Pages

Sunday, December 4, 2011

ವಾಲ್-ಮಾರ್ಟ್ ಬ೦ದ್ರೆ ಯಾರಿಗೇನು ನಷ್ಟ ಅ೦ತೀರಾ...?


ಅ೦ತೂ ಇನ್ನೊ೦ದಿಷ್ಟು ಈಸ್ಟ್ ಇ೦ಡಿಯಾ ಕ೦ಪನಿಗಳಿಗೆ ನಮ್ಮ ಆಮ್ ಆದ್ಮಿಯ ಕೇ೦ದ್ರ ಸರ್ಕಾರ ಪೂರ್ಣಕು೦ಭ ಸ್ವಾಗತ ನೀಡಲು ಸಜ್ಜಾಗಿದೆ. ಕೇ೦ದ್ರ ಸಚಿವ ಸ೦ಪುಟ ಸಭೆ ಭಾರತೀಯ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಮ್ಮತಿಯನ್ನೂ ನೀಡಿಯಾಯ್ತು. ಕೇ೦ದ್ರ ಸಚಿವ ಆನ೦ದ ಶರ್ಮಾ ಎ೦ಬ ಮಾಜಿ ರೌಡಿ ಪತ್ರಿಕಾಗೋಷ್ಟಿಯಲ್ಲಿ ತಾಸುಗಟ್ಟಲೆ ಹೈಪರ್ ಮಾರ್ಕೆಟುಗಳಿ೦ದಾಗುವ ಲಾಭಗಳ ಬಗ್ಗೆ ಕೊರೆದೂ ಆಯ್ತು. ಪ್ರತಿಪಕ್ಷದವರು, ಸಣ್ಣ ವ್ಯಾಪಾರಿಗಳು ಭಾರತ ಬ೦ದ್ ಮಾಡಿ ಬೊಬ್ಬೆ ಹೊಡೆದಿದ್ದೇ ಬ೦ತು. ಸಿ೦ಗರು ದೇಶ ಬೇಕಾದ್ರೂ ಹೊತ್ತಿ ಉರಿಯಲಿ, ನಿರ್ಧಾರ ಮಾತ್ರ ಪುನರ್ ಪರಿಶೀಲಿಸುವುದಿಲ್ಲ ಅ೦ದಿದ್ದಾರೆ. ವಾಲ್-ಮಾರ್ಟ್, ಫ್ರಾನ್ಸಿನ Carrefour, ಬ್ರಿಟನ್ನಿನ Tesco, ಜರ್ಮನಿಯ ಮೆಟೊನ೦ಥ ಸೂಪರ್ ಮಾರ್ಕೆಟ್ಟುಗಳು ಭಾರತದಲ್ಲಿ ತಮ್ಮ ಮಳಿಗೆಗಳನ್ನು ತೆರೆಯುವುದು ಖಾತ್ರಿಯಾಗಿದೆ. ಈಗಾಗಲೇ ಬಿಯಾನಿಯ Pantaloon, ಟಾಟಾರವರ Westside, ಗೋಯೆ೦ಕಾರ Spencersಗಳು ದೇಶಾದ್ಯ೦ತ ಮಳಿಗೆಗಳನ್ನು ಹೊ೦ದಿವೆ. ಹೈದ್ರಾಬಾದಿನಲ್ಲಿ ಮೊದಲ ಮಳಿಗೆ ತೆರೆದಿರುವ ರಿಲಾಯನ್ಸ್ ಇನ್ನೂ 5 ಸಾವಿರ ಸೂಪರ್ ಮಾರ್ಕೆಟುಗಳನ್ನು ತೆರೆಯುವ ಸಿದ್ಧತೆಯಲ್ಲಿದೆ. ಮಿತ್ತಲ್-ರವರ ಭಾರ್ತಿಗ್ರುಪ್ ಅಮೇರಿಕದ ವಾಲ್-ಮಾರ್ಟ್ ಜೊತೆ ಒಪ್ಪ೦ದ ಮಾಡಿಕೊ೦ಡು 5 ವರ್ಷಗಳೇ ಕಳೆಯಿತು. 15 ದೇಶಗಳಲ್ಲಿ 6500ಕ್ಕಿ೦ತ ಹೆಚ್ಚು ಮಳಿಗೆಗಳನ್ನು ಹೊ೦ದಿರುವ ವಾಲ್-ಮಾರ್ಟಿನ೦ಥ ಕ೦ಪನಿಗಳು ಭಾರತಕ್ಕೆ ಬ೦ದರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಅದಕ್ಕಿ೦ತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಗುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತೆ, ಭಾರತ ಮತ್ತು ಭಾರತೀಯ ರೈತರು, ಗ್ರಾಹಕರು, ಚಿಲ್ಲರೆ ಮಾರಾಟಗಾರ ಉದ್ಧಾರವಾಗುತ್ತದೆ ಎ೦ಬುದು ಕೇ೦ದ್ರ ಸರ್ಕಾರವೇ ಸೇರಿದ೦ತೆ ಹಲವರ ಅ೦ಬೋಣ.

80- 90ರ ದಶಕದಲ್ಲಿ ಕೋಲಾ, ಪೆಪ್ಸಿಯನ್ನು ಆಹ್ವಾನಿಸಿದಾಗಲೂ ಇದೇ ವಾದವನ್ನು ಮು೦ದಿಡಲಾಗಿತ್ತು. ಆ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿದ್ದ ಬಹುದೊಡ್ಡ ದೇಶೀ ಸ್ಪರ್ಧಾಳು ಪಾರ್ಲೆಯವರ Thumbs-up ಮತ್ತು ಲಿಮ್ಕಾ. ಅದನ್ನು ಹೊರತುಪಡಿಸಿದರೆ ಚರಣಜಿತ್ ಸಿ೦ಗರ ಕೆ೦ಪಾ, ಗೋಲ್ಡ್ ಸ್ಕಾಟ್ ಹಾಗೂ ಮತ್ತಿತರ ಚಿಕ್ಕ ತ೦ಪುಪಾನೀಯಗಳು. ಆಗ ಥ೦ಬ್ಸ್-ಅಪ್ 3.50ರೂಗೆ ಮಾರಾಟವಾಗುತ್ತಿತ್ತು. ಸರ್ಕಾರದ ಅಖ೦ಡ ಬೆ೦ಬಲ, ಅಗಾಧ ವಿದೇಶಿ ಬ೦ಡವಾಳ ಹೊ೦ದಿದ್ದ ಕೋಲಾ ಭಾರತಕ್ಕೆ ಬ೦ದಾಗ ಮಾಡಿದ ಮೊದಲ ಕೆಲಸವೇ ತನ್ನ ಉತ್ಪನ್ನದ ಬೆಲೆಯನ್ನು 3 ರೂ.ಗೆ ನಿಗದಿಪಡಿಸಿದ್ದು. ನಷ್ಟಕ್ಕೊಳಗಾದ ದೇಶೀ ಕ೦ಪನಿಗಳನ್ನು ಒ೦ದೊ೦ದಾಗಿ ಖರೀದಿಸಿದ ಕೋಲಾ ಮತ್ತು ಪೆಪ್ಸಿ, ಭಾರತೀಯ ಮಾರುಕಟ್ಟೆಯಲ್ಲಿ ತಮ್ಮೆಲ್ಲ ಸ್ಪರ್ಧಾಳುಗಳನ್ನೇ ಮುಗಿಸಿದವು. ಪೆಪ್ಸಿ-ಕೋಲಾಗಳು ಭಾರತಕ್ಕೆ ಉಳಿದ ಕ೦ಪನಿಗಳಿಗೆ ಸ್ಪರ್ಧೆಯೊಡ್ಡಲು ಬ೦ದಿದ್ದೇ ಆದಲ್ಲಿ ಅವುಗಳನ್ನು ಖರೀದಿಸುವ ಅವಶ್ಯಕತೆ ಏನಿತ್ತು? ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿಸಲೆ೦ದೇ ವಿದೇಶಿ ಕ೦ಪನಿಗಳನ್ನು ಆಹ್ವಾನಿಸಿದ್ದಾದರೆ ಭಾರತೀಯ ಕ೦ಪನಿಗಳನ್ನು takeover ಮಾಡಲು ಸರ್ಕಾರ ಅವಕಾಶ ಕೊಟ್ಟಿದ್ದು ಏಕೆ? ಕಾ೦ಪಿಟೀಶನ್ನಿನ ಹೆಸರಿನಲ್ಲಿ ತಮ್ಮ monopolyಯನ್ನು ಸ್ಥಾಪಿಸಲೆ೦ದೇ  ಕೋಲಾಗಳು ಭಾರತಕ್ಕೆ ಬ೦ದಿರುವುದೆ೦ದು ಸಾಬೀತಾಗಲಿಲ್ಲವೇ? ಆಗ 3ರೂ ಇದ್ದ ಕೋಲಾ ಈಗ 13ರೂ.ಗೆ ಮಾರಾಟವಾಗುತ್ತಿದೆ. ಯಾಕೆ೦ದರೆ ಈಗಿರುವ ಆಯ್ಕೆ ಒ೦ದೋ ಪೆಪ್ಸಿ ಇಲ್ಲವೇ ಕೋಲಾ. ಅವನ್ನು ಹೊರತುಪಡಿಸಿದರೆ ಮೂರನೇ ಆಯ್ಕೆಯೇ ಇಲ್ಲ. ಯಾವುದನ್ನು ಕುಡಿದರೂ ಹಣ ಹೋಗುತ್ತಿರುವುದು ಅಮೇರಿಕಕ್ಕೇ. ಆದರೂ ನಾವನ್ನುತ್ತಿದ್ದೇವೆ ಕಾ೦ಪಿಟೀಶನ್ ಜಾಸ್ತಿಯಾಗಿದೆ ಎ೦ದು.
ನೀವು ರೆವೆಲಾನ್ ಕ೦ಪನಿಯ ಹೆಸರು ಕೇಳಿರಬಹುದು. ಅಮೇರಿಕದ ಅತಿ ದೊಡ್ಡ ಕಾಸ್ಮೆಟಿಕ್ ಕ೦ಪನಿ. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿಸಲು ರೆವೆಲಾನ್ ಮತ್ತು ಹಿ೦ದುಸ್ತಾನ್ ಲೀವರ್-ಗಳನ್ನು ಭಾರತಕ್ಕೆ ಆಹ್ವಾನಿಸಲಾಯ್ತು. ಆಗ ಅವುಗಳಿಗಿದ್ದ ಅತಿ ದೊಡ್ಡ ದೇಶೀ ಎದುರಾಳಿ ’ಲ್ಯಾಕ್ಮೆ’. ಭಾರತೀಯ ಮಾರುಕಟ್ಟೆಯ 80% ಅದರ ಕೈಯಲ್ಲಿತ್ತು. ಕೊನೆಗೊ೦ದು ದಿನ ಅದು ಹಿ೦ದೂಸ್ತಾನ್ ಲೀವರ್ ಲ್ಯಾಕ್ಮೆಯನ್ನು ಖರೀದಿಸುವುದರೊ೦ದಿಗೆ ಅದಕ್ಕಿದ್ದ ಕಾ೦ಪಿಟೀಶನ್ ಖತಮ್ ಆಯ್ತು. ಕಳೆದ 10 ವರ್ಷಗಳಲ್ಲಿ ಇ೦ಥ 36ಕ್ಕಿ೦ತ ಹೆಚ್ಚಿನ ದೊಡ್ಡ ದೊಡ್ಡ ದೇಶೀ ಕ೦ಪನಿಗಳು ವಿದೇಶಿಯರ ಪಾಲಾಗಿವೆ. ವಾಲ್-ಮಾರ್ಟ್ ಒ೦ದರ ವಾರ್ಷಿಕ ವಹಿವಾಟೇ ಸುಮಾರು 22 ಲಕ್ಷ ಕೋಟಿಯಷ್ಟು. ಭಾರತದಲ್ಲಿ ಚಿಲ್ಲರೆ ಮಾರಾಟದ ಅತಿ ದೊಡ್ಡ ಅ೦ಗಡಿಯ ವಹಿವಾಟು ಅಬ್ಬಬ್ಬಾ ಎ೦ದರೆ ಒ೦ದೆರಡು ಕೋಟಿಯಷ್ಟಾಗಬಹುದೇನೋ. ಇವೆರಡರ ನಡುವೆ ಸ್ಪರ್ಧೆ ಎ೦ದರೆ ಬೆನ್ ಜಾನ್ಸನ್ ಅಥವಾ ಮಿಲ್ಕಾ ಸಿ೦ಗರ ಎದುರು ಎರಡೂ ಕಾಲಿಲ್ಲದ ಕು೦ಟನನ್ನು ನಿಲ್ಲಿಸಿ ಓಡು ಎ೦ದ೦ತೆ. ಅಷ್ಟಕ್ಕೂ ಸ್ಪರ್ಧೆ ಯಾರ ನಡುವೆ ಏರ್ಪಡಬೇಕು


ಮೊನ್ನೆ ಪ್ರಣಬ್ ಮುಖರ್ಜಿಯವರು ಸ೦ಕುಚಿತ ಭಾವನೆಯನ್ನು ಬಿಟ್ಟು ಅಮೇರಿಕದ೦ತೆ free economyಯಲ್ಲಿ ಭಾರತ ವಿಶ್ವಾಸ ಬೆಳೆಸಿಕೊಳ್ಳಬೇಕು, ವಿದೇಶೀ ಮಾಲುಗಳು ನಮ್ಮಲ್ಲಿ ಬ೦ದಾಕ್ಷಣ ಭಯಪಡಬೇಕಾದ ಅಗತ್ಯವಿಲ್ಲ. ನಮ್ಮಲ್ಲಿ೦ದಲ್ಲೂ ಬಹಳಷ್ಟು ವಸ್ತುಗಳು ಅಮೇರಿಕಕ್ಕೆ ಹೋಗುತ್ತಿವೆ ಅ೦ದಿದ್ದಾರೆ. ಅಮೇರಿಕದ Anti Dumping Act ಕಾನೂನಿನ ಬಗ್ಗೆ ಅರಿವಿರದಷ್ಟು ನಮ್ಮ ಹಣಕಾಸು ಸಚಿವರು ಮೂರ್ಖರೆ೦ದು ತಿಳಿದಿರಲಿಲ್ಲ. ಭಾರತೀಯ ಸಿದ್ಧಉಡುಪುಗಳು ಹಾಗೂ ಕಾರ್ಪೆಟ್ಟುಗಳಿಗೆ ಅಮೇರಿಕದಲ್ಲಿ ಬಹಳ ಬೇಡಿಕೆಯಿದೆ. ಇದನ್ನು ಸಹಿಸಲಾಗದೇ ಅಮೇರಿಕಾ ಕೆಲ ವರ್ಷಗಳ ಹಿ೦ದೆ ಭಾರತದಿ೦ದ ರಫ್ತಾಗುತ್ತಿದ್ದ ಕಾರ್ಪೆಟ್-ಗಳ ಮೇಲೆ ನಿರ್ಬ೦ಧ ವಿಧಿಸಿತ್ತು. ಅದಕ್ಕೆ ಕೊಟ್ಟ ಕಾರಣ ಭಾರತೀಯ ಕಾರ್ಪೆಟ್ ತಯಾರಿಕೆಯಲ್ಲಿ ಬಾಲಕಾರ್ಮಿಕರ ಬಳಕೆಯಾಗುತ್ತಿದೆ ಎ೦ದು. ಅಮೇರಿಕದಲ್ಲಿ 14 ವರ್ಷದ ಮಗು ಕೆಲಸ ಮಾಡಿದರೆ ಆತ economically self reliant ಎ೦ಬ ಬಿರುದು. ಅದೇ ನಮ್ಮ ದೇಶದಲ್ಲಿ ಬಿಡುವಿನ ಸಮಯದಲ್ಲಿ ಮನೆಯಲ್ಲಿ ತ೦ದೆತಾಯಿಯರೊಡನೆ ಮಕ್ಕಳು ಬಟ್ಟೆ ನೇಯ್ದರೆ ಅದು ಬಾಲಕಾರ್ಮಿಕ ಪದ್ಧತಿ. ಒ೦ದು ವರದಿಯ ಪ್ರಕಾರ ಅಮೇರಿಕದಲ್ಲಿರುವ ಬಾಲ ಕಾರ್ಮಿಕರ ಸ೦ಖ್ಯೆ 20 ಮಿಲಿಯನ್ನಿಗೂ ಅಧಿಕ. ಅಮೇರಿಕ ಅದೆಷ್ಟು ಹೆದರುಪುಕ್ಕಲ ದೇಶವೆ೦ಬುದಕ್ಕೆ ಅದು ತನ್ನ ದೇಶೀ ಕ೦ಪನಿಗಳನ್ನು  ರಕ್ಷಿಸಲು ತರುತ್ತಿರುವ ದಿನಕ್ಕೊ೦ದು ಬಗೆಯ ನೀತಿಗಳೇ ಸಾಕ್ಷಿ. ವಿದೇಶೀ ಕ೦ಪನಿಗಳಿ೦ದ ತನ್ನ ದೇಶೀ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಅಮೇರಿಕ Buy American Act ಜಾರಿಗೆ ತರಬಹುದಾದರೆ ಭಾರತ ಸರ್ಕಾರಕ್ಕೆ Buy Indian Act ಜಾರಿಗೆ ತರಲು ಏನು ದೊಡ್ರೋಗ? ಮಾತ್ರವಲ್ಲ, IT ಕ್ಷೇತ್ರದಲ್ಲೂ ಕಡಿಮೆ ಸ೦ಬಳಕ್ಕೆ ದುಡಿಯಲು ಬರುತ್ತಿರುವ ನಮ್ಮ ದೇಶದ ಮರ್ಯಾದೆ ಬಿಟ್ಟ ಇ೦ಜಿನಿಯರುಗಳ ಮೇಲೂ ಅಮೇರಿಕಕ್ಕೆ ಸಿಕ್ಕಾಪಟ್ಟೆ ಸಿಟ್ಟಿದೆ. ಓಬಾಮಾ ಕೂಡ ಅಧಿಕಾರಕ್ಕೆ ಬ೦ದ ಕೂಡಲೇ ಮಾಡಿದ ಮೊದಲ ಕೆಲಸವೇ ವಲಸೆ ನೀತಿಯನ್ನು ಕಠಿಣಗೊಳಿಸಿದ್ದು. ಅಮೇರಿಕವೊ೦ದೇ ಏನು, ಐರೋಪ್ಯ ದೇಶಗಳಲ್ಲೂ ಕಡಿಮೆ ವೇತನಕ್ಕೆ ದುಡಿಯುವ ಏಷ್ಯಾದ ಜನರ ಬಗ್ಗೆ ಇವರು ತಮ್ಮ ಉದ್ಯೋಗವನ್ನು ಕಿತ್ತಿಕೊ೦ಡರೆ೦ಬ ಭಾವನೆ ಬಲವಾಗಿದೆ. ಏಷ್ಯಾ ವಿರೋಧಿ ರಾಜಕಾರಣದಲ್ಲಿ ಬಹಳ ದೊಡ್ಡ ಹೆಸರು ಮಾರಿಯಾ ಲಪೆಯದ್ದು. ಈತ ಕಳೆದ ಬಾರಿ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ಈತನೇನಾದರೂ ಅಧಿಕಾರಕ್ಕೆ ಬ೦ದಿದ್ದರೆ ಇಷ್ಟರೊಳಗಾಗಲೇ ಭಾರತೀಯರನ್ನು ಫ್ರಾನ್ಸಿನಿ೦ದ ಒದ್ದು ಒದ್ದು ಓಡಿಸಲಾಗಿತ್ತಿತ್ತು. ನ್ಯೂಝಿಲ್ಯಾ೦ಡಿನಿ೦ದ ಕಳೆದ 10 ವರ್ಷಗಳಲ್ಲಿ ಒ೦ದೂವರೆ ಲಕ್ಷ ಭಾರತೀಯರನ್ನು ಓಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಕಲಿಯಲು ಹೋದ ವಿದ್ಯಾರ್ಥಿಗಳನ್ನೂ ಬಿಡುತ್ತಿಲ್ಲ. ಹೊರಗಿನವರಿಗೆ ಹೆದರಿ ಬಾಗಿಲು ಮುಚ್ಚುತ್ತಿರುವ ಬುದ್ಧಿವ೦ತ ದೇಶಗಳು ಒ೦ದೆಡೆಯಾದರೆ ಇನ್ನೊ೦ದೆಡೆ ದಿಡ್ಡಿ ಬಾಗಿಲು ತೆರೆದು ಊರು ಸೂರೆ ಹೋಗುವುದನ್ನೇ ಕಾಯುತ್ತಿರುವೆ ನಾವು. ಉದ್ಧಾರ ಆದಹ೦ಗೇ ಬಿಡಿ.


11 comments:

 1. ಚೆನ್ನಾಗಿ ಹೆಳ್ದಿ.. ನಾವು ಉದ್ದಾರ ಆದಾಂಗೆಯ..

  ReplyDelete
 2. ಸೂಪರ್ ಲೈಕ್...

  ReplyDelete
 3. ಸೂಪರ್ ಲೈಕ್.. ಭಾರಿ ಚೆನ್ನಾಗಿ ಬರದ್ದೆ :-)

  ReplyDelete
 4. dude with my kannada wht ever i got was kinda good !!

  ReplyDelete
 5. ಥ್ಯಾ೦ಕ್ಯು ಶ್ರೀಪಾದು
  ಥ್ಯಾ೦ಕ್ಯು ಕಿರಣ್ ಭಾವಯ್ಯ...

  ReplyDelete
 6. ಥ್ಯಾ೦ಕ್ಸ್ ಆದಿತ್ಯ :-)

  ReplyDelete
 7. ಪ್ರಶಸ್ತಿ ಥ್ಯಾ೦ಕ್ಯು.... ಚೆನಾಗಿಲ್ದಿದ್ರೂ ಹಿ೦ಗೆ ಸ್ವಲ್ಪ ಹೊಗಳ್ತ ಇದ್ರೆ ಇನ್ನೊ೦ದಿಷ್ಟು ಬರೆಯುಲೆ ಸ್ಪೂರ್ಥಿ ಆಗ್ತು..

  ReplyDelete
 8. Thanku Nisar... Its my pleasure that u also started reading my articles... Thank you buddy...

  ReplyDelete
 9. good one buddy.Send this to our president. hope one word may come out of her mouth.

  ReplyDelete
 10. Thanku girish... U believe that she can speak?

  ReplyDelete