೆಗಳ ಮೇಲೆ ತುಂಬಿಕೊಂಡು ಹೋದರು. ವಿಜಯನಗರವೇನೋ ಹಾಳುಹಂಪೆಯಾಯಿತು, ಆದರೆ ಕಲ್ಲೀಕೋಟೆಯ ಖ್ಯಾತಿ ಶತಮಾನಗಳುರುಳಿದರೂ ಕೊಂಚವೂ ಮುಕ್ಕಾಗಲಿಲ್ಲ.
Sachin this makes great reading. Your research and story telling is superlative. More so since it is a first person account. Keep writing , cannot really wait for your blog posts. More power to your pen.
ReplyDeleteಕನ್ನಡವನ್ನು ಆಯ್ಕೆ ಮಾಡಿ
ReplyDeleteಕನ್ನಡದ ಅರಮನೆಗೆ ಬರಲು ತಮಗೆ ಆದರದಿಂದ ಸ್ವಾಗತಿಸುತ್ತೇವೆ... :pray:
ಕನ್ನಡವನ್ನು ಉಳಿಸಿ, ಬೆಳೆಸಿ..
..
https://Www.spn3187.blogspot.in
(already site viewed 1,33,487+)
and
https://T.me/spn3187
(already joined to this group 487+)
Share your friends & family also subcrib (join)
sparkocam license key
ReplyDeletebytefence antivirus License key
ReplyDeleteYour level of quality work remains unprecedented in our organization.
ReplyDeletehttps://pragyayoga.blogspot.com/2018/09/Essay-on-Importance-of-Yoga-in-Hindi.html?showComment=1640886316803#c3647248455447666192
Its a Very Great and Amazing Blog Dear This is Very Great and Helpful..
ReplyDeleteTalha PC
Crackedithere
avira phantom vpn pro crack
avs video converter crack
Thanks for the great message! I really enjoyed reading
ReplyDeleteyou could be a good writer. Evil Alvzis notes blog and testament
will finally come back later. I want to support
keep writing well, have a nice weekend!
iobit malware fighter crack
ummy video downloader crack
wondershare dr fone crack
tunefab spotify music converter crack
Please let me know if you’re looking for an author for your weblog.
ReplyDeleteYou have some really good posts and I believe I would be a good asset.
If you ever want to take some of the load off, I’d love to
write some content for your blog in exchange for a link back to mine.
Please send me an email if interested. Thanks!
tweakbit fixmypc crack
final draft crack
thanks for sharing it i found it so amazing glad to read this play king's raid on pc
ReplyDeleteDayZ crack
Minecraft Dungeons Crack
iobit uninstaller pro crack
iobit driver booster crack
I like this article. I was searching over search engines and found your blog and it really helps thank you very much
ReplyDeleteAOMEI partition assistant crack wizards realize you to easily finish complex operations including copying partition, cloning an entire hard disk. AOMEI partition assistant crack standard edition License Key enables you to extend the available space on the hard disk quickly to improve the capacity for the original partition. AOMEI partition assistant crack smart migration wizard could easily assist you to migrate OS to another hard disk including SSD and HDD. AOMEI partition assistant crack thanks to the stable partition recovery wizard, the lost and deleted partition is not your problem anymore. Creating a bootable disk allows you to get access your hard disk even the original OS crashed. AOMEI partition assistant crack
What a wonderful way to screw people over. This site will help me find and use a lot of software. Do this and let us know. Thanks for sharing Chimera Tool Crack. Click here to visit our site and read more.
ReplyDeleteThey? I know this is a problem, but I was wondering if you know where I can get the captcha plugin for my comment form.
I use the same blogging platform that you have and have.
Is it hard for you to find it? Thanks!
getdataback pro crack
teamviewer crack
daemon tools lite crack
power music professional crack
I like your all post. You Have Done really good Work On This Site. Thank you For The Information You provided. It helps Me a lot.
ReplyDeleteit Is Very Informative Thanks For Sharing. I have also Paid This sharing. I am ImPressed For With your Post Because This post is very
is very beneficial for me and provides new knowledge to me. This is a cleverly
written article. Good work with the hard work you have done I appreciate your work thanks for sharing it. It Is very Wounder Full Post
sketchup pro crack
sketchup pro crack
sketchup pro crack
sketchup pro crack
sketchup pro crack
sketchup pro crack
sketchup pro crack
sketchup pro crack
This is a very helpful site for anyone, each and every man can easily operate this site and can get benefits
ReplyDeleteTorchlight III Crack
imazing crack
Vampyr Crack
what to consider is that this program gives you some assistance in addressing a wide range of PC or HDD issues. Never face glitches like screen freezing, equipment disappointment, crashes, and other comparative issues when a programmed support framework is with you. Apowersoft Watermark Remover 1.4.16 + Crack
ReplyDeleteThis is a good time to make long term plans and it's timely.
ReplyDeleteHave fun. I have read this post, and if you will excuse me, I would like to advise you on interesting topics or tips.
You can write the following articles on this topic.
I want to read more topics on this topic!
english stories english short stories with moral value What is the factorial of 100
Consolidation from Dubai to Karachi Pakistan
ReplyDeleteI am very thankful for the effort put on by you, to help us, Thank you so much for the post it is very helpful, keep posting such type of Article.
ReplyDeleteNikon Camera Control Crack
Anvsoft Syncios Crack
I was reading some of your content on this website and I conceive this internet site is really informative ! Keep on putting up. Gatte ki Sabji
ReplyDelete